ಮೆಣಸು ಬೆಳೆಯಲಿ ಬೆಳೆದಷ್ಟು ಮಾರಲಿ
ಮಾರಾಯರಿಗೆ ಮಾಲಕ್ಷ್ಮೀ ಒಲಿಯಲಿ – ನಮ್ಮನೆಯ
ಮೆಣಸಿಗಾರತಿಯ ಬೆಳಗಿರೇ

ಅಡಿಕೆ ಬೆಳೆಯಲಿ ಬೆಳೆದಷ್ಟು ಮಾರಲಿ
ಸರ್ಕಾರದ್ಹಣವೇ ಸಲಿಯಲಿ-ನಮ್ಮನೆಯ
ಅಡಿಕೆಗಾರತಿಯ ಬೆಳಗಿರೇ

ಯಾಲಕ್ಕಿ ಬೆಳೆಯಲಿ ಬೆಳೆದಷ್ಟು ಮಾರಲಿ
ಮಾರಾಯ್ತಿಗ್ಮಾಲಕ್ಷ್ಮೀ ಒಲಿಯಲಿ – ನಮ್ಮನೆಯ
ಯಾಲಕ್ಕಿಗಾರತಿಯ ಬೆಳಗಿರೇ