ಸಣ್ಣಾದೊಂದೂಟ ಒಳ್ಳೆ ಮಾಡವನೆ ಎತ್ತಯ್ಯ
ಸಣ್ಣಾದೊಂದಿಳ್ಳೇವು ಧರಿಸಿದುನಣ್ಣಾ ವೋ

ಹಾವೀನ ಸೀಗಣ್ಣ ಸೇಳಿನ ಸೇಳಿ ಮಂಚ
ನಾಗಬೂಸುಣ್ಹುವೋ ತಲಿಗಿಂಬು ವೋ

ಕಲ್ಲೀನ ಸೀಗಂತೆ ಮುಳ್ಳೆ ಮುಳ್ಳೀನ ಮಂಚ
ಶೆಲ್ಲ್ಯಾರೆ ದಟ್ಟಿ ತೆಲಿಗಿಂಬು ವೋ

ಹತ್ತು ಸಾವಿರುದಂಬು ತೆಕ್ಕಿಗೆ ಸಾಸೀಕಂಡು
ಆರು ಸಾವಿರದಂಬು ತೋಳಿಗಿ ಸಾಸಿಕಂಡು
ಬೇವಿನ ಸುರನಾರಿ ಬಿಲ್ಲು ಬೆನ್ನಿಗೆ ಕಟ್ಟೀಕೊಂಡು
ಕೈಯಿಲಿ ಕತ್ತಿರಿ ಬಾಣ ನೆತ್ತಿಲಿ ನೆತ್ತುರು ಬಾಣ
ಸುರುನಾರಿ ಮರ್ಬಿಲ್ಲು ಸೂರಿದುನ ವದಿಯಂಬು
ಸೂಡಿಕಂಡ ಗನಗುರುವೆ ಮತ್ತೆ ನಿನ್ನೆತ್ತಯ್ಯ
ಒಕ್ಕುಳುವ್ವ ಹಾಸಿಕಂಡ ಒಕ್ಕುಳುವ್ವ ವದ್ದುಕಂಡ
ಮನಿಗಿದುನೋ ಗೌಡ ಮನಿಗಿದುನಣ್ಣಾ ವೋ

ಕಲ್ಲು ಕರುಗೋ ಹೊತ್ತಣ್ಣ
ಬೆಲ್ಲ ಮೇವೋ ಹೊತ್ತಣ್ಣ

ಹರಿದ್ಹೋಗೊ ಗಂಗಿ ಗೌರಿ
ನಿಂತು ನಿದ್ರೆ ಮಾಡವೊತ್ತು
ಕಲ್ಲು ಕರಗೋ ಹೊತ್ತಣ್ಣ
ಗೊಡ್ಡ ಗಾಳಿ ಬಟ್ಟಣ್ಣ ಮಾತು ನೋಡೋ

ಅಂಬೆರಾಯಿರಾಣೆ
ತುಂಬೆರಾಯಿರಾಣೆ
ಅಕ್ಕಮಾರಿ ನಿನ್ನಾಣೆ
ಶಿಕ್ಕಮಾರಿ ನಿನ್ನಾಣೆ
ದ್ಯಾವುರು ದೈಮಾರವ್ವನಾಣಂದಾ ಅವುನ ವೋ ಆಣಂದಾ ವೋ

ಅಂಬಂತ ಅರಿಸೀರಿ ಕೊಂಬೆತ್ತಿ ಕೂಗೀರಿ
ನಿಮ್ಮ ಮಕ್ಕಳಿಗೆ ನೀವೇ ಹಾಲೇ ಕುಡಿಸೀರೆಂದ

ತೆಪ್ಪೆ ನೀವ್ಹಾಕಿರಿ ಗ್ವಾತ ನೀವ್ಹೊಯ್ಯೀರಿ
ಆಣಾ ಕಟ್ಟಿದ ಕಾಣೊ ಬಟ್ಟಣ್ಣಾ ವೋ

ತೆಕ್ಕಗಡಿಗೇ ನೋಡು ಕೊಂಬಿಗೆ ತಗಲ್ಹಾಕಿಕಂಡು
ಮುಂದಮುಂದೆ ಗೊಡ್ಡು ಗಾಳಿ ಮತ್ತೇನೆ ಆವಾಗ
ಸಿಳ್ಳೆ ವೈದೇತಣ್ಣ ಸಿಟಿಗೆ ಆಕೇತಣ್ಣಾ
ಪಿಲಿಪಿರಿ ಸತ್ತೇ ವ್ಯಾಳಗರದೇತಣ್ಣಾ ವೋ

