ಹತ್ತೇಳು ಗೆಂssಟ ಬಣ್ಣಿಸಿ ಗೆಂಟನೆ ಕsಟ್ಟಿ
ಸುತ್ತೇಳು ಬೂಲೋಕಕೆ ವಗುದsನೆs

ಸುತ್ತೇಳು ಬೂಲೋಕಕೆ ವಗುದsನೆs
“”ಪತುವರತಿಯಿದ್ದಲ್ಲಿss ಯರುsಗಲಿss”

ಕೇಳ್ವೆನಂಬರಿಗೆs ಹೇಳದಿದ್ದರೆ ದೋಸs
ಕೇಳು ಕೇಳದs ವರುಗsರೆs ಅದು ದೋಸs
ಸುತ್ತೇಳು ಬೂಲೋಕ ತಿರುಗssದೆss ಆಗೆಂಟುss

ಹಿಂತಿರುಗಿ ಮನುಗೇss ಬಂದದೆs ಆಗೆಂಟು
ಅತುಮವ್ವೀ ಬುಡದಲ್ಲಿs ಅರುsಗದೆs

ಅಟ್ಟಂಬೂ ಮಾತss ಕೇಳನೆs ದೊರುರಾಯs
ಏನಂದೀ ನುಡಿಯs ನುಡುದsನೇss ?

ನೀ ಪತುವರತಿಯಾsದರೆs ಹೆಡುಗೆಲಿ ಹೊರದವs
ಗುದ್ಲೀಲಿ ಕಡಿದವ ನೀ ನಿತ್ತಲ್ಲಿ ಬಾsವೀs ತೆಗಿಬೇsಕುs

ನೀ ನಿತ್ತಲಿ ಬಾವೀss ತೆಗಿದದುಂಟಾದsರೇ
ನೀ ಪತುವರತೀ ಶಯ್ಯಿss ದೊರಿಯಲ್ಲೀs”

ಅಟ್ಟಂಬೂ ಮಾತಾsss ಕೇಳದೆs ಅತುಮವ್ವಿs
ಮುತ್ತಿsನ ಕಣ್ಣೀರs ಶಡುದದೆs

ತುತ್ತೆ ತುತ್ತೆ ಜೀವs ತುತ್ತೆ ತುತ್ತೆ ಜೀವsಕೆ
ತುತ್ತೆ ಹೊಣಿಯಾಗೆ ಬಂತುs”

ಅಟ್ಟಂಬೂ ಮಾತsss ಹೇಳದೆ ಅತುಮವ್ವಿss
ಮಾಳುಗಿ ವಳಗೆss ನಡುದsದೇs ಅತುಮವ್ವಿs

ಅಚ್ಚ ಕಂಬೆಣ್ಣೆsss ತಲಿಗೆರುದಿs (ತಲುಗೆರುದಿ) ಅತುಮವ್ವಿs
ಬಾಚಿ ಕಟ್ಟದೆಯೇsss ಶಿರಿಮುಡಿs ಅತುಮವ್ವೀs

ಕತ್ತಿ ಕಾಯ್ಗೊಳsss ತಡುದದೆs ಅತುಮವವೀss
ಯೀಳಿ ಪಟ್ಟಿಯsss ತೊಟ್ಟಿದೆs

ಅತುಮನ್ವಿ ಮುಂದಾಗಿ ಗೌಡಿರು ಹಿಂದಾಗಿ
ಮೂಡ್ಲನ ಮೊಕವಾಗಿ ನೆಡದಾರೆ

ಮೂಡ್ಲನ ಮೊಕವಾಗಿ ನೆಡದದೆ ಅತುಮವ್ವಿs
ಈಳಿ ಪಟ್ಟಿಯ ಅರುಗದೇs ಅತುಮವ್ವಿs

ಕಾಯೊಡುದಿ ಕಯ್ಯsss ಮುಗುದದೆs
ಕಾಯೊಡುದಿ ಕಯ್ಯss ಏನ್ಹೇಳಿ ಮುಗುದದೆs

“”ಗುದುಲಿಲಿ ಕಡಿಯsದs ಹೆಡುಗಿಲಿ ಹೊರದವs
ನಿತ್ತಲಿ ಬಾವಿs ಆಗಬೇಕುs”

ಗುದುಲೀಲಿ ಕಡಿಯದs ಹೆಡುಗೀಲಿ ಹೊರುದss
ನಿತ್ತಲಿ ಬಾವಿ ಆಗsದೆs

“”ಕೇಳಿ ಕೇಳಿ ಗೌಡಿರs ಶೇದುವ ನೇಣs ಕೊಡುಪಾನs
ಶೇದುವs ನೇಣss ಕೊಡುಪಾನದಲ್ಲೀss

ನೀರೆಲ್ಲs ಇನ್ನೇss ತುಂಬುಕsಳಿss”
ಕೊಡುವನ ಚಂಬುನಾಗೇs ಉದುಕವ ತುಂಬುಕಂಡೀ

ಗೌಡಿರು ಹಿಂದಾಗೀ ಅತುಮವಿ ಮುಂದಾಗೀ
ದೊರುಗಳ ಬಳಿಯಲಿ ನೆಡುದಾರೆs

“”ಉಪ್ಪುರಗಿ ಮೇನೇs ಕುಂತಿರು ದೊರುರಾಯ್ರೇs’
ಕೈಕಾಲು ಮೊಕವs ತೊಳುಕsಳಿs”

