ಮಾವಿನ ಸ್ಕ್ವಾಷ್‌ : ರಸ ಭರಿತ ಹಣ್ಣನ್ನು ಸ್ಕ್ವಾಷ್ ಮಾಡಲು ಆರಿಸಿಕೊಳ್ಳಬೇಕು. ಪೂರ್ಣ ಆಗಿರುವ ಹಣ್ಣುಗಳ ಭಾಗವನ್ನು ಕತ್ತರಿಸಿ, ಹಣ್ಣಿನ ಮೇಲೆ ನಾಲ್ಕು ಸೀಳುಗಳನ್ನು ಮಾಡಿ ಅವುಗಳನ್ನು ಪಲ್ಪಿಂಗ್ ಯಂತ್ರಕ್ಕೆ ಹಾಕಿದರೆ, ಸಿಪ್ಪೆ ಮತ್ತು ಓಟೆಗಳುಬೇರೆಯಾಗುತ್ತವೆ. ತಿರುಳನ್ನು ಸ್ಕ್ವಾಷ್ ತಯಾರಿಸಲು ಉಪಯೋಗಿಸಬಹುದು.

ಪಾಕ ಪರಿಕರಗಳು :                  

ಸೇರಿಸಬಹುದಾದ ವಸ್ತುಗಳು

೨೫% ರಸ

೩೩ / % ರಸ

೨೫% ರಸ

೩೩ / % ರಸ

೪೫ಬ್ರಿಕ್ಸ್

೪೦ಬ್ರಿಕ್ಸ್

೫೦ಬ್ರಿಕ್ಸ್

೫೦ಬ್ರಿಕ್ಸ್

೧.೮ % ಆಮ್ಲೀಯತೆ

೨.೦ % ಆಮ್ಲೀಯತೆ

೧.೫ % ಆಮ್ಲೀಯತೆ

೨.೦ % ಆಮ್ಲೀಯತೆ

ಪೌಂ .

ಪೌಂ .

ಪೌಂ .

ಪೌಂ .

ಮಾವಿನ ತಿರುಳು (೦.೫% ಆಮ್ಲತೆ, ೧೮ಬ್ರಿಕ್ಸ್) ೧೦೦ ೧೦೦ ೧೦೦ ೧೦೦
ಸಕ್ಕರೆ ೧೩೯ ೯೯ ೧೫ ೧೭೮ ೧೨೯
ಸಿಟ್ರಿಕ್ ಆಮ್ಲ ೧೧ ೧೧ ೩೮ ೨೮
ನೀರು ೧೫೮ ೯೮ ೧೧೮ ೬೮
ಸಂರಕ್ಷಕ (ಪೊಮೈಬೈ)

ಸಕ್ಕರೆ ಪಾಕವನ್ನು ರಸಕ್ಕೆ ಸೇರಿಸಿ, ಸ್ಕ್ವಾಷ್ ಅನ್ನು ಬಟ್ಟೆಯಲ್ಲಿ ಶೋಧಿಸಿ, ಸೀಸೆಗಳಿಗೆ ತುಂಬಬೇಕು.

ಫ್ಯಾಷನ್ ಹಣ್ಣಿನ ಸ್ಕ್ವಾಷ್ : ಫ್ಯಾಷನ್  ಹಣ್ಣಿಗೆ ಆಕರ್ಷಣೀಯ ವಾಸನೆಯಿರುತ್ತದೆ. ಈ ಹಣ್ಣಿನ ಸ್ಕ್ವಾಷ್ ಹೆಚ್ಚಾಗಿ ಜನಪ್ರಿಯವಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಇದರ ತಯಾರಿಕೆ ಅಧಿಕ ಪ್ರಮಾಣದಲ್ಲಿದೆ. ನೀಲಗಿರಿ ಮತ್ತು ಕೊಡಗಿನಲ್ಲಿ ಫ್ಯಾಷನ್ ಹಣ್ಣುಗಳನ್ನು ಬೆಳೆಯಲಾಗುತ್ತಿದೆ.

ಪಾಕ ಪರಿಕರ ಪಟ್ಟಿ

ಸೇರಿಸಬಹುದಾದ ವಸ್ತುಗಳು

೨೫% ರಸ

೩೩ / % ರಸ

೨೫% ರಸ

೩೩ / % ರಸ

೪೫ಬ್ರಿಕ್ಸ್

೪೦ಬ್ರಿಕ್ಸ್

೫೦ಬ್ರಿಕ್ಸ್

೫೦ಬ್ರಿಕ್ಸ್

೧.೫ % ಆಮ್ಲೀಯತೆ

೧.೫ % ಆಮ್ಲೀಯತೆ

೨.೦ % ಆಮ್ಲೀಯತೆ

೨.೦ % ಆಮ್ಲೀಯತೆ

ಪೌಂ .

