ಅಕ್ಕೀ ಮಕ್ವದ್ರ ಕೈಲೀsss ಲಕ್ಕೀss ತೊಳುಕೆ ಕೊಟ್ಟಿs
ಮುಕ್ಕುತೆ ಕುಂತದ್ಯೇsss ವಲಿಮುಂದೇs || ಅಣ್ಣಯ್ಯಾsss
ಬೆಕ್ಕಂssದಿ ಲ್ಹೊಡುದಾsss ಮಡದೀssಯಾssss || ||೧೪೩||
ಬೇಸರಿಯಾಯ್ತಂದೇss ಅಕ್ಕsನs ಮನಿಗ್ಹೋದೇss
ಅಕು ಕೊಟ್ಟಳ್ ಉಡುಕಾsss ಕೊsಡssಗಡುಗೀs
ಅಕು ಕೊಟ್ಟಾ ಕೊಡುಗಡಗೀs ಅಂಗಳದಲ್ ಇಟ್ಟೀಕೀss
ಅಣ್ಣಾ ಈಸ್ವರನಾsss ಮsನಿಗ್ಹೋದೇss ||೧೪೪||
ಅಟದೋರೇ ಬರುವಾಗೇs ಇಟದೋರೇ ಕಂಡಾsನೂs
ವಳಗಿದ್ದss ಮಡುದೀsss ಕssರೂsದಾನೇ
ವಳಗಿದ್ದss ಮಡುದೀsss ಕರುದೀ ಯೇನಂಬಾನೇs ?
“ಬಿಶಲಲಿ ತಂಗ್ಯಮ್ಮಾsss ಬsರೂssವssದೂsss ||೧೪೫||
ಬಿಶಲಲಿ ತಂಗ್ಯಮ್ಮಾss ಬರುವಳು ಮಡದೀ, ಕೇಳೂs
ಪಾದಾಕೇ ನೀರಾsss ಕುsಡೂs ಬ್ಯೇಗೇss || ಮಡ್ಡಿ, ಕೇಳೇss
ಆದಾದ ಬಣ್ಣಿಗಳಾss ಉsಣುಲ್ಹಾsಕೂss ||೧೪೬||
“ಆದಾದ ಬಣ್ಣಿಗಳಾss ಆಡುಕ್ಹೋದ ಮಗ ಉಂಡಾs
ಕಾದಾs ನೀರಿಗ್ ಅಕ್ಕೀsss ಮsಡುಗಾssನೇss”
“ಪಾಪಗೆಟ್ ಅಪ್ಪನ ಮನ್ಗೇss ಯಾಕು ಬಂದೇs ತಂಗಮ್ಮಾs,” ||೧೪೭||
ರಾಕsಸ್ತಿದ್ದವಳೇssss ಮsನಿsಯಲ್ಲೀss || ತಂಗಮ್ಮs,
ಶಶಿತೋಟsಲ್ಲೀsss ತಿರsಗ್ಹೋಗೂs || ತಂಗಮ್ಮs,
ರಸಬಾsಳೀ ಹಣ್ಣಾssss ಮಿssಲsದ್ಹೋಗೂsss ||೧೪೮||
ಅಕsಸಣ್ಣ ವಳ್ಳಕೇss ಮುತು ಸಣ್ಣ ಕೊರುಳಿಗೇss
ನೆsವಳ ಸಣ್ಣssss ನಡುವೀಗೆ || ತಮ್ಮಯ್ಯನs
ಮಡುದೀs ಸಣ್ಣ ಮನ್ಯs ಕೆಲುಸಕ್ಕೇsss || ||೧೪೯||
ಉಂಡಾs ತೇಗಲ್ಲಾsss ಉಣದೀದ್ದಾs ತೇಗಲ್ಲಾsss
ಬಂಡೀsಯ ತೇಗೂsss ಬಲುತೇಗೂs || ಗಂಡನ ತಂಗೀs
ಉಂಡಾಳಂದ್ ಹೇsಳೀsss ಹಳುsದsಳೇsss ||೧೫೦||
ಕೊಳಕೂss ಬಾಳಿಹಣ್ಣಾss ಗಿವಚೀs ಪಾಯಸ ಮಾಡೀs
ಸಂsಸಾರ ಹೇಸೀsss (ಲ್ಹೇಸೀss) ಮನಿ ಹೇಸೀss || ಲತ್ತೂಗೇs,