“”ಗೆದ್ದೆಗೆದ್ದೇಳೀ ಹೊಸುನೆಗಿs ನುಡಿಬೇಡs
ಮತ್ತೊಂದುs ನುಡಿಯs ನುಡಿತೆನೆs”

ಮತ್ತೊಂದುs ನುಡಿಯss ಏನೇಳಿs ನುಡುದಾನೆs ?
“”ಹೆಡುಗೆಲಿ ಹೊರುದs ಗುದ್ಲಿಲಿ ಕಡಿಯsದs

ನೀ ನಿತ್ತಲಿs ಮನಿಯ ಮಾಡುಬೇಕುs
ನೀ ನಿತ್ತಲಿs ಮನಿಯ ಮಾಡದುಂಟಾದsರೇs

ನೀ ಪತುವರತೀ ಶರಿಯೇss ದೊರುದಲ್ಲಿs”
ಅಟ್ಟಂಬೂ ಮಾತss ಕೇಳದೇss ಅತುಮವ್ವೀs

ಮಾಳುಗೀ ವಳುಗೇ ನಡುದದೆ ಅತುಮವ್ವಿs
ಅಚ್ಚ ಕಂಬೆಣ್ಣೇ ತಲಿಗೆರುದೀs ಅತುಮವ್ವಿs

ಬಾಚಿ ಕಟ್ಟದ್ಯೇs ಶಿರಿಮುಡೀ ಅತುಮವ್ವಿs
ಕತ್ತಿ ಕಾಯ್ಗೊಳಾ ತಡುದsದೇss ಅತುಮವ್ವಿs

ಹಣ್ಣು ಈಳ್ಯಾವಾss ತಡುದದೇs ಅತುಮವ್ವಿs
ಗೌಡೀರ ಬೆನ್ನಿಗೇss ಕರುಕಂಡೀss

ಗೌಡೀರ್ ಹಿಂದಾಗೀ ಅತುಮವ್ವಿ ಮುಂದಾಗೀ
ಮೂಡ್ಲಾನ್ ಮೊಕುವಾಗೀs ನಡುದದೇs ಅತುಮವ್ವಿs

ಹಣ್ಣು ಯೀಳ್ಯವ ಅರುಗದೆs ಅತುಮವ್ವಿs
ಕಾಯೊಡೆದಿ ಕಯ್ಯss ಮುಗುದದೆss

ಕಾಯೊಡೆದಿ ಕಯ್ಯss ಏನ್ಹೇಳಿ ಮುಗುದದೆss
“”ನಿತ್ತಲಿ ಮನಿಯೇss ಆಗುಬೇಕು”

ಗುದುಲಲಿ ಹೊರುದವs ಹೆಡುಗಿಲಿ ಕಡಿಯದs
ನಿತ್ತಲಿ ಮನಿಯೇ ಆಗsದೇs

“”ಹನ್ನೆಯ್ಡಂಕಣದ ಮನ್ಯೇs ಮೂರಂಕ್ಣs ಚೌಕೀಯೇs
ತೂಗೂ ಹುಯ್ಯಲss ಶರಿಯಾಗೀss

ತೂಗೂ ಹುಯ್ಯಲss ಶರಿಯಾಗೀss ಆಗುಬೇಕು”
ಹನ್ನೆಯ್ಡಂಕಣದ ಮsನೇs ಮೂರಂಕ್ಣs ಚೌಕೀಯೇ

ತೂಗು ಹುಯ್ಯಲss ಶರಿಯಾಗೀss ಆದದ ನೋಡೀs
ದೊರೆರಾಯ್ನs ಬಳಿಗೇ ಬರುವsದೇs

ದೊರೆರಾಯ್ನs ಬಳಿಗೇ ಬಂದೇನs ಅಂಬೂದೇs ?
“”ಹನ್ನೆಯ್ಡಂಕಣದ ಮನ್ಯೇ ಮೂರಂಕಣ ಚೌಕೀಯೇs

ತೂಗು ಹುಯ್ಯಲs ಶರಿಯಾಗೀs ದೊರುಗೋಳೇ
ಹುಯ್ಯಲಾಡುವss ಬನಿ ನೀವುs”

“”ಗೆದ್ದೆಗೆದ್ದೆಂದೀss ಹೊಸುನೆಗೀ ನೆಗಿಬೇಡs”
ಮತ್ತೊಂದು ನುಡಿಯs ನುಸುದನೇs

ಮತ್ತೊಂದು ನುಡಿಯs ಏನ್ಹೇಳಿ ನುಡುದsನೇ ?
“”ಗುತ್ತಿನಲ್ಲಿರುವssss ಮಣಿನಾಗsssss

“”ಗುತ್ತಿನಲ್ಲಿರುವssss ಮಣಿನಾಗನ ತಂದರೆs
ನೀ ಪತುವರ್ತಿ ಶಯ್ಯೇs ದೊರಿಯಲ್ಲಿs”

