ಆದಿಶಕ್ತಿ ಪಾರ್ವತೀದೇವಿ

ಇದ್ದಾಂಗ ಯಲ್ಲಮ್ಮ ತಾಯಿ         ಪಲ್ಲ

ದುಷ್ಟರನ್ನು ದಂಡಿಸಿ
ಕಷ್ಟವೆಲ್ಲ ದೂರ ಮಾಡಿ
ಶಿಷ್ಟರನ್ನು ಕಾಪಾಡಿ
ಲೋಕಕ್ಕೆಲ್ಲ ಉಳಿಸಿ
ಮೆರೆಯುವಂಥ ದೇವಿ      ೧

ಇಂಥ ತಾಯಿ ಯಲ್ಲಮ್ಮಗ
ಆದಿಶಕ್ತಿ ದೇವಿಗೆ
ನೆನೆಯದ ಜೀವ ಯಾತಕ್ಕ
ಇದ್ದು ಇಲ್ಲದಾಂಗ ಜನಮಕ
ಅದಕ್ಕ ದೇವಿನ ನೆನಿಬೇಕ  ೨

ಭಕ್ತರು ನಂಬ್ಯಾರ ನಿನ್ನ
ಶಕ್ತಿಯ ದೇವಿಯನ್ನ
ಮುಕ್ತಮಾಡವ್ವ ಕಷ್ಟದಿಂದ
ಭಕ್ತಿ ಬೇಡೇವು ನಿಷ್ಠೆಯಿಂದ
ತಾಯಿ ಯಲ್ಲಮ್ಮದೇವಿ     ೩