ಒಂದು ತಿಂಗಳ ಬಸುರಿನಲಿ
ಭೂಮಿ ತಾಯೇನ ಬಯಿಸಿದಳೇ
ಒಂದ್ಯೆಲೆ ಅಡಿಕೆಯ
ಊರ ಬೇಕೆಂದು ಬಯ್ಸಿದಳೇ

ಎರಡು ತಿಂಗಳ ಬಸುರಿನಲ್ಲಿ
ಭೂಮಿ ತಾಯೇನ ಬಯಸಿದಳೇ
ಎರಡೆಲೆ ತೆಂಗನು
ಊರ ಬೇಕೆಂದು ಬಯಸಿದಳೇ