ಅಟ್ಟಂಬೂ ಮಾತs ಕೇಳಲೆ ಅತುಮವ್ವೀ
ಮಾಳುಗಿ ವಳಗೇs ನೆಡದಳೇs

ಮಾಳುಗಿ ವಳಗೇs ನೆಡದದೇ ಅತುಮವ್ವಿs
ಅಚ್ಚ ಕಂಬ್ಯೆಣ್ಣೇ ತಲುಗ್ಯೆರದೀs ಅತುಮವ್ವಿs

ಬಾಚಿ ಕಟ್ಟಿದೆs ಶಿರಿಮುಡೀs ಅತುಮವ್ವಿs
ಹಣ್ಣು ಈಳ್ಯವs ತಡುದದೇs ಅತುಮವ್ವಿs

ಕತ್ತಿ ಕಾಯ್ಗೊಳs ಹಿಡುದದೇ ಅತುಮವ್ವಿs
ತಟ್ಯಲ್ ಹಾಲಿನ್ನೇs ಯರುಸ್ಕಂಡೀs ಅತುಮವ್ವಿ

ಗುತ್ತಿನಲ್ಲಿsನ್ನೇ ನಡುದದೇs ಅತುಮವ್ವಿs
ಗುತ್ತಿನಲ್ಲಿsನ್ನೇ ಕಾಯೊಡದಿ ಕಯ್ಯ ಮುಗುದsದೆ

ಗುತ್ತಿನಲ್ ಹಾಲs ಲಿಟ್ಟಿದೆs
“”ಸತಿವಂತ ಮಣಿನಾಗ
ಸತ್ತಿದಿಂದಿನ್ನೆ ಬರುಬೇಕು”

ಈಳಿs ಹಣ್ಣು ಅರುಗದೆ ಅತುಮವ್ವಿs
ಕಾಯೊಡದು ಕಯ್ಯ ಮುಗದದೆ ಅತುಮವ್ವಿ

ಹಾಲಿಟ್ಟ ಹೇಳ್ಕಿ ಮಾಡsದೆ ಅತುಮವ್ವಿ
“”ನೀ ಸತ್ತಿದಿಂದ್ಹಾಲs ಮೆಲಿಬೇಕು”

ಅಬ್ಬೆ ಮರಿಯಿನ್ನೆs ಬಂದ ಆಗಿನ್ನೇss
ಹಾಲೊಂದು ಬಾರಿ ಮೆಲುದದೆs

ಕಾಲಿಗೆ ಗಗ್ರಂದೀ ಲೊಂದೋದೇ ಲಿಟ್ಟದೇ
ಕಯ್ಯಿಗೆ ಬಳ್ಯಂದೀ ಲೊಂದೊಂದೇ ಲಿಟ್ಟದೇ

ಸುರ್ಗಿ ದಂಡ್ಯಂಡೀ ಮುಡಿಮೇನೆ ಮುಡುದದೆ
ಸೊಂಟಗೊಂದು ಪಟ್ಟೇ ಯಿಟ್ಟಳೇ

ಅಟ್ಟಲ್ಲಾ ಹೊತುಕಂಡೀ
ಹಿಂತಿರ್ಗಿ ಮನಿಗೇ ಬರವದುs

ಹಿಂತಿರ್ಗಿ ಮನಿಗೇ ಬರುವಳೆ ಅತುಮವ್ವಿs
ದೊರಿರಾಯ ಬಳುಗೆ ನಡಿದದೇ

ದೊರುರಾಯಿದ್ ಬಳಿಗೆ ಹೋದಗಡೆ ಆಕ್ಷಣ
“”ನೀ ಹಾವಡಿಗಾನs ಮಗುಳೇನೆ?

ಹಾವನೆ ಹೊತ್ತಿದೀ ಹಾವನೆ ಮುಡುದೀದೀ
ನೀ ಹಾವಡಿಗಾನs ಮಗುಳೇನೆ ?

