ಉಂಡ್ಹೋಗಂದ್ಹೇಳೀssss ಉಂಗಿಲ ನಾs ತಡದೇನೇssss
ತಣ್ಣೀನೂss ಮಲ್ಲೇsss ಬೆಸಿವಲ್ಲೇsss|| ಲಣ್ಣಯ್ಯನಾsss
ಸಂಗ್ರಮ್ದಾss ತೋಳಾsss ತಡವೇನೇssss|| ||೭೧||
ವಪ್ಕಾರ್ದಣ್ಣಯ್ಯಾsss ಉಪ್ಪಿಲ್ಲಾssದುಣ್ಣsನೇsss
ಸತ್ತುsಗೆಲ್ಲಾssದೇssss ತಿರಗsನೇsss || ಮಾಳುಗಿ ವಳಗೇsss
ದುರ್ಪsತಿಲ್ಲssದೇsss ವರಗsನೇsss|| ||೭೨||
ಯಾಲಕ್ಕೀss ತಂದೀವೇsss ಯೇಳಣ್ಣಾsss ಜೊಳಕಕ್ಕೇsss
ಯಾಲಕ್ಕೀs ಮೇನೇsss ಎಳಿ ನಾಮಾsss || ಇಟ್ಟಿಕಂಡೀsss
ಯೇಳಣ್ಣಾsss ಹರವಾssss ಜಲುದೀಗೇsss|| ||೭೩||
ಕಾಸೀಯss ಹೊಳಿಯಾsss ಮೀಸೀs ಬಂದವ್ನಾssರೇsss?
ಕಾಸೀs ನಡಕಟ್ಟೂssss ಹೆರಿಯಣ್ಣಾsss
ಕಾಸೀs ನಡಕಟ್ಟೂsss ಹೆರಿಯsಣ್ಣ ಕೂದರೀಯೇsss
ಮೀಸಿ ಬಂತು ನಮ್ಮೂರಾsss ಅಳವೀಲೀsss|| ||೭೪||
ಅಕ್ಕೀss ಕಡಿ ಕಯಡೀsss ಉಪ್ಪೂss ಮಾಯ್ನ ಮೆsಡೀss
ತೊಪ್ಪsದಲಿ ಬೇವಾssss ಅವರೀಯೇsss || (ರೀ) ತಾಳಲ ಮಾಡೀss
ವಪ್ಪೀತೇ ಅಣ್ಣಯ್ಯಾssss ಹಗಲೂಟಾssss|| ||೭೫||
ಕನಸೀಲಿ ಕಂಡೇssss ಅರಸೂs ಪರದಾನಿಯಾss
ಬೆರಸೀss ಮಲ್ಲೂsಗೀsss ಮುಡದನಾsss || ಲಣ್ಣಯ್ಯನಾsss
ಕನಸೀsನಲಿ ಕಂಡೇsss ಕಣಕದಾssss|| ||೭೬||
ಮಡುವಳ ಮನಿ ಮುಂದೇsss ಕೆಂದುಗುಳು ಹಾರೀತೇss
ಮಡುವಲ, ಸಿನ್ ಮಡಿಯಾsss ವಗುಕೊಳ್ಕೊ || ನಮ್ಮಣ್ಣss
ಹೊಸ ಚೇಜೀss ಹೇರೀsss ಬರವದೂsss || ||೭೭||
ಕೋಡ್ ಹುಟ್ಟಿದ ತಂಗೀsಗೆ ಬಡುತಾsನಾss ಬಂತಂದೀss
ಕೊಡು ಮಡುದೀss ಕೊಳ್ಳಾsss ಪದ ಕಾsವಾss|| ತಂಗsಮ್ಮಾss
ಬಡುತಾsನಾs ಹೋಗೀss ಸಿರಿ ನಿಂದೀsss||೭೮||
ಬಡುತಾsನಾs ಹೋಗೀsss ಸಿರಿ ನಿಂದಾss ಕಾಲಕ್ಕೆsss
ಬಂದೀs ಮಾಡಿಸವೇsss ಕೊರಳೀಗೇsss|| ||೭೯||
ತಂಗೀ ಕರಿಯಂದ್ರೇsss ಸಂಜೀsಯಾssಯಿತಂಬಾss
ಬಂದೀಯs ಕೊಳ್ಳsss ಮಡದೀಯsss
ಬಂದೀಯs ಕೊಳ್ಳsss ಮಡುದೀs ಕರಿಯಮದಾssರೇss
