ಮಾಯದ ರಂಭಿ ಜಗದಂಬಿ ನೋಡಿಯಾ ರಂಭಿ
ದೀಪದ ಕಂಬವ ಪೌಳಿಯಾಕಾರ
ನೋಡಿ ನೆನದಾಳ ಜಗಾಸಿರೀ ಕಂಬ
ಮ್ಯಾಲ ಶಿಖರವು ಭರಪೂರ         ೧

ಸಾಧುಸಾಂಬನ ಮಗಳು ಸತ್ಯವತಿ ಮಾಯದ ಮಾಯ್ಕಾರ್ತಿ
ತಿಳಿಯದೌ ನಿನ್ನ ಮತಿ ಮಾಯದಕಿ ನೀ ರೇಣುಕಿ
ಏಳುಕೊಳ್ಳಕ ಸಿದ್ಧರ ಭರತಿ ನೋಡಾದಿಶಕ್ತಿ
ಶಕ್ತಿಯಾದಾಳ ತಯ್ಯಾರ   ೨

ಸಿದ್ಧರಿಗೆ ಬಂದಿತ ಯಮನ ಬಾಧಿ ಗವ್ಯಾಗ ಹೊಗಸಿದಿ
ಗುಂಡ ಬಡಿಸಿದಿ ಮಾಡಿಸಿದಿ ಬಂಧೂರ
ಎಡಕದ ಪರಶುರಾಮ ಬಲಕ ಚೌಕಿ ಒಂದು
ಗಸ್ತಿ ತಿರಗತಾರ ತಸ್ತಿ ಬಾಳಲ್ಲಿ ಜಬರ         ೩

ಬಲಕಾರ ಪರಶುರಾಮ ಅವನ ಎಡಕ ತಗದಾಳ
ಎಣಿಗೊಂಡ ಆದಾಳ ಮನಗಂಡ
ಸತ್ಯದ ಸಪ್ಪಳ ಗಾರಿ ಗಾರಿ ಎಣಿಗೊಂಡಕ    ೪

ದೇವಿಗೆಣಿಗೊಂಡದ ಜಳಕ ಮೂರ್ಯಾಳ್ಯಾಕ
ಸೇವೇಕ ಬರೂದಕ ಕಾಯಿಕರ್ಪೂರ
ತರುವರು ಭಕುತರು ಬರುವರು
ನಿನ್ನ ಸೇವಾ ಮಾಡೂದಕ           ೫

ಹರದಾರಿ ಮ್ಯಾಲೆ ಸವದತ್ತಿ ಪರಸ ಗಡ ಜಬರದಲ್ಲೈತಿ
ಮಾಯದ  ಮಾಯ್ಕಾರ್ತಿ
ಉಗರಗೊಳ್ಳಕ ಹೋದಿತು ಸ್ವಾರಿ ಗೌಡ್ರ ಸ್ವಾರಿ
ಕಾದಿಂದರಗುಡಿ ಕಟ್ಟಿ ಅಳಿಸು        ೬