ವಿವಿಧ ಬಗೆಯ ಹಣ್ಣುಗಳನ್ನು ಡಬ್ಬಿಗಳಲ್ಲಿ ಸಂಸ್ಕರಿಸುವಾಗ ಅನುಸರಿಸಬೇಕಾದ ವಿಧಾನದ ಸಾಮಾನ್ಯ ತತ್ವಗಳನ್ನು ಇಲ್ಲಿ ನಿರೂಪಿಸಲಾಗಿದೆ.

ಸೇಬು :

ಸೇಬುಹಣ್ಣನ್ನು ಹೆಚ್ಚಾಗಿ  ಡಬ್ಬಿಯಲ್ಲಿ ಸಂಸ್ಕರಿಸುವುದಿಲ್ಲ. ಸಾಮಾನ್ಯವಾಗಿ ಡಬ್ಬಿಯಲ್ಲಿ ಸಂಸ್ಕರಿಸಿದ ಈ ಹಣ್ಣಿನ ದೊಡ್ಡ ಪ್ಯಾಕ್‌ಗಳು ಕಂಡುಬರುತ್ತವೆ. ಇದರಿಂದ ಹೆಚ್ಚಾಗಿ ತಯಾರಿಸುವ ಪದಾರ್ಥವೆಂದರೆ ಸೇಬಿನ ಪೈ. ಡಬ್ಬಿಯಲ್ಲಿ ಸಂಸ್ಕರಿಸಲು  ಎಲೊ ನ್ಯೂಟನ್, ಪಿಪ್ಪಿನ್, ಸ್ವಿಟ್‌ಜೆನ್‌ಬರ್ಗ್, ವೈನ್‌ಸೇಪ್, ಬಾಲ್ಡ್‌ವಿನ್, ರಸ್ಸೆಟ್, ಜೋನಾಥನ್, ಡೆಲೇಶಿಯಸ್‌ ಮತ್ತು ರೋಮ್ ಬ್ಯೂಟಿ ಇವು ಉತ್ತಮ ತಳಿಗಳಾಗಿವೆ.

ಹಣ್ಣುಗಳ ಮೇಲೆ ಕೆಲವು ಸಂದರ್ಭಗಳಲ್ಲಿ ಸೀಸ ಮತ್ತು ಅರ್ಸೆನಿಕ್ ಸಿಂಪಡಿಸಿರುತ್ತಾರೆ. ಇವುಗಳ ಕಣಗಳನ್ನು ತೆಗೆಯಲು ಹಣ್ಣುಗಳನ್ನು ಬಿಸಿಯಾಗಿರುವ ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲದಲ್ಲಿ ತೊಳೆದು ತಣ್ಣೀರಿನಲ್ಲಿ ಅದ್ದಬೇಕು. ಸಿಪ್ಪೆಯನ್ನು ಕೈಯಿಂದ ಇಲ್ಲವೆ ಯಂತ್ರಗಳ ನೆರವಿನಿಂದ ತೆಗೆಯಬಹುದು. ಇವುಗಳ ಹೋಳುಗಳು ೧/೮” ನಿಂದ ೧/೪” ವರೆಗೆ ದಪ್ಪವಿರುತ್ತವೆ. ಹೋಳುಗಳನ್ನು ಗಾಳಿಯ ಸಂಪರ್ಕವುಂಟಾಗುವಂತೆ ತೆಗೆದಿಟ್ಟರೆ ಕಿಣ್ವಗಳ ಕ್ರಿಯೆಯಿಂದ ಕಪ್ಪಾಗುತ್ತವೆ. ಇದನ್ನು ತಡೆಯಬೇಕಾದರೆ ಶೇಕಡಾ ೨-೩ ರ ಉಪ್ಪಿನ ದ್ರಾವಣದಲ್ಲಿ ಮುಳುಗಿಸಬೇಕು. ಈ ಹೋಳುಗಳನ್ನು  ಕುದಿಯುವ ನೀರು ಇಲ್ಲವೆ ಶೇಕಡಾ ೩ರ ಕುದಿಯುವ ಉಪ್ಪು ನೀರಿನಲ್ಲಿ ೧೬೦-೧೮೦ ಫ್ಯಾ ಉಷ್ಣತೆಯಲ್ಲಿ ೩-೪ ನಿಮಿಷಗಳ ಕಾಲ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಬೇಕು. ಇದರಿಂದ ಹಣ್ಣಿನ ಊತಕಗಳಲ್ಲಿರುವ ಆಮ್ಲಜನಕ ಹೊರಹೋಗುವುದಲ್ಲದೆ, ಡಬ್ಬಿಗಳ ದಾಸ್ತಾನಿನಲ್ಲಿ ಸೂಜಿ ಗಾತ್ರದ ರಂಧ್ರಗಳಾಗುವುದನ್ನು ತಡೆಯಬಹುದು. ಅನಂತರ ಡಬ್ಬಿಗಳಲ್ಲಿ ಈ ಹೋಳುಗಳನ್ನು ತುಂಬಿ ಬಿಸಿಯಾದ ನೀರಿನಿಂದ ಅಥವಾ ತೆಳು ಸಕ್ಕರೆಪಾಕದಿಂದ ತುಂಬಿ, ನಿರ್ವಾತಗೊಳಿಸಿ, ಮೊಹರು ಮಾಡಿ ಸಂಸ್ಕರಿಸಬೇಕು.

ಏಪ್ರಿಕಾಟ್ :

ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಏಪ್ರಿಕಾಟನ್ನು ಅತ್ಯಧಿಕ ಪ್ರಮಾಣದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸುತ್ತಾರೆ. ನಮ್ಮ ದೇಶದ ಕಾಶ್ಮೀರ, ಸಿಮ್ಲಾ ಬೆಟ್ಟ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಇದು ಹೆಚ್ಚಾಗಿ ಬೆಳೆಯುತ್ತದೆ. ಈ ಪ್ರದೇಶಗಳಲ್ಲಿ ಇದನ್ನು ಡಬ್ಬಿಗಳಲ್ಲಿ ಸಂಸ್ಕರಿಸಲು ಹೆಚ್ಚಿನ ಅವಕಾಶವಿದೆ.

ಏಪ್ರಿಕಾಟ್‌ನಲ್ಲಿ ಬಿಳಿ ಮತ್ತು ಹಳದಿ ಎಂದು ಎರಡು ಬಗೆಯಿರುತ್ತವೆ. ವಿದೇಶಗಳಲ್ಲಿ ಬ್ಲೆನ್‌ಹೈಮ್‌ ಎಂಬುದು ಡಬ್ಬಿಯಲ್ಲಿ ಸಂಸ್ಕರಿಸಿದ ಜನಪ್ರಿಯವಾದ ತಳಿ. ಮಧ್ಯಮ ಗಾತ್ರದ ಕಡುಹಳದಿ ಬಣ್ಣದ ಈ ಹಣ್ಣಿಗೆ ಉತ್ತಮ ವಾಸನೆಯಿದ್ದು, ಸಂಸ್ಕರಣೆಯನ್ನು ಚೆನ್ನಾಗಿ ತಡೆಯಬಲ್ಲದು. ಟಿಲ್ಟನ್ ಮತ್ತು ಹೆಮ್ಸ್‌ ಕಿರ್ಕ ಸಹ ಡಬ್ಬಿಯಲ್ಲಿ ಸಂಸ್ಕರಿಸಬಹುದಾದ ತಳಿಗಳು.

ಡಬ್ಬಿಯಲ್ಲಿ ಸಂಸ್ಕರಿಸುವ ಏಪ್ರಿಕಾಟ್‌ಗೆ ಸಿಪ್ಪೆ ತೆಗೆಯಬೇಕಾಗಿಲ್ಲ. ಇಬ್ಬಾಗ ಮಾಡಿದ ಹಣ್ಣಿನಿಂದ ಒಳಗಿರುವ ಓಟೆ ಭಾಗವನ್ನು ತೆಗೆಯಬೇಕು. ಹೋಳು ಮಾಡದೆ ಇಡೀ ಹಣ್ಣುಗಳನ್ನು ಡಬ್ಬಿಯಲ್ಲಿ ಸಂಸ್ಕರಿಸುವದೂ ಬಳಕೆಯಲ್ಲಿದೆ. ಕ್ರುಯೆಸ್‌ರ ಪ್ರಕಾರ ಒಂದು ಟನ್‌ ಏಪ್ರಿಕಾಟ್‌ನಿಂದ ೨ ೧/೨ ಗಾತ್ರದ  ಡಬ್ಬಿಯ ೫೫ ಪೆಟ್ಟಿಗೆ (ಪ್ರತಿಯೊಂದರಲ್ಲಿ ೨೪ ಡಬ್ಬಿ) ತುಂಬುವಷ್ಟು ಪದಾರ್ಥ ಪಡೆಯಬಹುದು. ಆದರೆ ಸಿದ್ಧಪ್ಪನವರು ಲೆಕ್ಕ ಹಾಕಿ ಒಂದು ಟನ್‌ ಏಪ್ರಿಕಾಟ್‌ಗೆ ಸರಾಸರಿ ೫೮ ಪೆಟ್ಟಿಗೆ ತುಂಬುವಷ್ಟು ಸಂಸ್ಕರಿಸಿದ ಡಬ್ಬಿಗಳು ಸಿಗಬಹುದೆಂದು ವರದಿ ಮಾಡಿದ್ದಾರೆ.

ಬಾಳೆ :

ನಮ್ಮ ದೇಶದಲ್ಲಿ ಬಾಳೆಹಣ್ಣು ಒಂದು ಪ್ರಸಿದ್ಧ ಹಣ್ಣಿನ ಬೆಳೆಯೆನ್ನಬಹುದು. ನಮ್ಮಲ್ಲಿ ಸಾಧಾರಣ ೨೦೦ಕ್ಕಿಂತಲೂ ಹೆಚ್ಚು ವಾಣಿಜ್ಯ ತಳಿಗಳಿವೆ. ಇವುಗಳನ್ನು ಬೆಳೆಯುವ ಪ್ರದೇಶ ಸಾಧಾರಣ ೪.೦೪೫೫೦ ಎಕರೆಗಳೆನ್ನಬಹುದು.

ಇತ್ತೀಚೆಗೆ ದಾಸ್, ಜೈನ್ ಮತ್ತು ಗಿರಿಧಾರಿಲಾಲ್‌ ರವರು ಬಾಳೆಹಣ್ಣನ್ನು ಪ್ರತ್ಯೇಕವಾಗಿ ಮತ್ತು ಇತರ ಹಣ್ಣುಗಳೊಡನೆ ರಸಾಯನ (ಸ್ಯಾಲಡ್) ರೂಪದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸುವ ವಿಧಾನವೊಂದನ್ನು ಕ್ರಮಪಡಿಸಿದ್ದಾರೆ. ಕೇವಲ ಕೆಲವು ತಳಿಗಳು ಮಾತ್ರ ಡಬ್ಬಿಯಲ್ಲಿ ಸಂಸ್ಕರಿಸಲು ಯೋಗ್ಯವೆಂದು ಅವರಿಗೆ ಕಂಡುಬಂದಿದೆ. ಇದರ ಬಗ್ಗೆ ಅವರು ದಕ್ಷಿಣ ಭಾರತದ ೨೦ ತಳಿಗಳಲ್ಲಿ ಕೇವಲ ಪಚ್ಚಬಾಳೆ, ಚಂದ್ರಬಾಳೆ, ನೇಂದ್ರಬಾಳೆ, ಚಂಗನ್‌ ಪುರಿಕೊಡನ್‌, ಪೂವನ್‌ ಮತ್ತು ವನ್ನನ್‌ಗಳು ತೃಪ್ತಿಕರವಾದ ಫಲಿತಾಂಶವನ್ನು ಕೊಟ್ಟಿವೆಯೆಂದು ತಿಳಿಸಿದ್ದಾರೆ.

