ಮುಂಗಾರಿ ಮಳೆಬಂದು ಬೂಮಿಗಂದಲವಾಕಿ
ಸ್ವಾಮಿ ಕಲ್ಲೇಸ ದಯಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ಬಡಿಕೆ ವಡಿದಾಗ ಬರಲೇನೋ ಕೋಲೆನ್ನ ಕೋಲೆ

ನಾಕು ಮೂಲಿಗೆ ನಾಕು ಏಕುಮಡಿಕೆಗಳೂಡಿ
ನಲಿ ನಲಿದೇ ಮಡಿಕೆರಳೇ ವಡಿವಾಗೆ ಕೋಲೆನ್ನ ಕೋಲೆ

ನಲಿನಲಿದೇ ಮಡಿಕೆಗಳೇ ವಡಿವಾಗ
ಸ್ವಾಮಿ ಕಲ್ಲೇಸ ದಯಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ಜ್ವಾಳಾಬಿತ್ತೂವಾಗ ಬರಲೋಗೋ ಕೋಲೆನ್ನ ಕೋಲೆ

ನಾಕೂ ಮೂಲಿಗೆ ನಾಕು ಏಕು ಕೂರಿಗೆ ವೂಡಿ
ನಲಿನಲಿದೇ ಜ್ವಾಳಾಬಿತ್ತಲುವಾಗ ಕೋಲೆನ್ನ ಕೋಲೆ

ನಲಿನಲಿದೇ ಜ್ವಾಳಾಬಿತ್ತಲುವಾಗ
ಸ್ವಾಮಿ ಕಲ್ಲಯ್ಯ ದಯಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ಜ್ವಾಳಾ ಕೊಯ್ಯಾಗ ಬರಲೋಗೋ ಕೋಲೆನ್ನ ಕೋಲೆ

ನಾಕು ಮೂಲಿಗೆ ನಾಕು ಏಕುಮಂಚಗಳಾಕಿ
ನಲಿನಲಿದೇ ಗುಬ್ಬಿಗಳೊಡಿವಾಗ ಕೋಲೆನ್ನ ಕೋಲೆ

ನಲಿನಲಿದೇ ಗುಬ್ಬಿಗಳೊಡೆದೆ ಕಾಯ್ವಾಗ
ಸ್ವಾಮಿ ಕಲ್ಲಯ್ಯ ನನಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ತೆನಿಯಾ ಕೊಯ್ವಾಗ ಬರಲೋಗೋ ಕೋಲೆನ್ನ ಕೋಲೆ

ನಾಕೂಮೂಲಿಗೆ ನಾಕು ಏಕು ಬಡಿಗಳೂಡಿ
ನಲಿನಲಿದೆ ತೆನಿಯಾ ಕೊಯ್ವಾಗ ಕೋಲೆನ್ನ ಕೋಲೆ

ನಲಿನಲಿದೆ ತೆನಿಯಾ ಕೊಯ್ವಾ ಯಾಳ್ಯಾದಾಗೆ
ಸ್ವಾಮಿಕಲ್ಲೇಸ ದಯಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ರಾಸಿ ತೂರುವಾಗ ಬರಲೋಗೋ ಕೋಲೆನ್ನ ಕೋಲೆ

ನಾಕು ಮೂಲಿಗೆ ನಾಕು ಏಕುತಟ್ಟಿಗಳಿಡಿರೆ
ನಲಿನಲಿದೇ ಜ್ವಾಳಾ ತೂರುವಾಗ ಕೋಲೆನ್ನ ಕೋಲೆ

ನಲಿನಲಿದೇ ಜ್ವಾಳಾ ತೂರಲುವಾಗ
ಕಲ್ಲೇಸಸ್ವಾಮಿ ದಯಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ರಾಸೀಯ ಮಾಡುವಾಗ ಬರಲೋಗೋ ಕೋಲೆನ್ನ ಕೋಲೆ