“”ನಾ ಹಾವನೆ ಹೊತ್ತನೇ ನಾ ಹಾವನೆ ಮುಡಿದನೇ
ನಾ ಹಾವಗಡಗನs ಮಗುಳೆ ಶೈ ಯಲುಸ್ವಾಮೀ

ನಿಮುಗೊಂದಿಡುತನೇ ವೊಲುಮಲಿಯಾsss
“”ಸಾಕೇ ಸಾಕೆ ಮಡುದೀ ನಿನ್ ಪಾದಕೆ ಶರುಣಂಬೇ

ನೀ ಇಟ್ಟ ವನಮಾಲಿಯುs ತಗಿಬೇಗs
ಅಟ್ಟಂಬೂ ಮಾತs ಕೇಳಳೆ ಅತುಮವ್ವಿs

ಹಿಂತಿರುಗೀ ಗುತ್ಗೇ ನೆಡುದದೆs ಅತುಮವ್ವಿs
ತಾ ಇಟ್ಟ ಮಾಲಿ ತೆಗುದದೆ ಅತುಮವ್ವಿ

“”ನಿಮ್ಮ ಗುತ್ತಿಗೆ ನೀವು ಹೋಗಿನ್ನೆsss
ಅಟ್ಟಂಬೂ ಮಾತs ಹೇಳದೆ ಅತುಮವ್ವಿs

ಅವರವರ ಗುತ್ತಿಗೆ ನೆಡುದವ್ರೇs
ಅವರವರ ಗುತ್ತಿನಲ್ಲಿ ಹೋದದs ನೋಡಿಕಂಡೀ

ಹಿಂತಿರುಗಿ ಮನಿಗೆ ನಡುದದೆ
ಹಿಂತಿರುಗಿ ಮನಿಗೆ ಬಂದದs ನೋಡಿಕಂಡೀ

ಮತ್ತೊಂದು ನುಡಿಯs ನುಡುದನೇs
ಮತ್ತೊಂದು ನುಡಿಯs ಯೇನ್ಹೇಳಿ ನುಡುದನೇ ?

“”ನೀ ತೆರೆಯಳಿದೀ ಮನಿಗೇ ಬರುಬೇಕು
ನೀ ತೆರೆಯಳಿದೀ ಮನಿಗೇ ಬಂದದುಂಟಾದರೆ

ನೀ ಪತುವರ್ತಿ ಶೈಯೇ ದೊರೆಯಲ್ಲಿs”
ಅಟ್ಟಂಬೂ ಮಾತ ಕೇಳದೆ ಅತುಮವ್ವಿs

ಹಿತ್ತಲ ಕಡೆಗೇssss ನಡೆದsದೇ
ಹಿತ್ತಲ ಕಡುಗೇ ನಡುದs ಅತುಮವ್ವಿs

ಮುತ್ತಿನ ಕಣ್ಣೀರsss ಶಡುsssದsಳೇ ಅತುಮವ್ವಿs
ಮಾಳುಗಿ ವಳುಗೇssss ನೆಡುದsಳೇ ಅತುಮವ್ವಿs

ಬಾಚಿ ಕಟ್ಟದೆಯೇs ಶಿರಿಮುಡೀsss ಅತುಮವ್ವಿ
ಮುತ್ತಿನ ಕಣ್ಣೀರsss ಶಡುsದದೆಯೇ ಅತುಮವ್ವಿ

ವಸ್ತಲದ ಮೆಟ್ಟs ಲಿಳುದದೆಯೇ
ವಸ್ತಲದ ಮೆಟ್ಟss ಲಿಳಿದು ಹೋಗಿನ್ನೆs

ಲತ್ತುಗಿಯರುಮನುಗೇssss ನಡುದದೇss
ಅತುಮನ್ವಿ ಬರುಬರವಾssss ಅಟೂದೂರ ಕಂಡsಳೆ

ತಟ್ಟಳ ತಂಬುಗಿಲಿ ಹನಿಯುದಕs ತಟ್ಟಿಕಂಡೀ
ಕೈಕಾಲ ಸಿರಿಮೊಕವss ತೊಳುದsಳೇ ಅತುಮವ್ವಿs

ಪಟ್ಟೆ ಮಂಚದ ಮೇನೇsss ಕುಳುವಳೇ
“”ಯಾವಾಗ ಬರುವಾಗೆ ನೆಗಿಯುಂಟು ನುಡಿಯುಂಟೇ

ನಿನುಗಾರು ಕೊಲ್ವರೇ ನಿನುಗಾರೆ ಬಯ್ವರೇ ?
ನಿನಗಾರು ಕೊಂದನುಡ್ಯs ನುಡಿದsರೇ ?”

“”ನಂಗ್ಯಾರು ಕೊಲ್ಲೂರೇ, ನಂಗ್ಯಾರುs ನುಡಿಯೂರೇ ?
ನಿನ್ನಣ್ಣೋರು ಕೊಲ್ವ ನುಡಿಯs ನುಡಿದಾರೇ

ನಿನ್ನಿಂದಾನ ಲತ್ತುಗೇ ನಿನ್ನಿಂದೇಗ ಲತ್ತುಗೇs
ನಿನ್ನಿಂದೇ ಇದುವಂದ ನಡಿಯಲೇs”

ಅಟ್ಟಂಬೂ ಮಾತs ಕೇಳದೆ ಲತುಮವ್ವಿs
ಶಣ್ಣಲ್ಗೆ ಮನಿಗೇssss ನೆಡಿದಾಳೇ

ಅತ್ತುಗಿ ಬರುಬರುವs ಅಟದೂರ ಕಂಡಳೇ
ತಟ್ಟಳ ತಂಬಿಗಿಲೀ ಹನಿಯುದುಕs

ಅತ್ತುಗಿ ಕೊಟ್ಟs ನೀರs ಬಲುಗೈಲಿ ತೊಟ್ಟಕಂಡೀ
ಕೈಕಾಲು ಶಿರಿಮೊಕುವಾs ತೊಳುದಾಳೆ ಅತುಮವ್ವಿ

ಪಟ್ಟೆ ಮಂಚದ ಮೇನೇssss ಕುಂತsಳೆ
“”ಯಾವಾಗ ಬರುವಾಗೇss ನೆಗಿಯುಂಟು ನುಡಿಯುಂಟು

ಇದುವೇನೆ ಅsತ್ತುಗೀ ಮೊಕಬಾಡೀss?
ನಿನಗ್ಯಾರು ಕೊಂದsರೇ ನಿನಗ್ಯಾರು ಬಯ್ದsರೇ ?

