ಓ ನಾಟಿಯೇ
ಕಳಕಳೆಯಾಗಿ ಬಾ
ಎತ್ತೆಲ್ಲ ಕಳೆಯಾಗಿ ಚೆನ್ನಾಗಿ ಬಾ
ಬಿದಿರಂತೆ ಹೊರವಾಗಿ ಬೆಳೆದು ಬಾ
ಸೆರಗಂತ ನೆರಿಗೆ ಕೂಡಿ ಕೂಡಿ ಬಾ
ಕಾಂಡ ಗಿಡದಂತೆ ಉದ್ದ ಕದಿರಾಗಿ ಬಾ
ಏರಿಗೆ ತೆವರಿಗೆ ಮೇಲೆಲ್ಲ ಬೀಳ್ವಂತೆ
ಏರಿಯ ತೆವರಿಯು ತುಂಬಿ ಬರುವಂತೆ
ಬೆಳೆದು ಬಾ ನಾಟಿ ಬೆಳೆದು ಬಾ
ದನಕರುವಿಂ ಗೆ ಓಡೆಯರ ಕಣಜಕ್ಕೆ
ಹುಲ್ಲು ಮೇವಾಗುವಂತೆ ತುಂಬಿದ ಭತ್ತ
ಹತ್ತಾಗಿ ಸಾವಿರ ಸಾವಿರವಾಗುವಂತೆ ಬೆಳೆದು ಬಾ
ದೇವರಿಗೆ ಒಡೆಯರಿಗೆ ಹಾಲನ್ನ
ಒಡಲು ತುಂಬುವಂತೆ ಬೆಳೆದು ಬಾ
ನಾಟಿ ನೆಡದೆ ಕೆಲಸ ಕದ್ದವಗೆ ವಿಷವು
ನಾಟಿ ನೆಟ್ಟು ನಡೆದವಗೆ ಹಾಲನ್ನು ಫಲವು
ಏರಿಯಲಿಹ ಬಾಣೆಯಲಿಹ
ಬೆಟ್ಟದಲ್ಲಿಹ ದೇವರೇ ಎಲ್ಲರನ್ನು
ಎಲ್ಲವನು ರಕ್ಷಿಸೆಲೆ, ರಕ್ಷಿಸೆಲೆ