ಆಡುತಕೆಣಿಯುತ ಬನ್ನಿರಿ ಒಡ್ಡ, ತಿಮ್ಮಿ ತಾಲಿ ಲೆಲ್ಲೆ ಲೆಲ್ಲೇ ಲೋ
ಒಡ್ಡನು ತಿಮ್ಮಿಯು ಕಾಣುತ್ತಿಲ್ಲ ತಾಲಿ ಲೆಲ್ಲೆ ಲೆಲ್ಲೇಲೋ
ಎಲ್ಲಿಗೆ ಹೋದರು ಇಬ್ಬರು ಸತ್ತು ತಾಲಿ ಲೆಲ್ಲೆಲೆಲ್ಲೇಲೋ
ಒಡ್ಡನು ತಿಮ್ಮಿಯು ಬರುತಿಹರಲ್ಲಿ ನೋಡು ತಾಲಿ ಲ್ಲೆಲೆ ಲ್ಲೇಲೋ
ಸಗಣಿಯು ಚಿಪ್ಪಿಗೆ ಅಂಟಿರುವಂತೆ ತಾಲಿ ಲೆಲ್ಲೆಲೆ ಲ್ಲೇಲೋ
ಒಡ್ಡನ ಹೆಗಲಲಿ ಗುದ್ದಲಿ ಇಲ್ಲ ತಾಲಿ ಲೆಲ್ಲೆ ಲೆಲ್ಲೇ ಲ್ಲೇಲೋ
ತಿಮ್ಮಿಯ ತಲೆಯೊಳು ಮಂಕರಿಇಲ್ಲ ತಾಲಿ ಲೆಲ್ಲೆ ಲೆಲ್ಲೇ ಲೋ
ಗುಡ್ಡೆಯ ತೆಗೆಯಲು ಬಿಟ್ಟಿ ಕೆಲಸದಲ್ಲಿ ತಾಲಿಲೆಲ್ಲೆಲೆಲ್ಲೇಲೊ
ಒಂದಾಣೆ ಕೊಟ್ಟೇನು ಒಂದು ಗುದ್ದಲಿ ಮಣ್ಣು ತಾಲಿಲೆಲ್ಲೆಲೆಲ್ಲೇಲೊ
ಒಂದಾಳು ಉದ್ದ ತೆಗೆಯು ಕಾಣಪ್ಪ ತಾಲಿ ಲೆಲ್ಲೇ ಲೆಲ್ಲೇ ಲೊ
ಒಂದಾಣೆ ಕೊಟ್ಟರೆ ಆಗದು ಸ್ವಾಮಿ ತಾಲಿ ಲೆಲ್ಲೇ ಲೆಲ್ಲೇ ಲೊ
ಎರಡಾಣೆ ಕೊಡುವೆ ಎರಡು ಗುದ್ದಲಿ ಮಣ್ಣು ತಾಲಿ ಲೆಲ್ಲೇ ಲೆಲ್ಲೇ ಲೊ
ಎರಡಾಳು ಉದ್ದ ತೆಗೆಯು ಕಾಣಪ್ಪ ತಾಲಿ ಲೆಲ್ಲೇ ಲೆಲ್ಲೇ ಲೊ
ಎರಡಾಣೆ ಕೊಟ್ಟರೆ ಆಗದು ಸ್ವಾಮಿ ತಾಲಿ ಲೆಲ್ಲೇ ಲೆಲ್ಲೇ ಲೋ
ನಾಲ್ಕಾಣೆ ಕೊಟ್ಟೇನು ನಾಲ್ಕು ಗುದ್ದಲ ಮಣ್ಯು ತಾಲಿ ಲೆಲ್ಲೇ ಲೆಲ್ಲೇ ಲೊ
ನಾಲ್ಕಾಳು ಉದ್ದ ತೆಗೆಯಾ ಕಾಣಪ್ಪ ತಾಲಿ ಲೆಲ್ಲೇ ಲೆಲ್ಲೇ ಲೊ
ನಾಲ್ಕು ಆಣೆ ಕೊಟ್ಟರೆ ಒಪ್ಪೇವು ಸ್ವಾಮಿ ತಾಲಿ ಲೆಲ್ಲೇ ಲೆಲ್ಲೇ ಲೊ
ನಾಲ್ಕು ಆಣೆ ಕೊಟ್ಟರೆ ಒಪ್ಪೇವು ಸಾಮಿ ತಾಲಿ ಲೆಲ್ಲೇ ಲೆಲ್ಲೇ ಲೊ
ಈ ವರುಷದಿ ಬಂದಿಹ ಈ ಆಟವು ತಾಲಿ ಲೆಲ್ಲೇ ಲೆಲ್ಲೇ ಲೊ
ಬರಲದು ಬರಲದು ಮುಂದಿನ ವರುಷವು ತಾಲಿ ಲೆಲ್ಲೇ ಲೊ