ನಿನಗ್ಯಾರು ಕೊಂದ ನುಡಿಯssss ನುಡಿದಾರೇ ?”
“”ನಂಗ್ಯಾರು ಬಯ್ವರೇ ನನಗ್ಯಾರು ಬಯ್ವರೇ ?

ನಿನ್ನಣ್ಣೋರು ಕೊಂದs ನುಡ್ಯssss ಬಯ್ವರೇ
ನಿನ್ನಿಂದಾಗ ಲತ್ತುಗೇ ನಿನ್ನಿಂದೇ ಹೋಗ ಲತ್ತುಗೇ

ನಿನ್ನಾದೇ ಇನ್ ವಂದssss ನೆಡಿಯsಲೀ
ಅಟ್ಟಂಬೂ ಮಾತss ಕೇಳದೆ ಅತುಮವ್ವಿs

ಹಿಂತಿರುಗಿ ಮನುಗೇ ಬಂದದೇ ಅತುಮವ್ವಿ
ತೆಂಗಿನs ಬನುಕೇsss ನೆಡುದದೇ

“”ಕಾಯ ತಿನುಬೇಕ್ಹೇಳಿ ತೆಂಗ ನಾನೆಟ್ಟೀsದ್ದೇ
ತಿಂಗಗೆ ನಂಗೇssss ರುಣವೆಲ್ಲs

ಕಾಯ ತಿಂಬರssವ್ರೇ ಕಾಯಗೆ ನೀರ ಯರವರಿsಲ್ಲsss
ನಾ ಬತ್ತೆ ನಿನ್ನssss ನೆಳುಲೀಗೇsss

ಅಡಕೀ ತೋಟಕ್ಹೋಗೀ ಯೇನಂದೇ ನುಡಿದsಳೇ ?
“”ಅಡುಕೀಗೆ ನಂಗೇssss ರುಣವೆಲ್ಲssss

ಅಡುಕಿ ತಿಂಬರssವ್ರೇ ಲಡುಕೀಗ್ ನೀರ್ ಯರವರಿsಲ್ಲsss
ನಾ ಬತ್ತೇ ನಿನ್ನssss ನೆಳುಲೀಗೇsss”

ಜಾಜೀ ಹೊನಕೋಗಿ ಯೇನಂದೇ ನುಡುದಾಳೇ ?
“”ಜಾಜಿಗೆ ನನಗೇssss ರುಣವೆಲ್ಲssss

ಜಾಜಿ ಮುಡ್ವsರವ್ರೇ ಜಾಜಿಗ್ ನೀರ್ ಯರವರಿsಲ್ಲsss
ನಾ ಬತ್ತೇ ನಿನ್ನssss ನೆಳುಲೀಗೇsss”

ಜೂಜೀ ಬನುಕ್ಹೋssಗೀ ಯೇನಂದೇ ನುಡುದsದೆss ?
“”ಜೂಜಿಗೆ ನನಗೇssss ರುಣವೆಲ್ಲssss

ಜೂಜಿ ಮುಡ್ವರವ್ರೇ ಜೂಜಿಗ್ ನೀರ್ ಯರವರಿಲ್ಲsss
ನಾ ಬತ್ತೇ ನಿನ್ನssss ನೆಳುಲೀಗೇsss”

ಅಟ್ಟಂಬೂ ಮಾತsss ನುಡುದದತುಮವ್ವಿs
ಮಾಳೂಗಿ ವಳಗೇsss ನಡುದsದೇ

ಚಿನ್ನದ ಪೆಟ್ಗೆಗ್ಹೋಗೀ ಯೇನಂದೇ ನುಡುದಳೇ ?
“”ದೊರೆ ಚಿನ್ನಕೆ ನನಗೇs ರುಣವೆಲ್ಲsss”

“”ಚಿನ್ನಗೋಳ ಮೈತುಂಬ ಇಟುಕsಳೇ ಮಡುದೀs
ನಿನ್ ನೋಡಿ ನಾನು ಸಂತೋಸs ಬಿಡತೇನೇ”

“”ಪೆಟಿಗೀಯs ಚಿನ್ನs ಗೌಡೀರ್ಗೆ ಇಟುಕsಣೇ
ಗೌಡೀರ ನೋಡಿ ಸಂತೋಸssss ಬಿಡಬೌದುs”

ಪಟ್ಟೆ ಪೆಟ್ಗೆಗ್ಹೋಗಿ ಯೇನಂದೀ ನುಡಿದsದೇ ?
“”ಪಟ್ಟೆ ಉಡುವಲ್ಲೀssss ರುಣವಿಲ್ಲs”

