ಎಲ್ಲಿಕಾಣೆಲ್ಲಿ ಕಾಣೆ

ಎಲ್ಲಮ್ಮನಂಥಾಕಿ
ಎಲ್ಲಿ ಕಾಣೆಲ್ಲಿ ಆಣೆ ಪಲ್ಲ

ಬಾಳ ಮಂದಿ ಬತ್ತಲಮಾಡಿದಿ ಎಲ್ಲಮ್ಮ ನೀನು
ಮೇಳಗುಂಟ ಭಿಕ್ಷಕ ನೀಡಿದಿ
ತಾಳ ಜಾಗಟೆ ಗೆಜ್ಜೆ ಸಪ್ಪಳ ನುಡದಿ ಭಲೆ ಭಲೆ ನಿನ್ನ
ಏಳು ಕೊಳ್ಳವ ಆಳುವ ತರುಣಿ      ೧

ಬೇವಿನುಟುಕಿ ಉಡಿಸಿ ನಡೆಸಿದಿ ಎಲ್ಲಮ್ಮ ನೀನು
ದೀಡನಮಸ್ಕಾರ ಹಾಕಲು ಹಚ್ಚಿದಿ
ಗಂಡಹೆಂಡಿರ ಬಿಡಿಸಿ ಭಂಡಾರಚೀಲವ ಧರಿಸಿ
ಭೂಲೋಕದಲ್ಲಿ ಆದಿಶಕ್ತಿ ನೀನಾದೆಮ್ಮ        ೨

ಉತ್ತುಕಂಟಲಿ ಕೂಸಿನವರು ನಿನ್ನ
ಗಿರಿಯ ಹತ್ತಲಾರದೆ ಬಳಲುವರು
ಮುತ್ತು ಕೊರಳಿಗೆ ಕಟ್ಟ ಅತ್ತಿ ಅಲಿಯನ ಮುಂದೆ
ಭೂಲೋಕದಲ್ಲಿ ಆದಿ ಶಕ್ತಿಯೆಲ್ಲಮ್ಮ  ೩