ಕಲ್ಲೊಳ್ಳ ಕೊಡುರವ್ವಾsss ನೆಲ್ಲಕ್ಕೀss ತೊಲಸೂsತೇss
ಮುದ್ದು ತಮ್ಮಯ್ನಾssss ಮದವೀsಗೇss ||
ಮುದ್ದು ತಮ್ಮಯ್ನಾssss ಮದವೀssಗ್ ಹೊಗೂಬತ್ತೇsss ||೧೧೯||

ಬಂದೀss ಕೊಡಿರವ್ವಾsss ಕೊರುಳೀಗೇss || ನಿಮ ಕಯ್ಯನಾss
ಉಂಗಿಲ ಕೊಡಿರವ್ವಾssss ಬೆರುಳೀಗೇsss || ||೧೨೦||

ಅಕ್ಕssತಂಗದಿರುssss ನಾವೂ ನಾಲ್ಕುs ಮಂದಿs
ಯೇನs ಬೇಡರ್‌ಯೇsss ಹಣೆಯಲ್ಲೀss ? || ಸ್ವಾssಮಿ ಕೂsಡೇs
ಮೂಗsನ ಮೂsಗುತೀss ಕರಿಮsಣೀsss || ಕಾಲುಂಗುsಲಾs
ಲದುರಾss ಲಾಯುಸವೇsss ಹೆರಿದಾsಲಿsss || ||೧೨೧||

ಗಂಡನ ಮನಿಯಲ್ಲೀsss ಕಂಡಿರೆ ತಂಗಮನಾsss ?
ಮಂಡೇ ಗೇಣುದ್ದಾsss ಶಳಗೆಂಟೂsss
ಮಂಡೇs ಗೇಣುದ್ದಾssss ಶಳಗೆಂಟಿನ ಹೊಯ್ಸದೇsss
ಗಿಂಡೀss ತುಂಬ್ಹಾsಲಾsss ಕರವsದೂsss || ||೧೨೨||

ಗಂಡನ ಮನಿಕೆಲಸಾsss ಕಂಡ್ ಹಾಂಗೇss ಗೈಯಬೇಕುsss
ಗುಂಡೂsಗಲ್ಲಿನ್ಹಾಂಗೇsss ಇರಬೇಕೂsss || ತಂಗಮ್ಮಾsss,
ಹಂಗೆಲ್ಲಾssದೂಟಾsss ಉಣಬೇಕೂsss || ||೧೨೩||

ಕೊಡಪಾನ್ ಹಾಳಂದೀsss ಕೊಟ್ಟಗಿಲಿ ಮರಗಲ್ ಬೇಡಾsss
ಕೊಟ್ಟಪ್ಗೆ ಸಾಪಾsss ಇಡಬೇಡಾssss || ತಂಗಮ್ಮಾsss,
ಹೆತ್ತಮ್ಮಗೆ ಮಾತಾss ತರಬೇಡಾssss || ||೧೨೪||

ಕಾಕಿ ಕೆಲವsದೂsss ಅದು ನನ್ನಾsss ರಾsಜಿಯೇsss
ಹುಲಿಯೂ ಕೂಗ್ವೋದೂsss ಅಡವೀಯೇsss
ಹುಲಿಯೂ ಕೂಗ್ವೋದೂsss ಅಡವೀಯ ರಾಜೀಲಿss

ಹೇಗಿರುವದೆ ನನ್ನಾsss ಕಿರಿ ತಂಗೀsss ?
ಹೇಗಿರುವದೆ ನನ್ನಾ || ಕಿರಿತಂಗಿದ್ದಾರೇsss
ಹೋಗೀ ಬಂದೋರಾsss ನೆನವೇನೇsss || ||೧೨೫||

ಶಣ್ಣಣ್ಣ ದಡ್ಡಣ್ಣಾsss, ದಮ್ಮಯ್ಯ ದತ್ತಯ್ಯಾsss
ಕುಂಟಾಗೇ ನನ್ನಾsss ಕೊಡಬೇಡೀsss
ಕುಂಟಾಗೇ ನನ್ನಾsss ಕಟ್ಟsದುಂಟಾದುರೆsss
ಯೆದ್ದೆದ್ದಿ ದಂಟಾss ಕೊಡ್‌ನಾರೇsss || ||೧೨೬||