ಪಕ್ವವಾದ ಬಾಳೆಹಣ್ಣನ್ನು ಆರಿಸಿ, ಕೈಯಿಂದ ಸಿಪ್ಪೆ ಸುಲಿದು, ೧/೨” ದಿಂದ ೩/೪” ದಪ್ಪದ ಹೋಳುಗಳಾಗಿ ಅಡ್ಡಲಾಗಿ ಕತ್ತರಿಸಬೇಕು. ಇದಕ್ಕೆ ೨೫-೩೦ ಬ್ರಿಕ್ಸ್‌ನ ಸಕ್ಕರೆ ಪಾಕದೊಡನೆ ಶೇಕಡಾ ೦.೨ ರ‍ಷ್ಟು ಸಿಟ್ರಿಕ್‌ ಆಮ್ಲವನ್ನು ಸೇರಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಬಾಳೆಹಣ್ಣುಗಳ ಪಿ.ಹೆಚ್ಚ್‌. ೪.೫ ರಿಂದ ೫.೩ ರ ಅಂತರದಲ್ಲಿರುತ್ತದೆ. ಸಂಸ್ಕರಿಸುವಾಗ ಬೆಣ್ಣೆಗಾತ್ರದ ಡಬ್ಬಿ (೧ ಪೌಂಡ್‌ಸ್ಕ್ವಾಟ್‌)ಯನ್ನು ಉಪಯೋಗಿಸುವುದು ಉಚಿತ. ಸಂಸ್ಕರಿಸುವ ಕ್ರಿಯೆಯನ್ನು ೧೫ ನಿಮಿಷಗಳ ಕಾಲ ಮುಂದಿನಂತೆ ಮಾಡಬೇಕು : (೧) ಹಣ್ಣು ಹೊಸದಾಗಿದ್ದು ಪಿ.ಹೆಚ್‌. ೪.೮ ಮತ್ತು ಅದಕ್ಕಿಂತಲೂ ಕಡಿಮೆಯಿದ್ದರೆ ಕುದಿಯುವ (೨೧೨ ಫ್ಯಾ) ನೀರಿನಲ್ಲಿ  ; ಮತ್ತು (೨) ಪಿ.ಹೆಚ್‌. ೪.೮ಕ್ಕಿಂತ ಹಚ್ಚಿದ್ದರೆ ಒತ್ತಡದಲ್ಲಿ  ಬೇಯಿಸುವ ಪಾತ್ರೆಯಲ್ಲಿ ೫ ಪೌಂಡ್ ಉಗಿ ಒತ್ತಡದಲ್ಲಿ (ಸಮುದ್ರ ಮಟ್ಟದಲ್ಲಿ) ಸಂಸ್ಕರಿಸಬೇಖು. ಸಂಸ್ಕರಿಸಿದ ನಂತರ ಕ್ಷಿಪ್ರವಾಗಿ ಮತ್ತು ಸಂಪೂರ್ಣವಾಗಿ ತಣ್ಣಗೆ ಆರಿಸುವುದು ಅವಶ್ಯ.

ಬ್ಲ್ಯಾಕ್ಬೆರ್ರಿ‍ :

ಬ್ಲ್ಯಾಕ್ ಬೆರ್ರಿ‍ಗಳನ್ನು ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತು ಇಂಗ್ಲಂಡ್‌ಗಳಲ್ಲಿ ಸ್ವಲ್ಪಮಟ್ಟಿಗೆ ಡಬ್ಬಿಗಳಲ್ಲಿ ಸಂಸ್ಕರಿಸುತ್ತಾರೆ. ನಮ್ಮ ದೇಶದಲ್ಲಿ ಇದು ವಾಣಿಜ್ಯ ಮಟ್ಟದಲ್ಲಿ ಸಂಸ್ಕರಿಸಲು ಹೆಚ್ಚು ಪ್ರಮಾಣದಲ್ಲಿ ಸಿಗುವುದಿಲ್ಲ. ಎವರ್‌ಗ್ರೀನ್, ಮೇಮತ್ ಮತ್ತು ಹಿಮಾಲಯ ತಳಿಗಳು ಡಬ್ಬಿಯಲ್ಲಿ ಸಂಸ್ಕರಿಸಲು ಯೋಗ್ಯವಾಗಿವೆ.

ಹಣ್ಣುಗಳನ್ನು ಕಿತ್ತ ಮೇಲೆ ಅವು ಹೆಚ್ಚು ಕಾಲ ಬಾಳುವುದಿಲ್ಲ. ಆದ್ದರಿಂದ ಸಂಸ್ಕರಣೆ ಕ್ರಿಯೆಯನ್ನು ಕೂಡಲೇ ಮಾಡಬೇಕು.

ಚೆರ್ರಿ‍ :

ನಮ್ಮ ದೇಶದಲ್ಲಿ ಚೆರಿ ಹೆಚ್ಚಾಗಿ ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಬೆಳೆಯುತ್ತದೆ. ಚೆರ್ರಿ‍ಯಲ್ಲಿ ಸಿಹಿಯಾಗಿರುವುವು, ಸಾಧಾರಣ ಆಮ್ಲದವು ಮತ್ತು ಆಮ್ಲದವು ಎಂದು ಮೂರು ಬಗೆಯಿವೆ. ಇರಲ್ಲಿ ಸಿಹಿಯಾಗಿರುವವು ತಿಳಿನಸುಗೆಂಪು ತಿರುಳು ಅಥವಾ ಕಡುಗೆಂಪು ಇಲ್ಲವೆ ಕಪ್ಪು ಬಣ್ಣದಲ್ಲಿರುತ್ತವೆ. ಸಿದ್ಧಪ್ಪ ಮತ್ತು ಮಸ್ತಾಪ ಇವರ ಹೇಳಿಕೆ ಪ್ರಕಾರ ನಸುಹಳದಿ ತಿರುಳಿನ ಸಾಧಾರಣ ದೊಡ್ಡ ಗಾತ್ರದ ವೈಟ್‌ಹಾರ್ಟ್ ಚೆರ್ರಿ‍ ಮತ್ತು ನಸುಹಳದಿ ತಿರುಳಿನ ಸಾಧಾರಣ ಸಣ್ಣ ಗಾತ್ರದ ರೆಡ್ ಚೆರ್ರಿ‍ಗಳು ಡಬ್ಬಿಯಲ್ಲಿ ಸಂಸ್ಕರಿಸಲು ಯೋಗ್ಯವಾಗಿವೆ. ವಿದೇಶಗಳಲ್ಲಿ ರಾಯಲ್ ಆನ್, ನೆಪೋಲಿಯನ್ ಬಿಗೆರೊ ಮತ್ತು ಕೆಂಟಿಶ್ ಬಿಗೆರೊಗಳು ಡಬ್ಬಿಯಲ್ಲಿ ಸಂಸ್ಕರಿಸಲು ಉತ್ತಮವೆಂದು ಪರಿಗಣಿಸಲ್ಪಟ್ಟಿವೆ. ಸಾಧಾರಣ ಆಮ್ಲದ ಹಣ್ಣುಗಳಲ್ಲಿ ಮೇರಿಡ್ಯೂಕ್, ಕೆಂಟಿಶ್ ರೆಡ್ ಮತ್ತು ಪ್ಲೇಮಿಶ್ ರೆಡ್‌ಗಳು ಡಬ್ಬಿಯಲ್ಲಿ ಸಂಸ್ಕರಿಸುವ ಮುಖ್ಯವಾದ ತಳಿಗಳು. ಅಚ್ಚುಗೆಂಪು ಬಣ್ಣದ ಈ ಹಣ್ಣುಗಳು ಬಹು ರುಚಿಯಾಗಿರುತ್ತವೆ. ಆಮ್ಲದ ತಳಿಗಳಲ್ಲಿ ಮೊರೆಲ್ಲೊ ಅತಿ ಮುಖ್ಯವಾದುದು. ಅತಿ ಕೆಂಪು ಮತ್ತು ಕೆನ್ನೀನಿ ಬಣ್ಣದ ಈ ಹಣ್ಣು ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಇದನ್ನು ಸಂಸ್ಕರಿಸುವಾಗ ಮಂದವಾದ ಸಕ್ಕರೆಪಾಕವನ್ನೇ ಉಪಯೋಗಿಸಬೇಕು.ಡಬ್ಬಿಯಲ್ಲಿ ಸಂಸ್ಕರಿಸಿದ ಮೆರೆಸ್‌ಚಿನೊ ಚೆರ್ರಿ‍ಯನ್ನು ಇತರ ಹಣ್ಣುಗಳೊಡನೆ ಬೆರಕೆ ಮಾಡಲು, ಹಣ್ಣಿನ ಕಾಕ್‌ಟೇಲ್, ಐಸ್‌ಕ್ರೀಂ, ಇತ್ಯಾದಿಗಳನ್ನು ತಾರಿಸಲು ಉಪಯೋಗಿಸಬಹುದು. ಅರ್ಧಮಾಗಿದ ರಾಯಲ್ ಆನ್ ಚೆರ್ರಿ‍ಗಳು ಇದಕ್ಕೆ ಯೋಗ್ಯವಾಗಿವೆ.