ಕೊಳಕೂಲಟ್ಟೀssದೇsss ಲಡಗೀssಯಾsss|| ||೧೫೧||
ಪುಂಡಗಾರತ್ತೂಗೆss, ತೊಂಡಿಗೆ ನೀರ್ ಹೊವ್ವಾssಗೇss
ದಂಡೂsಗೀ ಮುರದೀsss ಕೊಡ ಜರದೀssss || ಅತ್ತೂಗೇss,
ಅಣ್ಣss ಬವ್ವsನೇsss ಮನಿಗ್ಹೋಗೂsss || ||೧೫೨||
ಕೋಟಿ ಮೇನಿನಾsss ಮೋಟು ಮಾಯ್ನಮರಾsss
ಯಾಕೇss ನಿನ ಸುಸಲೂsss ಅಡಗಿತೇsss ? || ಅತ್ತೂಗೇss,
ಬಲ್ಲಾsದಾರ್ಹೇಳೆsss ಅರ್ತಾವಾssss || ||೧೫೩||
ವಂದ್ವೊಂದ್ ಹೇಳಬೇಡಾsss ಸಂದೀಸೀ ನಿಲಬೇಡಾsss
ಬಂಡಾsಗಬೇಡಾsss ನನ ಕೈಲೀsss || ಅತ್ತೂsಗೇss,
ಮುಂದೂsಲೀs ತಟ್ಟೀsss ಯಳತರವೇssss || ||೧೫೪||
ವಳ್ಳೊಳ್ಳೆ ಮರಕೇsss ಯೆಲ್ಲಿದ್ಯೆ ಕಾಡ್ಯೇರೀss ?
ನೆಲ್ಲೀಕಾಯ್ನಂತಾsss ಪುಟವೇರೀss || ನನ್ನಣ್ಣಗೇss
ಯೆಲ್ಲಿತ್ತೇs ಗೋಡಾss ಮೊಕದೋಳುsss ? || ||೧೫೫||
ಯಲ್ಲರ್ ಮುಡಿದರೇ ಜಾಜಿ ಜೂಜಿಯಾss
ನಮ್ಮತ್ತುಗ್ ಮುಡ್ದದೇ ಕರಡದ್ ಪಿಂಡಿಯಾss ||
ಯಲ್ಲರ್ ಚೆಚ್ಚರೇss ಬಲಪೂತ್ರನಾsss
ನಮ್ಮತ್ತಿಗ್ ಬೆಚ್ಚದೇsss ನಾಯಿ ಮರಿಗಳಾsss || ||೧೫೬||
“ಕಕಿಗಿಂತಾss ಕರಿಯಾsಳುss ಚೂಜಿಗಿಂತಾss ಸಪುರಾsಳೂss
ಯೆನು ಕಂಡೀss ತಮ್ಮಾsss, ಮರುಳಾದೇs ? || “ಲಕ್ಕಮ್ಮಾss,
ಇಸ್ತsರ ಕಂಡೀsss ಮರುಳಾsದೇss” || ||೧೫೭||
ಹರುಗೀs ಸೊಪ್ಪಿಗೇsss ಹಲುವಂಗದ ಮೂದಲಿss
ಸಾವಿರ ಮೂsದುಲಿsss ಕೆಸುವಿಗೆss || ನಮ್ಮsನಿs
ಅತ್ತೂಗೀss ಮೂದುಲೀsss ಲನುದಿನೇssss || ||೧೫೮||
ಕತ್ತಿಲಿ ಕಡ್ದ ಗಾಯಾsss ಯೆಂದೀಗೂs ಮಾsಣsವೇss
ಕೆಟ್ಟ ನೇssಲುಗೀssss ಹೊಲುತೀಯೇss || ಹೇಳಿದ ಮಾತೂss
ಯೆಣ್ಣಿದ್ರೇss ಮನವೇsss ಉರವssದೂsss ||೧೫೯||
ಹಾವಿಸ ಬಿದ್ದರೇsss ನೀರುss ಕೆಡುವದೇನೇs ?