ಕೊದುರೀಗೇ ಜೇನಾsss ಬಿಗುದಾsನೇsss|| ||೮೦||
ಕಾಂಕೀss ಕರುಕರುsss ನಮ್ಮ ಹೊಟ್ಟಿಲಿ ತುಳು ಬಾಳುs
ನಮ್ಮಣ್ಣಲೋಗನ್ಯೇsss ಪರಊರುss || ಪರುಪಟ್ಟss
ಕಾಕೀs ನಿನು ಬಾಸೀsss ಸುಳುಬಾಸೀsss|| ||೮೧||
ತೋಟದ ಸುತ್ತು ಮುತ್ತೂsss ಕಾಟssಕss ಮನ್ಯುಂsಟುss
ಜೋಕೀsದಿಂದೆ ಬಾರೋsss ಹೆರಿಯಣ್ಣಾsss,|| ನಿನು ಕಯ್ಯನಾ
ಜೀಕೀನಾss ನಾಯೀsss ಬಹುsಳೂದೋsss|| ||೮೨||
ನಿಲ್ಲೋ ನಿಲ್ಲೋ ತಮ್ಮss, ನಿಲ್ಹೋ ವಾಲಿಕಾರಾsss
ನಿಲ್ಲೋss ಗೋವಿಯಾss ಸರದಾರಾss|| ನನು ತಮ್ಮsನೇss,
ನಿಲ್ಲೋs ನಿನ ಮಗುಳಾss ಕಳಗೂವೇsss|| ||೮೩||
ಅಂಗಳದಲ್ಲಾಡೂಕೂss ಗಂಡು ಮಕ್ಕಳು ಬೇಕೇss
ಗಿಂಡೀ ತಿಕ್ವದಕೂss ಸೊಸಿ ಬೇಕೇss|| ನನು ತಂದೀಗೇss
ಅಂಬೂss ಬಿಲ ಹಿಡವಾsss ಮಗ ಬೇಕುsss|| ||೮೪||
ಅತ್ತುಗತ್ತುಗೇsss, ಅಣ್ಣೆಲ್ಲೀಗ್ಹೋಗನ್ಯೇsss?
ಚಂದ್ರಾಣೀs ಬಿಲ್ಲೂssss ಕುದುರೀಯೇss|| ಲೇರಿಕಂಡೀsss
ಚಂಡಾಡೂಕ್ಹೋದಣ್ಣಾsss ಬರುಲೆಲ್ಲsss|| ||೮೫||
ಕುದ್ರೀಯೇರಿಕಂಡೀsss ದಾನಾs ಮಾಡುತೆ ಬಂsದಾsss
ನಾನೊಂದು ತಂಗೀsss ಬಡವಿsಯೇ|| ಲಣ್ಣಯ್ಯಾsss
ಜಾನೀಸೂ ಬೇಡಾss ಕೊಡು ಮಗಳಾssss|| ||೮೬||
ಕಣ್ಣಲ್ಲೀ ಕಾಣುತ್ತೇss ಚೆನ್ನೀಗನ ಬರು ಹೇಳೀsss
ಹೊನ್ನುs ಬೇಡವ್ನಾsssರಣು ಬೇಡಾsss|| ಲಣ್ಣಯ್ಯನಾsss
ಕಣ್ಣಲ್ಲಿ ಕಾಣುತ್ತೇsss ಬರುಹೇಳೀssss|| ||೮೭||
ಬೆಳ್ಳಟ್ಟಿ ಹೂಂಗು ಬೆಳ್ಳಗೇss ನನು ತಮ್ಮ ತೆಳ್ಳಗೆs
ಯೆಲ್ಲಿದ್ರೂ ಗುರುತಾssss ಹಿಡಿಬೌದೂss|| ನನ್ ತಮ್ಮನಾss
ಬೆಳ್ಳಿ ಉಂಗಿಲದಾsss ಬೆಳಕೀಗೇsss|| ||೮೮||
ಅರಸೂss ತಮ್ಮಗೇs ಅರಮನಿಯ ಚಾಕುರೀs
ಯೆದ್ದನೇ ಚಿನ್ನದಾss ಗಿಡವಾಗೀss|| ತಮ್ಮಯ್ಯನೇs
ನುಡಿದನೇ ಪಂಜರದಾss ಹಿಳಿಮಾತಾss|| ತಮ್ಮಯ್ಯನೇs
ನಡಿದನೇ ವೈಶಕದಾss ಬಿಶಲಲ್ಲಿ|| ||೮೯||