ಮುಂದ ಮುಂದೆ ಗೊಡ್ಡುಗಾಳಿ ಮತ್ತೇನೆ ಆವಾಗ
ಬಾಗಲ ಕಳ್ಳೇನೋಡು ಬಾಲಕ ತಗಲಿಸಿಕಂಡು
ಎಜ್ಜೆನ ಸವನ ಮಾಡಿಕಂಡ ಮತ್ತೇನೆ ಬಟ್ಟಣ್ಣ
ಹಿಂದ್ಹಿಂದೆ ಬಟ್ಟಣ್ಣ ಬರ್ತಾನಣ್ಣಾ ವೋ

ಅರೆ ಬೋರುನ ತಿಪ್ಪೇ ತರಿಯೇ
ಆಸೆ ಗಡ್ಡೆ ಈಸೆ ಗಡ್ಡೆ
ಸೋಸಿ ಅರಿಯಳ ಕಾಣೆ ಗಂಗಮ್ಮ ವೋ

ಆಸೆ ಗಡ್ಡೇ ನೋಡು ಈಸೆ ಗಡ್ಡೆ ನೋಡು
ಸೋಸಿ ಅರಿಯಾಳು ಕಾಣೋ ಗಂಗಮ್ಮ ವೋ

ಬಾರೆಬಾರೆ ಗಂಗಮ್ಮ
ಎತ್ತಯ್ಯನ ಎತ್ತಾವು
ಮೂಡಲ ಸೀಮೇಲಿಂದ
ಪಡವುಲು ಸೀಮೇಗೇನು
ಹೋಗುತಾವೋ ಗಂಗಮ್ಮ
ವಣಿಕೆ ಬಂಡೋಟ್ಹೊಳಿಯೆ ಬಿಡಬೇಕಂದ ವೋ

ಅತ್ತಲ ನೀರು ನೋಡು ಅತ್ತಲಾಗೆ ನಿಲ್ಲಾವು
ಇತ್ತಲ ನೀರು ನೋಡು ಇತ್ತಲಾಗೆ ನಿಲ್ಲಾವು
ನಡಿವೇನೆ ಗಂಗಮ್ಮ ಬಾಜೇನೆ ಬಿಡುತಾಳೆ
ಎತ್ತಯ್ಯನ ಎತ್ತಾವು ಆಸೆ ಗಡ್ಡಿಗ್ಹೋಗೋದು
ಬಾಗಲ ಕಳ್ಳೇ ನೋಡು ಬಟ್ಟಣ್ಣನ ಹೆಜ್ಜೇ ನೋಡು
ಎತ್ತಯ್ಯನ ಮಜ್ಜುಣುವೆ ಕರುವೇನೆ ಆದಾವು
ಗಂಗಮ್ಮಳಿಗೆ ಶಾಜ ಕೊಡುತರಣ್ಣಾ ವೋ

ತಪಗಾನ್ಹಳ್ಳಿ ತಾಗ ತಪ್ಪೆ ಆಕಿದುವಣ್ಣ
ಗಂಜಿಗುಂಟೇ ತಾಗೇನೆ ಗಂಜೇ ವಯ್ಯಿತಾವಂತೆ
ಬೋರುನ ತಿಪ್ಪೇತಾಗ ಬೋರೂನೆ ಸರಕಂಡು
ಅವರು ಮಕ್ಕಳಿಗೆ ಅವರೆ ಹಾಲೇ ಕುಡಿಸಿದುರಣ್ಣಾ ವೋ

ಅಲೆ ನಾಲಕ್ಕೆ ತಟ್ಟೆನೆ ಮಾಡವನೆ ಬಟ್ಟಣ್ಣ
ನಾಲಕ್ಕೇ ದಿಕ್ಕಿಗೆ ಹೊಡದವನಣ್ಣಾ ವೋ

ಗುತ್ತಿ ಗುಡಿಯೆಕ್ವಾಟೆ ಮೇದಕಂಡು ಎತ್ತಯ್ಯ
ಜೆನ್ನಿಗ್ಯಾಗಳ ನೀರು ಕುಡುದು ತಾಳೆ ಮರದ ಗಡ್ಡೀಗೆ
ತಾಳೆಮರದ ಗಡ್ಡೇಗೆ ತಾವು ಗೂಡಿನ ಪೇಂಟೇಗೆ
ತಳಕಿನ ಬೆಟ್ಟಾಕೆ ನೀವೆ ಬರಬೇಕಂದಾ ವೋ