ನಾಕೂಮೂಲೆಗೆ ನಾಕು ಏಕು ರಾಸಿಯ ಮಾಡಿ
ನಲಿನಲಿದೆ ರಾಸಿ ಮಾಡುವಾಗ ಕೋಲೆನ್ನ ಕೋಲೆ

ನಲಿನಲಿದೆ ರಾಸಿ ಮಾಡುವಾಗ
ಸ್ವಾಮಿ ಕಲ್ಲೇಸ ದಯಾಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ರಾಸೀಯ ಮಾಡುವಾಗ ಬರಲೋಗೋ ಕೋಲೆನ್ನ ಕೋಲೆ

ನಾಕೂಮೂಲೆಗೆ ನಾಕು ಏಕುರಾಸಿಯ ಮಾಡಿ
ನಲಿನಲಿದೆ ರಾಸಿ ಮಾಡುವಾಗ ಕೋಲೆನ್ನ ಕೋಲೆ

ನಲಿನಲಿದೆ ರಾಸಿ ಮಾಡುವಾಗ
ಸ್ವಾಮಿ ಕಲ್ಲೇಸ ದಯಾಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ಜ್ವಾಳಾ ಏರುವಾಗ ಬರಲೋಗೋ ಕೋಲೆನ್ನ ಕೋಲೆ

ನಾಕೂ ಮೂಲೆಗೆ ನಾಕೂ ಏಕು ತೊಟ್ಟಿಲಕಟ್ಟಿ
ನಲಿನಲಿದೆ ರಾಸಿಯ ಏರುವಾಗ ಕೋಲೆನ್ನ ಕೋಲೆ

ನಲಿನಲಿದೆ ರಾಸೀಯ ಏರುವ ಯಾಳ್ಯಾದಾಗ
ಸ್ವಾಮಿ ಕಲ್ಲೇಸ ದಯಾಬಿಕ್ಸಾ ಕೋಲೆನ್ನ ಕೋಲೆ

ನಾಕೂ ಮೂಲಿಗೆ ನಾಕು ಏಕುಪಾರಗಳಾಕಿ
ಇಲ್ಲೀಗೆ ಜಂಗಮ ಯಂಗೆ ಬಂದಾನೆ ಕೋಲೆನ್ನ ಕೋಲೆ

ಇಲ್ಲೀಗೆ ಜಂಗಮ ಯಂಗೆ ಬಂದಾನೆ
ನಡುವೇ ಕಲ್ಲೇಸ ದಯಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ರಾಸಿವೋಗಿ ಮನೆಗೆ ಬೀಳುವಾಗ ಕೋಲೆನ್ನ ಕೋಲೆ

ಕಟ್ಟಿರುವೆಂಟಿತ್ತು ಕರುಗಲು ಆಗ್ಯಾವೆ
ವೂಡಿರುವ ಬಂಡಿ ಆರೋಣಲಿ ಕೋಲೆನ್ನ ಕೋಲೆ

ಕೈಯ್ಯಾಗಿರುವ ಬಾರಿಕೋಲೆ ಆವಾಗಿ
ಅರಿಯಾಲಿ ಮಾಡಿರುವ ರಾಸಿ ದೂಳಾಗಿ ಕೋಲೆನ್ನ ಕೋಲೆ

ಮಂಗಳ ಮಯಿಮ ಕಾಣೆ ಕಲ್ಲೇಸ
ಜಂಗುಮ ಲಿಂಗ ಕಾಣೆ ಕಲ್ಲೇಸ

ಅಪ್ಪ ಕಲ್ಲೇಲಿಂಗ ನಿಂತು ನೋಡಿದವಯ್ಯ
ಸಂಪಿಗೆ ವನವೆ ಎಲಿದೋಟ ಕಲ್ಲೇಲಿಂಗ
ತಂಪೊಳ್ಳೋದೆಂದು ನಲಿಗೊಂಡ