ಚೆರ್ರಿ‍ ಹಣ್ಣುಗಳನ್ನು ಕ್ಯಾಲ್ಸಿಯಂ ಹೈಡ್ರಾಕ್ಸೈಡ್, ಗಂಧಕದ ಡೈ ಆಕ್ಸೈಡ್ ಮತ್ತು ಪಟಿಕವನ್ನು (ಕೆಲವು ಸಲ) ಒಳಗೊಂಡಿರುವ ಅಡುಗೆ ಉಪ್ಪಿನ ದ್ರಾವಣದಲ್ಲಿಟ್ಟು ಮರದ ಪೀಪಾಯಿಗಳಲ್ಲಿ ತುಂಬಿಡುತ್ತಾರೆ. ಕ್ರುಯೆಸ್ಸರ ಹೇಳಿಕೆಯ ಪ್ರಕಾರ ಕ್ಯಾಲಿಪೋರ್ನಿಯಾದಲ್ಲಿ ಇದಕ್ಕೆ ಉಪಯೋಗಿಸುವ ಅಡಿಗೆ ಉಪ್ಪಿನ ದ್ರಾವಣ ಶೇಕಡಾ-೦.೭೫-೧.೦ರಷ್ಟು ಗಂಧಕದ ಡೈ ಆಕ್ಸೈಡ್ ಮತ್ತು ಶೇಕಡಾ ೦.೪-೦.೬ರಷ್ಟು ಬೇಯಿಸಿದ ಸುಣ್ಣವನ್ನೊಳಗೊಂಡಿರುತ್ತದೆ. ಒರೆಗಾವ್ ನಲ್ಲಿ ಶೇಕಡಾ ೧.೫ರಷ್ಟು ಗಂಧಕದ ಡೈ ಆಕ್ಸೈಡ್ ಮತ್ತು ಶೇಕಡಾ ೦.೪-೦.೬ ರಷ್ಟು ಬೇಯಿಸದ ಸುಣ್ಣವನ್ನೊಳಗೊಂಡಿರುತ್ತದೆ. ಒರೆಗಾವ್ ನಲ್ಲಿ ಶೇಕಡಾ ೧.೫ ರಷ್ಟು ಗಂಧಕದ ಡೈ ಆಕ್ಸೈಡ್ ಮತ್ತು ಸಾಧಾರಣ ಶೇಕಡಾ ೦.೯೦ ವಾರ ಹದಬರಿಸಲು ದಾಸ್ತಾನಿಡಬೇಕು. ಆಗ ಅವು ಬಿಳಿ ಅಥವಾ ನಸುಹಳದಿ ಬಣ್ಣವನ್ನು  ಪಡೆಯುತ್ತವೆ. ಅನಂತರ ಚೆನ್ನಾಗಿ ತೊಳೆದು, ಎರಿಥ್ರೋಸಿನ್ ನಂಥ ಕೆಂಪು ಬಣ್ಣ ಬೆರೆಸಿ ಸಿಟ್ರಿಕ್ ಆಮ್ಲದಿಂದ ಸ್ಥಿರಪಡಿಸಬೇಕು. ಬಣ್ಣಕೊಟ್ಟ ಈ ಚೆರ್ರಿ‍ಗಳನ್ನು  ಡಬ್ಬಿಯಲ್ಲಿ ಸಂಸ್ಕರಿಸಲು ಇಲ್ಲವೇ ಸಿಹಿ ಹಳಕು(ಮುರಬ್ಬ, ಖಂಡ ಸಕ್ಕರೆ) ತಯಾರಿಸಲು ಉಪಯೋಗಿಸಬಹುದು.

ಅಂಜೂರ

ಅಂಜೂರವನ್ನು ಪ್ರಿಸರ್ವ ರೂಪದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸುವುದು ವಾಡಿಕೆ. ಮರದಲ್ಲೇ ಮಾಗಿದ ಹಣ್ಣುಗಳನ್ನು ಉಪಯೋಗಿಸಿದರ ಒಳ್ಳೆ ಫಲಿತಾಂಶ ದೊರೆಯುತ್ತದೆ. ಕದೋಟಾ, ಸೆಲೆಸ್ಟೆ, ಮೆಗ್ಗನೋಲಿಯಾ, ಸ್ಮಿರ್ನಾ ತಳಿಗಳು ಡಬ್ಬಿಯಲ್ಲಿ ಸಂಸ್ಕರಿಸುವುದರಲ್ಲಿ ಪ್ರಮುಖವಾದವುಗಳು. ಹಣ್ಣುಗಳನ್ನು ವರ್ಗೀಕರಿಸಿ ೨-೩ ನಿಮಿಷ ಬಿಸಿನೀರನಲ್ಲಿ (೧೮೦ ಫ್ಯಾ.) ಬಾಡಿಸಬೇಕು.  ಕೆಲವು ವೇಳೆ ಸಿಪ್ಪೆ ತೆಗೆಯಲು ಕ್ಷಾಮದ್ರವವನ್ನು ಉಪಯೋಗಿಸುವುದು ಉಂಟು. ಹಣ್ಣಿನ ಮೇಲಿನ ಮೇಣದ ಲೇಪನ ಮತ್ತು ಕ್ಷಾರದ್ರವವನ್ನು ನೀರಿನಿಂದ ತೊಳೆದು ತೆಗೆಯಬಹುದು. ಅನಂತರ ಇವುಗಳ ಗಾತ್ರ ಮತ್ತು ಮಾಗಿದ ಮಟ್ಟಕ್ಕನುಗುಣವಾಗಿ ೧೦-೧೨ ನಿಮಿಷ ಕುದಿಯುವ ನೀರನಲ್ಲಿ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಬೇಕು. ಇದಾದ ಮೇಲೆ ೪೫-೫೫ ಡಿಗ್ರಿ ಬ್ರಿಕ್ಸ್ ಸಾಂದ್ರತೆಯುಳ್ಳ ಸಕ್ಕರೆಪಾಕದಲ್ಲಿ ತುಂಬಿಡಬೇಕು. ಶೇಕಡಾ ೦.೫ ರಷ್ಟು ಸಿಟ್ರಿಕ್ ಆಮ್ಲವನ್ನು ಸಕ್ಕರೆಪಾಕದೊಡನೆ ಸೇರಿಸಿದರೆ ಮಿಶ್ರಣ ಚೆನ್ನಾಗಿ ಹೊಂದಿಕೊಳ್ಳುವುದಲ್ಲದೆ ದಾಸ್ತಾನಿನ ಅವಧಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ.

ದ್ರಾಕ್ಷಿ

ಡಬ್ಬಿಯಲ್ಲಿ ಸಂಸ್ಕರಿಸುವುದಕ್ಕೆ ಮಸ್ಕತ್ ಮತ್ತು ಥಾಮ್ಸನ್ ಸೀಡ್ ಲೆಸ್ ತಳಿಗಳು ಉತ್ತಮ. ಕೇವಲ ದೊಡ್ಡಗಾತ್ರದ ಹಣ್ಣುಗಳನ್ನು ಮಾತ್ರ ಡಬ್ಬಿಯಲ್ಲಿ ಸಂಸ್ಕರಿಸಬೇಕು. ಸಕ್ಕರೆ ಪಾಕದ ಸಾಂದ್ರತೆ ೨೦-೪೦ ಬ್ರಿಕ್ಸ್‌‌ನಷ್ಟಿರಬೇಕು. ಡಬ್ಬಿಯಲ್ಲಿ ಸಂಸ್ಕರಿಸಿದಾಗ ಸಾಧಾರಣ ಶೇಕಡಾ ೧೬ ರಷ್ಟು ನಷ್ಟ ಸಂಭವಿಸುತ್ತದೆ. ಸಿದ್ಧಪ್ಪ ಮತ್ತು ಈಶಾಖ್ ರವರ ಹೇಳಿಕೆ ಪ್ರಕಾರ ಬೀಜವಿಲ್ಲದ ಕಿಶ್ ಮಿಶ್ ಮತ್ತು ಬೀಜವಿರುವ ಹೈಥಾ ದ್ರಾಕ್ಷಿಗಳು ಡಬ್ಬಿಯಲ್ಲಿ ಸಂಸ್ಕರಿಸಿದಾಗ ಉತ್ತಮ ಪದಾರ್ಥವನ್ನು ಕೊಡುತ್ತದೆ. ಸಾಮಾನ್ಯವಾಗಿ ಬಣ್ಣದ ದ್ರಾಕ್ಷಿಗಳನ್ನು ಯಾವಾಗಲೂ ಅರಗಿನ ಲೇಪನವಿರುವ ಡಬ್ಬಿಗಳಲ್ಲೇ ಸಂಸ್ಕರಿಸಬೇಕು.

ಗ್ರೇಪ್ ಪ್ರೂಟ್ (ಸಕ್ಕರೆ ಕಂಚಿ)

ಗ್ರೇಪ್ ಫ್ರೂಟ್‌‌ಗಳನ್ನು ಮರದಲ್ಲೇ ಹಣ್ಣಾಗಲು ಬಿಡಬೇಕು. ಇವುಗಳನ್ನು ಮಾಷ್ ‌ ಸೀಡ್ ಲೆಸ್, ಡಂಕನ್ ಮತ್ತು ಫ್ಯಾಸ್ಟರ್ ಇವು ಡಬ್ಬಿಯಲ್ಲಿ ಸಂಸ್ಕರಿಸಲು ಉತ್ತಮ  ತಳಿಗಳು. ಲಾಲ್ ಸಿಂಗ್ ಮತ್ತು ಗಿರಿಧಾರಿಲಾಲ್ ರ ಹೇಳಿಕೆ ಪ್ರಕಾರ ಮಾರ್ಷ್ ಸೀಡ್ ಲೆಸ್ ಮತ್ತು ಫಾಸ್ವರ್ ತಳಿಗಳು ಡಬ್ಬಿಯಲ್ಲಿ ಸಂಸ್ಕರಿಸಲು ಅತ್ಯುತ್ತಮವಾದವುಗಳಾಗಿವೆ.