ಸಂಡಲೂರು ಎರಿಯಾಗೆ ಬಿಳಿ ಜ್ವಾಳ ಮೇದಕಂಡು
ಜನ್ನಿಗ್ಯಾಗಳ ನೀರು ಕುಡುದು ತಾಳೆಮರದ ಗಡ್ಡೀಗೆ
ತಾವುಗೊಡಿಲಿ ಪೆಂಟೀಗೆ ಮತ್ತೇನೆ ಎತ್ತಯ್ಯ
ತಳಿಕಿನ ಬೆಟ್ಟಾಕೆ ನೀವೆ ಬರಬೇಕಂದಾ ವೋ

ಸುತ್ತಾ ಮುತ್ತಾ ನೋಡು ಹೊಡದವನೆ ಬಟ್ಟಣ್ಣ
ಅಣ್ಣಾ ತಂಗೀ ನೋಡು ಗೊಡ್ಡ ಗಾಳಿ ಯಾವಾಗ
ತಕ್ಕಿಗಡಿಗೆ ಹೊತ್ತುಕಂಡು ಮತ್ತೇನೆ ಆವಾಗ
ತಳಕಿನ ಬೆಟ್ಟಾಕ್ಕೋಗಿ ಮಲಗಿದುರಣ್ಣಾ ವೋ

ಮುಂಗೊಳಿ ಕೂಗೊದ್ಹೊತ್ತು ಒಳ್ಳೆ ಮೂಡಲು ಕೆಂಪೇರುವುದೇ
ಎದ್ದವನೆ ಎತ್ತಯ್ಯ ಮೈಗುದು ಗೌಡಾ ವೋ

ಹೇಳಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯ
ನಮ್ಮ ಎತ್ತುವಿನ ಸೆಬುದಾ ನೆಲಿಯಿಲ್ಲ ವೋ

ಆದಿನ್ನೇ ಹತ್ತಿ ಒಳ್ಳೆ ಅತ್ತಲಾಗಿ ನೋಡಂದಾರೇ
ಅಲ್ಲೇ ಗೋಲಿ ಗಜ್ಜುಗ ಆಡೇನಮ್ಮ ವೋ

ಈದಿನ್ನೆ ಹತ್ತಿ ಒಳ್ಳೆ ಇತ್ತಲಾಗೆ ನೋಡಂದಾರೇ
ಅಲ್ಲೇ ಗೋಲಿ ಗಜ್ಜುಗ ಆಡೋನಮ್ಮ ವೋ

ಹತ್ತೀಯ ಮರಗಾಳಿರೋ
ಇವ್ರ ಮುತ್ತೀನ ಸರಗಾಳಿರೋ
ನಮ್ಮ ಭಾವ ಎತ್ತಯ್ಯ
ನಾವೆದ್ದು ಬರುವ ಮರಗಳಿರೋ ಕಾಣೀರೋ ವೋ

ಹಾಲದಾ ಮರಗಳಿರೋ
ನಿಮ್ಮ ಕೊರಳಾಗಿರುವ ಹೂವ್ವಿನ ಸರಗೊಳ್ಳಿರೋ
ನಮ್ಮ ಭಾವ ಎತ್ತಯ್ಯನ
ನಾವೆದ್ದೆ ಬರುವ ಮರಗಳಿರೋ ಕಾಣಿರೋ ವೋ

ಆದಿನ್ನೇ ಹತ್ತಿ ಒಳ್ಳೆ ಅತ್ತಲಾಗೆ ನೋಡಂದಾರೇ
ಅಲ್ಲೇ ಗೋಲಿ ಗಜ್ಜುಗಾಡೋನಮ್ಮ ವೋ

ಅತ್ತಿಮರ ಹಾಲುದು ಮರ
ಕಟ್ಟೆಕಿರು ನೆಲ್ಲಿಮರ
ಹುಣಸೇಮರಾ ನೋಡು
ಬೇವಿನಮರಾ ನೋಡು

ಬೇರೀಗೆದ್ದು ಬಂದು
ಎತ್ತಯ್ಯಗೆ ಸಾಕುಸಿ ನುಡಿಯೊವಮ್ಮಾ ವೋ

ಮೂಡಲ ಸೀಮೀಗೇನೆ ಹೋಗಲಿಲ್ಲ ಎತ್ತಯ್ಯ
ಪಡುವುಲು ಸೀಮೀಗೇನೆ ಹೋಗಯ್ಯದಾವೇ ನೋಡು
ನಿಮ್ಮ ಸತ್ತೇವೆ ಕೆಡುತಾವೆ ಅಂದವನಣ್ಣಾ ವೋ

ನಿಮ್ಮ ಸತ್ತೆವು ಕೆಡುತಾವಂತ ಹೇಳಿದುನೆ ಕಾಣಯ್ಯ
ಬಾರಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯ

ಅಲ್ಲೆ ಬ್ಯಾಡಾರ‍್ಹುಡುಗ ಗೋಲೀಯಾಡೂತಾನೆ
ಅವನನ್ನ ನೋಡಿದುನ್ಹಂಗ ಕೇಳಿ ಬಾ ಹೋಗಮ್ಮಾ
ಏನಲೆ ಬ್ಯಾಡಾರ‍್ಹುಡುಗ ಮತ್ತೇನೇಯೋ ನೋಡು
ನಮ್ಮೇತ್ತಾವಿನ ದಾರಿ ನೋಡಿದಂದಾ ವೋ

ಮೀದ್ದಾವುಲು ದಾವಾನೆ ಸೂಪುಸುನಾಕೇ ಗೊಲ್ಲ
ಮಿಯಪ್ಪುತುವೆ ಪೆಟ್ಟಂಟಿವ್ರಂದ ಬ್ಯಾಡಾರ‍್ಹುಡುಗ ವೋ

ಭಾವ ಭಾವ ನೋಡು ಮತ್ತೇನೆ ಭಾವಯ್ಯ
ಎದ್ದಾವುಲು ದಾವಾನೆ ಸೂಪುಸುನಾಕೆ ಗೊಲ್ಲ
ಮಿಯಪ್ಪುತುವೆ ಪೆಟ್ಟಿಂಟಿವ್ರಂದ ಬ್ಯಾಡಾರ‍್ಹುಡುಗಾ ವೋ

ಅಂಗ್ಯಲ್ಲ ವಲಿಗಾನೆ ಹಿಂಗ್ಯಲ್ಲ ವಲಿಗಾನೆ
ಎಳದೀನಿ ಗುಂಡಿಲಿ ಸಂದೀಲಿ ಬಿದೈತೆ
ಮೂಗಿ ಮಣಕ ಬಿದ್ದೈತೆ ಮುದಿಯಾವು ಬಿದ್ದೈತೆ
ಸೆರಮ ಬಿಡಿಸಿ ಕೊಡು ಬಾರಂದ ಕರದು ಹೋಗಮ್ಮ ವೋ

ಬಾರಲೇ ಬ್ಯಾಡಾರ‍್ಹುಡುಗ ಮತ್ತೆ ಹೊನ್ನೂರಪ್ಪ
ಮುದಿಮಣಕ ಸತ್ತೈತೆ ಮುದಿಯಾವು ಸತ್ತೈತೆ
ಎಳದೀನಿ ಗುಂಡೀಲಿ ಸಂದೀಲಿ ಬಿದ್ದೈತೆ
ಸೆರಮ ಬಿಡಿಸಿ ಕೋಡು ಬಾರೊ ಬ್ಯಾಡಾರ‍್ಹುಡುಗಾ ವೋ

ಯಾಡಸಚ್ಚೇದೆ ಮಾ ಅಯ್ಯ ಯಾಡ ಸಚ್ಚೇದೆ ಮಾತಂಡ್ರಿ
ಸ್ವಾರೇನೆ ತಕ್ಕಂಡು ಸೂರೀನೆ ತಕ್ಕಂಡು
ಓಡೋಡಿ ಬರುತಾನಯ್ಯ ಬ್ಯಾಡಾರ‍್ಹುಡುಗಾ ವೋ

ಎಳದನಿಗುಂಡೀಲಿ ಹತ್ತಿಸವರೆ ಕಾಣಯ್ಯ
ದೊಬ್ಬಯ್ಯ ಮಲ್ಲಯ್ಯ ಬೀಳಂಗ ವೋ

ಅದ್ವಾನ ಪೀಣೀಗಿ ಸೆಯ್ಯದ್ದು ಮಾಯಯ್ಯ
ನಾಯಾಡಲು ಬಿಡ್ಲು ಮಕಮು ಸೂಡ ಕುಣ್ಣಟ್ಲ ಸೂಡು
ಎದ್ದಾವುಲುದಾವಾನೆ ಸುಪುಸ್ತಾನಂದ ವೋ

ಕೆಳಿಯಾಕೆ ಇಳಿಸಿದುರು ಮತ್ತೇನೆ ಆವಾಗ
ಮೀ ಎದ್ದಾವುಲು ದಾವಾನೆ ಸುಪುಸುನಾಕೆ ಗೊಲ್ಲ
ಮೀಯಪ್ಪುತುವೆ ಪೆಟ್ಟಿಂಟಿವ್ರಂದ ಬ್ಯಾಡಾರ‍್ಹುಡುಗಾ ವೋ

