ದೇವಿ ನಿನ್ನ ದಯೆ ಇರಲೆಮ್ಮ
ನಿನ್ನ ಪಾದದ ಹೊರತು
ಬಂಧು ಬಳಗ ಇಲ್ಲಮ್ಮ     ಪಲ್ಲ

ಗ್ಚಿನ ಗುಡಿಯು ನಿನಗಮ್ಮ
ಆ ಗುಡಿಯ ಒಳಗ
ಗಂಟೆ ಧೂಪಾರತಿ ನೇಮಮ್ಮ       ೧

ಮುತ್ತೀನ ಗದ್ದಿಗಿ ನಿನಗಮ್ಮ
ಆ ಗದ್ದಿಗಿ ಮ್ಯಾಲ
ಮುಗುಳ ನಗಿ ನಗತಿದ್ದೆಮ್ಮ                   ೨

ಹಾಲು ಸಕ್ಕರಿ ಹಣ್ಣಮ್ಮ
ಭಕ್ತರ ಮನದಿಂದ
ಜಲದಿಂದ ಪೂಜೆಗೊಂಡೆಮ್ಮ        ೩

ಉಗರಗೊಳ್ಳದ ಜಾಗಮ್ಮ
ಆ ಜಾಗದಾಗ
ಕೆಂಪ ಕೆರಿಯಾಗ ನೆನದೆಮ್ಮ        ೪

ಕೆಂಪ ಕೆರಿಯಾಗ ನೆನದೆಮ್ಮ
ಸೊಗಲ ಸೋಮಲಿಂಗಗ
ಒಲದಂಥ ಸಿರಿದೇವಿ ನೀನಮ್ಮ      ೫

ದೇಶಕ್ಕಧಿಕವಾದೆಮ್ಮ
ನಿನ್ನ ಭಗತರಿಗೆ
ಬೇಡಿದೊರಗಳ ಕೊಟ್ಟೆಮ್ಮ ೬