ಹುಟ್ಟಿ ಬಂದೊಮ್ಮೆ ಹಿರಿಗುಡ್ಡಕ ನಡಿರಿ
ನಟ್ಟ ನಡುವೆ ಎಲ್ಲಮ್ಮನ ಗುಡಿರಿ     ಪಲ್ಲ

ನೀವು ನದಿಗೊಮ್ಮೆ ಹಡ್ಡಲಿಗಿ ತುಂಬರಿ
ಮೂರು ನದಿ ದಾಟಿ ಮುಂದಕ ನಡೀರಿ         ೧

ಸವದತ್ತಿ ಸತ್ತೆವ್ವನ ಹೊಂಡರಿ
ಜಳಕಮಾಡಿ ಆರುಗುಣ ನೀವು ತೊಳಿರಿ       ೨

ಏಳುಕೊಳ್ಳದಾಗ ಕಲ್ಲಿನ ಪಡಿರಿ
ಏರಿ ಹೋಗುವಾಗ ಜಗ್ಗಿ ನೋಡಿ ಇಳಿರಿ       ೩

ಪೌಳಿಯೊಳಗ ಹಾರೂದು ಭಂಡಾರ ಹುಡಿರಿ
ಸುತ್ತ ಬರುವುದು ಕಪ್ಪುರದ ಉರಿರಿ

ದೇಶದೊಳಗೆ ಉಗರಗೊಳ್ಳಕ ನಡಿರಿ
ಪರಸನಗೌಡರು ಹೇಳಿದ್ಹಾಂಗ ಮಾಡಿರಿ      ೫