ಎಲ್ಲಮ್ಮನ್ವಾರ ಬಂತವ್ವ ಮಂಗಳಾರ
ಎಲ್ಲಮ್ಮಾ ಮಾಡೋ ದಯಾ ಮುಗಿವೇನ ಕೈ ಎಯ್ಯ   ೧

ಕಾಳಮ್ಮನ್ವಾರ ಬಂತವ್ವ ಬುಧವಾರ
ಕಾಳಮ್ಮಾ ಮಾಡೋ ದಯಾ ಮುಗಿವೇನ ಕೈ ಎಯ್ಯ  ೨

ಮೌಲದ್ದಿವಾರ ಬಂತವ್ವ ಬೇಸ್ತ್ಯಾರ
ಮೌಲದ್ದಿ ಮಾಡೆ ದಯಾ ಮುಗಿವೇನ ಕೈ ಎಯ್ಯ       ೩

ಮರಿಯಮ್ಮನ್ವಾರ ಬಂತವ್ವ ಸುಕ್ರಾರ
ಮರಿಯಮ್ಮಾ ಮಾಡೋ ದಯಾ ಮುಗಿವೇನ ಕೈ ಎಯ್ಯ        ೪

ಹಣುಮಂತನ್ವಾರ ಬಂತವ್ವ ಸಣಿವಾರ
ಹಣುಮಂತ ಮಾಡೋ ದಯಾ ಮುಗಿವೇನ ಕೈ ಎಯ್ಯ          ೫

ಮಲ್ಲಯ್ಯನ್ವಾರ ಬಂತಯ್ಯ ಆಯ್ತಾರ
ಮಲ್ಲಯ್ಯ ಮಾಡೋ ದಯಾ ಮುಗಿವೇನ ಕೈ ಎಯ್ಯ   ೬

ಬಸವಣ್ಣನ್ವಾರ ಬಂತವ್ವ ಸೋಮಾರ
ಬಸವಣ್ಣ ಮಾಡೋ ದಯಾ ಮುಗಿವೇನ ಕೈ ಎಯ್ಯ    ೭