ದಯಮಾಡ ದೇವಿ ರೇಣುಕಾ
ನಿನಗಾ ಏನ ಮಾಡುವೆ ಸಣ್ಣ ಬಾಲಕಾ
ನಾನಿನಗಾ ಏನ ಮಾಡುವೆ ಸಣ್ಣ ಬಾಲಕಾ ಪಲ್ಲ
ಎಲ್ಲಾ ಎಲ್ಲಾರು ನಡೀರೇ
ಎಲ್ಲೌನ ಜಾತ್ರೀಗೆ
ಗಿಲ್ಲತನವ ಬಿಟ್ಟು
ಎಲ್ಲೌನ ಗುಡ್ಡಕ್ಹೋಗೋಣ ೧
ಶಮೆ ದಮೆಗಳೆಂಬೊ
ಜೋಗಳಬಾವಿಗೆ ಹೋಗಿ
ಮಂಗಳ ಸ್ನಾನವ ಮಾಡಿ
ಸಾಕ್ಷಾತ ಸತ್ತೆವ್ರವಗ್ಹೋಗೋಣ ೨
ಕಾಮ ಕ್ರೋಧ ಲೋಭ
ಮದಮತ್ಸರಗೋಳ
ದುರುಳ ಗುಣ ದೂರಮಾಡಿ
ಕರುಣ ರೇಣುಕಾಗ್ಹೋಗೋಣ ೩
ವಲ್ಲದ ಜನರೀಗೆ
ಇಲ್ಲದ ಬ್ಯಾನಿಹಾಕಿ
ಬೇವ ಭಂಡಾರಧರಸೊ
ಮರಳ ಮಾತಂಗಿಗ್ಹೋಗೋಣ ೪
ಬೇಕಾದ ಜನರೀಗೆ
ಬೆಲ್ಲಾದ್ಹೇರಿನ ಒಂಟೆ
ಸರಿಯೇನ ಲೋಕದೊಳೂ
ಪದುಮ ಕಲ್ಯಾಣಕ್ಹೋಗೋನ ೫
ಧರೆಯೊಳು ತೇರ್ದಾಳ
ಗುರುರಾಮಲಿಂಗನ
ಸೇವಕಸಂತಾನ
ಮೂಲ ಪ್ರಣಾಮಿಗ್ಹೋಗೋಣ ೬
Leave A Comment