ಭಾಗ್ಯದ ದೇವಿ ಎಲ್ಲಮ್ಮ ಶ್ರೀ ರೇಣುಕ ತಾಯೇ         ಪಲ್ಲ

ಬೇಡಿದ ಭಾಗ್ಯವ ಕೊಡುವ ಎಲ್ಲಮ್ಮ
ಅಷ್ಟಸಿರಿ ಸಂಪತ್ತು ಕೊಟ್ಟು ಕಾಯಾಕಿ         ೧

ನಂಬಿದ್ದ ಬೇಡಿದ್ದ ಕೊಡುವಾಕಿ
ನಂಬದವರನ್ನ ಪರಿಪರಿ ಕಾಡುವಾಕಿ          ೨

ನಿಂದೆಮಾಡಿದವರ ಮುಂಡವ ಮುರಿದಾಕಿ
ತನ್ನ ಭಕ್ತರನ್ನು ತಾನು ಬಿಡದೆ ಕಾಯುವಾಕಿ  ೩

ಉಧೋ ಉಧೋ ಅನ್ನುವ ಭಕ್ತರ ಮನಿಯೊಳು
ನಿತ್ಯದಲಿ ನೀನೇ ಇದ್ದು ಸಲುವಾಕಿ            ೪

ಧರೆಯೊಳು ಕಲ್ಲೂರ ಮಲ್ಲಿಕಾರ್ಜುನಗೆ
ಮಗಳಾಗಿ ನಡೆದಾಕಿ ದೇವಿ ಜಗದಂಬಾ      ೫