ಸುವ್ವಿ ಬಾ ಸುವ್ವಿ ಸುವ್ವಿ ಬಾ ಸುವ್ವಿ
ಕಲ್ಲಿನ ಒರಳಲಿ ಬೀಟೆಯ ಒನಕೆಯು
ಬತ್ತವ ಕುಟ್ಟಿದರು ಬತ್ತವ ಕುಟ್ಟಿದರು
ಬೇಗಾನೆ ಅಕ್ಕಿ ಆಗಾದೋ
ಬತ್ತದ ತುದಿಯೊಗೆ ಉದ್ದನ ಮುಳ್ಳಿನ
ಬಾಲವು ಇದ್ದಿತೋ | ಬಾಲವು ಇದ್ದಿತೋ
ಬೇಗಾನೆ ಅಕ್ಕಿ ಆಗಾದೋ
ಹುರಿದು ಉರುಕಲು ಮಾಡುವ ಕಳಮೆಯ
ಒಂದು ಬಟ್ಟಿಯ ಕುಟ್ಟಿ ಒಂದು ಬಟ್ಟಿಯ ಕುಟ್ಟಿ
ಅಕ್ಕಿಯ ಮಡಿ ಮುಗಿದಾವೊ
ಕೇರಿಯ ಮನೆಗೆ ಹೊರಟೆವು ಅಬ್ಬೆ
ಅನ್ನವ ನೀಡಿರಿ ಅಬ್ಬೆ.