ಓವಯ್ಯ ಓ ವಯ್ಯ ಕಾರಣ್ಣ
ಓವಯ್ಯ ದೊಡ್ಡದಿದು ಗದ್ದೆ ಓವಯ್ಯ ಕಾರಣ್ಣ
ನಮಗೆಲ್ಲಕು ಈ ಗದ್ದೆ ಓವಯ್ಯ ಕಾರಣ್ಣ
ಈ ದೊಡ್ಡ ಗದ್ದೆಯಲಿ ಓವಯ್ಯ ಕಾರಣ್ಣ
ನಾಟಿಯನು ನೆಡುತಲಿ ಓವಯ್ಯ ಕಾರಣ್ಣ
ಓ ಒಡೆಯ ಮಂದಪ್ಪನಿರಲು ಓವಯ್ಯ ಕಾರಣ್ಣ
ಓ ಒಡತಿ ಉಮ್ಮಕ್ಕ ನಿರಲು ಓವಯ್ಯ ಕಾರಣ್ಣ
ಏ ಚಾಂಡಾಳ ಹೊಲೆಯನೆ ಓವಯ್ಯ ಕಾರಣ್ಣ
ಪೊಂಗೂರು ಮುಂದಾದ ಊರು ಓವಯ್ಯ ಕಾರಣ್ಣ
ತಲೆ ಗಟ್ಟು ಕಟ್ಟಿ ಕೊಳ ಓವಯ್ಯ ಕಾರಣ್ಣ
ಎಂದೆಲ್ಲ ಹೇಳುತಿರೆ ಓವಯ್ಯ ಕಾರಣ್ಣ
ನಮ್ಮ ದೊಡ್ಡಗದ್ದೆಯಲಿ ಓವಯ್ಯ ಕಾರಣ್ಣ
ಉತ್ತ ಆಳುಗಳ ಕಂಡರು ಓವಯ್ಯ ಕಾರಣ್ಣ
ದೊಡ್ಡ ಗದ್ದೆಯೊಳಲ್ಲಿ ಓವಯ್ಯ ಕಾರಣ್ಣ
ಸಸಿಗಳನೆ ನೆಟ್ಟು ಓವಯ್ಯ ಕಾರಣ್ಣ
ಏಜಕ್ಕಿ ಹುಡುಗಿ ಓವಯ್ಯ ಕಾರಣ್ಣ
ಹಾಡುವ ಹುಡುಗಿ ಓವಯ್ಯ ಕಾರಣ್ಣ
ಮೂಲೆ ಮೋಟರು ನೆಲೆಯ ಓವಯ್ಯ ಕಾರಣ್ಣ
ಬಿಡದೆ ನೇಗಿಲಿಂದ ಓವಯ್ಯ ಕಾರಣ್ಣ
ಬಿಡದೆನೇಗಿಲಿನಿಂದ ಓವಯ್ಯ ಕಾರಣ್ಣ
ಉತ್ತಿ ಬಿತ್ತಲಾಗಿದೆ ಓವಯ್ಯ ಕಾರಣ್ಣ
ಮೂಲೆ ಬಿಡದೆ ಹೆಜ್ಜೆ ಹಾಕಿ ಓವಯ್ಯ ಕಾರಣ್ಣ
ನೇಗಿಲಿಟ್ಟು ಉತ್ತಿ ಉಳುಮೆ ಓವಯ್ಯ ಕಾರಣ್ಣ
ತಿಂಗಳೊಳಗೆ ಸಸಿಯು ಬರಲು ಓವಯ್ಯ ಕಾರಣ್ಣ
ಒಳ್ಳೆ ಪೈರು ಸಿದ್ಧವಿರಲು ಓವಯ್ಯ ಕಾರಣ್ಣ
ಅದು ಯಾವುದೆನ್ನಲು ಓವಯ್ಯ ಕಾರಣ್ಣ
ಸೋಮ ಮುದ್ದ ಎತ್ತು ಹೆಸರು ಓವಯ್ಯ ಕಾರಣ್ಣ
