ಏಳ ಕೊಳ್ಳದಾಗ ಬಂದು ನೆನದಾಳ ಜಗದಂಬಾ
ನಾಕು ಮೂಲಿಗಿ ಮಾಲಗಂಬ ನಡಕ ಬಲಕ ಸಿಡಿಗಂಬ
ರಾಜ್ಯೇದೊಳಗ ದೇವಿಸತ್ತೆ ನಡೆಯುತ್ತೆ ಭಾಳ ೧
ಸೊಕ್ಕಮಾಡಿದ್ರ ಮನಿಮಾರ ಮಾಡ್ತಾಳ ಹಾಳ
ಗರವು ಸೊಕ್ಕು ನಡ್ಯಾಣಿಲ್ಲಾ ಹಚ್ಚಿದಾಳೊ ಗೋಳ
ಗಿರಣಿ ತುರಣಿ ಖಜ್ಜಿ ಹಚ್ಯಾಳೊ ಮಾನದೊಳಗೆಲ್ಲ ೨
ಶಿಸ್ತೀಯಾಗಿ ನಡೆಯವಗಂತಾಳೊ ಬಾರೊ ನನ್ನ ಬಾಳ
ರೂಪಾಯಿ ರೊಕ್ಕ ದಿರಬೆ ಕೊಡತೀನಿ ಬಂದು ಹೋಗ ನಾಳೆ
ಸತ್ಯಜೀವಾ ನೋಡಿ ನಿತ್ಯ ಪಡೀತಾಳ ಜೋಗಳಬಾವಿ ಸತ್ಯವ್ವ ೩
ಮಂದಿ ಮಕ್ಕಳನೆಲ್ಲ ತರಿಸ್ಯಾಳ ಭಪ್ಪರೆ ಎಲ್ಲವ್ವ
ಎಲ್ಲೌತಾಯಿ ಮಗನ ಬೇಡ್ತಾಳ ಶಿವನ ಅರಜಬಿಟ್ಟ
ಬ್ಯಾಡೌ ಅಂದರ ಕೇಳಾಣಿಲ್ಲಾ ಆಕಾಶ್ಫಲಾ ಕೊಟ್ಟಾನ ೪
ಓಣಿಯೊಳಗ ಹೆಣ್ಣು ಹುಡುಗರು ಅಡತಾವ ಆಟ
ಹಾದರಕ್ಹುಟ್ಟಿದ ಮಗನಂದಾರೊ ರಾಮಗ ಬಂತೊ ಸಿಟ್ಟ
ತಂದೀನ ತೋರಂತ ತಾಯಿ ಮುಂದ ಮಾಡ್ತಾನ ಹಟ ೫
ಇಲ್ಲದ ತಂದಿನ ಎಲ್ಲಿ ತೋರಿಸಲೆ ಬಂದಿತು ಸಂಗಟ
ಕಂಡ ಕಂಡವರ ಮಾತಿಗೆ ರಾಮಗಾದೀತಲ್ಲ ಕಂಟಕ
ಹರಿ ಪರಂಕಾರ ಮಾತ ಹೇಳಿದರ ಕೇಳಲಿಲ್ಲ ಒಟ್ಟಾ ೬
ಎಲ್ಲೌತಾಯಿನ ಕಿಚ್ಚಾ ಹಾಸ್ಯಾನವ ಗೋಳದಲ್ಲಿ ಬಿಟ್ಟ
ಬುಟ್ಟುಳ್ಳ ಊರ ಹಣಮಂತದೇವರ ನಡೆತನ ದುಷ್ಟ
ಅವನ ಬಲದಿಂದ ಜಗಜದ್ಯೋಗಿ ಹಾಡತಾನ ಬಿಕ್ಕಟ್ಟ ೭
Leave A Comment