ಆಡುತ ಕುಣಿಯುತ ಬಾರೋ ದೊಂಬ ತಾಲಿ ಲೆಲ್ಲೆ ಲೇಲೋ
ದೊಂಬನ ಕಟ್ಟು ಕಾಣುತ್ತಿಲ್ಲ ತಾಲಿ ಲೆಲ್ಲೇ ಲೇಲೋ
ದೊಂಬನು ಬೆನ್ನಿಡುತಲಿ ಬರುವವನ ತಾಲಿ ಲೆಲ್ಲೆ ಲೆಲೋ
ಪಟ್ಟಣ ಉರಿವಲ ಜೋಗಿಯೇ ನೀ ಎಲ್ಲಿದ್ದೆ ? ತಾಲಿ ಲೆಲ್ಲೆ ಲೆಲೋ
ಸಿದ್ಧಾಪುರದೊಳು ಇದ್ದೆ ಸಿರಿಗುದದೊಳಿದ್ದೆ ತಾಲಿ ಲೆಲ್ಲೆ ಲೆಲೋ
ಜೋಯಿಗೆ ದೊಂಬತಿಗಿತ್ತು ಬೊಳ್ಳಮನೆ ತಾಲಿ ಲೆಲ್ಲೆ ಲೆಲೋ
ದೊಂಬತಿ ಗಂಡಗೆ ಹೊಡೆದರೆ ರಕ್ತವು ಬಪ್ಪುದು ತಾಲಿ ಲೆಲ್ಲೆ ಲೆಲೋ
ನಾಯಿಗೆ ಹೊಡೆದರೆ ಕಾಂಬುದು ಕುಯ್‌ಗುಟ್ಟುವ ಹಲ್ಲು ತಾಲಿ ಲೆಲ್ಲೆ ಲೆಲೋ
ದೊಂಬನ ಕೈಯೊಳು ಚೇಷ್ಟೆಯ ಬುದ್ಧಿ ತಾಲಿ ಲೆಲ್ಲೆ ಲೆಲೋ
ಬೇಲಿಯ ಸೊಪ್ಪು ಗಾಯಗಳೆಲ್ಲಕೆ ಮದ್ದು ತಾಲಿ ಲೆಲ್ಲೆ ಲೆಲೋ
ಮೇದನ ಅನ್ನದ ಬುಟ್ಟಿಯಲೊಣಗಿಸಿ ಮದ್ದು ತಾಲಿ ಲೆಲ್ಲೆ ಲೆಲೋ
ಒಣಗಿದ ಸೊಪ್ಪನು ಬೂಟಿಯ ಮರದೊಳು ತಾಲಿ ಲೆಲ್ಲೆ ಲೆಲೋ
ಮಾಡಿಹ ಒನಕೆ ಯೊಳ್ಕುಟ್ಟಿದಮದ್ದು ತಾಲಿ ಲೆಲ್ಲೆ ಲೆಲೋ
ಕುರುಬನ ಮೊರದಲಿ ಸೋಸಿದ ಮದ್ದು ತಾಲಿ ಲೆಲ್ಲೆ ಲೆಲೋ
ಏಳ್ಪಾತ್ರೆಯೊಳಾ ಮದ್ದನು ತುಂಬಿಟ್ಟಿರೆ ತಾಲಿ ಲೆಲ್ಲೆ ಲೆಲೋ
ದೊಂಬನಿಗಿಹುದು ಚೇಷ್ಟೆಯ ಬುದ್ಧಿ ತಾಲಿ ಲೆಲ್ಲೆ ಲೆಲೋ
ಕೋಣೆಯಲಿದ್ದ ಹುಡುಗಿಯ ಹಿಡಿದ ತಾಲಿ ಲೆಲ್ಲೆ ಲೆಲೋ
ಮಂಚದ ಕೆಳಗಿನ ಕಳ್ಳನು ಕುಡಿದ ತಾಲಿ ಲೆಲ್ಲೆ ಲೆಲೋ
ಈ ಬಗೆ ದೊಂಬರು ಜೋಗಿಯ ವೇಷದಿ ತಾಲಿ ಲೆಲ್ಲೆ ಲೆಲೋ
ಏನು ಜನ ಕಾಣಲು ನೋಡ ನೋಡಮ್ಮ ತಾಲಿ ಲೆಲ್ಲೆ ಲೆಲೋ
ಮಾಯದಿ ಬರುವರು ಮಾಯದಿ ಹೋಹರು ತಾಲಿ ಲೆಲ್ಲೆ ಲೆಲೋ
ಈ ವರುಷದಿ ಬಂದಿಹರವರು ತಾಲಿ ಲೆಲ್ಲೆ ಲೆಲೋ
ಬರುವರು ಬರುವರು ಮುಂದಿನ ವರುಷವು ತಾಲಿ ಲೆಲ್ಲೆ ಲೆಲೋ