ರಾಗಿಕಲ್ಲಿಗೆ ರನ್ನದ ಹಿಡಿಗೂಟ
ರಾಯ ತಮ್ಮಯ್ನ ಕೊಡಗಿನ ಕಲ್ಲಿನ ಮೇಲೆ
ರಾಮಚಂದ್ರನ ಬರೆದಾರೆ

ರಾಗಿ ಬೀಸೋ ಕಲ್ಲೆ ರಾಜನ ಬೀಸೊ ಕಲ್ಲೆ
ರಾಯ ತಮ್ಮಯ್ಯ ಕೊಡಗಿನ ಕಲ್ಲಿನ ಮೇಲೆ
ರಾಮಚಂದ್ರನ ಬರೆದಾರೆ

ಅಕ್ಕಿ ಬೀಸೊ ಕಲ್ಲೆ ನುಚ್ಚು ಬೀಸೊ ಕಲ್ಲೆ
ಶೆಟ್ಟರ ಮನೆ ಶೆಟ್‌ಗಳಲ್ಲಿನ ಮೇಲೆ
ಸೂರ್ಯ ಚಂದ್ರರ ಬರೆದಾರೆ