ಈ ಹಣ್ಣುಗಳ ಹೊರಗಿನ ದಪ್ಪ ಸಿಪ್ಪೆಯನ್ನು ತೆಗೆಯಲು ೨೦೦-೨೦೬ ಫ್ಯಾ. ಉಷ್ಣತೆಯಿರುವ ನೀರನಲ್ಲಿ ೨ ರಿಂದ ೫ ನಿಮಿಷ ಮುಳುಗಿಸಿಡಬೇಕು. ಇದರಿಂದ ಸಿಪ್ಪೆ ಮೆತ್ತಗಾಗಿ ಕೈಯಿಂದ ತೆಗೆಯಲು ಸುಲಭವಾಗುತ್ತದೆ. ಹೊರಗಿನ ದಪ್ಪ ಸಿಪ್ಪೆಯನ್ನು ತೆಗೆದ ನಂತರ ಒಳಗಿನ ತೆಳುವಾದ ಸಿಪ್ಪೆಯನ್ನು  ಕ್ಷಾರದ್ರವದಿಂದ ಅಥವಾ ಕೈಯಿಂದಲೇ ತೆಗೆಯಬಹುದು. ಸಿಪ್ಪೆ ತೆಗೆದ ಇಡಿಯ ಹಣ್ಣನ್ನು ಶೇಕಡಾ ೧.೫-೨.೦ರ  ಬಿಸಿಯಾದ ಕಾಸ್ಟಿಕ್ ಸೋಡಾ ದ್ರಾವಣದಲ್ಲಿ ಮುಳಗಿಸಿಡಬೇಕು. ಅನಂತರ ತಣ್ಣೀರಿನಲ್ಲಿ ಚೆನ್ನಾಗಿ ತೊಳೆದು ಅದರ ಭಾಗಗಳನ್ನು ಪ್ರತ್ಯೇಕಿಸಬೇಕು. ಹೋಳುಗಳನ್ನು ಅದರ ತೆಳುಪರೆಯಿಂದ ಬೇರ್ಪಡಿಸಲು ಒಂದು ವಿಶೇಷ ರಚನೆಯ ಸ್ಟೇನ್ ಲೆಸ್ ಸ್ಟೀಲ್ ಚಾಕುವನ್ನು ಉಪಯೋಗಿಸಬಹುದು. ಶುಚಿಯಾದ ಈ ಚಾಕುವಿನಿಂದ ಹೋಳುಗಳ ಒಳಭಾಗವನ್ನು ಉಪಯೋಗಿಸಬಹುದು. ಶುಚಿಯಾದ ಈ ಚಾಕುವಿನಿಂದ ಹೋಳುಗಳ ಒಳಭಾಗವನ್ನು ಅವುಗಳ ಮೇಲಿನ ತೆಳುಪರೆಯಿಂದ ತುಂಡಾಗದ ರೀತಿ ಮೇಲೆ ಎತ್ತಿ ತೆಗೆಯಬೇಕು. ಎಲ್ಲ ಹೋಳು ಬಿಡಿಸಿದನಂತರ ಉಳಿದಿರುವ ತೆಳುಪರೆಗಳು ಪುಸ್ತಕದ ಹಾಳೆಗಳಂತೆ ಕಾಣಿಸುತ್ತದೆ. ಫ್ಲೋರಿಡಾದಲ್ಲಿ ಸಿಪ್ಪೆ ತೆಗೆಯಲು ಒಂದು ವಿಶೇಷವಾದ ಬಗ್ಗಿದ ಚಾಕು ಅಥವಾ ಬಿದಿರಿನ ಚಾಕು  ಇಲ್ಲವೇ ಗಟ್ಟಿ ಮರದಿಂದ ಮಾಡಿದ ಚಾಕು ಬಳಕೆಯಲ್ಲಿದೆ. ಸಿಪ್ಪೆ ಮತ್ತು ತೆಳುಪದರಿನಿಂದ  ಬೇರ್ಪಡಿಸಿದ ಹಣ್ಣಿನ ಈ ಹೋಳುಗಳನ್ನು ಸಾದಾ ಡಬ್ಬಿಗಳಲ್ಲಿ ತುಂಬುವಾಗ ಎಚ್ಚರಿಕೆ ವಹಿಸಬೇಕು. ಸಕ್ಕರೆಯನ್ನು ಪದರುಪದರಾಗಿ ಹಾಕಬೇಕು. ಇಲ್ಲವೇ ೭೦ ಬ್ರಿಕ್ಸ್ ಸಕ್ಕರೆ ಪಾಕವನ್ನು ಅದಕ್ಕೆ ಸುರಿಯಬೇಕು. ಸಕ್ಕರೆ ಪಾಕವನ್ನು ಉಪಯೋಗಿಸಿ ತಯಾರಿಸಿದ ಪದಾರ್ಥ ಉತ್ತಮ ಮಟ್ಟದ್ದಾಗಿರುತ್ತದೆ. ಒಂದು ಎ ೨ ಗಾತ್ರದ ಡಬ್ಬಿಗೆ ಸಾಧಾರಣ ೨ ಔನ್ಸ್ ಒಣಸಕ್ಕರೆ ಬೇಕಾಗುತ್ತದೆ. ಗ್ರೇಪ್ ಫ್ರೂಟ್ ಇತರ ಹಣ್ಣುಗಳಂತಲ್ಲ. ಅದನ್ನು ಡಬ್ಬಿಗಳಲ್ಲಿ ತುಂಬಿದ ಮೇಲೆ ಹೆಚ್ಚು ಕಾಲ ಅಂದರೆ ೨೫-೩೦ ನಿಮಿಷ ೧೮೦-೧೯೦ ಫ್ಯಾ. ಉಷ್ಣತೆಯಲ್ಲಿ ನಿರ್ವಾತಗೊಳಿಸಬೇಕು. ಅಲ್ಲದೆ ಹಣ್ಣಿನ ವಾಸನೆ ಮತ್ತು ರಚನೆಯನ್ನು ಉಳಿಸಿಕೊಳ್ಳಲು ಇದೇ ಉಷ್ಣತೆಯಲ್ಲಿ ೩೦-೪೦ ನಿಮಿಷ ಸಂಸ್ಕರಿಸಬೇಕು. ಸಂಸ್ಕರಿಸಿದ ಡಬ್ಬಿಗಳನ್ನು ಮಾರುಕಟ್ಟೆಗೆ ರವಾನಿಸುವ  ಮೊದಲು  ಕೆಲವು ವಾರಗಳ ಕಾಲ ಇಟ್ಟುಕೊಂಡಿರುವುದು ಒಳ್ಳೆಯದು.

ಲೊಸೆಕ್ ರವರ ಹೆಳಿಕೆ ಪ್ರಕಾರ ೮೦ ಪೌಂಡು ಗ್ರೇಪ್ ಫ್ರೂಟ್ ಹಣ್ಣುಗಳನ್ನು ಕ್ಷಾರದ್ರವದಲ್ಲಿ ಮುಳುಗಿಸಿ ಸಿಪ್ಪೆ ತೆಗೆದು ಎ ೨ ಗಾತ್ರದ ೩೩ ಡಬ್ಬಿಗಳನ್ನು ತುಂಬುವಷ್ಟು ಹಣ್ಣು ಸಿಕ್ಕುತ್ತದೆ. ಇದಕ್ಕೆ ಬದಲಾಗಿ ಕೈಯಿಂದ ಸಿಪ್ಪೆ ತೆಗೆದರೆ ಕೇವಲ ೨೪ ರಿಂದ ೨೭ ಡಬ್ಬಿಗಳಲ್ಲಿ ತುಂಬುವಷ್ಟು ಮಾತ್ರ ಹಣ್ಣು ಸಿಗುತ್ತದೆ.

ಗ್ರಿನ್ ಗೇಜ್

ಗ್ರೀನ್ ಗೇಜ್ ಗಳನ್ನು ಡಬ್ಬಿಯಲ್ಲಿ  ಸಂಸ್ಕರಿಸುವಾಗ ಶೇಕಡಾ ೦.೫ ರಷ್ಟು ಸಿಟ್ರಿಕ್ ಆಮ್ಲಗಳನ್ನು ಸಕ್ಕರೆ ಪಾಕಕ್ಕೆ ಸೇರಿಸಿಕೊಳ್ಳುವುದು ಒಳ್ಳೆಯದು. ಆದಾಗ್ಯೂ ಡಬ್ಬಿಯಲ್ಲಿ ಸಂಸ್ಕರಿಸಿದ ಪದಾರ್ಥವನ್ನು ದಾಸ್ತಾನು ಮಾಡಿದಾಗ ಕಂದು ಬಣ್ಣಕ್ಕೆ ತಿರುಗಿ, ಮೆತ್ತಗಾಗಿ ಕೆಟ್ಟವಾಸನೆ ಬರುವ ಸಾಧ್ಯತೆ ಇರುತ್ತದೆ. ಅಪ್ಪಟ ಗ್ರೀನ್ ಗೇಜ್ ಆದರೆ ತಕ್ಕಮಟ್ಟಗೆ ತೃಪ್ತಿಕರವಾಗಿ ಡಬ್ಬಿಯಲ್ಲಿ ಸಂಸ್ಕರಿಸಬಹುದು.

ಸೀಬೆ

ಉತ್ತಮ ಮಟ್ಟದ ಸೀಬೆಹಣ್ಣು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದಕ್ಷಿಣ ಭಾರತದ ಕೆಲವು ಕಡೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ. ಡಬ್ಬಿಯಲ್ಲಿ ಸಂಸ್ಕರಿಸಿದ ಸೀಬೆಹಣ್ಣಿನ ರುಚಿ ಮತ್ತು ವಾಸನೆ ಅನೇಕ ವೇಳೆ ಹೊಸ ಹಣ್ಣಿಗಿಂತ ಉತ್ತಮವಾಗಿರುತ್ತದೆ. ಸೀಬೆಹಣ್ಣಿನ ತಿರುಳು ರಚನೆಯಲ್ಲಿ ಬಹು ಮೆತ್ತಿಗಿದ್ದರೂ ಸಂಸ್ಕರಣೆಯನ್ನು ಚೆನ್ನಾಗಿ ತಡೆಯುತ್ತದೆ. ಇದು ದಾಸ್ತಾನಿನ ಅವಧಿಯಲ್ಲಿ ಕಪ್ಪು ಬಣ್ಣಕ್ಕೆ ತಿರುಗುವುದಿಲ್ಲ. ಡಬ್ಬಿಯಲ್ಲಿ  ಸಂಸ್ಕರಿಸಲು ಸಂಪೂರ್ಣ ಮಾಗಿದ, ಗಟ್ಟಿಯಾದ ಕೆಲವೇ ಬೀಜಗಳನ್ನು ಕೊರೆದು ತೆಗೆಯಲು ಚಮಚೆಯಾಕಾರದ ಚಾಕುವನ್ನು ಉಪಯೋಗಿಸಬಹುದು. ಸಿಪ್ಪೆ ತೆಗೆದು ಕೊರೆದ ಹಣ್ಣುಗಳು ಗಾಳಿಯ ಸಂಪರ್ಕದಿಂದ ಕಂದುಬಣ್ಣಕ್ಕೆ ತಿರುಗುತ್ತವೆ. ಇದನ್ನು ತಡೆಯಬೇಕಾದರೆ ಶೇಕಡಾ ೧-೨ರ ಉಪ್ಪಿನ ದ್ರಾವಣದಲ್ಲಿ ಮುಳುಗಿಸಿಡುವುದು ಅಗತ್ಯ. ಜೈನ್, ದಾಸ್ ಮತ್ತು ಗಿರಿಧಾರಿಲಾಲರಂತಹ ಸಿಪ್ಪೆ ಮತ್ತು ಕೊರೆದು ತೆಗೆದ ಭಾಗಗಳಿಂದ ಸೀಬೆಜೆಲ್ಲಿ ಅಥವಾ ಚೀಸನ್ನು ತಯಾರಿಸಬಹುದು.

ಹಲಸು

ಹಲಸಿನ ಹಣ್ಣು (Artocarpus Integridolia) ಬೊಂಬಾಯಿ, ಬಿಹಾರ್, ಒರಿಸ್ಸಾ, ಕರ್ನಾಟಕ, ಮಲಬಾರ್ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಕೆಲವು ವರ್ಗದ ಜನರಿಗೆ ಇದು ಮುಖ್ಯ ಆಹಾರವೆಂದುರು ತಪ್ಪಲ್ಲ. ಈ ಹಣ್ಣಿನ ಒಂದು ಮರ ೨೦ ರಿಂದ ೪೦ ಪೌಂಡು ತೂಕದ ೬೦ ರಿಂದ ೭೫ ಹಣ್ಣುಗಳನ್ನು ಕೊಡಬಲ್ಲುದು. ಕೆಲವು ಹಣ್ಣುಗಳು ೭೦ ರಿಂದ ೮೦ ಪೌಂಡು ತೂಗುವುದೂ ಇದೆ. ಮಾಗದ ಹಸುರು ಹಲಸಿನಕಾಯಿ ತರಕಾರಿಯೂ ಹೌದು. ಡಬ್ಬಿಗಳಲ್ಲಿ ಸಂಸ್ಕರಿಸಿದ ಹಸುರು ಹಲಸಿನ ತೊಳೆಗಳು ಮೇಲೋಗರದ ಪದಾರ್ಥವಾಗಬಲ್ಲವು ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಮಾಗಿದ ಹಣ್ಣಿನ ಬಿರುಸಾದ ತೊಳೆಗಳನ್ನು ಸಕ್ಕರೆಪಾಕವನ್ನು ಉಪಯೋಗಿಸಿ ಡಬ್ಬಿಯಲ್ಲಿ ಸಂಸ್ಕರಿಸಬಹುದು. ಹಲಸಿನ ಹಣ್ಣಿನ ತೊಳೆಗಳ ಅಂಶ ಹಣ್ಣಿನ ಒಟ್ಟು ತೂಕದ ಶೇಕಡಾ ೨೫ ರಿಂದ ೪೦ ರಷ್ಟು ಇರುತ್ತದೆ.

