ಓ ಅಲ್ಲಾ ಎರ ಬೀರೇ……
ನಾಟಿಯ ಹಾಡನು ಹಾಡುವ ಕೇಳು
ಗದ್ದೆ ಕರೆಯಲಿ ನಾಟಿಯ ಹಾಕಲು
ಮುದ್ದಿನ ಹೆಂಡತಿ ಜೊತೆಗೆ ಕರೆಯುವೆ
ನಾಟಿಯ ನೆಟ್ಟು ಊಟವ ಮುಗಿಸಲು
ಮದ್ಯಾನ್ಹವೆ ಕಂಡಿದೆ ಈ ಸುತ್ತಲವೆ
ಅಗಸಸೀ (ಕೈಕುಂಞ)ಗಳ ನೆಟ್ಟಾಗಿದೆ
ಕಾಮಣಿ ಕಣ್ಣಿಗೆ ರಸಹೆಣ್ಣು
ಕಾಮಣಿ ಕಣ್ಣಿಗೆ ರಸಹೆಣ್ಣು
ಹೆಸರದು ಬೆಳ್ಳಿ ಅವಳನು ಕೊಡೆ
ಮೈ ಮನಕದು ಮುದದ ಗೂಡೆ