ದೊಡ್ಡ ಗೊಡ್ಡಿ ಮೇನೇss ದೊಡ್ಡಕ್ಕs ಬರವಾಗೇs
ಅಡ್ಡಗಟ್ಟರೇss ಮುಗssಲರು|| ಅಣ್ಣsದೀರುs
ಕತ್ತೀಮೇನ್ ಹೋಗೀss ಕರವsರುss|| ||೯೦||
ಬೆಳ್ಳೀ ಬೆತ್ತದ ಕೋವೀsss ಬೆನ್ನಿಗೆ ಸಾವಿರ ಮಂದೀss
ರಂಜssಕದ ಬೋಯ್ಡೀsss ಬಲಗೈಲೀss|| ತಟ್ಟಿಕಂಡೀss
ಹೊಲನ ಬೇಟೀಗೇsss ನೆಡದssನೇs|| ತಮ್ಮಯ್ಯs ||೯೧||
ಮೂರು ಈಡಿಗ್ ಮೂರು ಹುಲಿ ಹೊಡ್ದಾsss|| ಸುದ್ದಿ ಕೇಳಿs
ತಂಗೀಲಾರುತಿಯsss ಬೆಳಗೀತುsss
ತಂಗೀಲಾರುತಿಯsss ಯೇನ್ಹೇಳೀ ಬೆಳುಗೀತುss?
“ಹುಲಿ ಹೊಡುದರ ಹಾವೂsss ತೊಲುಗsಲೇ”ss||೯೨||
ಹರುಬಳ್ಳೀ ಯೆಲ್ಯಾsss ಹರುದೀ ಚಂಚಿಲ್ತುಂಬೀss
ಅರವತ್ತು ರಾಜ್ಯಾವಾsss ತಿರಗೂರೂss|| ತಮ್ಮಯ್ಯಾಗೇss
ಉತ್ತುಮ್ಮನ ಮಗಳೂsss|| ದೊರುಕಲಿsss ||೯೩||
ಹುಟ್ವಾಗೇ ಅಣ್ಣ- ತಮ್ಮsss ಬೆಳವಾಗೆ ದಾಯ್ದಕಾರಾs
ಕೊಟ್ಟೂಗೀ ಕೌಲೀsss ಸಿರಿ ಪಾಲುsss|| ಆಗ್ವಾಗs
ಹೆತ್ತಮ್ಮಾssನ್ ವಡ್ಲೂssss ಉರವsssದುsss|| ||೯೪||
ಕೊಂಬೆಲ್ಲದಾನೀಗೇss ಕೊಂಬೂ ಬಂತಂದ್ಹೇಳೀss
ಸಂಗ್ರಮವೇ ನನ್ನಾsss ತೌರಿಲಿss|| ತಮ್ಮಯ್ಯಗೇss
ಕೊಂಬೇರಿ ಬಂತೂsss ಕೊನಮೀಸೀsss || ||೯೫||
ನೀರss ಕಾಸಿಡೂsss ನೀಲssದುಂಗಲಕಯ್ಯಾss
ಪಾರ್ವವತೀ ಪಡದಾsss ಕೊಮರಾಗೆss || ತಮ್ಮಯ್ಯಗೇs
ನೀರಾs ಕಾಸೀಡೂsss ಹರವೀಲೀsss|| ||೯೬||
ಕಾಕೀ ಕರುಕರಾss ಜೇಮ ಥರುಥರಾsss
ಸರುಕರಕ್ ಹೋದಣ್ಣಾsss ಬರಲಿಲ್ಲಾs|| ಅಪ್ಪಯ್ಯಾs,
ವಾಲಿಮೇನೊಂದು ವಾಲಿsss ಬರುದ್ಹಾಕೂsss || ||೯೭||
ಯಲ್ಲಾರಾs ಕತ್ತೀsss ನಾಡss ಮೇನಿರವಾssದೂss
ನಮ್ಮಣ್ಣನ ಕತ್ತೀsss ಬಗುಲಲ್ಲೀsss|| ತೆಂಗೀನಾs
ಸುಳ್ಯsss ಮೇನಾಡೀsss ಬರವssದೂsss|| ||೯೮||
ಸತ್ತೂಗಿ ಸಲುವದೂsss ಸತ್ಯವಂತನಳಿಯಗೇsss
ಮತ್ತೂs ನನಕುಲುದಾsss ಚೆಲುವಾsಗೇsss || ನನ್ತಮ್ಮಯ್ಯಗೇss
ಸತ್ತೂಗೀ ಸಲುವsದೂss ಸಬಿಯಲ್ಲೀsss || ||೯೯||