ಪಟ್ಟೆಯs ಸೀರೀssss ನೆಡು ತುಂಬಿ ಇಟುಕsಳೇ ಮಡದೀs
ನಿನ್ ನೋಡಿ ಸಂತೋಸs ಬಿಡತೇನೇ”

ಪಟ್ಟೆ ಸೀರಿಯssss ಗೌಡೀರ್ಗೆ ಉಡಿಸ್‌ಕsssಳೀ
ಅವರ ನೋಡಿ ಸಂತೋಸssss ಬಿಡಬೌದುs”

ಅಟ್ಟಂಬೂ ಮಾತssss ನುಡುದಳತುಮವ್ವೀ
ಮಾಳೂಗಿ ವಳುಗೇsss ನೆಡುದದೇ

ಬಾಚಿ ಕಟ್ಟದ್ಯೇssss ಶಿರಿಮುಡೀ ಅತುಮವ್ವಿs
ಬಿದ್ದ ಮಾರಿಗವssss ಹಿಡಿದsಳೇ ಅತುಮವ್ವಿ

ತೌರ ಮನಿಗಿನ್ನೇsss ನೆಡುದsದೇss
ದನುಕಾವ ಮsಕ್ಕಳಿರಾ, ಕುರಿಕಾವೂ ಮsಕ್ಕಳಿರs

ತೌರ ಮನಿಗ್ಹೋಗು ಹಾದೀ ತೋರಿ ಕೊಡಿ”
ತೌರ ಮನಿಗ್ಹೋಗು ಹಾದೀ ತೋರಿ ಕೊಡಿ ಲಂದೀ

ಈಳಿ ಯೆಡಕಾಗೀ ಬಾಳೀ ಬಲುಕಾಗೀ
ಅಲ್ಲುಂಟು ನಿನ್ನsss ತೌರಮನೀ”

ಅಟ್ಟಂಬೂ ಮಾತsss ನುಡುದರೆ ಆ ಮಕ್ಕಳು
ಅಪ್ಪನ ಮನಿಗಿನ್ನೆ ಓಡ್ ಹೋದ್ರು

ಅಪ್ಪನ ಮನಿಗಿನ್ನೆ ಓಡ್ ಓಡೋಡಿ ಹೋಗೀ
ತಾಯಿ ತಂದೆ ಕೂಡೇ ನುಡಿದಾರೇ

ಮಂದಿ ಮಾರ್ಬಲs ಯೇನೊಂದೂ ತರುಲಿಲ್ಲs
ಕಾಲ್ಹಾದಿಲಿ ನಿನ್ ಮಗಳು ಬರುತsದೆ

ಅಟ್ಟೊಂದು ಮಾತ ಕೇಳಾನೆ ಅಪ್ಪಯ್ಯ
ಬೇಕಾದ ಪಾಲುಕಿ ಕಳುಗನೆ ಅಪ್ಪಯ್ಯ

ಮಂದಿ ಮಾರ್ಬಲವsss ಕಳುಗsನೇ
“”ಮಂದಿ ಮಾರ್ಬಲವsss ಬೇಡs ಪಾಲುಕಿ ಬೇಡ ನಂಗೇ

ನಾ ಕಾಲ್ನಡಿಗೀಲೆ ಬತ್ತೆ”ಳಿ ನುಡಿದದೇ
ಕಾಲ್ನಡಿಗೀಲಿನ್ನೆ ಹೋಗದಲಪ್ಪನ ಮನುಗೇ

“”ಯಾವಾಗ ಬರವಾಗೆ ನೆಗೆಯುಂಟು ನುಡಿಯುಂಟು
ಇದು ಯೇನೆ ಮಗಳೇ ಮೊಕ ಬಾಡೀ ?”

“”ಯೇನಲ್ಲ ತಾಯೇ ಯಂತಲ್ಲ ತಾಯೇs,
ನಾ ತೆರೆಯಳದೀ ಮನೆಗೇ ಬರುಬೇಕೇ

ನಾ ತೆರೆಯಳದೀ ಮನೆಗೇ ಬಂದದುಂಟಾದರೆ
ನಾ ಪತಿವ್ರತಿ ಶೈಯೇ ದೊರಿಯಲ್ಲೀ

ನನ್ನಂದೆ ಬಂದುಗೊಂದು ಪತ್ರ ಇನ್ನೇ ವಂದ ಕೊಡುಬೇಕೆ”
ಅಟ್ಟಂಬೂ ಮಾತs ನುಡಿದsದೆ ಯೇನ್ಹೇಳಿs ?