ಅಂಗ್ಯಲ್ಲ ವಲಿಗಾನ ಹಿಂಗೈಲ್ಲ ವಲಿಗಾನೆ
ಕರಿಯೇನೆ ಕಂಬೂಳಿ ಗದ್ದೀಗೆ ಹಾಸಯ್ಯ
ಮೂಂಟೇನೆ ಕಟ್ಟಯ್ಯ ವಲಿಗಾನೆ ಮಲ್ಲಯ್ಯ
ಬೋರನ ತೀಪ್ಪೆ ತರಿಗೆ ಹೊತ್ತುಕೊಂಡನ್ನಾ ಬಂದಿ
ಕೆರಿಗುಂಟ ಹುಳ್ಳಿ ಬಿಡೋನಂದಾ ವೋ

ಮೂಟೇನೇ ಕಟ್ಟವರೆ ಮತ್ತೇನೆ ಆವಾಗ
ಬೋರುನೆ ತಿಪ್ಪೇ ತರಿಗೆ ಹೊತ್ತುಕಂಡನ್ನ ಹೋಗಿ
ಉಳ್ಳಿ ಬಿಡಬೇಕಂದ್ರ
ಅದ್ವಾನುದ ಪೀಣಿಗಿ ಸೆಯದ್ದು ಮಾಯಯ್ಯ
ನಾ ಯಾಡುಲು ಬಿಡ್ಡುಲು ಮಕಮ ಸೂಡಕುಣ್ಣಟ್ಲ ಸೂಡು
ಎದ್ದಾವುಲು ದಾವ ಸೂಪುಸ್ತಾನಂದಾ ವೋ

ಮೂಟೇನೆ ಬಿಚ್ಚಿದುರು ಮತ್ತೇನೆ ಆವಾಗ
ಬೋರನು ತಿಪ್ಪೇ ತರಿಗೆ ಆಶೆಗಡ್ಡೆ ಈಸೆಗಡ್ಡೆ
ಸೋಸಿ ಅರಿಯಳು ಕಾಣೋ ಗಂಗಮ್ಮ ವೋ

ಅರೆ ಮೂರು ಪೆಟ್ಟೇ ಮುಣಮುಣಗಿ
ಎದ್ದಾನು ಬ್ಯಾಡಾರುಡುಗ
ಬಾಗಲ ಕಳ್ಳೇ ನೋಡು ಬಟ್ಟಣ್ಣನ್ಹೆಜ್ಜೆ ನೋಡು
ಎತ್ತಯ್ಯನ ಮಜ್ಜುಣವೆ ಕರುವೇನೆ ತಕ್ಕಂಡು
ಬಯಿಲಿಗೆ ಬರುತಾನಣ್ಣ ಬ್ಯಾಡಾರ‍್ಹುಡುಗ ವೋ
ಬಾರಲೆ ಬ್ಯಾಡಾರ‍್ಹುಡುಗ ಮತ್ತೇ ಹೊನ್ನೂರಪ್ಪ
ಸೂರಿದು ಮುಣಿಗಿದುತಾಕೆ ಶಂದುರ ಹುಟ್ಟಿದುತಾಕೆ
ಏನು ವರವೆ ಕೇಳುತೀಯೆ ಕೇಳಿದ್ದೆವರವೆ ಕೊಡತೀನಣ್ಣ ವೋ

ಏಮಿಸ್ತೆ ಏಮಿ ಪೇರುಂಟದಿ ಮಾಯಯ್ಯ
ಮಾಕುಲಮೇನೆ ಸೂಸ್ತೆ ಮಿಂಡ್ಲಿಕಿ ಪುಟ್ಟಿನ ಕುಲುಮು
ಮಲ್ಲೆನುಗ ಪಿಲಿಪಂಜೆ ಪಿನ್ನಿಸುತ್ತೂರ ಪಿಲ್ಲಾಲು
ನೀರಿಗಂಟೆ ತಾನಾಮು ಈ ಗೌಡಾ ವೋ

ಸೂರಿದು ಹುಟ್ಟೀದುತಾಕೆ ಶಂದುರು ಮುಣಿಗಿದುತಾಕೆ
ಎಂಥ ವರವೆ ಕೇಳಿದಲೆ ಮತ್ತೆ ಬ್ಯಾಡಾರ‍್ಹುಡುಗ
ಕೊಟ್ಟೇ ಹೋಗಯ್ಯ ನಿಮ್ಮರಮನಿಯೇ ವೋ

ನೀರಿಗಂಟೆ ತಾನಾಮು ತಕ್ಕಂಡು ಬ್ಯಾಡಾರ‍್ಹುಡುಗ
ಅವರರಮನಿಗೆ ಅವನೇ ಬರುತಾನಣ್ಣಾ ವೋ

ಬಾರೆಬಾರೇ ಗಂಗಮ್ಮ
ಎತ್ತಯ್ಯನ ಎತ್ತಾವು
ಎತ್ಯಯ್ಯಾನೆ ನೋಡು
ಆಶೆಗಡ್ಡೇ ಹೋಗಬೇಕು
ಒಣಿಕೆ ಬಂಟೋಟೋಳಿಯೆ ಬಿಡಬೇಕಂದಾ ವೋ