ಹಣ್ಣುಗಳನ್ನು   ಮೊದಲು ದೊಡ್ಡ ತುಮಡುಗಳಾಗಿ ಕತ್ತಿರಿಸಿಕೊಂಡು ಅನಂತರ ತೊಳೆಗಳನ್ನು ಕೈಯಿಂದ ಬಿಡಿಸಬೇಕು. ಹಣ್ಣಿನಲ್ಲಿ ಒಂದು ರೀತಿಯ ಬಿಳಿಯಾದ ಅತಿ ಅಂಟಾದ ಹಾಲು ಇರುತ್ತದೆ. ಇದು ಎಣ್ಣೆಯಲ್ಲಿ ಕರಗುತ್ತದೆ. ಆದುದರಿಂದ ಸ್ವಲ್ಪ ಎಳ್ಳೆಣ್ಣೆ ಅಥವಾ ಒಳ್ಳೆಣ್ಣೆ ಇಲ್ಲವೇ ವನಸ್ಪತಿಯನ್ನು ಕೈಗೆ ಸವರಿಕೊಂಡರೆ ಈ ಹಾಲು ಕೈಗೆ ಅಂಟುವುದಿಲ್ಲ. ತೊಳೆ ಗಳಿಂದ ಮೊದಲು ಬೀಜವನ್ನು ಬೇರ್ಪಡಿಸಬೇಕು. ಅನಂತರ ಇಡಿಯಾಗಿ ಇಲ್ಲವೇ ಅರ್ಧ ಅಥವಾ ಕಾಲುಭಾಗಗಳಾಗಿ ತೊಳೆಗಳನ್ನು ಕತ್ತಿರಿಸಿ ಡಬ್ಬಿಯಲ್ಲಿ ಸಂಸ್ಕರಿಸಬೇಕು. ಸಕ್ಕರೆ ಪಾಕದ ಬ್ರಿಕ್ಸ್ ೫೦ ಇದ್ರೆ ಉತ್ತಮ ಫಲಿತಾಂಶ ಲಭಿಸುತ್ತದೆ. ಹಣ್ಣಿನ ಪಿ.ಎಚ್. ಅತಿ ಹೆಚ್ಚು ಅಂದರೆ ಸಾಧಾರಣ ೫.೨ ಇರುತ್ತದೆ. ಡಬ್ಬಿಯಲ್ಲಿ ಸಂಸ್ಕರಿಸುವಾಗ ಶೇಕಡಾ ೦.೫ ರಿಂದ೦.೭೫ ರಷ್ಟು ಸಿಟ್ರಿಕ್ ಆಮ್ಲವನ್ನು ಜೊತಗೆ ಸೇರಿಸಬೇಕು. ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ಹಲಸಿನ ಹಣ್ಣನ್ನು ಡಬ್ಬಯಲ್ಲಿ ಸಂಸ್ಕರಿಸುವ ವಿಧಾನವನ್ನು ಕ್ರಮಪಡಿಸಿದ್ದಾರೆ.

ಡಬ್ಬಿಯಲ್ಲಿ ಸಂಸ್ಕರಿಸಿದ ಪದಾರ್ಥಕ್ಕೆ ಎಲ್ಲರೂ ಇಷ್ಟಪಡುವಂಥ ಒಂದು ವಿಶೀಷ್ಟ ವಾಸನೆಯಿರುತ್ತದೆ. ಈ ಹಣ್ಣನ್ನು ವಾಣಿಜ್ಯ ಮಟ್ಟದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸಲು ತುಂಬ ಅವಕಾಶವಿದೆ. ಇದರ ಹೊರಗಿನ ದಪ್ಪ ಸಿಪ್ಪೆಯಲ್ಲಿ ಪೆಕ್ಟಿನ್ ಅಧಿಕವಾಗಿರುತ್ತದೆ. ಇದನ್ನು ಪೆಕ್ಟಿನ್ ತಯಾರಿಸಲು ಉಪಯೋಗಿಸಬಹುದು. ಇದರ ಸಿಪ್ಪೆ ಮತ್ತು ತೊಳೆಗಳನ್ನು ಬೇರ್ಪಡಿಸಿದ ನಂತರ ಉಳಿಕೆ ಪದಾರ್ಥಗಳಿಂದ ಒಳ್ಳೆಯ ಜೆಲ್ಲಿಯನ್ನು ಪಡೆಯಬಹುದು. ಬೀಜವನ್ನು ತರಕಾರಿಯಾಗಿ ಇಲ್ಲವೇ ಪುಡಿ ಮಾಡಿ ಗೋಧಿಹಿಟ್ಟಿನ ಜೊತೆ ಬೆರಸಿ ಉತ್ತಮ ಚಪಾತಿ ತಯಾರಿಸಿಬಹುದು.

ಲಿಚಿ

ಲಿಚಿ ಹಣ್ಣು ಉತ್ತರಪ್ರದ್ರೇಶ, ಬಿಹಾರ್, ಮತ್ತು ಒರಿಸ್ಸಾದಲ್ಲಿ ಬೆಳೆಯುತ್ತದೆ.ಡಬ್ಬಿಯಲ್ಲಿ ಸಂಸ್ಕರಿಸಲು ಉಪಯೋಗಿಸುವ ಹಣ್ಣು ಮರದಲ್ಲೇ ಮಾಗಿರಬೇಕು. ಹಣ್ಣಿನ ಹೊರಗಿನ ಚಿಪ್ಪನ್ನು ಒಡೆದು, ಹೊರಗಿನ ತಿರುಳನ್ನು ಬೇರ್ಪಡಿಸಿ ಓಟೆ ಭಾಗವನ್ನು ಹೊರತೆಗೆಯಬೇಕು. ಸಂಸ್ಕರಿಸಲು ಸಾದಾ ಡಬ್ಬಿಗಳೇ ಸಾಕಾಗುತ್ತದೆ. ಸಕ್ಕರೆ ಪಾಕದ ಬ್ರಿಕ್ಸ್ ೪೦ ಇರಬೇಕು. ಇದಕ್ಕೆ ಶೆಕಡಾ ೦.೫. ರಷ್ಟು ಸಿಟ್ರಿಕ್ ಆಮ್ಲವನ್ನು ಸೇರಿಸಬೇಕು. ಸಂಸ್ಕರಿಸಿದ ಡಬ್ಬಿಗಳನ್ನು ಕ್ಷಿಪ್ರವಾಗಿ ಸಂಪೂರ್ಣ ತಣ್ಣಗೆ ಆರಿಸುವುದು ಅರಿ ಅಗತ್ಯ. ಇದರಿಂದ ಸಂಸ್ಕರಿಸಿದ ಹಣ್ಣಿಗೆ ನಸುಗೆಂಪು ಬಣ್ಣ ಬರುವುದನ್ನು ತಪ್ಪಿಸಬಹುದು. ಈ ದಿಸೆಯಲ್ಲಿ ಚೀನಾದೇಶದ ಡಬ್ಬಿಯಲ್ಲಿ ಸಂಸ್ಕರಿಸಿದ ಲಿಚಿಯು ಲೋಕಪ್ರಸಿದ್ಧವಾಗಿದೆ.

ಲಕೋಟೆ

ಲಕೋಟೆ ಹಣ್ಣುಗಳನ್ನು ಇಬ್ಬಾಗ ಮಾಡಿ ಡಬ್ಬಿಯಲ್ಲಿ ಸಂಸ್ಕರಿಸಿದರೆ ಬಹು ಆಕರ್ಷಕವಾಗಿರುತ್ತದೆ.

ಮಾವು

ನಮ್ಮ ದೇಶ ಮಾವಿನ ಹಣ್ಣಿನ  ತವರೂರು. ಸಾಧಾರಣವಾಗಿ ದೇಶದ ಎಲ್ಲ ಕಡೆಗಳಲ್ಲಿ ವಿವಿಧ ರೀತಿಯ ಹಣ್ಣಿನ ತಳಿಗಳನ್ನು ಕಾಣಬಹುದು. ಭಾರತ ಸರಕಾರದ ಹಣ್ಣಿನ ಅಭಿವೃದ್ಧಿ ಸಲಹೆಗಾರರು ೧೯೪೮-೪೯ ರಲ್ಲಿ ಸಂಗ್ರಸಿದ ಲೆಕ್ಕದ ಪ್ರಕಾರ ಒಟ್ಟು ಹಣ್ಣು ಬೆಳೆಯುವ ಕ್ಷೇತ್ರ ೩.೧೬ ಮಿಲಿಯ ಎಕರೆಗಳು. ಇದರಲ್ಲಿ ಮಾವಿನ ಹಣ್ಣಿನ ಬೆಳೆಗೆ ಮೀಸಲಾಗುವುದು ಶೇಕಡಾ ೭೦ ರಷ್ಟು ಅಂದರೆ, ೨.೨ ಮಿಲಿಯ ಎಕರೆಗಳು. ಮಾವಿನಹಣ್ಣು ಬೆಳಯುವ ಪ್ರಮುಖ ರಾಜ್ಯಗಳೆಂದರೆ ಉತ್ತರಪ್ರದೇಶ, ತಮಿಳುನಾಡು, ಬಿಹಾರ ಮತ್ತು ಪಶ್ಚಿಮ ಬಂಗಾಳ.

ನಮ್ಮ ದೇಶದ ವಿವಿಧ ತಳಗಿಳಲ್ಲಿ ಉತ್ತರಪ್ರದೇಶದ ಸಫೈದಾ, ಸಾರ್ಹೋಲಿ ಮತ್ತು ದುಶ್ಯೇರಿಗಳು; ರತ್ನಗಿರಿಯ ಆಲ್ಫೋನ್ಸೊ; ಮೈಸೂರಿನ ಬಾದಾಮಿ; ಸಿರ್ಕಾರ್ ನ ಬೆನಿಶಾನ್; ತಮಿಳುನಾಡು ಮತ್ತು ಕರ್ನಾಟಕದ ರಸಪುರಿ, ನೀಲಂ ಮತ್ತು ಮಲಗೋವ-ಇವು ಡಬ್ಬಿಯಲ್ಲಿ ಸಂಸ್ಕರಿಸಲು ಯೋಗ್ಯವಾದ ಮುಖ್ಯ ತಳಿಗಳು. ಬೆಂಗಳೂರ ತಳಿಯನ್ನು ಡಬ್ಬಿಯಲ್ಲಿ ಸಂಸ್ಕರಿಸಿದಾಗ ಉತ್ತಮ ಪದಾರ್ಥವನ್ನು ಪಡೆಯಬಹುದು. ಹೆಚ್ಚು ರಸವುಳ್ಳ ಮತ್ತಿ ನಾರಿನಿಂದ ಕೂಡಿದ ಹಣ್ಣಿನ ತಳಿಗಳು ಡಬ್ಬಿಯಲ್ಲಿ ಸಂಸ್ಕರಿಸಲು ಯೋಗ್ಯವಲ್ಲ. ಇವುಗಳಿಂದ ಉತ್ತಮ ಮಟ್ಟದ ಸ್ಕ್ವಾಷ್, ಚಟ್ನಿ ಮತ್ತು ಉಪ್ಪಿನಕಾಯಿಯನ್ನು ತಯಾರಿಸಬಹುದು.