“”ದೇವಲೋಕಕ್ ವಂದ್ ವಾಲೀ ಬರಿಬೇಗs
ದೇವಲೋಕದ ಚಿನ್ನs ದೇವಲೋಕದ ಪsಟ್ಟೇ

ದೇವಲೋಕದ ಕೊಳಗsss ಬರುಬೇಕುss
ಅತ್ತಿ ಮರುಕೋಗಿ ಹತ್ತು ಸುತ್ತು ತಿರುಗsದೇ

“”ಇದು ಯೇನೆ ಮಗುಳೇ ವಿಪರೀತ?”
“”ಬೇಡುಕೆ ಬಂದೋರ್ಗೆ ಪಡಿಯನ್ನು ಹಾಕಿದ್ದೇ

ಕುಳ್ಳೆಂದೇ ವಂದ ಮಣಿಯ ಕೊಡಲೆಲ್ಲ
ಕುಳ್ಳೆಂದೇ ವಂದ ಮಣಿಯ ಕೊಡ್ಲೆಲ್ಲೆಂದ್ಹೇಳಿ

ಆ ಪಾಪ್ಕೆ ಹತ್ತು ಸುತ್ತ ತಿರುಗೂತೇss
ಅಸುವಂತs ಮರುಕೋಗೀ ಐದ್ ಸುತ್ತ ತಿರುಗಾದೇ

“”ಇದು ಯೇನೆ ಮಗುಳೇ ವಿಪರೀತs?”
ಬೆಂಕಿಗ್ ಬಂದರ್ಗೆs ಬೆಂಕಿ ಕೊಟ್ಟಿsದ್ದೇ

ಕುಳ್ಳೆಂದೇ ಕವಳsss ಕೊಡುಲಿಲ್ಲs
ಕುಳ್ಳೆಂದೇ ಕವಳsss ಕೊಡುಲೆಲ್ಲ” ಅಂದ್ಹೇಳಿ

ಆ ಪಾಪ್ಕೆ ಐದ್ ಸುತ್ತsss ತಿರುಗೀದೇsss ತಾಯವ್ವ
ಬೇಗದಿಂದಡುಗೀ ಅನುಮಾಡೇsss ತಾಯವ್ವs

ಲೂಟಕ್ಕೆ ನನಗೇs ಅನುಮಾಡೇss ತಾಯವ್ವs
ಯಲ್ಲವ್ರ ನೆಡುಗಿನ್ನೇ ಕುಂತಿನ್ನೆssss

ಯಲ್ಲವ್ರ ನೆಡುಗಿನ್ನೇ ಕುಂತೂಟ ಮಾಡೀ
ಅಟ್ಟಂಬೂ ಹೊತ್ತಿಗೆ ದೇವಲೋಕದ ಸಾಮಾನ ಬರವsದೇ

ದೇವಲೋಕದ ಚಿನ್ನ ದೇವಲೋಕದ ಪಟ್ಟಿ
ದೇವಲೋಕದ ಕೊಳಗss ಬರುವಾದೇss

ದೇವಲೋಕದ ಪಟ್ಟೆ ಉಟಕಂಡ್ತು
ದೇವಲೋಕದ ಚಿನ್ನ ಇಟ್‌ಕಂಡ್ತು

ದೇವಲೋಕದ ಕೊಳಗ ತೊಟ್ಟಕಂಡ್ತು
ದೇವಲೋಕದ ಕೊಳಗ ತೊಟ್ಟೀಯ ಕಂಡೀ

ಮಂದಿ ಮಾರ್ಬಲssss ತೆಗದಕಂಡೀ
ತಾಯೀ ಮುಂದಾಗೀ ಅಪ್ಪ ಹಿಂದಾಗೀ

ತೆರಿಯಳುಕೆ ಲತುಮವ್ವೀ ನೆಡುದsದೇ ಇನ್ನೇ
ಚಿನ್ನದ ಮಣಿಯssss ಲಿಟುಕಂಡೀ

ಚಿನ್ನದ ಮಣಿಯssss ಲಿಟಕಂಡ್ತು ಅತುಮದ್ವಿs
ಮಣಿಮೇನೆ ಇನ್ನೇssss ಕುಂತ್ಕಂತೇsss

ಮಣಿಮೇನೆ ಕುಂತ್ಕಂಡೀ ಚಿನ್ನದ ಕೊಳಗ ಇಟುಕಂಡಿ ಇನ್ನೆ
ಸಂದ್ರದ ಕೆರಿಯssss ಲಿಳುದsದೆ

ಸಂದ್ರದೆ ಕೆರಿಯssss ಲಿಳುದs ಅತುಮವ್ವಿs
ವಂದ ಕೊಳಗೆ ಹೊಯ್ದೀ ಮತ್ತೊಂದ್ ಕೊಳ್ಗ ಅಳಿತು

ಎರಡ ಕೊಳಗ ನೀರ ಅಳದsದೇ ಅತುಮವ್ವಿs
ಮೂರನೆ ಕೊಳಗss ತುಂಬಲೆಲ್ಲ ಅತುಮವ್ವಿs

ಆ ಕೊಳಗದಗೆ ಇನ್ನೇ ಕುಂತದೇ
ಆ ಕೊಳಗದಲ್ಲೆ ಕುಂತದ ನೋಡಿಕಂಡೀ

ಆ ಕೊಳಗ ಇನ್ನೇssss ತುಂಬಿತುs
“”ಕೂಡೆ ನಿತ್ತsರ ಇನ್ನೇನ ನೋಡೀರೀ ?