ಆಶೇ ಗಡ್ಡೀಗೇನು ಹೋಗಬೇಕು ಅಂದಾರೆ
ಗಂಗಮ್ಮುನ ಸಾಜ ಕೊಡಬೇಕಂದ ವೋ

ನೆನಿಯಕ್ಕಿ ನೆನುಗಡಲೆ ಕಡದೇಬೇ ಕಬ್ಬಿನ ಕೋಲು
ಸುಲುದು ತೆಂಗಿನ ಕಾಯಿ ಏದೆಲಿಯೆ ಐದಡಿಕೆ
ಐದೇ ಅಂಗೂದಾರ ಮತ್ತೇನೆ ಆವಾಗ
ಗಂಗಮ್ಮನ ಸಾಜಾ ಕೊಡುತಾನಣ್ಣಾ ವೋ

ಗಂಗಮ್ಮನ ಸಾಜಾನೆ ಕೊಡುತಾನೆ ಎತ್ತಯ್ಯ
ಅತ್ತುಲು ನೀರು ನೋಡ ಅತ್ತುಲುಗೆ ನಿನ್ನಾವು
ಇತ್ತುಲು ನೀರು ನೋಡು ಇತ್ತುಲಾಗೆ ನಿಮ್ಮಾವು
ನಡಿವೇನೆ ಗಂಗಮ್ಮ ಬಾಜೇನೆ ಬಿಡುತಾಳೆ
ಆಸೇ ಗಡ್ಡೀಗಾಗ ಬರುತಾರಣ್ಣಾ ವೋ

ಬಾವ ಬಾ ಮೈದುನುರು ಹೋಗುತಾರೆಯೆ ನೋಡು
ಸೊಂಡುಲೂರು ಎರಿಯಾಗೆ ಬಿಳುಜ್ವಾಳುದ ಸೊಪ್ಪ್ಯಾಗೆ
ಎರಡ್ಹೋರಿ ಕಾಡುತಪ್ಪಿ ಮೇಯೋವಮ್ಮಾ ವೋ

ಬಾರಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯೋ
ನಮ್ಮೆರಡ್ಹೋರಿಯೆ ನೋಡು ನಮ್ಮೂವಾಗಿದಾವೆ
ಕೂಗಯ್ಯ ವಲಿಗಾನೆ ಬರುಲಂದಾ ವೋ

ಅಲೆ ಎರಡ್ಹೋರೆ ಆವಾಗ
ಕೂಗಿದಾಗ ಮಲ್ಲಯ್ಯ
ಓಡೋಡಿ ಎರಡ್ಹೋರಿ ಬರುತಾವಮ್ಮಾ ವೋ

ಅಲ್ಲೇ ಬಾವಮೈದುನುರು ಎರಡ್ಹೋರಿ ವಡಕಂಡು
ಹೋಗುತಾರೆ ಹಿಂದೆಮುಂದೆ
ಆಲೋಜಿ ಸಾವೂಕಾರ

ಅವರೀಗೆ ಎದರೀಗೆ ಬರುತಾನಣ್ಣಾ ವೋ

ಏನಯ್ಯಾ ಎತ್ತಿನಗೌಡ ಎತ್ತಯ್ಯ
ಎರಡೋರಿ ನಿನ್ನವುಕೆ ಬೆಲೆ ಹೇಳಯ್ಯ ವೋ

ಎತ್ತಿನಗೌಡ ಎತ್ತಯ್ಯ ಆಲೋಜಿ ಸಾವುಕಾರ
ಬೆಲಿಯೆ ಹೇಳತಾನೋ ಮೈಗುದು ಗೌಡಾ ವೋ

ತೆಲಿಗೀಲಿ ಹೇಳಾತಿ ಕನ್ನುಡುವೆ ಹೇಳಾಲ
ಕನ್ನುಡುವೆ ಹೇಳಿದುರೆ ನನ್ನಿಗೆ ತಿಳಿಯೋದಿಲ್ಲ
ತೆಲುಗೆ ಹೇಳಬೇಕೋ ಮೈಗುದು ಗೌಡಾ ವೋ