ಚೆನ್ನಾಗಿ ಬಲಿತು, ಗಟ್ಟಿಯಾಗಿರುವ ಮಾವಿನಕಾಯಿಯನ್ನೇ ಕೀಳಬೇಕು. ಅನಂತರ ಒಣಹುಲ್ಲಿನಲ್ಲಿಟ್ಟು ಮಾಗಿಸಬೇಕು. ಹಣ್ಣಿನ ಸಿಪ್ಪಯನ್ನು ಕೈಯಿಂದ ತೆಗೆಯಬಹುದು. ಒಳಗಿನ ತಿರುಳನ್ನು ಕತ್ತರಿಸಿ, ಉದ್ದಕ್ಕೆ ೬ ರಿಂದ ೮ ತುಂಡು ಮಾಡಬೇಕು. ಕಂದುಬಣ್ಣಕ್ಕೆ ಬದಲಾಗದಂತೆ ತಿರುಗಳನ್ನು ಕತ್ತಿರಿಸಿ, ಉದ್ದಕ್ಕೆ ೬ ರಿಂದ ೮ ತುಂಡು ಮಾಡಬೇಕು. ಕಂದುಬಣ್ಣಕ್ಕೆ ಬದಲಾಗದಂತೆ ಶೇಕಡಾ ೨ ರ ಅಡಿಗೆ ಉಒಪ್ಪಿನ ದ್ರಾವಣದಲ್ಲಿ ಮುಗಿಸಿಡಬೇಕು. ಸಂಸ್ಕರಿಸಲು ಸಾದಾ ಡಬ್ಬಿಗಳೆ ಸಾಕು. ಕೆಲವು ತಳಿಗಳ ಪಿ.ಎಚ್. ಸ್ವಲ್ಪಮಟ್ಟಿಗೆ ಅಧಿಕವಿರಬಹುದು. ಇಂಥ ಹಣ್ಣುಗಳಿಗೆ ಶೇಕಡಾ ೦.೩-೦.೫ ರಷ್ಟು ಸಿಟ್ರಿಕ್ ಆಮ್ಲವನ್ನು ಸಂಸ್ಕರಿಸುವಾಗ ಸಕ್ಕರೆಪಾಕದೊಡನೆ ಸೇರಿಸಬೇಕು. ಒಂದು ಪೌಂಡು ಗಾತ್ರದ ಬೆಣ್ಣೆ ಡಬ್ಬಿಯಲ್ಲಿ  ತುಂಬಲು ಸಾಧಾರಣಾ ೧ ೧/೨ ಪೌಂಡಿನಷ್ಟು ಕಚ್ಚಾ ಹಣ್ಣುಬೇಕು. ಹಣ್ಣಿನ ತಿರುಳನ್ನು ಸಜ್ಜುಗೊಳಿಸುವಾಗ ದೊರಕುವ ಚೂರುಗಳಿಂದ ಸ್ಕ್ವಾಷ್ ಇಲ್ಲವೆ ಜಾಮ್ ತಯಾರಿಸಬಹುದು.

ನಮ್ಮ ದೇಶದಲ್ಲಿ ಮಾವಿನಹಣ್ಣು ಅತಿ ಮುಖ್ಯವಾದ ವಾಣಿಜ್ಯದ ಹಣ್ಣಿನ ಬೆಳೆ. ಈ ದೃಷ್ಟಿಯಿಂದ ಅದನ್ನು ಸಂರಕ್ಷಿಸುವ ಮತ್ತು ಡಬ್ಬಿಯಲ್ಲಿ ಸಂಸ್ಕರಿಸುವ ವಿಧಾನವನ್ನು ಅಭಿವೃದ್ಧಿಪಡಿಸುವುದು ಅಗತ್ಯ.

ಕಿತ್ತಳೆ

ಕಿತ್ತಳೆ ಹಣ್ಣುಗಳನ್ನು ಬಹು ಅಲ್ಪ ಪ್ರಮಾಣದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸುವುದುಂಟು. ಇದಕ್ಕೆ ಯೋಗ್ಯವಾದ ತಳಿಗಳೆಂದರೆ ಜಪಾನಿನ ಸತ್ ಸುಮ ಮತ್ತು ಮೆಂಡರಿನ್. ನಮ್ಮಲ್ಲಿಯ ಮಾಲ್ಟಾ ಸಾತ್ ಗುಡಿ ಮತ್ತು ಸಡಿಲ ಸಿಪ್ಪೆಯ ನಾಗಪುರ ಮತ್ತು ಕೊಡಗಿನ ಕಿತ್ತಳೆ ಹಣ್ಣುಗಳನ್ನು ಡಬ್ಬಿಯಲ್ಲಿ ಸಂಸ್ಕರಿಸಲು ಯೋಗ್ಯವಾಗಿವೆ.

ಕಿತ್ತಳೆಹಣ್ಣಿನ ಸಿಪ್ಪೆಯನ್ನು ಕೈಯಿಂದಲೇ ತೆಗೆಯಬಹುದು. ಕುಡಿಯುವ ನೀರಿನಲ್ಲಿ ಸಿಪ್ಪೆ ಸಡಿಲವಾಗುವಂತೆ ಮಾಡಿ ತೆಗೆಯುವುದೂ ಬಳಕೆಯಲ್ಲಿದೆ. ತೋಳೆಗಳ ಮೇಲೆ  ಹಿಡಿದಿರುವ ನಾರನ್ನು ಬೇರ್ಪಡಿಸಬೇಕು. ಅನಂತರ ಶೇಕಡಾ ೧-೨ರ ಸಾಮರ್ಥ್ಯದ ಕುದಿಯುವ ಕ್ಷಾರದ್ರವದಲ್ಲಿ ೨೦ ರಿಂದ ೩೦ ಸೆಕೆಂಡು ಮುಳುಗಿಸಬೇಕು. ಮೇಲೆ ಹಿಡಿದಿರುವ ಕ್ಷಾರದ್ರವ ಅಂಶವನ್ನು ತೆಗೆಯಲು ಶೇಕಡಾ ೦.೫-೧.೦ ಸಾಮರ್ಥ್ಯದ ಸಜಲ (ದುರ್ಬಲ) ಹೈಡ್ರೋಕ್ಲೋರಿಕ್ ಆಮ್ಲದಲ್ಲಿ ಮುಳುಗಿಸಿ ತೆಗೆಯಬೇಕು ಮತ್ತು ಇದಾದ ಮೇಲೆ ನೀರನಲ್ಲಿ ತೊಳೆಯಬೇಕು.  ಕಿತ್ತಳೆ ಹಣ್ಣಿನ ಮೇಲೆ ತೆಳುವಾದ ಪರೆ ಅಥವಾ ಬೀಜಗಳಿದ್ದರೆ ಕೈಯಿಂದಲೇ ತೆಗೆಯಬೇಕು. ಸಂಸ್ಕರಿಸಲು ಸಾದಾ ಡಬ್ಬಿಗಳೇ ಸಾಕು. ಸಕ್ಕರೆ ಪಾಕಕ್ಕೆ ಅಗತ್ಯವಿದ್ದರೆ ಅಲ್ಪ ಪ್ರಮಾಣದಲ್ಲಿ ಕಿತ್ತಳೆ ಪರಿಮಳವನ್ನು ಸೇರಿಸಿಕೊಳ್ಳಬಹುದು. ಗ್ರೇಪ್ ಫ್ರೂಟ್ ಹಣ್ಣನ್ನು ಸಂಸ್ಕರಿಸುವ ವಿಧಾನವನ್ನೇ ಇದಕ್ಕೂ ಅನುಸರಿಸಬಹುದು. ಅಂದರೆ ೧೫ ರಿಂದ ೨೦ ನಿಮಿಷ  ನಿರ್ವಾತಗೊಳಿಸಿ, ಅನಂತರ ೧೫ ರಿಂದ ೨೦ ನಿಮಿಷ ಸಂಸ್ಕರಿಸುವುದು; ಇವೆರಡೂ ೧೮೦-೧೯೦ ಫ್ಯಾ. ಉಷ್ಣತೆಯಲ್ಲಿ ಆಗಬೇಕು. ಕಿತ್ತಳೆ ಹಣ್ಣಿನ ತೊಳೆಗಳನ್ನು ಮಾವು, ಅನಾನಸ್, ಹಲಸು, ಬಾಳೆ ಇವೇ ಮೊದಲಾದ ಹಣ್ಣುಗಳೊಡನೆ ರಸಾಯನ (ಸಲಾಡ್) ರೂಪದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸಬಹುದು.

ಪರಂಗಿ (ಪಪ್ಪಾಯಿ)

ಪರಂಗಿಹಣ್ಣನ್ನು ಹೋಳುಗಳಾಗಿ ಇಲ್ಲವೇ ಘನಾಕಾರದ ತುಮಡುಗಳ ರೂಪದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸಬಹುದು. ಸಕ್ಕರೆ ಪಾಕಕ್ಕೆ ಶೇಕಡಾ ೦.೫ ಸಿಟ್ರಿಕ್ ಆಮ್ಲವನ್ನು ಸೇರಿಸಬೇಕು.