ಪೌಂ .

ಪೌಂ .

ಪೌಂ .

ಫ್ಯಾಷನ್ ರಸ (೩% ಆಮ್ಲತೆ, ೧೮ಬ್ರಿಕ್ಸ್) ೧೦೦ ೧೦೦ ೧೦೦ ೧೦೦
ಸಕ್ಕರೆ ೧೫೮ ೧೨ ೧೧೫ ೧೨೬ ೧೨ ೧೭೩ ೧೩
ನೀರು ೧೩೮ ೮೩ ೫೮ ೨೩
ಸಂರಕ್ಷಕ (ಪೊಮೈಬೈ)

ನೇರಳೆ ಅಥವಾ ಊದಾ ಬಣ್ಣದ ಹಣ್ಣುಗಳನ್ನು ಆರಿಸಬೇಕು. ಹಣ್ಣುಗಳನ್ನು ಅರ್ಧಭಾಗ ಮಾಡಿ, ಒಳಗಿರುವ ಲೋಳೆಯಂಥ ತಿರುಳು ಮತ್ತು ಬೀಜವನ್ನು ಹೆರೆದು ತೆಗೆಯಬೇಕು. ಪಲ್ಪರ್‌ನಲ್ಲಿ ತಿರುಳನ್ನು ಹಾಕಿ, ಬೀಜಗಳನ್ನು ಬೇರ್ಪಡಿಸಬಹುದು. ಪ್ರತಿ ಅಂಗುಲಕ್ಕೆ ೨೦-೧೦ ರಂಧ್ರಗಳಿರುವ ಜರಡಿಯಲ್ಲಿ ತಿರುಳನ್ನು ಹಾಕಿ ಶೋಧಿಸಬೇಖು. ಈ ವಿಧಾನವನ್ನು ಅಲ್ಪ ಪ್ರಮಾಣದಲ್ಲಿ ಸ್ಕ್ವಾಷ್ ತಯಾರಿಸಲು ಉಪಯೋಗಿಸಬಹುದು.

ಪೀಚ್ ಸ್ಕ್ವಾಷ್ : ಬಿಳಿ ಬಣ್ಣದ ರಸಭರಿತ ಪೀಚ್ ಹಣ್ಣುಗಳನ್ನು ಸ್ಕ್ವಾಷ್ ತಯಾರಿಸಲು ಉಪಯೋಗಿಸಬಹುದು. ತಿರುಳನ್ನು ಅದರ ಅರ್ಧದಷ್ಟು ಪ್ರಮಾಣ ನೀರಿನಲ್ಲಿ ೧೫ ನಿಮಿಷಗಳ ಕಾಲ ೧೮೦ ಫ್ಯಾ. ಉಷ್ಣತೆಯಲ್ಲಿ ಕಾಯಿಸಬೇಕು. ತಿರುಳಿನಿಂದ ಕೂಡಿದ ಈ ರಸ ಉತ್ತಮ ಬಗೆಯ ಸ್ಕ್ವಾಷ್ ಕೊಡುತ್ತದೆ. ಪೊಟ್ಯಾಸಿಯಂ ಮೆಟಾಬೈಸಲ್ಫೈಟ್ ನ್ನು ರಾಸಾಯನಿಕ ಸಂರಕ್ಷಕವಾಗಿ ಉಪಯೋಗಿಸಬೇಕು.

ಫಲ್ಸ್ ಸ್ಕ್ವಾಷ್ : ನೇರಳೆ ಹಣ್ಣಿನ ಸ್ಕ್ವಾಷ್ ತಯಾರಿಸುವ ವಿಧಾನದಂತೆ, ಈ ಹಣ್ಣಿನ ಸ್ಕ್ವಾಷ್ ತಯಾರಿಸಬಹುದು. ಈ ರಸದಲ್ಲಿ ಆಮ್ಲ ಅಧಿಕ ಪ್ರಮಾಣದಲ್ಲಿದೆ. ಇದಕ್ಕೆ ಸಿಟ್ರಿಕ್ ಆಮ್ಲವನ್ನು ಸೇರಿಸುವ ಅಗತ್ಯವಿರುವುದಿಲ್ಲ.

