ವಂದಲ ಯೆರಡಲ್ಲಾss ವಂಬೈನೂರ್ ಹಡುಗ್ಯೆದ್ದೀss
ನಂಗಾಲಿಕ್ಕದೆಯೇsss ಅಲವ್ಯಲ್ಲೀs|| ನನು ಬಾಲಾsನಾss
ಬಂಗಾsರಾsದ್ಹಡಗೂss ಜತನವೇsss ||೪೭||

ನಾಕೂರಾಗಿದ್ದೀsss ಯಾಕು ಬಂದೇss ಬಾಲಯ್ಯಾs?
ನಾಕೂರಾss ದಿಸ್ಟೀsss ನಿನು ಮೇನೇss|| ಬಾಲಯ್ಯಾsss,
ಉಟ್ಟೊಲ್ಲಿss ಶರುಗಾsss ಮರುಮಾಡೂsss|| ||೪೮||

ಬಾವೀ ಬುಡುದಲ್ಲೀsss ನಾsನೆಟ್ಟಿss ಯೆಲಿಬಳ್ಳೀss
ಅದುಕೇss ಹಬ್ಬದ್ಯೇsss ರತಿಬಳ್ಳೀsss|| ಬಾಲಯ್ಯನಾsss
ಬಲುಕೇssಲಬ್ಬದ್ಯೋsss ಬೆಳಿಚಿಬ್ಬೂssss|| ||೪೯||

ತಾಯೀ ನಮ್ಮವ್ಗೇsss ಗಂಡೈದೂs ಹೆಣ್ಣೈದೂss
ಕನ್ನುಡಿಯೈsssದೂsss ಕsಳೂssಸssಕ್ಕೇss|| ಈ ಮನಿಯsss
ಯೆಳಿಯss ಸಿಂಗರsದಾss ಕೊನಿssಯೈದೂsss|| ||೫೦||

ತಾಯೀ ನನ್ನಮ್ಮಾsss ಕಾಯ್ ಹಾಕಿ ಕಡಬಾss ಕಟ್ಟೀss
ದೀವೂsಗೀಗ್ ಯೆಣ್ಣೀsss ಯೆರದಾsಳುs|| ತಾಯವ್ವೀss
ದೋರೀನಾs ಮಗಳೂssss ಬರಲಂದೀssss|| ||೫೧||

ಆಕೆಸ ಬೆದ್ದರೇsss ಆಕೇಗೇs ಲಂಜ್ವವಲಲ್ಲಾsss
ಲೋಕದ ಈ ಜನ್ರಾssss ಬೆಡಗೀಗೇsss|| ನಾs ಅಂಜಿರೇss
ನಾನೂss ನsನ್ನಮ್ನಾssss ಮಗಳಲ್ಲಾssss|| ||೫೨||

ಗಿಡ್ಡೀ ಕಯ್ಯಲ್ಲಿsss ಕಡ್ಡೀಯಾss ಉಂಗೀಲಾsss
ಗಿಡ್ಡೀs ನನ್ನಮ್ನಾsss ಕೈಬೀಸೀss|| ನೆಡದರೇsss
ಅಗ್ರರದಾsss ತೇರಾssss ವಗದಾಂಗೇsss|| ||೫೩||

ಮಕ್ಕsಳs ಮಾsಣಿಕsss ಯೆಲ್ಲೆಲ್ಲಾಡಿದರೇನು?
ಸುತ್ತೇs ಸೂರ್ಯಮ್ನಾssss ಪೌರಾತ್ಕೀss|| ಮಕ್ಕಳು
ಯೆಲ್ಲೆಲ್ಲಾಡಿದರೂsss ಬಯವಿಲ್ಲಾsss|| ||೫೪||

ಮಾಣಿಕದುಂಗಿಲಾsss ಮಾಣಿ ಮಾರ್ವಲ್ ಬಂದಾsss
ನಾs ಕೊಂಬುವೆ ಮಾಣೀsss, ಬೆಳಿಯೆಳೂss ನಮ್ಮsನೀss
ಮುದ್ದೂss ಬಾಲಯ್ನಾssss ಬೆರಳೀಗೇsss ||೫೫||

ವಳ್ಳಿಗೆ ಅಕ್ ಹೆಚ್ಚಾಲೀss ಕೊರುಳಗೆ ಮುತ್ ಹೆಚ್ಚಾಲೀss
ಮಕಳ್ ಹೆಚ್ಚಾsಲಿ ನಮ್ಮ ಮನ್ಯಲ್ಲಿ|| ತಾಯಿ ಮನಿಲಿs
ಮುತ್ತೈತಿರ್ ಹೆಚ್ಚಾಲಿss ಕಳುಸಕ್ಕೇsss|| ||೫೬||

ಲತ್ತೇs ಬಯ್ದರೇsss ಹಿತ್ತೀsಲಲ್ ಹೋಬೇಡಾss
ಮಾತೀssಗುತ್ತರವಾsss ಕೊಡುಬೇಡಾsss|| ಬಾಲವ್ವಾsss,
ಹೆತ್ತssಮ್ಮss ಗ್ಹೆಸುರಾssss ತುsರುಬೇssಡಾssss|| ||೫೭||

ತಾಯಿಗೆ ಬಯ್ವವಾsss ನಾಯೀs ಜಲ್ಮದವ್ನೇsss
ತಾಯಿ ನನ್ನಮ್ಮಾsss ಸಿರಿದೇವೀss|| ಗೆ ಬಯ್ದರೇss
ಗೋವೀನಾss ಪಾದಾsss ಹಿಡಿಸೂರೂsss|| ||೫೮||