ಕಾಕೀ ಕಣ್ಣೀರ್ ಬಿಟ್ಟೀsss ಗೋಕಣದಾsss ಕೆರಿ ತುಂಬೀss
ಅಟದೋರೇ ನಮ ತಂಗ್ಯಾss ಕೊಡಬಾರಾs || ಅಣ್ಣಯ್ಯಾss,
ದೆನುಕಿನಾs ಸುದ್ದೀsss ದೆನುಕಿಲ್ಲಾsss|| ||೧೨೭||

ಬಾರಕ್ಕಾs, ಬಂಬೂಲೀss, ಚಿಟಮುಟಗೀ ಕೈಂದೂಗೀss,
ಬಾರೇ ಕೂಕುಮದಾsss ಕರಡೂಗೇsss || ತಮ್ಮದೀರುs
ಚಾವೂsಡಿಲಿ ಕೀಲಾsss ತೆಗವssರೂsss || || ೧೨೮||

ನಾನೂ ನಮ ತಂಗೀsss ಆಡೂತೀs ಮೆರುವಾsಗೇss
ಬೇಡೂತೀs ಬಂದಾsssಯಲ ಜೋಗೀsss || ಕಾಲೀಗೇss
ಕಾರೀs ಮುಳ್ ಹೆಟ್ಟೇsss ಮುರಿಯಾssಲೀsss || ||೧೨೯||

ಅಂದವೊಳ್ಳsss ಮೊಕಕೇsss ಚಂದವೊಳ್ಳsss ಮೂಗೂತೀss
ಬಾಗೀs ಲಕ್ಸುಮೀsss ನಮುತಂಗೀss || ಲಾssಳಿಸುವಾsss
ಬಾವ್ನ ಹಿಂಡ್ತಿನ್ನೆಟ್ಟೂsss ಗಟಬೇಯೇssss ! || ||೧೩೦||

ಕರ್ಯss ಕಾಗಿನ್ ಸೇsರೀsss ನೆಡಗೇs ದಂಡವೋಳೀsss
ಆಡುಕ್ಹೋಗದಿಯೇsss ರತುರಂಬೇss || ತಂಗಮ್ಮಾsss
ಕೇಳುಕೇs ಬಂದರೇsss ದೊರಗೊಳುsss || ||೧೩೧||

ಗಂಜೀ ಗಂಜೀsss ಅಂದೀss ಗಂಜೀs ಗಂಜಲು ಬೇಡಾsss
ಗಂಜೀಲೀ ವಂದೂsss ಅಗಳೆಲ್ಲಾsss || ಅಕ್ಕಮ್ಮss,
ನೀ ಉಣ್ಣೇss ನಿನ್ನಾsss ಮಗುಗ್ಹಾಕೇ || ಕೊಟ್ಟುಗೀss
ಕರ ಎಮ್ಮಿಗ್ಹಾಕೂsss ಕರದುಣ್ಣೂsss || ||೧೩೨||

ಬಾಡೀದಾss ಯೆಲಿಯೂsss ಬಾಳಿಗೂs ರಿತಿಯಲ್ಲss
ಯಾವಾsಗೂ ಬಪ್ಪಾss ಹೆರಿಯಕ್ಕಾss || (ಕ್ನಾ) ಕೋಡಿನ್ನೇss
ಬಾಳಿರವೇss ಬಾಳೀsss ಸುಳ್ಯಂsಗೇsss || ||೧೩೩||

ಯೆತ್ತಾss ಹೇರಿಕೊಳ್ಳೇsss ಮುತ್ತಾss ಸೂಡಿಕೊಳ್ಳೇss
ಉತ್ತೂಮ್ನಾss ಮಗನಾsss ಕರಕೊಳ್ಳೇs || ತಂಗಮ್ಮಾss,
ಯೆತ್ತೀನಾss ಮೇನೇsss ಮಗ ಜೋಕೇsss || ||೧೩೪||