ಯಲ್ಲರು ಮಾತಾಡಿದ್ರೇsss ಹುಲುಕಟ್ಟಾs ಸೆಳುದಂತೇsss
ಬಲ್ಲಾsದಾsಲಣ್ಣಾssss ಬಲುಜಾಣಾsss || ಮಾsತಾಡಿದ್ರೇss
ಬಲ್ಲಾsದರು ಮುತ್ತಾsss ಸುರುದಂತೇsss || ||೧೦೦||
ಸಿರಿಸೀsಸೇವಮ್ನಾsss ಹರಕೀss ಹನ್ನೆರಡ್ವರುಸಾss
ಬಂಡರಕೂss ಕರತಾssss ಹೆರಿಯಣ್ಣಾssss || ಬಾಳಿದ್ದರೇsss
ಬಂಡೀss ಮೇನ್ ಹರಕೀssss ಸಲಿಸೂವಾsss || ||೧೦೧||
ಕುಮಟೆ ಪೇಂಟಿಲಿssss ನಿಚ್ಚುತರ ಬೀದಿಲಿsss
ಸಿಕ್ಕೀತೋss ಮಾವಾsss, ನಿಮ್ಮಗಳುss || ಅಣ್ಣಯ್ಯಗೇss
ಮೆಚ್ಚೀsss ಬೆಳಿಯೆಲಿಯಾssss ಕೊಡ್ವದೂsss || ||೧೦೨||
ಕಡುಲೇಳು ಸಮುದರದಾsss ತಡಿ ಮೆಟ್ಟಿ ಬರುವನ್ಯಾsರು?
ಮುಡಿಯಾssಳ ಜಲ್ಲೀsss ಮುಡದಾತಾss || ತಮ್ಮಯ್ಯಗೇss
ಜಡಿಯsss ಸೋಳ್ಯವ್ರೂssss ಕೈತಡದೀsss? ||೧೦೩||
ಜಡಿಯss ಸೋಳ್ಯವ್ರೂssss ಯೇನಂದೀsss ಕೈತಡದೀsss?
“ಹಣಕssಲ್ಲವೂ ನಿನ್ನಾssss ಗುಣಕಾಗೀssss”|| ||೧೦೪||
ತಾಯೀssದ್ದರ ತವರ್ಮನೇss ನೀರಿsದ್ದರ್ ಹೆಗ್ಗೇರೀss
ಆನೀss ಕಟ್ವsದೂss ಅರsಮsನೇss|| ತಮ್ಮsದೀರುs,
ನೀವ್ ಬಾsಳಿsದ್ರೆ ನಮ್ಮsss ತೌರಮsನೇss|| ||೧೦೫||
ಯಾರಪ್ಪಾs ಮಗನೇss, ಯಾರೀಗ್ ಹುಟ್ಟಿದ ಕಂದಾss?
ನೀರ್ ವಳಗೇ ಚೇಜೀsss ನಡಸೂವೇss|| ತಮ್ಮಯ್ಯನೇss,
ದೀರಾs ಹುಟ್ಟಿದಿಯೋsss ಬಳಗಕ್ಕೇsss|| ||೧೦೬||
ಹೊನ್ನs ಕ್ಯಾದುಗೀss ಕೆನ್ನೀಗೇs ಮುಡಕಂಡೀss
ಅಣ್ಣssದಿರ ನೆಡಗೇsss ಇರತೀದೇ || ಲೀ ಊರಾss
ಬಣ್ಣಾಣೀs ಕೇಳೀsss ಮರಳಾsದsss|| ||೧೦೭||
ತುಂಬೀss ಹುಂಗಿನಂತೇsss ತುಂಬೀsದರೆ ಚೆನ್ನssವಾsss
ಮತ್ತೂ ನಮ್ಮಣ್ಣಾsss ಬಡಮನೇs? || ಕೊಮಟೀಯs
ಸಾವರ ಮಂದೀsssಗೇsss ಸರದಾರಾsss ||೧೦೮||
ವೋಟಕೆ ಕೂತಲ್ಲೀsss ಕೂಟಾssದಾss ಕರಬಂsತೂsss
ಮಾತೂss ಬಿದ್ದದ್ಯೇsss ಸಬಿಯಲ್ಲೀss || ತಮ್ಮssಯ್ಯಾss
ಸೋತೀss ಬರುಬೇಡಾsss ಜನುರೀಗೆssss|| ||೧೦೯||