ಅಣ್ಣ ಕಲ್ಲೇಲಿಂಗ ನಿಂತು ನೋಡಿದರೆ ಸುರ
ಹೊನ್ನೇ ಮರನೆ ಎಲಿದೋಟ ಕಲ್ಲೇಲಿಂಗ
ತಾವೊಳ್ಳೇದೆಂದು ನೆಲೆಗೊಂಡ
ಅಣ್ಣ ನೋಡನು ಬನ್ನಿ ಎಣ್ಣುಂಡ ಮೈಯ್ಯರನ
ಸಣ್ಣ ರುದ್ರಾಕ್ಷಿ ಕೊರಳೋರು ಕಲ್ಲೇಲಿಂಗ
ವೋಗಿ ಪ್ರಾಣಗಳ ವುಳಿಸ್ಯಾನೆ
ಅಪ್ಪ ಕಲ್ಲೇ ಲಿಂಗ ತುಪ್ಪುಂಡ ಮೈಯ್ಯರನ
ಚಿಕ್ಕ ರುದ್ರಾಕ್ಷಿ ಕೊರಳೋರು ಕಲ್ಲೇಲಿಂಗ
ಸತ್ತ ಪ್ರಾಣಗಳ ಉಳಿಸ್ಯಾರೆ
ಸತ್ತ ಪ್ರಾಣಗಳ ಉಳಿಸ್ಯಾರೆ
ಅಪ್ಪನಿನಗ್ಯಾರು ಎದುರುಂಟು

ಅಪ್ಪಾನ ಗುಡಿಮುಂದೆ ಮತ್ತೇನು ಬೆಳೆದಾವು
ಸಣ್ಣರುದ್ರಾಕ್ಷಿ ಸರವೇ ಗಂಡೆಂಡಾರು
ಬಾಲಾನ ಬೇಡವರಿಗೆ ಕಡೆಯಿಲ್ಲ

ಅಣ್ಣಾನ ಗುಡಿಮುಂದೆ ಇನ್ನೇನು ಬೆಳೆದಾವೆ
ಸಣ್ಣಾ ರುದ್ರಾಕ್ಷಿ ಸರಬಾಗಿ ಗಂಡೆಂಡಾರು
ಬಾಲಾನ ಬೇಡವರಿಗೆ ಕಡೆಯಿಲ್ಲ

ಅಪ್ಪಾನಗುಡಿಮುಂದೆ ಸಣಮಕ್ಕಳು ತುಳಿಗೆಸರು
ನಾರೇರ ನೆರಿಗೆ ಉಡಲತ್ತಿ ಗಂಡೆಂಡಾರು
ಬಾಲಾನ ಬೇಡೋರೆ ಕಡಿಯಿಲ್ಲ

ಅಪ್ಪಾನ ಗುಡಿಮುಂದೆ ವೊಕ್ಕುದುಮೂಗಿನಕ್ಕಿ
ಕರ್ಪುರ ತುಂಬ್ಯಾರೆ ಗಿರಿಗೆಲ್ಲ ಅವರೇನಮ್ಮ
ರೊಕ್ಕಬೇಡ್ಯಾರೆ ಸಿಕರಕ್ಕೆ

ಅಯ್ಯಾನ ಗುಡಿಮುಂದೆ ಬಣ್ಣದ ಮೂಗಿನಕ್ಕಿ
ಕರ್ಪುರ ತುಂಬ್ಯಾರೆ ಗಿರಿಗೆಲ್ಲ ಅವರೇನಮ್ಮ
ವೊನ್ನ ಬೇಡ್ಯಾರೆ ಸಿಕರಕ್ಕೆ ಸ್ವಾಮಿ

ಆರೆಸಳಿನ ಕಟ್ಟಾಣಿ ಏರಿಸಿ ಕಟ್ಟೈತೆ
ವುಚ್ಚೈದ ಮುಂದೆ ಕಳಸಕ್ಕೆ ಅಕ್ಕನೀಲಮ್ಮ
ಅವುದೇನರಿ ಸ್ವಾಮಿ ಬನ್ನಿ

ಅತ್ತೆಸಳಿನ ಕಟ್ಟಾಣೆ ಎತ್ತರಿಸಿ ಕಟ್ಟೈತೆ
ತೇರೀನ ಮುಂದೆ ಕಳಸಾವೆ ಇಡಿದಿರುವಾರೆ
ತಾಯಿ ನಿಳಮ್ಮ ಅವುದೇಸ್ವಾಮಿ