ಅನಾನಸ್ ಸ್ಕ್ವಾಷ್ : ಅನಾನಸ್  ಹಣ್ಣುಗಳ ಸಿಪ್ಪೆಯನ್ನು ತಗೆದು, ಹೋಳುಗಳಾಗಿ ಮಾಡಬೇಕು. ಅನಂತರ ಸ್ಕ್ರೂ ಬಗೆಯ ಯಂತ್ರದಲ್ಲಿ ರಸ ಸಿದ್ಧಗೊಳಿಸಬಹುದು. ಅನಾನಸ್ ಹೋಳುಗಳನ್ನು ಡಬ್ಬಿಗಳಲ್ಲಿ ಸಂಸ್ಕರಿಸುವಾಗ ಉಳಿಯುವ ಚೂರುಗಳಿಂದಲೂ ರಸ ಪಡೆಯಬಹುದು. ಮುಂದೆ ಈ ರಸವನ್ನು ಸಹ ಸ್ಕ್ವಾಷ್ ತಯಾರಿಸಲು ಉಪಯೋಗಿಸಬಹುದು.

ಪಾಕಪರಿಕರ ಪಟ್ಟಿ

ಸೇರಿಸಬಹುದಾದ ವಸ್ತುಗಳು

೨೫% ರಸ

೩೩ / % ರಸ

೨೫% ರಸ

೩೩ / % ರಸ

೪೫ಬ್ರಿಕ್ಸ್

೪೦ಬ್ರಿಕ್ಸ್

೫೦ಬ್ರಿಕ್ಸ್

೫೦ಬ್ರಿಕ್ಸ್

೧.೫ % ಆಮ್ಲೀಯತೆ

೧.೫ % ಆಮ್ಲೀಯತೆ

೨.೦ % ಆಮ್ಲೀಯತೆ

೨.೦ % ಆಮ್ಲೀಯತೆ

  ಪೌಂ . ಪೌಂ . ಪೌಂ . ಪೌಂ .
ಅನಾನಸ್ ರಸ (೦.೫ % ಆಮ್ಲತೆ, ೧೮ಬ್ರಿಕ್ಸ್) ೧೦೦ ೧೦೦ ೧೦೦ ೧೦೦
ಸಕ್ಕರೆ ೧೬೬ ೧೨೨ ೧೩ ೨೪೪ ೧೮೧
ಸಿಟ್ರಿಕ್ ಆಸಿಡ್
ಹಣ್ಣಿನ ಸುಗಂಧ ಸಾರ ೧೪
ನೀರು ೧೨೫ ೭೧ ೪೪ ೧೦
ಹಳದಿ ಬಣ್ಣ ಅಗತ್ಯದಷ್ಟು   ಅಗತ್ಯದಷ್ಟು   ಅಗತ್ಯದಷ್ಟು   ಅಗತ್ಯದಷ್ಟು  
ಸಂರಕ್ಷಕ (ಪೊಮೈಬೈ)

 ದ್ವೀಪದ್ರಾಕ್ಷಿ ಸ್ಕ್ವಾಷ್ : ಆಲೂಚ ಬಗೆಯ ರಸಭರಿತ ದ್ವೀಪ ದ್ರಾಕ್ಷಿಗಳನ್ನು ಅವುಗಳ ಅರ್ಧ ಭಾಘದಷ್ಟು ನೀರಿನಲ್ಲಿ ೧೮೦ ಡಿಗ್ರಿ ಫ್ಯಾ. ಉಷ್ಣತೆಯಲ್ಲಿ ೩೦ ನಿಮಿಷಗಳ ಕಾಲ ಕಾಯಿಸಬೇಕು. ಆಗ ಹಣ್ಣಿನ ಬಣ್ಣ ಬದಲಾಗುತ್ತದೆ. ತಿರುಳನ್ನು ಪಲ್ಪರ್ ನಲ್ಲಿ ಹಾಕಿ ರಸ ಪಡೆಯಬಹುದು. ಈ ರಸದಿಂದ ೪೫ ಡಿಗ್ರಿ ಅಥವಾ ೫೫ ಡಿಗ್ರಿ ಬ್ರಿಕ್ಸ್ ಇರುವ ಸ್ಕ್ವಾಷ್ ಅನ್ನು ತಯಾರಿಸಬಹುದು. ಇದಕ್ಕೆ ಸೋಡಿಯಂ ಬೆಂಜೋಯೇಟನ್ನು ಸಂರಕ್ಷವಾಗಿ ಉಪಯೋಗಿಸಬೇಕು.