ಆ ತಾಯ ಕಯ್ಯss ಹಿಡಕಳ್ಳಿ
ಆ ತಾಯ ಕಯ್ಯssss ಹಿಡಿರಪ್ಪ ಕೋಣೇಲಿ ಹಾಕಿನ್ನೇss

ನಾಗಬೂಸಣದ ಕದ ಜಡೀರೀ
ಕೂಡೆ ನಿತ್ತವ್ರsss ನೀವೇನ ನೋಡೂರೀ ?

ಆ ದೊರೆ ಕಯ್ಯssss ಹಿಡಿರಪ್ಪsss ನೀವಿನ್ನೇ
ನಾಗಬೂಸಣದssss ಕದ ಜಡಿರೀ

ನಾಗಬೂಸಣದs ಕದ ಜಡಿದು ಅತುಮವ್ವಿs
ದೇವಲೋಕಕ್ ಅತುಮವ್ವೀssss ನಡಿದದೇss

 

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು

೧. ಏಳು ಸಮುದ್ರ ಅಳೆದ ನಾರಿ; ಹೆಗಡೆ ಎಲ್.ಆರ್. ತಿಮ್ಮಕ್ಕನ ಪದಗಳು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ ಮೈಸೂರು, ೧೯೬೯ ಪು.ಸಂ. ೧೫೪-೧೬೨.

೨. ತೆರೆ ಅಳೆಯುವ ಹಾಡು; ಕೂಡಿಗೆ ಶ್ರೀಕಂಠ, ಅಂಟಿಗೆ ಪಂಟಿಗೆ ಪದಗಳು, ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯ ಮೈಸೂರು, ೧೯೭೩, ಪು.ಸಂ. ೬೭-೬೯

೩. ಪತಿವ್ರತೆ ಲತುಮವ್ವ; ಭಟ್ ಎಲ್.ಜಿ. ಹಾಲಕ್ಕಿ ಪಾಯಸ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು – ೧೯೭೪.

೪. ನನು ತಂಗಿ ತರಿಯಾಗಳೆದಾಳು; ಹಿರಿಯಣ್ಣ ಅಂಬಳಿಕೆ, ತೀರ್ಥಹಳ್ಳಿ ಸುತ್ತಿನ ಲಾವಣಿಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು – ೧೯೭೬ ಪು.ಸಂ. ೨೩೭-೨೪೮.

೫. ಪತಿವರತಿ; ರಾಮಸ್ವಾಮಿ ಎಸ್, ಮತ್ತು ನಟರಾಜ್ ಎಂ.ಬಿ., ಹಾಡಾಕೆ ಬೈಗುಂಟೆ ಬೆಳಗುಂಟೆ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೭, ಪು.ಸಂ. ೧೩-೧೬.

೬. ಚಿತ್ತಾರಿ ಹಾಡು; ಕಾವ್ಯಜೀವಿ ಹಾಡ್ಹೇಳೆ ತಂಗಿ ದನಿ ಎತ್ತಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೧೯೭೯ ಪು.ಸಂ. ೪೫-೪೭.

೭. ಸತ್ಯವಂತೆ; ನಳಿನಿ ಎಂ.ಬಿ. ಕಾಡುಮಲ್ಲಿಗೆ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೮೨, ಪು.ಸಂ. ೩೬-೪೩.

೮. ತೆರೆ ಅಳೆಯವ ಪದ; ರಮೇಶ ಜಿ.ಕೆ. ನೀತ್ಯುಳ್ಳ ಜ್ಯೋತಿ ನಡೆಮುಂದೆ, ಚಕೋರ ಪ್ರಕಾಶನ ತೀರ್ಥಹಳ್ಳಿ ೧೯೯೬ ಪು.ಸಂ.೧೨೪-೧೩೦

೯. ನಚುಮವ್ವಿ; ನಾಯಕ ಎನ್.ಆರ್. ಪಾಠಾಂತರ ಕಥನ ಕವನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು – ೧೯೯೭, ಪು.ಸಂ.೧೦೪-೧೧೬.

೧೦. ಅತುಮೋವಿ; ನಾಯಕ ಎನ್.ಆರ್. ಪಾಠಾಂತರ ಕಥನ ಕವನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು – ೧೯೯೭, ಪು.ಸಂ. ೧೧೭-೧೨೩.

೧೧. ಉತ್ತುಮಾಮಿ; ನಾಯಕ ಎನ್.ಆರ್. ಮುಕ್ರಿಗಳ ಗೀತೆ ಮತ್ತು ಕಥೆಗಳು. ಜಾನಪದ ಪ್ರಕಾಶನ ಹೊನ್ನಾವರ ೨೦೦೦. ಪು.ಸಂ. ೯೫-೯೭.*      ಅತುಮವ್ವಿ; ಹೆಗಡೆ ಎಲ್.ಆರ್. ಕೆಲವು ಲಾವಣಿಗಳು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ ಮೈಸೂರು, ೧೯೭೩ ಪು.ಸಂ.೧೨೯-೧೪೦