ಚಾಡಿಲಿ ಚಾವುಡ್ಯೇssss ಕೆಡ್ವssದೂss || ತಮ್ಮಯ್ಯನಾss
ಚೆನ್ನದಂತಾss ಮನಸೂsss ಮುರವssದೂsss || ||೧೬೦||
ಜಗಳಗ್ತ್ಯಂತೀsss ಜಗವೆಲ್ಲಾss ನಾs ಬಲ್ಲೇss
ಮಗನಾss ತೊಟ್ಲಲ್ಲೀsss ಮರುಗೀಸೂss || ಅತ್ತೂಗೇss,
ಜಗ್ಳಾsಡುವ ಬಾರೇsss ಜಗುಲೀಗೇsss ||೧೬೧||
ಮದ್ಯs ಮಡುರೂsss ಮಾತು ಕೇಳೋ ತಮ್ಮssಯ್ಯs;
ದಿಂಬೂs ದಿಪುದಲ್ಲೀsss ವರು ನೋಡೋs || ಮಾssಡಿದ್ ಹೆಣ್ಣುs
ಸೂಲ್ಯsಮ್ನsಕಿಂದೂsss ಚೆಲುವಿಯೋsss || ||೧೬೨||
“ಯಾವ ಕಾರ್ಯಕಿಂದೂss ದ್ಯೇವರ ಕಾರ್ಯ ಮೇಲೂsss
ಕಾವುಲುಗೀs ರೊಟ್ಟೀsss ತಿರಿ ಬಾಳುss || ಮಡುದೀ, ಕೇsಳೇs,
ಕಾವುಲುಗೇss ಬಂಡೀssss ತರಬೇಕುss” ||೧೬೩||
“ದೊಡ್ಡss ಮುಂಡೇಸದವ್ರೂss ಕೋಲೂsನ್ಯೇವಳದವರೂss
ಕಾವುಲಗೀ ಬಂಡೀsss ಕೊಡಬೇಕುsss” || ||೧೬೪||
“ಕತ್ತೂದೂs ಆs ಬಂಡೀsss ಮುರ್ವೂsದೂss ಆs ಬಂಡೀss
ಕಾವಲಗೀ ಬಂಡೀssss ಕೊಡನಾರೇsss ” ||
“ಯಣ್ಣೀಲೀs ಉದ್ದೂವೇss ಬೆಣ್ಣೀಲೀss ಬಳಗೂವೇss
ತಣ್ಣಗಾss ಬಂಡೀsss ಮಡಗೂssವೇsss ” || ||೧೬೫||
“ದೊಡ್ಡ ಮುಂಡಸ್ದವ್ನೇss, ಕೋಲೂsನ್ಯೇವಳ್ದವ್ನೇss,
ನಿಮ್ ತಂಗೀss ಕಾವಲಗೀss ಕೊಡನಂತೂsss” || ||೧೬೬||
“ಕೊಂಬಾರ ಮನಿಗ್ ಹೋಗ್ಬೇಕುsss ಹೊಸಬಂಡೀss ತರಬೇಕೂss
ಬಿಸ್ಯs ದೋಸೀಯಾsss ಯೆರಿಬೇಕೂ || ಮಡುದಿ ಕೇsಳೇs,
ಹಲಗಾಯೊಡುದ್ ಹಾಲಾssss ತೆಗಬೇಕೂss || ಮಡುದಿ ಕೇಳೇs,
ವಡ್ನ ಹುಟ್ದ ತಂಗೀsss ಕರಿಬೇಕುssss” || ||೧೬೭||
“ಕುಂಬರ ಮನಿಗೋಗೀssವೇss ಹೊಸ ಬಂಡೀss ತಂದೀವೇss
ಬಿಸ್ಯ ದೋಸೀಯಾsss ಯೆರುದೀವೇss || ಅತ್ತಿಗೇss,
ಹಳಗಾಯೊಡುದ್ ಹಾಲಾssss ತೆಗದೀವೇs | ಅತ್ತೂಗೇs,
ನೀನೂs ನನ ಮನಿಗೂsss ಬರಬೇಕೂsss” || ||೧೬೮||
“ಅಂಬುಲಿ ಮಾsಡೀವೇsss ತುಂಬೆ ಸೊsಪ್ಪಟ್ಟೀವೇsss
ಅತ್ತುಗೆ ನಾs ಇಂದೇsss ಬರದೆಲ್ಲಾs” || ||೧೬೯||
ಅತ್ತುಗತ್ತುಗೇss, ಆಶೀಗ್ಯೆನ ಮಾಡಿದ್ಯೇsss ?
