ಕರಿಯ ಸೀರಿಯುಟ್ಟು ಎದಿಗೆ ಬಂಗಾರವಿಟ್ಟು
ಕೆರಿಯಾಗ ಹಾದು ಬರುವ ಯಲ್ಲಮ್ಮತಾಯಿ
ಬರುವ ಒ‌ಬ್ಬರಿಗಿ ತಿಳಿಯಾವ ಮಂಗಳ
ಜಯ ಮಂಗಳ ನಿತ್ಯ ಶುಭಮಂಗಳ ೧

ಹಸರ ಸೀರಿಯುಟ್ಟು ಎಳಸ ವಂಕೀನಿಟ್ಟು
ಕೆಸರಾಗ ಹಾದು ಬರುವಳೇಳ ಯಲ್ಲವ್ವತಾಯಿ
ಒಬ್ಬರಿಗಿ ತಿಳಿಯಾವ ಮಂಗಳ
ಜಯ ಮಂಗಳ ನಿತ್ಯ ಶುಭಮಂಗಳ ೨

ಕೆಂಪು ಸೀರಿಯುಟ್ಟು ಗುಂಪ ಬಂಗಾರುಟ್ಟು
ಬೆಂಕ್ಯಾಗ ಹಾದು ಬರುವಳೇಳ ಯಲ್ಲವ್ವ ತಾಯಿ
ಒಬ್ಬರಿಗಿ ಅಂತ ತಿಳಿಯಾಳ ಮಂಗಳ
ಜಯ ಮಂಗಳ ನಿತ್ಯ ಶುಭಮಂಗಳ ೩

ಬಿಳಿಯ ಸೀರಿಯುಟ್ಟು ಬೆಳಗಾಂವ್ಯಾಗ
ಹಾದು ಬರುವ ಯಲ್ಲಮ್ಮ ತಾಯಿ
ಬರುತ ಒಬ್ಬರಿಗ ತಿಳಿಯಾಳ ಮಂಗಳ
ಜಯ ಮಂಗಳ ನಿತ್ಯ ಶುಭಮಂಗಳ ೪