ತಾಲಿಯ ಲೇಲೊಳ ಲೇಲೊಳ ಲೇಲೊ
ತಾಲಿ ಲೆಲ್ಲೇಲಾ ಹಾಡನು ಹಾಡಿರ
ನಾಚಿಕೆ ಇಹುದು ತುಂಟಾಟವು ಇಹುದು
ವರುಷಕೆ ಒಮ್ಮೆಯೆ ಬರುವುದು ಹುತ್ತರಿ ಹಬ್ಬ
ಈ ಮನೆ ಎದುರಲಿ ಹಾಡಲು ಬಂದು ನಿಂದೆವು ನಾವು

ಏ ಒಡ್ಡರ ತಿಮ್ಮಿ ಒಡ್ಡನು ಎಲ್ಲಿಗೆ ಹೋದ
ಹಗ್ಗವನಾರನು ಹುಡುಕುತ ಹೋದನವ
ಮಾರನು ಎಲ್ಲಿಗೆ ಹೋದ ಮಾರನ ಮಡದಿಯೆ
(ಯರವತಿ ಹೇಳ ಯರವನು ಎಲ್ಲಿಗೆ ಹೋದ)
ಏರಿಯ ಅಗೆಯಲು ಮಾರನು ಹೋದನವ

ಬಳ್ಳಿಯ ಕಾಯಿ ಒಳ್ಳೆಯ ಕಾಯಿ ಹಾಗಲಕಾಯಿ
ಹಾಗಲ ಕಾಯನು ಕುಯ್ಯುತ ತಾರೋ ಬಾರೋ