ಬೋಳಾಮ್ಟೀs ಕಾಯೀsss ಬೆಳಿಶಟ್ಲೀsss || ಬೆರಕೀಗೇ
ಕೋಡಮ್ಟೀs ಕಾಯಾsss ಬಳಬೆಟ್ಟೇss” || ||೧೭೦||
ಹಾಳೀ ತಟ್ವನ ಮಗಳೇsss ಹೊಡದ್ಯsಲ್ಲೆ ದಿಮಕಾವಾss
ಹೋಗೀs ನೋsಡದ್ರಾsss ತೌರೂರಾsss || ಪ್ಪನ ಮನ್ನೇss
ಹಾಳೀs ಅಂsssಬುಲಗೂsss ಬಡsತsನಾsss” || ||೧೭೧||
“ಕಾಲಾsನಾs ಕೆಸರೇsss, ನನ್ಯಾssಕೇs ಹಳದೀsಯೇss ?
ವೋಣೀssಲೀss ಬಿದ್ದಾsss ಕೊಳಕೇಲೇss |
ವೋಣೀಲೀss ಬಿದ್ದಾssss ಕೊಳಕೂss ಮಾsವಿನ್ಹsಣ್ಣೂss
ಯಾಕ್ ನನ್ನsss ಕುಲವಾssss ಹಳದೀಯೇsss ?” ||೧೭೨||
ಮಾತಾಡು ಮಲ್ಲಿಗೇsss, ನೀರ್ ಕೊಡೇ ಸಂಪೂsಗೇss,
ಜೋತೀss ತಂsದಿರುಸೇsss ಜಗಲೀಲೀ || ತಮ್ಮದೀರುs
ಪಂಚಾಂಗs ವೋದುರೇsss ಬೆಳುsತನಾsss ||೧೭೩||
ಯೇನೆಲ್ಲಾss ಯೆಂತೆಲ್ಲಾssss ನನ್ನ ಕೂಡೆ ಮಾತೆಲ್ಲಾsss
ಯೇನಂದ್ಯೋssss ತಮ್ಮಾssss ಮಡುದೀಗೇsss ? || ಲಿತ್ತಲೂದಾss
ಲ್ಹೂಂಗಾss ಕೊವ್ವಲ್ಲೀsss ಮನುಸಿಲ್ಲಾssss || ||೧೭೪||
ನಾರೀಯಾs ಕೇಸೂsss ಆರೊದ್ದಾs ಮಾರೊದ್ದಾsss
ಕೆನ್ನೀಯಾs ಕೇಸೂsss ನಳಿನೋಳೀsss || (ನುಳೀ) ಬಾಮsಕೇs
ಅತ್ತುಗಿ ಕಟ್ಟದ್ಯೇsss ಸಿರಿ ಮುಡೀsss || (ಬಾಮsಕೇss
ಅಣ್ಣಾss ತಂದನ್ಯೇsss ಕೊನಿಯಾಂಗಾsss) ||೧೭೫||
ಕಾಕಿಗೆ ಕಣ್ಣಿಲ್ಲಾssss ಬೆಕ್ಕಿಗೆ ಬೂರಿಲ್ಲಾsss
ಆಡುಕ್ಹೊದ ಅತ್ಹೀಗೇss ಮೊಲಿಯೆಲ್ಲಾssss || ಲಣ್ಣಯ್ಯಾsss,
ತೂತ್ಗೈಟೀs ಸುರದೀssss ಮೊಲಿಮಾಡೂsss || ಲಣ್ಣಯ್ಯಾsss, ||೧೭೬||
ತೊಟ್ಟಿಕಾಯ್ತಂದೀsss ತೊಟ್ ಕಟ್ಟೂsss || ಲಣ್ಣಯ್ಯಾsss
ಗೋಟಕ್ನ ಹಾಲ್ತಂದೀsss ಹಾಲ್ ಮಾಡುssss || ಲಣ್ಣಯ್ಯಾsss
