ಜಯ ಮಂಗಳ ನಿತ್ಯ ಶುಭಮಂಗಳ
ಗಿಂಡ್ಯಾನ ಹಾಲ ಗಿಣಿಯ ಕಂಡಾವ ಅಂದ
ನಿರಗದೊಸ್ತರ ಮರೆಯ ಮಾಡಿ ತಂದೇನ
ತಾಯಿ ಎಲ್ಲವ್ವ ಸಲಿಸೇಳ ೧
ಬಟ್ಟಲದಾನ್ಹಾಲ ಪಕ್ಕಸಿ ಕಂಡಾವ ಅಂದ
ಪಟ್ಟೆದೊಸ್ತ್ರ ಮರೆಮಾಡಿ ತಂದೇನ
ತಾಯಿ ಹಡದವ್ವ ಸಲ್ಲಿಸೇಳ
ಜಯ ಮಂಗಳ ನಿತ್ಯ ಶುಭಮಂಗಳ ೨
ಮೂಗುತಿ ಧರಿಸಿರುವಂಥ
ಮುತ್ತೈದೇರ ಕೈಯಲ್ಲಿ
ಇಪ್ಪತ್ತೊಂದಾರುತಿ ನಾವು ಬೆಳಗುವೆರಡ
ಪಂಚಾರುತಿ ಜಯ ಮಂಗಳ ಶುಭಮಂಗಳ ೩
ಬಾಲೆಯರೆಲ್ಲರು ಹಾಡುವ ಕೀರುತಿ
ಆಲದೆಲಿಯ ಮ್ಯಾಲ ನಾಲ್ವತ್ತೊಂದಾರುತಿ
ನಾವು ಬೆಳಗುವೆರಡ ಪಂಚಾರುತಿ
ಜಯ ಮಂಗಳ ನಿತ್ಯ ಶುಭಮಂಗಳ ೪
ಹರಗಿದ ಹೊಲದಾಗ ಹರಿವಿ ಹೂವ ಕೊವ್ವನ
ಹವಳದ ಕೆಂಚೆಡಿ ಗೊರವಯ್ಯ
ಹರಿಯಾನ ಪೂಜೆಂದ ಅಸಲೇಳುವ
ಜಯ ಮಂಗಳ ನಿತ್ಯ ಶುಭಮಂಗಳ ೫
ಬಿತ್ತದ ಹೊಲದಾಗ ನಿತ್ತು ಕೊಯ್ವನ
ಮುತ್ತಿನ ಕೆಂಚೆಡಿ ಗೊರವಯ್ಯ
ಮುತ್ತಿನ ಪೂಜೊಂಡ ಅಸಲೇಳುವ
ಜಯ ಮಂಗಳ ನಿತ್ಯ ಶುಭಮಂಗಳ ೬
ಉದ್ದಿನ ಕಾಯಾಂಗ ತಿದ್ದಿದ ಕೆಂಚೆಡಿ
ಸಿದ್ದ ನನ್ನಮ್ಮನ ಸರಸದಲ್ಲೆ
ಅಬ್ಬಾರಿನತ್ತಾದ ಪೇಳಲಮ್ಮಾ
ಜಯ ಮಂಗಳ ನಿತ್ಯ ಶುಭಮಂಗಳ ೭
ಚೊಗಚಿ ಕಾಯಾಂಗ ನಿಗಚಿದ ಕೆಂಜಡಿ
ಗೊರವಯ್ಯಾ ಅವತಾರಿನಂತಾದ ಪೇಳಲಮ್ಮಾ
ಜಯ ಮಂಗಳ ನಿತ್ಯ ಶುಭಮಂಗಳ ೮
ಕರಿಯ ಕುದರಿಗೆ ಕರಿಯ ಜೂಲವನ್ಹಾಕಿ
ತರಗಲ್ಲಿಗೆ ಆಳ ಕಳುವ್ಯಾರ
ಸರ್ವತ್ತಿನ ಸೇವಾಕ ಬರಹೇಳ ಜೋಗ್ತೇರ
ಜಯ ಮಂಗಳ ನಿತ್ಯ ಶುಭಮಂಗಳ ೯
ಬಿಳಿಯ ಕುದುರಿಗೆ ಬಿಳಿಯ ಜೂಲವನ್ಹಾಕಿ
ಬೆಳಗಾಂವಿಗೆ ಆಳ ಕಳುವ್ಯಾರ ಜೋಗ್ತೇರ್ಗೆ
ಬೆಳಗಿನ ಪೂಜ್ಯಾಕ ಬರಹೇಳ
ಜಯ ಮಂಗಳ ನಿತ್ಯ ಶುಭಮಂಗಳ ೧೦
ಉಧೋ ಉಧೋ ಜಯ ಮಂಗಳ
ಸುಯ್ಯ ಮಂಗಳ ಬಾಳ ಭಗತರಿಗೆ
ಭಾಷೆ ಕೊಡುವ ರೇಣುಕಾ ದೇವಿ
ಜಯ ಮಂಗಳ ನಿತ್ಯ ಶುಭಮಂಗಳ ೧೧
Leave A Comment