ಗದ್ದೆಯುದ್ಧ ಸಾಲು ಇಟ್ಟು ಓವಯ್ಯ ಕಾರಣ್ಣ
ಗದ್ದೆ ಅಡ್ಡ ಸಮನ ಮಣಿಯ ಓವಯ್ಯ ಕಾರಣ್ಣ
ನಿಟ್ಟು ಹದನು ಮಾಡಿ ಇದ್ದ ಓವಯ್ಯ ಕಾರಣ್ಣ
ಗದ್ದೆಯೊಳಗೆ ನೆಟ್ಟ ಪೈರದು ಓವಯ್ಯ ಕಾರಣ್ಣ
ಓ ನಾಟಿ ಕಾರರೇ ಓವಯ್ಯ ಕಾರಣ್ಣ
ನಾಟಿಯ ನೆಟ್ಟು ಓವಯ್ಯ ಕಾರಣ್ಣ
ನಾಟಿಯ ಕೂಡಿಸಿ ಓವಯ್ಯ ಕಾರಣ್ಣ
ಈ ದೊಡ್ಡ ಗದ್ದೆಯೊಳಗೆ ಓವಯ್ಯ ಕಾರಣ್ಣ
ಏನೆಲ್ಲ ನೆಲಕೆ ಊರಿದ ನಾಟಿ ಓವಯ್ಯ ಕಾರಣ್ಣ
ನಾಟಿಯ ನೆಲ್ಲ ಕೂಡೆ ಕೂರಿಸಿ ಓವಯ್ಯ ಕಾರಣ್ಣ
ಓವಯ್ಯ ನಾಟಿಕಾರನೆ ಓವಯ್ಯ ಕಾರಣ್ಣ
ಇಯ್ಞೋ…… ಉತ್ತನೇ ಓವಯ್ಯ ಕಾರಣ್ಣ
ಓ ಮಂದನಾಟಿಕಾರ ಓವಯ್ಯ ಕಾರಣ್ಣ
ಓ ಚುರುಕು ನಾಟಿಕಾರ ಓವಯ್ಯ ಕಾರಣ್ಣ
ನಾಟೀಯ ನೆಟ್ಟು ಓವಯ್ಯ ಕಾರಣ್ಣ
ನಾಟೀಯ ಕೂರಿಸಿ ಓವಯ್ಯ ಕಾರಣ್ಣ
ಕೈ ಪುಡಿ ಸಸಿಯನು ಓವಯ್ಯ ಕಾರಣ್ಣ
ಎಲ್ಲಿಗೆಲ್ಲವುನೆ ನೆಟ್ಟರೆ ಓವಯ್ಯ ಕಾರಣ್ಣ
ಏರಿಗೆ ಬಾರಿಗೆ ತುಂಬಿದೆ ಓವಯ್ಯ ಕಾರಣ್ಣ
ಏರಿಗೆ ಬಾರಿಗೆ ತುಂಬುತ ಓವಯ್ಯ ಕಾರಣ್ಣ
ಕಳಕಳೆಯಾಗು ಸಸಿಯೆ ಓವಯ್ಯ ಕಾರಣ್ಣ
ಆಗಲ ಉದ್ದ ಬೆಳೆಯುತ ಓವಯ್ಯ ಕಾರಣ್ಣ
ಎಲ್ಲ ಏರಿ ಬಾರಿ ತುಂಬಿದೆ ಓವಯ್ಯ ಕಾರಣ್ಣ
ನಾಟಿನೆಟ್ಟವಗೆ ಹಲು ಕೂಳು ಓವಯ್ಯ ಕಾರಣ್ಣ
ಸಾಟಿ ಕದ್ದವಗೆ ಸೋರೆ ಕೂಳು ಓವಯ್ಯ ಕಾರಣ್ಣ
ವಯ್ಯಕಾರನೆ ಓವಯ್ಯ ಕಾರಣ್ಣ