ಪೀಚ್

ಪೀಚ್ ಹಣ್ಣುಗಳಲ್ಲಿ ಓಟೆ ಅಂಟಿಕೊಂಡಿರುವುವು ಮತ್ತು ಓಟೆ ಬಿಟ್ಟಿವವು ಎಂದು ಎರಡು ವಿಧ. ಮೊದಲನೆಯದರಲ್ಲಿ ಟಸ್ಕನ್ ಎಂಬ ಬೇಗ ಮಾಗುವ ಮತ್ತು ಪಲೋರ್, ಸಿಮ್ಸ್ ಮತ್ತು ಪೀಕ್ಸ್ ಎಂಬ ಮಧ್ಯ ಬೇಸಿಗೆ ತಳಿಗಳು ಮುಖ್ಯವಾಗಿ ಡಬ್ಬಿಯಲ್ಲಿ ಸಂಸ್ಕರಿಸುವಂಥವು. ತಡವಾಗಿ ಮಾಗುವ ಉತ್ತಮ ತಳಿ ಫಿಲಿಪ್ಸ್ ಕ್ಲಿಂಗ್ಸ, ಎಲ್ ಬೆರ್ಟಾ, ಲೋವೆಲ್ ಮತ್ತು ಜೆ.ಎಚ್. ಹೇಲ್‌‌ಗಳು ಡಬ್ಬಿಯಲ್ಲಿ  ಸಂಸ್ಕರಿಸಲು  ಉತ್ತಮವಾದ ಓಟೆ ಬಿಟ್ಟಿರುವ ತಳಿಗಳು. ಒಣಗಿಸಲು ಉತ್ತಮವಾದ ತಳಿ ಮ್ಯೂರ್, ಕ್ರಾಫಡ್‌‌‌‌ ಮತ್ತು ಸಾಲ್ ವೇ ಹಣ್ಣುಗಳಿಂದ ಒಳ್ಳೆಯ ಫಲಿತಾಂಶ ಸಿಗುವುದಿಲ್ಲ. ಕ್ಯಾಲಿಫೋರ್ನಿಯಾ ಮತ್ತು ಅಮೇರಿಕದ ಇನ್ನಿತರ ಕಡೆಗಳಲ್ಲಿ ಪೀಚ್ ಹಣ್ಣನ್ನು ಡಬ್ಬಿಯಲ್ಲಿ ಸಂಸ್ಕರಿಸುವುದು ಒಂದು ದೊಡ್ಡ ಪ್ರಮಾಣದ ಕೈಗಾರಿಕೆಯೆನಿಸಿದೆ

ಡಬ್ಬಿಯಲ್ಲಿ ಸಂಸ್ಕರಿಸಲು ಉಪಯೋಗಿಸುವ ಎಲ್ಲ ತಳಗಿಳು ಸಾಮಾನ್ಯವಾಗಿ ಒಂದೇ  ಸಮನಾದ ಹಳದಿ ಬಣ್ಣದಲ್ಲಿ ಇರಬೇಕು. ಸಿದ್ಧಪ್ಪ ಮತ್ತು ಇತರರ ಹೇಳಿಕೆ ಪ್ರಕಾರ ಬಳಿ ತಿರುಳಿನ  ತಳಿಗಳು ಕ್ವಟ್ಟಾದ ತಳಿಯಂತೆ ಮೃದುವಾಗಿದ್ದು, ಹೆಚ್ಚು ರಸಭರಿತವಿರುತ್ತವೆ; ಇವು ಡಬ್ಬಿಯಲ್ಲಿ ಸಂಸ್ಕರಿಸಲು ಯೋಗ್ಯವಲ್ಲ. ಪೇಷಾವರಿ ೬-ಎ ಪೀಚ್ ಎಲ್ ಬೆಟ್‌ಆರ್ಟಾ  ಪೀಚನ್ನು ಹೋಲುವುದರಿಂದ ಇದು ಡಬ್ಬಿಯಲ್ಲಿ ಸಂಸ್ಕರಿಸಲು ಒಂದು ಉತ್ತಮ ತಳಿ ಎಂದೇ ಹೇಳಬಹುದು.

ಪೀಚ್ ಹಣ್ಣನ್ನು ಮೊದಲು ಅದರ ಸೂಚಕ ಗೆರೆಯ ಸುತ್ತ ಕೊಯ್ಯಬೇಕು. ಅನಂತರ ಚಮಚಾಕಾರದ ಚಾಕುವನ್ನು ತೊಟ್ಟಿನ ಭಾಗದಲ್ಲಿ ಒಳಸೇರಿಸಿ, ತಿರುವು ಕೊಟ್ಟು ಸಾಧಾರಣ ಅರ್ಧಭಾಗದಷ್ಟು ಹಣ್ಣನ್ನು ಬೇರ್ಪಡಿಸಿ, ತೋಟ್ಟಿನ ತಗ್ಗನ್ನು ತೆಗೆಯಬೆಕು. ಉಳಿದ ಇನ್ನರ್ಧ ಭಾಗದಿಂದ ಓಟೆಯನ್ನು ಬೇರ್ಪಡಿಸಬೇಕು. ದೊಡ್ಡ ಪ್ರಮಾಣದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸುಬಾಗ ತೊಟ್ಟಿನ ತಗ್ಗನ್ನು ಯಂತ್ರಗಳ ನೆರವಿನಿಂದ ತೆಗೆಯಬಹುದು. ಒಂದು ತೀವ್ರವಾಗಿ ತಿರುಗುವ  ಗರಗಸದಿಂದ ಹಣ್ಣನ್ನು ಕತ್ತಿರಿಸಿ ಅನಂತರ ಯಾಂತ್ರಿಕವಾಗಿ ಚಲಿಸುವ ಅರ್ಧ ಭಾಗದ ಚಾಕುವಿನಿಂದ ಓಟೆ ಬೇರ್ಪಡಿಸುತ್ತಾರೆ. ಬಳಿಕ ಹೋಲುಗಳ ಸಿಪ್ಪೆ ತೆಗೆಯಲು ಶೇಕಡಾ ೧-೨ ರ ಕುದಿಯುವ ಕ್ಷಾರ ದ್ರವದಲ್ಲಿ ೧/೨-೧ ನಿಮಿಷ ಮುಳುಗಿಸಿಡಬೇಕು. ಓಟೆ ಬಿಟ್ಟಿರುವ ಜಾತಿಯ ಹಣ್ಣುಗಳ ಸಿಪ್ಪೆ ತೆಗೆಯಲು ಉಗಿಯಲು ಉಪಯೋಗಿಸಬಹುದು. ಸಾಮಾನ್ಯವಾಗಿ ಕತ್ತಿರಿಸಿದ ಹೋಳುಗಳನ್ನು ತಣ್ಣೀರಿನಲ್ಲಿಟ್ಟಿರೆ ಅವು ಕಪ್ಪುಬಣ್ಣಕ್ಕೆ ತಿರುಗುವುದಿಲ್ಲ. ಕ್ರುಯೆಸ್ ರ ಹೇಳಿಕೆ ಪ್ರಕಾರ ಒಂದು ಟನ್ ಓಟೆ ಅಂಟಿಕೊಂಡಿರುವ ಪೀಚ್ ಹಣ್ಣಿನಿಂದ ಸರಾಸರಿ ನಂ. ೨ ೧/೨ ಡಬ್ಬಿಯ ೪೫ ಪೆಟ್ಟಿಗೆ ತುಂಬುವಷ್ಟು ಹಣ್ಣು ದೊರೆಯುತ್ತದೆ. ಒಂದು ಟನ್ ಓಟೆ ಬಿಟ್ಟುಕೊಂಡಿರುವ ಹಣ್ಣಿನಿಂದದಾದರೆ ೪೧.೨ ಪೆಟ್ಟಿಗೆಗಳಲ್ಲಿ ತುಂಬುವಷ್ಟು ಹಣ್ಣು ಸಿಗುತ್ತದೆ.

ಪೇರು

ಪೇರು ಹಣ್ಣುಗಳು ಕುಲು ಮತ್ತು ಕಾಶ್ಮಿರದ ಕಣಿವೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತವೆ. ಸ್ವಲ್ಪಮಟ್ಟಿಗೆ  ದಕ್ಷಿಣ ಭಾರತದ ಪರ್ವತ ಪ್ರದೇಶಗಳಲ್ಲೂ ಈ ಹಣ್ಣನ್ನು ಕಾಣಬಹುದು. ಹಸುರಾಗಿರವ ಹಣ್ಣಗಳು ಸಂಪೂರ್ಣ ಗಾತ್ರಕ್ಕೆ ಬೆಳೆದ ಕೂಡಲೇ ಕೀಳಬೇಕು. ಲಾಲ್ ಸಿಂಗ ಮತ್ತು ಗಿರಿಧಾರಿಲಾಲ್ ರವರ ಹೇಳಿಕೆ ಪ್ರಕಾರ ಕುಲು ಪ್ರದೇಶದ ವಿಲಿಯಂ ಹಣ್ಣುಗಳನ್ನು ಸಾಧಾರಣ ೧೩-೧೪ ಪೌಂಡು ಒತ್ತಡವಿರುವಾಗ ಕಿತ್ತು ಅನಂತರ ೭೫-೮೦ ಫ್ಯಾ. ಉಷ್ಣತೆಯಲ್ಲಿ ಮಾಗಿಸಬೇಕು.

ಹಣ್ಣುಗಳ ಸಿಪ್ಪೆಯನ್ನು ತೊಟ್ಟಿನ ತುದಿಯಿಂದ ಮತ್ತೊಂದು ಕಡೆಗೆ ಚಾಕಿವಿನಿಂದ ಸುಲಿಯಬೇಕು. ಉದ್ದ ತುಂಡಾಗಳಾಗಿ ಕತ್ತರಿಸಿ ದಿಂಡು ತೆಗೆಯುವ ಚಾಕುವಿನಿಂದ ಮಧ್ಯದ ದಿಂಡನ್ನು ತೆಗೆಯಬೇಕು. ಈ ಹಣ್ಣುಗಳನ್ನು ಶೇಕಡಾ ೧-೨ ರ ಅಡಿಗೆ ಉಪ್ಪಿನ ದ್ರಾವಣದಲ್ಲಿಟ್ಟರೆ ಕಂದುಬಣ್ಣಕ್ಕೆ ತಿರುಗುವುದಿಲ್ಲ; ಹಾಗೆಯೇ ಡಬ್ಬಿಯನ್ನು ಕ್ಷಿಪ್ರವಾಗಿ, ಸಂಪೂರ್ಣವಾಗಿ ತಣ್ಣಗೆ ಆರಿಸಿದರೆ ಒಳಗಿನ ಪದಾರ್ಥ ನಸುಗೆಂಪು ಬಣ್ಣಕ್ಕೆ ಪರಿವರ್ತನೆಗೊಳ್ಳವುದಿಲ್ಲ.

ಅನಾನಸ್

ಅನಾನಸ್ ಬೆಳಯನ್ನು ಹೆಚ್ಚಾಗಿ ಅಸ್ಸಾಮ್, ಬಂಗಾಳ, ಗೋದಾವರಿ ಜಿಲ್ಲೆ ಮತ್ತು ದಕ್ಷಿಣ ದೇಶದ ಪಶ್ಚಿಮ ಸಮುದ್ರದ ಕರಾವಳಿ ಪ್ರದೇಶಗಳಲ್ಲಿ ಕಾಣಬಹುದು. ಇವುಗಳ ಮುಖ್ಯ ತಳಿಗಳೆಂದರೆ ಜೈಂಟ್ ಕ್ಯೂ ಮತ್ತು ಕ್ಚೀನ್.

