ಅಪ್ಪನರುಮಲ್ಲೀsss ಶಣ್ಣಕ್ಕಿss ಶಾವೀssಗೀsss
ನನು ತಮ್ಮs ನನ್ನಾssss ಕರುಬಂದss || “ತಮ್ಮಯ್ಯss,
ನನ್ನತ್ತೇ ನನ್ನsss ಕಳುಗssವೋss || ತಮ್ಮಯ್ಯss
ಕನ್ನ ಕೊಯ್ದಾರೂsss ಬರಲೇನೋss || ||೨೯||

“ಕನ್ನ ಕೊಯ್ದ ಅಕ್ಕಾsss ಕಳ್ಳಾss ಲಂದ್ಹೇಳೂರೂss
ಇನ್ನೆಂಟೂ ದಿವಸೇsss ಇರಬೇಕೇss || ಲಕ್ಕಮ್ಮsss
ನಾs | ಮೇನ್ ಬರು ಸುಕ್ರಾರ್‌ಕೂsss ಕರು ಬತ್ತೇsss || ||೩೦||

ಅಪ್ಪssನರಮನಿಯಾsss ಬಿಟ್ಟೀss ನಾss ಇರುನಾsರೇss
ನೆಟ್ಟ ಸಂಪೂಗೇsss ನೆಲಮssಯsss || ನನ್ನಪ್ಪssನಾsss
ಪಟ್ಟಣ ಬಿಟ್ ಅರಗಳಗೂss ನಾs ಇರನಾರೇsss || ||೩೧||

ಅಪ್ಪsನssಮನ್ನೇsss ತೆಂಗೂsಳರದ್ ಉಳಿಬವ್ದುsss
ತೆಂಗsಳs ಮೇನೇsss ಮಿಗಿಲೊಂದೂss || ಉಳುದರೆs
ಹಂಗೀsಸೀs ತೆಳಿಯsss ಹೊಯ್ವರೂsss || ||೩೨||

ನನ್ನಪ್ಪನ ಮನಿಲೀsss ಯೆಸುರೀಗೇ ನೀರಿಲ್ಲಾss
ಬಶ್ವಪ್ಪಾs ಬಾಯಾsss ಬಿsಡೂsತಾದೇss || ಲಪ್ಪಯ್ಯಾss,
ಶೊಶುತಂದಾs ಬೆಳ್ಳೀsss ಕೊsಡುs ನೀರುs || ಕೊಡುಪನ ನೀರುs ||೩೩||

ಬಶುವನ ಬಾಯೀಗೇss ಇsಶೂರೀಗೇs || ಮಿಕ್ಕಿದ ನೀರುs
ಶಿಶುಮಡಗೀಗ್ಹೊಯ್ದೀsss ಪsಲುs ಬಂsದೀsss || ||೩೪||

ತಾಯ್ ಮನಿಗ್ಹೋಗ್ವಾಗೇsss ತನುಗಾssಳಿ ಬೀಸsಲಿss
ತಿಂಗಳ ಮsಜ್ಜನವೇss ತಿರುsಗsಲೀss || ನನ್ನಾಲೂss
ತಾಯ್ ಬಳಿಲಿ ಜೋsತೀssss ಉರಿಯಾssಲೀssss || ||೩೫||

ಹಸ್ವಾದರ ಬನ್ನೀssss ಬಿಸ್ಲು ತಂಪ್ ಹೊತ್ತೀssಗೂss
ಕಟ್ಟೇಕಿಂದು ಮುಂದೇssss ತೌರ್ ಮನೇsss || ಲಣದೀರುs
ಹಸ್ವಾsದರಿಗ್ ಹಾಲಾssss ಕೊಡ್ವsರುsss || ||೩೬||

ಹಾವೇ ಅಂದರ್ ಹಳ್ಳಾsss ಮೀಸೂs ಅಂದರ್ ಗುಂssಡಿss
ಹೊಳೆಗಿಂದಾsಚಿನಾsss ತವ್ರಮssನೆss
ಹೊಳೆಗಿಂದಾsಚಿನಾsss ತೌರ್ಮನಿ ತಮ್ಮನ ಕೋಡೇsss
ಮೀಸುಕೆ ಬಂದಾssರೇsss ಬರುಹೇಳೀssss || ||೩೭||

