ನಮ್ಹಟ್ಟೀಲೊಂದು ಅರಿಶಿನದ ಗಿಡ ಹುಟ್ಟಿ
ಹಟ್ಟಟ್ಟೀಗೆಲ್ಲ ಹರಿದsವೆ – ಕೋಲು
ಹೆಟ್ಟಟ್ಟೀಗೆಲ್ಲ ಹರಿದಂಥ ಅರಿಶಿನವ
ಚಿನ್ನದ ಗುದ್ಲೀಲಿ ಅಗದsರೇ – ಕೋಲು
ಚಿನ್ನದ ಗುದ್ಲೀಲಿ ಅಗೆದಂಥ ಅರಿಶಿನವ
ರನ್ನನ ಮಂಕ್ರೀಲಿ ಮಗೆದsರೇ – ಕೋಲು
ರನ್ನದ ಮಂಕ್ರೀಲಿ ಮಗೆದಂಥ ಅರಿಶಿನವ
ಹಾಲು ಬಾವೀಲಿ ತೊಳೆದsರೆ – ಕೋಲು
ಹಾಲು ಬಾವೀಲಿ ತೊಳದಂತ ಅರಿಶಿನವ
ಮಾಳಿಗೇಲ್ಹಾಕಿ ಮಡಗ್ಯಾರೇ – ಕೋಲು
ಮಾಳಿಗೇಲ್ಹಾಕೆ ಮಡಗ್ದಂಥ ಅರಿಶಿನವ
ಬೇಲೂರs ಸೂಳೆ ಬೆಲೆ ಮಾಡಿ – ಕೋಲು
ಬೇಲೂರs ಸೂಳೆ ಬೆಲೆ ಮಾಡಿ ಕೊಂಡsಳಲ್ಲೆ
ಕೊಂಬೆ ಕೊಂಬೆಗೆ ಹಣವಡ್ಡ – ಕೋಲು