ಉಂಡ್ಯೇಳೂss ತನಕೇsss ವಂಬssತ್ಯೇಳಿss ಬಂssದೀss
ಬೊಂಬೀ ಹಚ್ಚಡದಾsss ಅರಸೂಗೇss || ತಮ್ಮಯ್ಯಾssಗೇ
ವಂಬತ್ತು ರಾಜ್ಯಾssದಾsss ಕರಿ ಬಂತೂsss|| ||೧೧೦||
ಯೆಸುರೆತ್ತೇ ಲಕ್ಕಾssss, ಮೊಸುರಾss ಕಯ್ಡೇಲಾssಕ್ಕಾsss
ಹೆಸುರಾss ಕೇಳಿ ಬಂದ್ರೂsss ದೊರಗೋಳೂ || ಅಣ್ಣಯ್ನಾsss
ಮಾತಾss ಕೇಳಿ ಬಂದ್ರೂsss ಮನಿತಂಟೇsss|| ||೧೧೧||
ಅಂಗುಡಿಕಾರಾsನಾss ತಂಗೀ ಬರುತಾಳಂದೀss
ಅಂಗಂಗ್ಡೀಗ್ಯೆಲ್ಲಾsss ಗುಡಗಟ್ಟೂ || (ಟು) ತಮ್ಮಯ್ಯಾನಾsss
ತಂಗೀs ತವ್ರೀಗೇsss ಬರವssಳೂsss || ||೧೧೨||
ತಾರೀ ಹೊಳಿಯಲ್ಲೀsss ಸೋರಿಗೆ ನಿಂದವ್ನ್ಯಾssರೆss?
ಸಾವರದಾss ಕೊದುರೀsss ಸರದಾರಾssss || ತಮ್ಮಯ್ಯನೇss
ಪಾರಕೆ ನಿಂತವ್ನೇsss ನಮಗಾಗೀssss || ||೧೧೩||
ಕೋಟೀ ಗೆಲಬೇಕಂದೀssss ತಾಕಾsತಾಕಿಲಿ ಬಂssದಾsss
ಕೋಟೀs ನಾssಡರಸೂsss ಕೊಡಲಿಲ್ಲಾs || ತಮ್ಮಯ್ಯನೇss
ಬೇಟೇs ನಾಯಾಗೀsss ತಿರಗೀದಾssss || ||೧೧೪||
ಕಣ್ಣಗೆ ಕಸಬಿದ್ದೀsss ಯೆಣ್ಣಿಲಿ ನೆಳ ಬಿದ್ದೀsss
ಅಣ್ಣಗೆ ತಮ್ಮssಗೇssss ಹಗೆ ಬಿದ್ದೀsss ||
ಅಣ್ಣಗೆ ತಮ್ಮssಗೇsss ಹಗಿ ಬಿssತ್ತು ಹೆಗಡಿ ಊsರಾsss
ಹೆಣ್ಣಾss ರಂಬೀಯಾsss ನುಡಿ ಬಿತ್ತೂsss || ||೧೧೫||
ಬಂಗಾರದ್ಹಡುಗ ಬಂದೀs ಬಾಗೀಲಲಿ ತಡುದವೇs
ತಾರೇs ತಾsಯವ್ವಾssss ಕೊಳುಗಾsವಾs|| ನಾs ನನ್ನಾs
ವಾಲಿಗೆ ವಜ್ರಾsವಾs ಅಳುಕಂಬೇss || ||೧೧೬||
ಸಾವ್ಕಾರ ತಮ್ಮsಗೇss ಸರ್ಕರುದಾs ಕರುಬಂದೀs
ನುಡುದನೆ ಪಂಜರುದಾsss ಗಿಳಿಮಾತಾsss || ತಮ್ಮಯ್ಯಾs
ಯದ್ದsನೇ ಚಿನ್ನಾದಾs ಗಿಡವಾಗೀsss ||೧೧೭||
ಕುದ್ರೀ ಹೇರಿಕಂಡೀs ಬೆದುರೂರ ಪ್ಯಾಟಿಗೆ ಬಂsದಾs
ಉಗುರ ಮೇನೆ ಬೊಗುರೀsss ಮೆರಿಸೂತs || ಬಾಲವ್ವೀsಯs
ಮಗ ಬಂದಾs ನನ್ನಾssss ಕರುವಲ್ಲೀss || ||೧೧೮||
Leave A Comment