ತಾಯೀ ಮನ್‌ಗೋಗ್ವಾಗೇ ತನುಗಾಳಿsss ಬೀಸಾಲೇs
ಮೇನೇ ಸಾವಂತೀsss ವನುವಾಲೆss || ದೇವಾsರೇss,
ತಾಯೀ ಮನ್ಗ್ ಹೋಗೂವಾs ದಿನುದಲ್ಲೀsss || ||೩೮||

ಅಪ್ಪsನ ಮನ್ನೇsss ಪಾವೀsಸಂಬದ ಕೇಳೀss
ಯೇಳ್ ಹೊಳೀ ದಾಟೀsss ಉಣsಬಂದೇss ||
ಯೇಳ್‌ಹೋಳೀ ದಾಟೀsss ಇಳ್ದ ಬಂದೇ ತಾಯವ್ವಾsss,
ಪಾಯೀಸಂಬಾದೇsss ಅಪುರೂಪಾsss|| ||೩೯||

ಕಾಯಾs ತಿಂಬಾರಾsss ಬಾಯೇನಾs ನೋಡೂವೇss?
ನಾವ್ ಹೋಗುವ ನಮ್ಮsss ತೌರೀಗೇss|| ಲಪ್ಪನ ಮನ್ನೇss
ಜೋಡಿಂದೇ ಕಾಯಾsss ವಡತಿಂಬೋsss|| ||೪೦||

ಅಪ್ಪsನs ಮನ್ನೇss ಕಾರ್ಯs ಅಂಬುದ ಕೇಳೀss
ಕರ್ಯವು ನಮಗೇsss ಕಳಗೂರೂss|| ಲಣ್ಣದೀsರುs
ಕಾಯೊಡುದರೆ ಕಡಿಯsss ಮಡಗೂರು || ಅಣ್ಣದಿರುss
ಹೂಂಗೋಡುದರೆ ಹುಸಿಯsss ಕಳಗೂರುsss|| ||೪೧||

ಅಪ್ಪನ ಮನ್ಯವ್ರೂssss ಅಪರೂಪದ ನೆಂಟಾssರೂss
ದಾನಾssವೊಳ್ಳsssರೂsss ದರಮssರೂsss
ದಾನಾssವೊಳ್ಳವ್ರೂssss ದರಮಾssರಾss ಮನ್ಯಲ್ಲೀsss
ಹೆಣೂsss ಹುssಟ್ಟಿದ್ರೇsss ದರಮssವೇsss|| ||೪೨||

ಕಡಗಾಯಿssಲ್ಲದ ಕಯ್ಯೀss ಕರಣssಯಿಲ್ಲದ ಪುರಿಸಾs
ಹಡದಮ್ಮಿಲ್ಲದಾsss ತೌರಮನೆ||
ಹಡದಮ್ಮಿಲ್ಲದಾsss ತೌರೀಗೆ ಹೊದರೇsss
ಕಡಗsಣ್ಣಲಿ ನೀರೂsss ಬರವssದೂsss|| ||೪೩||

ಕಂಡಿಗ ಅಡುವರ ಮನ್‌ಲೀsss ಕಡ ಹೇಗೇ ಕೊಡ್ವರೂss?
ಹಂಡೀಲೀs ಹಾಲಾsss ಕsರವsರೂsss|| (ವರ್) ಅಪ್ನ ಮನ್ನೇss
ಕಂಡೀಗಾs ಅಕ್ಕೀsss ದಿನಕ್ ಕರ್ಚೂ||

ಅಕ್ಕೆ ತೊಳಸಿದ್ರೇss ಯೆಕ್ಕಿ ಹೂಂಗಿನ ಪರಿಮsಳss
ಯೆಕ್ಕಿ ಹೂಂಗಾss ಮುಡ್ವssss ಸೊಸದಿರುssss|| ಅಪ್ಪಯ್ಯsಗೇss
ಅಂಬು ಬಿಲ್ಲು ತಡವಾsss ಮಗದಿರುsss||

ಶುಕ್ರಾರ ಶಣಿಯಾರಾsss ಯೆಲಿ ಶಂತೇ ಲಡುಕಿ ಶಂತೇ
ಹಣುಮಕ್ಕಳ ಶಂತೇsss ಚೌಕಿಲೀss|| ಲಪ್ಪಯ್ಯಾsನಾs
ಲಳಿಯಾsದಿರ ಸಂತೇsss ಜಗುಲಿಲೀss||