ಹವಾಯಿ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಅನಾನಸ್ಸನ್ನು  ಡಬ್ಬಿಯಲ್ಲಿ ಸಂಸ್ಕರಿಸುವುದು ದೊಡ್ಡ ಕೈಗಾರಿಕಯೇ ಆಗಿದೆ. ಈ ದೇಶಗಳಲ್ಲಿ ಸಿಪ್ಪೆ, ದಿಂಡು ತೆಗೆಯುವುದು, ಕೊರೆಯುವುದು, ಕತ್ತಿರಿಸುವುದು ಇವೆಲ್ಲ ಜಿನಾಕಾ ಯಂತ್ರದಿಂದಲೇ ನಡೆಯುತ್ತದೆ. ನಮ್ಮ ದೇಶದಲ್ಲಿ ಕಥಯಿಂದ ಚಾಲಿಸುವ ತುಂಡು ಮಾಡುವ ಯಂತ್ರ, ರಂಧ್ರ ಮಾಡುವ, ಕೊರೆಯುವ ಮತ್ತು ಹಣ್ಣಿನ ಮೇಲಿನ ಕಣ್ಣುಗಳನ್ನು ಕೀಳುವ ಸಾಧನಗಳು ಬಳಕೆಯಲ್ಲಿವೆ. ಅನಾನಸ್ ಹಣ್ಣಿನಲ್ಲಿ ಅತಿ ಪ್ರಬಲವಾದ ಪ್ರೋಟೀನನ್ನು ಜೀರ್ಣೀಸುವ ಕಿಣ್ವಗಳಿವೆ. ಇವು ಚರ್ಮಕ್ಕೆ ಅತಿ ಅಪಾಯಕಾರಿಗಳು, ಆದಕಾರಣ ಸಂಸ್ಕರಣೆ ಕಾಲದಲ್ಲಿ ರಬ್ಬರಿನ ಕೈ ಚೀಲಗಳನ್ನು ಉಪಯೋಗಿಸುವುದು ಅಗತ್ಯ. ಹಣ್ಣುಗಳನ್ನು ವರ್ತುಲಾಕಾರ, ಘನಾಕಾರ ಅಥವಾ ಸಣ್ಣ ಚೂರುಗಳಾಗಿ ಡಬ್ಬಿಯಲ್ಲಿ ಸಂಸ್ಕರಿಸಬಹುದು; ಸಜ್ಜುಗೊಳಿಸುವಾಗ ದೊರಕುವ ಚೂರುಗಳಿಂದ ಮತ್ತು ದಿಂಡಿನಿಂದ ರಸ ಅಥವಾ ಸ್ಕ್ವಾಷ್ ತಯಾರಿಸಬಹುದು.

ಇತ್ತೀಚೆಗೆ ಪ್ರೊಥಿ, ತಂಡನ್ ಮತ್ತು ಗಿರಿದಾರಿಲಾಲ್ ರವರು ನಮ್ಮಲ್ಲಿ ಬೆಳೆಯುವ ಜೈಂಟ್ ಕ್ಯೂ. ಕ್ಯೂ ಮತ್ತು ಮಾರಿಸಿಶಿಯನ್ ಅನಾನಸ್ಸುಗಳನ್ನು ಡಬ್ಬಿಯಲ್ಲಿ ಸಂಸ್ಕರಿಸುವ ಬಗ್ಗೆ ವ್ಯಾಪಕವಾದ  ಸಂಶೋಧನೆ ನಡೆಸಿದ್ದಾರೆ. ಮೇಲೆ ತಿಳಿಸಿದ ಮೂರು ತಳಿಗಳಿಂದ ಕ್ರಮ ಪ್ರಕಾರವಾಗಿ ಶೇಕಡಾ ೨೪-೩೨, ೧೩.೭-೨೦.೮ ಮತ್ತು ೯.೭.-೧೧.೪ ರಷ್ಟು ಡಬ್ಬಿಯಲ್ಲಿ ಸಂಸ್ಕರಿಸಲು ಯೋಗ್ಯವಾದ  ಎ ದರ್ಜೆಯ ಪದಾರ್ಥ ಪಡೆಯಬಹುದೆಂದು ತೀರ್ಮಾನಕ್ಕೆ ಬಂದಿದ್ದಾರೆ. ಪ್ರೋ. ಥಿಯವರ ಹೇಳಿಕೆ ಪ್ರಕಾರ ಈ ತಳಿಗಳಲ್ಲಿ ಪ್ರತಿ ಗ್ರಾಂಗೆ ಕ್ರಮವಾಗಿ ೧೪.೦-೧೬.೬,೫.೨-೮.೬ ಮತ್ತು ೧೯.೩-೨೪.೬ ಮಿ. ಗ್ರಾಂ ಅಸ್ಕಾರ್ಬಿಕ್ ಆಮ್ಲವಿರುತ್ತದೆ. ಆಮ್ಲೀಯತೆ (ನಿರ್ಜಲ ಸಿಟ್ರಿಕ್ ಆಮ್ಲದ ಲೆಕ್ಕದಲ್ಲಿ ) ಅಂಶವು (ತೂಕಕ್ಕ ತೂಕ) ಮೇಲಿನ ಮೂರು ತಳಿಗಳಲ್ಲಿ ಕ್ರಮವಾಗಿ ಶೇಕಡಾ ೦.೬-೦.೮, ೦.೩-೦.೭ ಮತ್ತು ೦.೯-೧.೦ ರ  ಅಂತರದಲ್ಲಿಯೂ, ಕಿರಣ ವಕ್ರೀಭವನ ಮಾಪಕದಲ್ಲಿ ಕಂಡು ಬಂದ ಘನ ವಸ್ತುವಿನ ಅಂಶವು ಕ್ರಮವಾಗಿ ಶೇಕಡಾ ೧೨.೮-೧೫.೩.,೯-೩-೧೫.೪ ಮತ್ತು ೧೦.೪-೧೩.೪ ರ ಅಂತರದಲ್ಲಿ ಮತ್ತು ಪಿಎಚ್ ೩.೩ ರಿಂದ ೩.೫, ೩.೪ ರಿಂದ ೩.೬ ಮತ್ತು ೩.೨ ರಿಂದ ೩.೩. ರ ಅಂತರದಲ್ಲಿ ಈ ಮೇಲಿನ ಮೂರು ಹಣ್ಣಗಳಲ್ಲಿರುವುದೆಂದು ತಿಳಿದುಬಂದಿದೆ.

ದ್ವೀಪದ್ರಾಕ್ಷಿ (ಪ್ಲಮ್)

ದ್ವೀಪದ್ರಾಕ್ಷಿ ಹಣ್ಣಿನ ಕೆಲವು ತಳಿಗಳು ನಮ್ಮ ದೇಶದ ಉತ್ತರದ ಕೆಲವು ಕಡೆ ಮತ್ತು ದಕ್ಷಿಣದ ಕೆಲವು ಪ್ರದೆಶಗಳಲ್ಲಿ ಬೆಳಯುತ್ತಾರೆ. ಇವುಗಳನ್ನು ಇಂಗ್ಲೆಂಡಿನಲ್ಲಿ ಹೆಚ್ಚಾಗಿ ಡಬ್ಬಿಯಲ್ಲಿ ಸಂಸ್ಕರಿಸಲಾಗುತ್ತಿದೆ. ರೆಡ್ ವಿಕ್ಟೋರಿಯ ಮತ್ತು ಯೆಲ್ಲೊ ಪರ್ಶೋರ್ ಪ್ಲಮ್ ಗಳು ಡಬ್ಬಿಯಲ್ಲಿ ಸಂಸ್ಕರಿಸಲು ಯೋಗ್ಯವಾದ ಮುಖ್ಯ ತಳಿಗಳಾಗಿವೆ. ಪರ್ಪಲ್ ಪರ್ ಶೋರ್ ಆರ್ಲಿ ಲಾಕ್ಸ್ ಟ್, ಮೆಗ್ನಮೆ ವಾನಮ್, ಈವ್ ಶಾಮ್ ವಂಡರ್, ಝರ್ ಮುಂತಾದವು ಡಬ್ಬಿಯಲ್ಲಿ ಸಂಸ್ಕರಿಸಲು ತಕ್ಕಮಟ್ಟಿಗೆ ಉತ್ತಮವಾದುವೆನ್ನಬಹುದು. ನಮ್ಮ ದೆಶದ ಉತ್ತರದಲ್ಲಿ ಬೆಳೆಯುವ ಆಲ್ಬಖಾರಾ ಪ್ಲಮಗಳನ್ನು ಡಬ್ಬಿಯಲ್ಲಿ ಸಂಸ್ಕರಿಸಿದರೆ ಸಾಧಾರಣವಾಗಿ ಚೆನ್ನಾಗಿಯೇ ಇರುತ್ತದೆ.

ದ್ವೀಪದ್ವಾಕ್ಷಿ ಹಣ್ಣಿನಲ್ಲಿ ಕಂಡುಬರುವ ಒಂದು ಪ್ರಮುಖ ದೋಷವೆಂದರೆ ಗೋಂದಿನಂತಾಗುವುದು. ಅರಗಿನ ಲೇಪಕೊಟ್ಟ ಡಬ್ಬಿಗಿಂತ ಸಾದಾ ಡಬ್ಬಿಗಳನ್ನೆ ಇದಕ್ಕೆ ಹೆಚ್ಚಾಗಿ ಬಳಸಬಹುದು. ದ್ವೀಪದ್ರಾಕ್ಷಿಯನ್ನು ಮಾತ್ರ ಒಳಗಿನ ಓಟೆಯನ್ನು ತೆಗೆಯದೆ ಇಡಿಯಾಗಿಯೇ ಡಬ್ಬಿಯಲ್ಲಿಯೇ ಸಂಸ್ಕರಿಸಬೇಕು.

ಬೆರ್ರಿ

ಸ್ಟ್ರಾಬೆರಿ, ಲೋಗನ್ ಬೆರ್ರಿ, ಬ್ಲಾಕ್ ಬೆರ್ರಿ, ಬ್ಲೂಬೆರ್ರಿ, ರಾಸಬೆರ್ರಿ ಮತ್ತು ಹಿಪ್ಪನೇರಳೆಗಳನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ ಡಬ್ಬಿಯಲ್ಲಿ ಸಂಸ್ಕರಿಸಲು ಉಪಯೋಗಿಸುತ್ತಾರೆ. ಸ್ಟ್ರಾಬೆರಿಯಲ್ಲಿ ಜಾನ್ ಪೇಕ್ಸ್ಟ್ರನ್, ರಾಯಲ್ ಸಾವರಿನ್, ಓಬರ್ಸ ಶ್ಲಾಸೀನ್‌ಗಳು ಡಬ್ಬಿಯಲ್ಲಿ ಸಂಸ್ಕರಿಸಲು ಉತ್ತಮವಾದುದು. ಸ್ಟ್ರಾಬೆರಿಯನ್ನು ಡಬ್ಬಿಯಲ್ಲಿ ಸಂಸ್ಕರಿಸುವಾಗ ಸಕ್ಕರೆ ಪಾಕಕ್ಕೆ ಪಾಸ್ಸಿಯ  ೨ ಆರ್ ಬಣ್ಣವನ್ನು ಸೇರಿಸಬಹುದು. ಡಬ್ಬಿಯಲ್ಲಿ ಸಂಸ್ಕರಿಸಿದ ಬಿಳಿ ಹಿಪ್ಪುನೇರಳೆ ಒಂದು ಉತ್ತಮ ಪದಾರ್ಥವಾಗಿರುತ್ತದೆ.