ಅನಂತ ರೂಪವ ತಾಳಿದಾಕಿ
ಸಣ್ಣಾಕೆಲ್ಲವ್ವ ನೀನು ಗುಡ್ಡದ ಎಲ್ಲವ್ವಾ ೧
ಭಕ್ತರ ಮನಿಯೋಳೂ ನಿತ್ತ್ಯಿರುವಾಕಿ
ನಿತ್ಯನಿರಂಜನ ತೋರುವಾಕಿ
ಸಣ್ಣಾಕೆಲ್ಲವ್ವ ನೀನು ಗುಡ್ಡದ ಎಲ್ಲವ್ವಾ ೨
ಉಧೋ ಉಧೋ ಎಂಬುವ ಭಕ್ತರ ನೀನು ಕಾಯಾಕಿ
ದುಷ್ಟ ಮಾನವರನ್ನ ದೂರಮಾಡುವಾಕಿ
ಸಣ್ಣಾಕೆಲ್ಲವ್ವ ನೀನು ಗುಡ್ಡದ ಎಲ್ಲವ್ವಾ ೩
ದುಷ್ಟ ಕಾರ್ತವೀರನ್ನ ತಲೆಯ ಕಡಿಸಿದಾಕಿ
ಅವತಾರ ಧಾರಣ ಮಾಡಿದೆವ್ವ
ಸಣ್ಣಾಕೆಲ್ಲವ್ವ ನೀನು ಗುಡ್ಡದ ಎಲ್ಲವ್ವಾ ೪
ಭಕುತರ ಉದ್ಧಾರ ಮಾಡುವದಕ
ಏಳು ಕೊಳ್ಳಕೆ ಬಂದೆವ್ವ
ಸಣ್ಣಾಕೆಲ್ಲವ್ವ ನೀನು ಗುಡ್ಡದ ಎಲ್ಲವ್ವ ೫
ಧರೆಯೊಳು ಕಲ್ಲೂರ ಮಲ್ಲಿಕಾರ್ಜುನಗೆ
ಮಗಳಾಗಿ ನಡೆದೆವ್ವಾ ನೀ
ಸಣ್ಣಾಕೆಲ್ಲವ್ವ ನೀನು ಗುಡ್ಡದ ಎಲ್ಲವ್ವಾ ೬
Leave A Comment