ಬೆಳ್ಳುಳ್ಳಿ ಬೆಳ್ಳಗೇss ನನ್ನಮ್ಮ ತೆಳ್ಳಗೇss
ನಾs ಕಂಡರು ಗುರುತಾsss ಹಿಡಿತೀದೇs|| ನನ್ನಮ್ಮನಾsss
ಲಳಿ ಕೇಳಿ ಸsತ್ತುಗಿಯಾsss ಕಳುಗೂವಾsss|| ||೫೯||

ಗಂಡನ ಮನ್ನಿದ್ದೀsss ಯೇನು ಬಂದೆ ತಂಗಮ್ಮss?
ಮಂಡೇss ಬಾಡದ್ಯೇsss ಬಿಸುಲೀಗೇss|| ತಂಗಮ್ಮಾsss,
ನಿನು | ಕಯ್ಯನ ಬೆಳಿಯೆಲೇ ಬಾಡದ್ಯೇsss|| ||೬೦||

ಇಂದಲ್ಲಾss ನಾಳೇsss ನಾಗರಾss ಪಂಚsಮೀss
ಗೋದೀಯಾss ತಾರೋsss ಬಣಜೀsಗಾss ನಮ್ಮsನೀss
ನಾಗssಕsನ್ಯೋsssರಾsss ಹಗಲೂಟಾsss|| ||೬೧||

ತಾಯಿ ತಂದಿದ್ದವ್ರೂsss ತೋಲಳಾs-ತೊಡ್ಯಮೇನೆss
ತಾಯೆಲ್ಲಾssದವಳೂssss ಬಿsಸುsಲಲ್ಲೀss|| (ಲ್) ಹೋಗೂವಾಗೇs
ಸ್ವಾಮೀs, ತನ ನೇಳುsಲಾss ಮsರssಮಾsಡುsss|| ||೬೨||

ತಂಗೀs ಕೂಟ್ ಮಲ್ಲೀsss ಉಂಬಾದೂss ಮಜ್ಜಾsನಾss
ತಂಗೀs ಶಣ್ಣಮ್ಮಾsss ಹಸದಾಳೂss|| ಸುದ್ದೀ ಕೇsಳೀss
ಗಿಂಡೀss ತುಂಬ್ಹಾಲಾsss ಕಳಗೂವೇsss|| ||೬೩||

ಬಳುಗಾss ನೆನಿದರೇsss ಬರುವಾsದೆ ಕಣ್ಣೀsರೂss
ಗೌರsಲುsದೇವ್ಯಂಬೂssss ಕೆರು ತುಂಬೀss|| ತುಂಬೀಯಾs
ಹೂಂಗೂss ತೇಲಾsಡೀ ಬಳುಬಂದೀss|| ||೬೪||

ತಾಣಾssದೀವುಗೀsಗೇss ತಾನ್ಹೋದೆಣ್ಣಿಯನೆರುದೀsss
ತಾಯಿ ನನ್ನಮ್ಮಾsss ಕಾಯಿ ಕಡುಬಾs ಕsಟ್ಟೀss
ದೀವುಗಿಗ್ಯೆಣ್ಣೀsss ಯೆರವಳುsss ||೬೫||

ದೀವುಗಿಗ್ಯೆಣ್ಣೀsss ಯೇನಂದೀs ಯೆರವssಳುss?
ದೋರೀನಾs ಮಗಳೂsss ಬರಲೆಲ್ಲಾsss ||೬೬||

ಕಂಚಿಗೆ ಕಾಯ್ ಬಾದೀsss ನಿಂಬೀಗೇ ಯಲು ಬಾದೀs
ಕಾಲುಬಾದೀಂಗಿಲsss ಬೆರುಳಿಗೇ|| ತಾಯಮ್ಮಾs,
ನಾ ಬಾದೀs ನಿನ್ನಾsss ಬಳುಗಕ್ಕೆss|| ||೬೭||

ಯಪ್ಪತ್ಯೇಳ್ ವರುಸಾsssಲಾಯಿsತು ಲಪ್ಪಯ್ಯಗೇs
ಹಾಲ ಹೊಯ್ದs ಮರುಕೇsss ಹಲಿಹೊಯ್ದೀ|| ದ್ಯೇವರೇs,
ಲಪ್ಪಯ್ನಲಾಯಿಸವೇsss ಹೆರುದಾಲಿss|| ||೬೮||

ಅಕ್ಕಲಿದ್ರೆ ಬಾವಾsss ರೊಕ್ಕsಲಿದ್ರೆ ಪೇಟೇs
ತಾಯೂsಲಿದ್ದರೇsss ತೌರ್ ಮsನೇ||
ತಾಯೂಯೆಲ್ಲಾsದಾss ತೌರ‍್ಮsನೇಗ್ಹೊಗುಕಿಂsತಾs
ಅಡುವೀssಲೊಂದ್ ವಸ್ತೀsss ಉಳಿಬೌದೂsss|| ||೬೯||

ತಾಯಿದ್ದ ಮಕ್ಕಳು ತಾಯೊಡನೆ ಆಡ್ವಾಗs|
ತಾಯ್ಸತ್ತ ಮಕ್ಕಳುs ಬಿಸಿಲಲ್ಲಿ| ಆಡ್ವಾಗ
ಸ್ವಾಮಿ ತನ್ನ ಸೆರಗs ಮರೆಮಾsಡಿs|| ||೭೦||