ಗಂಡ    –        ನೂಲಲ್ಯಾಕ ಚೆನ್ನೀ !
ನೂಲಲ್ಯಾಕ ಚೆನ್ನೀ !

ಹೆಂಡತಿ –        ರಾಟಿಲಿಲ್ಲೋ ಜಾಣಾ !
ರಾಟಿಲಿಲ್ಲೋ ಜಾಣಾ !

ಕತೆಗಾರ-        ಮನಿಯಾನ ಬಂಡೀ ಮುರಸಿ
ಮನಿಯಾನ ಬಂಡೀ ಮುರಸಿ

ರಾಟಿ ಮಾಡಿಸಿಕೊಟ್ಟಾ
ರಾಟಿ ಮಾಡಿಸಿಕೊಟ್ಟಾ

ಗಂಡ    –        ನೂಲಲ್ಯಾಕ ಚೆನ್ನೀ
ನೂಲಲ್ಯಾಕ ಚೆನ್ನೀ

ಹೆಂಡತಿ –        ಕದರಿಲ್ಲೋ ಜಾಣಾ !
ಕದರಿಲ್ಲೋ ಜಾಣಾ !

ಕತೆಗಾರ-        ಕೈಯಾನ ಗುದ್ದಲಿ ಮುರಸಿ
ಕೈಯಾನ ಗುದ್ದಲಿ ಮುರಸಿ

ಕದರ ಮಾಡಿಸಿ ಕೊಟ್ಟಾ
ಕದರ ಮಾಡಿಸಿ ಕೊಟ್ಟಾ

ಗಂಡ    –        ನೂಲಲ್ಲ್ಯಾಕ ಚೆನ್ನೀ
ನೂಲಲ್ಲ್ಯಾಕ ಚೆನ್ನೀ

ಹೆಂಡತಿ –        ಚಿಲ್ಲಿಲ್ಲೋ ಜಾಣಾ
ಚಿಲ್ಲಿಲ್ಲೋ ಜಾಣಾ

ಕತೆಗಾರ-        ಮನಿಯಾನ ಕೋಣವು ಕಡಿಸಿ
ಮನಿಯಾನ ಕೋಣವು ಕಡಿಸಿ

ಚಲ್ಲು ಮಾಡಿಸಿ ಕೊಟ್ಟಾ
ಚಿಲ್ಲು ಮಾಡಿಸಿ ಕೊಟ್ಟಾ

ಗಂಡ    –        ನೂಲಲ್ಯ್ಲಾಕ ಚೆನ್ನೀ !
ನೂಲಲ್ಲ್ಯಾಕ ಚೆನ್ನೀ !

ಹೆಂಡತಿ –        ಹಮ್ಮಿಗಿಲ್ಲಲೊ ಜಾಣಾ
ಹಮ್ಮಿಗಿಲ್ಲೆಲೊ ಜಾಣಾ

ಕತೆಗಾರ-        ನಡುವಿನ ಉಡದಾರ ಕಡಿದು
ನಡುವಿನ ಉಡದಾರ ಕಡಿದು

ಹಮ್ಮಿಗಿ ಮಾಡಿಸಿ ಕೊಟ್ಟಾ
ಹಮ್ಮಿಗಿ ಮಾಡಿಸಿ ಕೊಟ್ಟಾ

ಗಂಡ    –        ನೂಲಲ್ಲ್ಯಾಕ ಚೆನ್ನೀ
ನೂಲಲ್ಲ್ಯಾಕ ಚೆನ್ನೀ

ಹೆಂಡತಿ –        ಕಟ್ಟಿ ಇಲ್ಲಲೋ ಜಾಣಾ
ಕಟ್ಟಿ ಇಲ್ಲಲೋ ಜಾಣಾ

ಕತೆಗಾರ-        ಊರಾನ ವಡ್ಡರ ಕರಿಸಿ
ಊರಾನ ವಡ್ಡರ ಕರಿಸಿ

ಕಟ್ಟಿ ಕಟ್ಟಿಸಿಕೊಟ್ಟಾ
ಕಟ್ಟಿ ಕಟ್ಟಿಸಿಕೊಟ್ಟಾ

ಗಂಡ    –        ನೂಲೊಲ್ಲ್ಯಾಕ ಚೆನ್ನೀ |
ನೂಲೊಲ್ಲ್ಯಾಕ ಚೆನ್ನೀ |

ಹೆಂಡತಿ –        ಗೆಳತ್ಯಾರಿಲ್ಲೊ ಜಾಣಾ |
ಗೆಳತ್ಯಾರಿಲ್ಲೊ ಜಾಣಾ |

ಕತೆಗಾರ-        ಓಣ್ಯಾಗಿನವರ ಕರಿಸಿ
ಓಣ್ಯಾಗಿನವರ ಕರಿಸಿ

ಗೆಳತ್ಯಾರ ಕೂಡಿಸಿ ಕೊಟ್ಟಾ
ಗೆಳತ್ಯಾರ ಕೂಡಿಸಿ ಕೊಟ್ಟಾ

ಗಂಡ    –        ನೂಲಲ್ಯಾಕ ಚೆನ್ನೀ
ನೂಲಲ್ಯಾಕ ಚೆನ್ನೀ

ಹೆಂಡತಿ –        ಗುಗ್ಗರಿಲ್ಲೋ ಜಾಣಾ
ಗುಗ್ಗರಿಲ್ಲೋ ಜಾಣಾ

ಕತೆಗಾರ-        ಗೋಧಿ ಕಡ್ಲಿ ತರಿಸಿ
ಗೋಧಿ ಕಡ್ಲಿ ತರಿಸಿ

ಗುಗ್ಗರಿ ಹಾಕಿಸಿ ಕೊಟ್ಟಾ
ಗುಗ್ಗರಿ ಹಾಕಿಸಿ ಕೊಟ್ಟಾ

ಗಂಡ    –        ನೂಲಲ್ಲ್ಯಾಕ ಚೆನ್ನೀ
ನೂಲಲ್ಲ್ಯಾಕ ಚೆನ್ನೀ

ಹೆಂಡತಿ –        ನನಗೆ ಬರೋದಿಲ್ಲೋ ಜಾಣಾ |
ನನಗೆ ಬರೋದಿಲ್ಲೋ ಜಾಣಾ |*      ನೂಲೊಲ್ಲ್ಯಾಕ ಚೆನ್ನೀ ?; ಲಿಂಗಯ್ಯ ಡಿ ಮತ್ತು ಸಂಧ್ಯಾ ರೆಡ್ಡಿ ಕೆ.ಆರ್. ಜಾನಪದ ಸ್ವರೂಪ ಮತ್ತು ಸಾಹಿತ್ಯ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ೧೯೯೭ ಪು.ಸಂ. ೨೧೦-೨೧೨.