ಬೆಳದಿಹ ಮರದೊಳು ರೆಂಬೆಗೆ ಕೊಂಬೆಗೆ
ಎಲೆಗಳು ತುಂಬಿಯೆ ಬೆಳೆದಿರುವಲ್ಲಿ
ಎಲೆಗಳ ನಡುವೊಳು ಹೂ ಬಿಟ್ಟಿತು
ಹೂವಾಯಿತು ಕಿರು ಮಿಡಿಯಾಯಿತು
ಮಿಡಿವಾಟೆಯ ಕಟ್ಟಿತು, ಕಾಯಿಯ ಮೂಡಿತ್ತು
ವಾಟೆಯು ದಪ್ಪಗೆ ಆಯಿತು ಬಳ್ಳಿಯು ಬೆಳೆದು
ದಪ್ಪನ ಕಾಯಿಯು ಬಲಿತು ಹೆಣ್ಣಾಯಿತು
ಅಪ್ಪನು ಮಗನು ಹುಡುಕುತ ನಡೆದರು
ಗಾಳಿಯು ರಭಸದಿ ಬೀಸಲು ಮಾವಿನ ಹಣ್ಣು
ಬೀಳಲು ಮಗನವ ಹಣ್ಣನ್ನು ಹೆಕ್ಕಿದನು
ಅದನ ತೆಗೆಯುತ ವಾಸನೆ ನೋಡಿ
ಈ ತರ ಹಣ್ಣನು ಎಲ್ಲಿಯೂ ಕಾಣೆವು
ಎನ್ನುತ ಬೆಳ್ಳಿಯ ಕಟ್ಟಿನ ಕತ್ತಿಯ
ತೆಗೆದಲ್ಲಿಯೆ ಹಣ್ಣನು ಕುಯ್ದರು
ತುಂಡುಗಳೆಲ್ಲವ ಇಬ್ಬರು ತಿಂದರು
ಎದುರಿಗೆ ಕಂಡರು ಇಬ್ಬರು ಗೆಳೆಯರ
ಬಾರೋ ಬಾರೋ ಕುಟ್ಟಿ ಮೂತಣ್ಣ ಎನೆ
ಕುಟ್ಟಿ ಮೂತ ಮಾದಾ ಚೆಟ್ಟಿ ತಂದರು
ವಾಲೆ ಬೆಲ್ಲ ತಟ್ಟೆ ಬೆಲ್ಲ ಗಂಟೆಲ್ಲ
ಗಂಟನು ಬಿಚ್ಚಿ ತಿನ್ನಲು ರುಚಿಯ ಹತ್ತಿತು
ಎರಡೂ ಬೆಲ್ಲವ ಕೊಪ್ಪರಿ ಸಹಿತ ತಿನ್ನಲು
ತಿನ್ನುತ ಬಿಟ್ಟರು ಎರಡು …………
ತಂದೆಮಗನಿಗೆ ಮಾವಿನ ಓಟೆಯ
ನೆಡಲದು ಹೆಚ್ಚಿತು ಪೈಪೋಟಿ
ನೆಟ್ಟರು ಓಟೆ ಹುಟ್ಟಿತು ಮಾಮರ
ಎತ್ತರ ಬೆಳೆದಿತು ಎತ್ತರ ಬೆಳೆದಿತು
ಬಿಸಿಲು ಬಿದ್ದು ಮಳೆಯೂ ಬಿದ್ದು
ಮರವೆಲ್ಲವು ಸೊಂಪಾಗಿಯೆ ಬೆಳೆಯಿತು
ಮರುವರುಷಕೆ ಹಣ್ಣನು ನೀಡಲು