ಕುನ್ನೀಮರಿ ತಂದೀssss ಹಾಲ್ (ಮಗು) ಮಾಡೂsss || ||೧೭೭||
ಕೆಮ್ಮಣ್ಣ ಗೊಡ್ಡಿ ಮೇನೇsss ನಮ್ಮಣ್ಣಾsದೇವsರ್ಹೊಡೀsss
ನಮ್ಮತ್ತೂಗ್ಹೋಗೀsss ಶೆರುಣಂದೀsss || ಬರವಾsಗೇss
ಸನ್ನೇಸೀ ಕೊssಲೇssss ಯೆದರಾಗೀsss || ||೧೭೮||
ವಳ್ಳೊಳ್ಳೇ ಮರಕೇssss ಯೆಲ್ಲಿತ್ತೇ ಜೇನ್ಹುಳಾsss
ನಲ್ಲೀಕಾಯ್ನಟ್ಟೂssss ಕಟುಯೆಲ್ಲಾsss || ಲಣ್ಣಯ್ಯಾsss,
ಯೆಲ್ಲಿತ್ತೇss ಗೋಡೀsss ಮೊಕದ್ಹೆಣ್ಣೂssss ? || ||೧೭೯||
ಕಾಕೀs ಕೆಲುವಲ್ಲಿರವೇsss ಕಡ್ಲೂs ಮರವಲ್ಲಿರವೇss
ಉತ್ತುಮನ ಮಗಳೂsss ಉರಗಣ್ಣಾsss || ರೂಪತ್ಯಲ್ಲೀss
ನಾs ವೊಂದರಗಳುಗೇsss ಇರಲಾರೇsss || || ೧೮೦||
ವರುಗೀsದರಾssಚೇss ಕದನಾs ಕಾಮ್ನ ಮಡದೀs
ಬದನೇs ತೊಪ್ಪಿಲದಾsss ಮನ್ಯಾsಚೀs || ತಮ್ಮನ ಮಡುದೀs
ವರಗೀssದಳೆ ಮಗನಾsss ಬಯಕೀssಲಿs || ||೧೮೧||
“ಆಚೀ ಮನಿಗೋಗೀsss ಮಾತಾಡೀss ಬರುತಾsನಾss
ಯಾತssರಿಂದ್ ಹೊಡ್ದೇsss ಕಿರಿತಮ್ಮss ?
“ಕಾಮಾss ನಂಗೂಡೀss ತರುದಲ್ಲೀss ಪಲ್ಲಂಕೀss ||೧೮೨||
ವಾಲಾsಡೀ ಬೆಳವಾsss ಗಜನಿಂಬಿss || ಮರನಲ್ಲೀss
ತಪ್ಪss ಕಂಡ್ ಹೊಡ್ದೇsss ಹೆರಿಯಕ್ಕsss | ||೧೮೩||
ಗೊಂಡೀಹೂಗ್ನ ದಂಡೇssss ಮಂಡಿ ಮೇಸಿಟಕಂಡೀss
ಗಂಡೆಲ್ಲsವೇನೇssss ಮನಿಯಲ್ಲೀssss ? || ಲತ್ತೂಗೆs,
ಪುಂಡsನs ಕೂಡೇssss ಚದುರಂಗಾssss || ||೧೮೪||
ಅಂಡಿಕಾಲ್ನಾs ಲತ್ತುಗೀss, ತೊಂಡಿಗೆ ನೀರ್ಯೆರವsಳೇs
ದಂಡೂಗೀs ಜಾರೀss ಕೊಡಜರುದೀ || ಲತ್ತೂsಗೀs
ಕುಂಬಾರಾs ನಿನ್ನಾssss ಗೆಣಿಯವನೇsss ? || ||೧೮೫||
Leave A Comment