ಯೆಲ್ಲೀs ಕೊಟ್ಟಾರೂsss ಕುಮಟೀs ಊರಿಗ್ ಕೊಡ್ಬೇಡೀss
ಯೆಸರೆತ್ತೀs ಪ್ಯೇಟೀsss ತಿರಗೂರೂss || ಅಣ್ಣಯ್ಯಾss,
ಚಂದವರದಾss ಬೆಟ್ಟಾssss ಹತ್ ಸೂರೂsss || ||೧೩೫||

ಸಿರಸೀs ಪೇಟಿಲೀsss ಕಂಡಿರಾs ನನು ತಮ್ಮಯ್ನಾss?
ಮಂದೀsಯಾs ನೆಡಗೇsss ಬೆಗರೂವಾsss || ತಮ್ಮಯ್ಯಾಗೆ
ಹೂಂಗೂs ಬೀಸಣಗೀsss ಕಳಗೂವೇsss || ||೧೩೬||

ಕಟ್ಟಾಣೀ ಚೆಂದಾsss ಇಟ್ಟಾsss ಮೂಗುತಿ ಚೆಂದಾsss
ಬೆಟ್ಟಾಕೇss ಶೇsಗೀsss ಯೆಲು ಚೆಂದಾss || ತಂಗಮ್ಮಾsನಾs
ಪಟ್ಟೇಯsಲುಡವಾssss ನೆಡ ಚೆಂದಾsss || ||೧೩೭||

ಬಾವೀ ತೇಡೀಗೆsss ನಾs ನೆಟ್ಟಾss ಯೆಲಿ ಬಳ್ಳೀss
ಅದುಕೇ ಹಬ್ಬದಿಯೇsss ರತಬಳ್ಳೀ|| ನನು ತಮ್ಮsನs
ಸಾಯಕೆ ನಿಂತದಿಯೇsss ರತದೇವೀsss || ||೧೩೮||

ಚಿನ್ನಾಕಿಂದ್ ಹೆಚ್ಚಿನಾsss ಬೆಳ್ಳಿಯೆಲ್ಲಾs ತಮ್ಮಾs,
ನಮಗಿಂದ್ ಹೆಚ್ಚಿನಾsss ಜನರೆಲ್ಲಾs || ನಮ್ಮ ಮುಡಿಯs
ಬಿಚ್ಚಿ ಮಾಸಿದ್ರೂsss ಅಳವೆಲ್ಲss || ||೧೩೯||

ಮಡ್ಕೀs ಸಂದೀಲೀss ದಡಕಂಬಾssದದು ಯೇನೇs?
ಅಡ್ಕತ್ತಿಲಿ ಅಡಕೀsss ವಡದಂsತೇs || ತಂಗಮ್ಮನಾs
ಮಿಡಕಾsಡೂs ತೊsಡಿಯಾsss ಕೊಯ್ಯೂsವೇss || ||೧೪೦||

ಅಕ್ಕss ತಂಗsದಿರೂss ನಾವೂsಲೈsದೂ ಮಂsದೀss
ಸಕ್ಕೂsರಿ ವಳಗೇss ಕರಿಯೆಳ್ಳು|| (ಳ್ಳ) ಬೆರುಸಂದರೇs
ಅರಿಯದೇs ನನ್ನಾsss ಹೆರಿಯಕ್ಕss || ||೧೪೧||

ಯಾವ್ ಗೊಡ್ಡಿ ಹತ್ತಿದ್ರೂs ಅಕ್ಕನಾ ಮನಿ ಕಾಣೇs
ಕ್ಯಾದಗೀ ಕಾಣೇsss ಕೊನಿ ಕಾಣೇs || ಶೀತೀಯs
ಮುಡಿ ಕಾಣೆ ಪಾಂಡೋರಾsss ಮನಿಯಲ್ಲೀsss || ||೧೪೨||