ಎತ್ತಿನಗೌಡ ಎತ್ತಯ್ಯ ಬೆಲಿಯೇ ಹೇಳುತಾನಣ್ಣ
ಮುಂದ್ರಕಾಡ್ಲುಕಿ ಮುಪ್ಪಯ್ಯಿ ಎನಿಕಿಕಾಡ್ಲುಕಿ ಎನುಬೈಯ್ಯಿ
ತ್ವಾಕೂಕಿ ತೊಂಬಯ್ಯ ನೆಡ್ಡೀಕಿ ಡೆಬ್ಬಯ್ಯಿ
ಕೊಂಬುಲುಕೇನೆ ನೂರು ಬೆಲಿಮುಗಿತೇ ಸೆಟ್ಟಿ ಬಿಲಿಮುಗಿತಣ್ಣಾ ವೋ

ಅಲೆ ಲೆಕ್ಕಾವಿಲ್ಲಾದಣುವೆ ಗಕ್ಕುನೆ ಸುರಿವೈದಾನೆ
ವಡಿಯನ ಗಂಟನೋಡು ಬಂದೈತೆ ಸಾವುಕಾರ
ನಮ್ಮೆಂಟಾಣಿ ಮಾತ್ರ ಕೊಡಬೇಕಂದಾ ವೋ

ಲೆಕ್ಕಾವಿಲ್ಲಾದ್ಹಣುವೆ ಗಕ್ಕುನ ಸುರಿವೈದೀನಿ
ಎಂಟಾಣಿ ನಾನು ಕೊಡುಲಾರೆಂದಾ ವೋ
ವಡಿಯಿನ ಗಂಟೀನಾಗೆ ಕಡಿಮಾದುರು ಶಿಂತಿಲ್ಲ
ನಮ್ಮೆಂಟಾಣಿ ನಾನು ಬಿಡುಲಾರೆಂದಾ ವೋ

ಕಾಲುರಿ ದುಡ್ಡುನೋಡು ಎಂಟಾಣಿ ಅಂದವನೆ
ಲೆಕ್ಕಾವಿಲ್ಲಾದಣುಪಿ ಗಕ್ಕನು ಸುರಿವೈದೀನಿ
ಎಂಟಾಣಿ ನಾನೇ ಕೊಡುಲಾರೆಂದಾ ವೋ

ಅಲೆ ಕೊಡುದಿದ್ದರೆ ಶಿಂತಿಲ್ಲ ಅಂದವನೆ ಎತ್ತಯ್ಯ
ಹಗ್ಗ ಬೀಸವನಣ್ಣ ತೆಕ್ಕೆ ಹಾಕಿದುನಣ್ಣ
ಒಂದೇಣತ್ತೀಗೆ ಒಂದೇಣಿಳಿಯತ್ತೀಗೆ
ಎರಡೋರಿ ಹುರ‍್ಲು ಬಿದ್ದು ಸಾಯಿಲಂದ ಎತ್ತಯ್ಯ
ಎರಡೋರಿ ಆವಾಗ ವಡುಕೋಡುತಾವಣ್ಣಾ ವೋ

ಒಂದೇಣತ್ತೋದಂತೆ ಒಂದೇಣಿಳಿಯೋವಣ್ಣ
ಎರಡೋರಿ ಹುರ‍್ಲುಬಿದ್ದು ಸಾಯೋವಣ್ಣ ವೋ

ಅಲೆಬಾರಯ್ಯ ಎಲೆ ಗೌಡ
ಎತ್ತಿನಗೌಡೆತ್ತಯ್ಯ

ನಿಮ್ಮೆಂಟಾಣಿ ಕೊಡತೀನಿ
ನಮ್ಮೆರಡ್ಹೋರಿ ಎಬ್ಬಿಸಿ ಕೊಡಬೇಂಕದಾ ವೋ

ಎಂಟಾಣಿ ಕೊಡುತಾನೆ
ಆಲೋಜಿ ಸಾವುಕಾರ
ಆವುಕಾಯೋ ನಾಗುವಳ್ಳಿ
ಬೆತ್ತಾವೆ ತಕ್ಕಂಡು
ಬಡುದು ಎರಡ್ಹೋರಿ ಎಬ್ಬುಸೋನಣ್ಣಾ ವೋ

ಎತ್ತಿನ ಗೌಡತ್ಯಯ್ಯ ಆಲೋಜಿ ಸಾವುಕಾರ
ಅಂಜು ಮುತ್ತೀನಳ್ಳೆ ಅಂಬೊ ಊರೊಂದೆ ಕಟ್ಟಿಸಿದುರಣ್ಣ
ಸ್ವಾಮಾರುದು ಸಂತೇ ಮೆರಿಸಿದುರಣ್ಣಾ ವೋ

