ಅಷ್ಟಮೀ ದಿsನ ಹುಟ್ಟಾನೋ ಜೋಕುಮಾರ
ಕೃಷ್ಣಾದೇವೀ ನಿನಗsಗ-ಬಾಳಾಕs
ಕೊಟ್ಟರೇಳೇ ದಿನಗsಳಾ

ಅಡ್ಡುಡ್ಡ ಮಳೆ ಬಂದು ದೊಡ್ ದೊಡ್ಡ ಕೆರೆ ತುಂಬಿ
ಗೊಡ್ಡುಗಳೆಲ್ಲ ಹೈನಾಗಿ ನಿನ್ ಕುಮಾರ
ಗಡ್ಡಕ್ಕೆ ಬೆಣ್ಣೆಲ್ಲೋ ಜೋಕುಮಾರ

ಮಿಂಡಿ ಮಿಂಡೀರೆಲ್ಲ ಒಂದಾಗಿ ನಿಂದ್ರಿರಬೇಕು
ಕಂದವ್ವಗಳೆಲ್ಲ ಕಡೆಗಾಗ್ರೆ-ಮುಂದಿಂದ
ಬೇಡಿ ಮುನಿದಾನು ಜೋಕುಮಾರ

ಕುಂಬಾರ ಕೇರಿ ಹೊಕ್ಕಾನ ಜೋಕುಮಾರ
ಕುಂಬಳದ ಹೂವ ಮುಡಿದಾನ-ಜೋಕುಮಾರ
ಕುಂಬಾರ್ರ ಹುಡುಗಿ ನನಗೆಂದ

ಒಕ್ಕಲಿಗರ ಕೇರಿ ಹೊಕ್ಕಾನ ಜೋಕುಮಾರ
ಎಕದ ಹೂವ ಮುಡಿದಾನ-ಜೋಕುಮಾರ
ಒಕ್ಕಲರ‍್ಹುಡುಗಿ ನನಗೆಂದ

ಲಿಂಗವಂತರ ಕೇರಿ ಹೊಕ್ಕಾನ ಜೋಕುಮಾರ
ಅಂಗಳದ ಹೂವ ಮುಡಿದಾನ-ಜೋಕುಮಾರ
ಲಿಂಗವಂತರ ಹುಡುಗಿ ನನಗೆಂದ

ಹಾರವ್ರ ಕೇರಿಗೆ ಹೋದಾನ ಜೋಕುಮಾರ
ಹಾಗಲದ ಹೂವ ಮುಡಿದಾನ-ಜೋಕುಮಾರ
ಹಾರವ್ರ ಹುಡುಗಿ ನನಗೆಂದ