ಆದಿಶಕ್ತಿ ಎಂಬಾಕಿ ಹೆಚ್ಚಿನಾಕಿ
ಏಳು ಕೊಳ್ಳದಾಗ ನೀ ನೆನದಾಕಿ    ಪಲ್ಲ

ಮುನ್ನೂರರವತ್ತು ಸಿದ್ಧರ ಗುಡದಾಗ
ಆಳ್ವಿಕಿ ಮಾಡ್ಯಾರೊ ಬಲ್ಲಂಗ
ಚಕ್ರ ಹತಿಯಾರ ತಯ್ಯಾರ ಮಾಡ್ಯಾಳಾಗ
ಸಿದ್ಧರನ ಹೊಡೆದಾಳೊ ಕ್ಷಣದಾಗ
ದೈತ್ಯರನ ಹೊಡೆದಾಳೋ ಗಳಿಗ್ಯಾಗ         ೧

ದೇವಿ ಉಧೋ ಉಧೋ ಚಾಲೂ ನಡೆಸಿದಿ
ಲೆಕ್ಕವಿಲ್ಲದ ಮಂದಿ ಕೂಡಿಸಿದಿ
ಲೆಕ್ಕವಿಲ್ಲದ ಪರಿಸೀಯ ತರಿಸಿದಿ
ಬತ್ತಲೆ ಹುಟ್ಗಿನಾದರ ಉಡಿಸಿದಿ
ಗಚ್ಚಿನಗುಡಿಯೊಳಗ ಕುಂತ ನಗತಿದ್ದಿ         ೨

ಗೆಳತಿ ಗೌರಾಗ ನೆನದಾಳೊ ದೇವಿ ಪೂರಾ
ಆಕೆಯ ಮೈಮೆ ಯಾರಿಗೆ ತಿಳಿಯೊ ಮಾತ
ಆಕೆಯ ಮೈಮೆ ಯಾರಿಗೆ ನಡಿಮಾತ
ಆದಿಶಕ್ತಿ ಎಂಬಾಕಿ ಹೆಚ್ಚಿನಾಕಿ
ಏಳು ಕೊಳ್ಳದಾಗ ನೀ ನೆನದಾಕಿ    ೩