ಸ್ವಾಮಾರ ಸಂತೇನೆ ಮೆರಿಸವರೆ ಆವಾಗ
ಅಣವಿನ ಕಾಯೋಟು ದೂಪ ಅಡ್ಡನ ದೂಪಾನೊಯ್ದು
ಮೂರೇನ ಕಣ್ಣಿನದು ಕರಿಯಾನೆ ಸಿಪ್ಪಿನುದು
ದೃಷ್ಠಿಯನ್ನಾ ಕಾಯಿ ತಕ್ಕಂಡು ನಿನ್ನೆತ್ತಯ್ಯ
ತಳಕಿನ ಬೆಟ್ಟಾಕಾಗ ಬರುತಾನಣ್ಣಾ ವೋ

ತಳಕಿನ ಬೆಟ್ಟಾಕೇನೆ ಬಂದವನೆ ಎತ್ತಯ್ಯ
ಗೊಡ್ಡ ಗಾಳೀ ಬಟ್ಟಣ್ಣ
ತಳಕಿನ ಬೆಟ್ಟದ ಮ್ಯಾಲೆ
ಅಣ್ಣಾ ತಂಗಿ ಅಲ್ಲಿ ಮನಿಗವರಣ್ಣಾ ವೋ

ಮದ್ದೀಗೇರಿ ಕಂಬುಳಿ ಒಳ್ಳೆ ತಿದ್ದೀ ಗದ್ದಿಗಿ ಮಾಡಿ
ಅಡ್ಡಾಬೀಳುತಾನೋ ಮೈಗುದು ಗೌಡಾ ವೋ

ಮೂಡಾಲಡ್ಡು ಬಿದ್ದಾರೆ ಪಡುವುಲು ಮಕುನಾಗೋದು
ಟೆಂಕಾಲಡ್ಡು ಬಿದ್ದಾರೆ ಬೆಡಗುಲು ಮಕುನಾಗೋದು
ಎತ್ತೀನ ಮನುಯಾವಾಗ ತಿರುವಿದುನಣ್ಣಾ ವೋ

ಅಲ್ಲೇ ಅಡಿವಿನ ಕಾಯಿ ಅಡಿದೂಪ
ಅಡ್ಡಾವ ದೂಪಾಸುಟ್ಟು
ಮೂರೇನೆ ಕಣ್ಣಿನುದು

ಕರಿಯಾನೆ ಸಿಪ್ಪಿನುದು
ದೃಷಿಯನ್ನ ಕಾಯೆ
ವಡದವನೇ ಎತ್ತಯ್ಯ
ಎತ್ತಿನ ಮನುವಾಗ ತಿರುವಿದುನಣ್ಣಾ ವೋ

ಎತ್ತಾವು ಎತ್ತಲಾಗೆ ಹೋದಾವಮುತ ಕೇಳಿದುರೆ
ಸುತ್ತಾ ಮುತ್ತು ಹೋದಾವು ಅತ್ತಿ ಬರುತಾವೆತ್ತಯ್ಯ
ಸೊಂಡುಲೂರಿಗೆ ಹೋದಾವೆ ಬರುಲಿಲ್ಲಾ ವೋ

ಬಿಟ್ಟಕೈಯಿ ಬೀಸಿದ್ಹಂಗೆ ಮತ್ತೇನೆ ಎತ್ತಯ್ಯ
ಸೊಂಡುಲೂರಿಗೆ ಆಗ ಬರುತಾನಣ್ಣಾ ವೋ

ಸೊಂಡಲೂರು ಬೋಮ್ಮಯ್ಯ ಹಿಂದುಲಾವು ಮುಂದಲಾವು
ಎತ್ತಾವೆ ವಡಕಂಡ ಮತ್ತೇನೆ ಬೊಮ್ಮಯ್ಯ
ನೆಡಿವೆಕುಂತಾನೋ ಬೊಮ್ಮಯ್ಯ ವೋ

ನಿನ್ನಾನೆ ಸೀಮೀಗೆ ನೀನೊಬ್ಬ ಶೆರಣಯ್ಯ
ನನ್ನಾನೆ ಸೀಮೀಗೆ ನಾನು ಒಬ್ಬ ಶೆರಣಯ್ಯ
ನನ್ನ ಸೀಮಿಗೆ ನೋಡು ನೀನ್ನಾವಾದರು ಬರಬವುದು
ಇದಕ್ಕೆಲ್ಲೋ ಕರ್ತ್ತೋರು ಮತ್ತೇನೆ ಎತ್ತಯ್ಯ
ನಾನು ನೀನು ಕಲತು ಮತ್ತೇನೆ ಎತ್ತಯ್ಯ
ಸಣ್ಣಾದೊಂದು ನ್ಯಾಯ ಮಾಡಬೇಕಂದ ವೋ