ತಾಲಿಲೆಲ್ಲೆಲೆಲ್ಲಾ ಹಾಡುವೆವು ನಾವೆಲ್ಲ ತಾಲಿ ಲೆಲ್ಲೆ ಲೆಲ್ಲಾ
ಹೈಸೊಡ್ಲು ಹಳ್ಳಿಯಲೊಂದು ಒಳಗದ್ದೆ ತಾಲಿ ಲೆಲ್ಲೆ ಲೆಲ್ಲಾ
ಇದ್ದಿತು ಒಕ್ಕಲದು ಮುಂಡಂಗಡ ತಾಲಿ ಲೆಲ್ಲೆ ಲೆಲ್ಲಾ
ನಿಗ್ಗಡಿ ಗದ್ದೆ ಬದಿಗೆ ಕೆಂಬಟ್ಟಿ ಜೆಟ್ಟಿ ತಾಲಿ ಲೆಲ್ಲೆ ಲೆಲ್ಲಾ
ದೇವಯ್ಯ ಸಾಕಿದೀ ಮನೆ ಮಕ್ಕಳು ಗಟ್ಟಿ ತಾಲಿ ಲೆಲ್ಲೆ ಲೆಲ್ಲಾ
ದೇವರ ಹಬ್ಬ ವರುಷದಿ ಮುಂಚೆಯೇ ಬರಲು ತಾಲಿ ಲೆಲ್ಲೆ ಲೆಲ್ಲಾ
ಬಾಳೆಯ ಹಣ್ಣು ತಿಂದು ಹಾಡುವ ಮಕ್ಕಳು ತಾಲಿ ಲೆಲ್ಲೆ ಲೆಲ್ಲಾ
ಸೊಂಡೆಕಾಯಿಯ ತಿಂದು ಕಾರುವ ಮಕ್ಕಳು ತಾಲಿ ಲೆಲ್ಲೆ ಲೆಲ್ಲಾ
ಬೇಡಿನ ಹಬ್ಬದಿ ತುಂಟಾಟಕೆ ಮೀಸಲು ತಾಲಿ ಲೆಲ್ಲೆ ಲೆಲ್ಲಾ
ಎನ್ನುವರೆಲ್ಲ ಸೊಕ್ಕಲಿ ಉಕ್ಕಿ ಹಾಡೆವು ನಾವು ತಾಲಿ ಲೆಲ್ಲೆ ಲೆಲ್ಲಾ
ದೇವನ ಕಟ್ಟಲಿ ಹಾಡ್ವೆವು ನಾವು ತಾಲಿ ಲೆಲ್ಲೆ ಲೆಲ್ಲಾ
ಹಾಡಿಯೆ ಸೋಲಲು ಹೈಕಳಿಗಿರಲಿ ಕಳ್ಳು ತಾಲಿ ಲೆಲ್ಲೆ ಲೆಲ್ಲಾ
ಹಾಡಲು ಹೋಗಲು ಕಾವೇರಿಯು ಮಂಡಿಯ ನೆನಸಿದಳು ತಾಲಿ ಲೆಲ್ಲೆ ಲೆಲ್ಲಾ
ಹಾಡಿಯೆ ಬರಲು ಕಾವೇರಿಯ ತುಂಬಿಯ ಹರಿದಿಹಳುತಾಲಿ ಲೆಲ್ಲೆ ಲೆಲ್ಲಾ
ಕೊಂಬಿನ ಟೋಪಿಯ ಕೋಣೆರಿ ಒಕ್ಕಲು ತಾಲಿ ಲೆಲ್ಲೆ ಲೆಲ್ಲಾ
ಹರಿದ ಕುಪ್ಪಸ ಹೆಯ್ಯಡ ಒಕ್ಕಲು ತಾಲಿ ಲೆಲ್ಲೆ ಲೆಲ್ಲಾ
ಹರಿದರು ಬಿಡದೆ ಮಾಡುವ ನೊಕ್ಕಲು ತಾಲಿ ಲೆಲ್ಲೆ ಲೆಲ್ಲಾ