ಕಲ್ಲಂಗಡಿ ಹಣ್ಣಿನ ಸ್ಕ್ವಾಷ್ : ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಸಣ್ಣ ಹೋಳುಗಳನ್ನಾಘಿ ಮಾಡಿ, ಒಳಗಿರುವ ತಿರುಳನ್ನು ಹೆರೆದು ಸಿಪ್ಪೆಯಿಂದ ಬೇರ್ಪಡಿಸಬೇಕು. ರಸ ಹಿಂಡಲು ಬಾಸ್ಕೆಟ್ ಒತ್ತುವ ಯಂತ್ರ ಉಪಯೋಗಿಸಬಹುದು. ನೇರಳೆ ವರ್ಣದ ಈ ರಸದ ಬ್ರಿಕ್ಸ್ ೬-೭ ಡಿಗ್ರಿ ಇರುತ್ತದೆ. ಸ್ಕ್ವಾಷ್ ತಯಾರಿಸಲು ಈ ರಸ ಉಪಯೋಗಿಸಬಹುದು. ಸೋಡಿಯಂ ಬೆಜೋಯಟ್ನ್ನು ಸಂರಕ್ಷಕವಾಗಿ ಸೇರಿಸಬಹದು.

ಪಾಕ ಪರಿಕರ ಪಟ್ಟಿ

ಸೇರಿಸಬಹುದಾದ ವಸ್ತುಗಳು

೪೫ಬ್ರಿಕ್ಸ್

೧.೫ % ಆಮ್ಲೀಯತೆ

  ಪೌಂ .  
ಕಲ್ಲಂಗಡಿ ರಸ (೦.೧ % ಆಮ್ಲತೆ, ೬ಬ್ರಿಕ್ಸ್)  ೭೫ ಪೌಂ  
ಸಕ್ಕರೆ ೫೨
ಸಿಟ್ರಿಕ್ ಆಮ್ಲ
ಸಂರಕ್ಷಕ (ಸೋ..ಬೆ) ೦೪

ಹಿಪ್ಪ ನೇರಳೆ, ರಾಸ್ಟ್ ಬೆರ‍್ರಿ, ಸ್ಟ್ರಾಬೆರಿ, ಪೇರ್, ಏಪ್ರಿಕಾಟ್, ಚಕ್ಕೋತ ಹಣ್ಣು, ಸೀಬೆ, ಕರಬೂಜ ಮುಂತಾದ ಹಣ್ಣುಗಳಿಂದ ಸ್ಕ್ವಾಷ್ ಮತ್ತು ಸಿರಪ್ ತಯಾರಿಸಬಹುದು. ಇವುಗಳನ್ನು ಈಗಾಗಲೇ ವಿವರಿಸಿರುವ ವಿಧಾನಗಳನ್ನೇ ಸ್ಥೂಲವಾಗಿ ಅನುಸರಿಸಿ ಸಿದ್ಧಗೊಳಿಸಬಹುದು.

ರಸಗಳು :

ಸೇಬು : ಹುದುಗಿಸಿದ ಸೇಬು ರಸ ಯುರೋಪಿನಲ್ಲಿ ಅತಿ ಹೆಚ್ಚಿನ ಜನಪ್ರಿಯತೆ ಗಳಿಸಿದೆ. ನಮ್ಮ ದೇಶದಲ್ಲೂ ಇದು ಜನಪ್ರಿಯತೆ ಪಡೆಯುತ್ತಿದೆ. ಎಲ್ಲೊ ನ್ಯೂಟನ್, ಬಾಲ್ಡ್‌ವಿನ್ ಮುಂತಾದ ಕುಲು ಕಣಿವೆಯ ಸೇಬುಗಳಿಂದ ರಸ ತಯಾರಿಸುವ ವಿಧಾನವನ್ನು ಕ್ರಮಪಡಿಸಲಾಗಿದೆ. ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲದ ದ್ರಾವಣದಲ್ಲಿ (೧೦೦ ಗ್ಯಾಲನ್ ನೀರಿನಲ್ಲಿ ೨ ಗ್ಯಾಲನ್ ಆಮ್ಲ) ಸೇಬು ಹಣ್ಣುಗಳನ್ನು ತೊಳೆಯಬೇಕು. ಅವುಗಳಿಗೆ ಅಂಟಿರಬಹುಆದ ಅರ್ಸೆನಿಕ್ ಮತ್ತು ಸೀಸದ ಲವಣಗಳಿದ್ದರೆ ಇದರಿಂದ ನಿರ್ಮೂಲವಾಗುತ್ತವೆ. ಕುದಿ ಮಾಡುವ ಯಂತ್ರದಲ್ಲಿ ೧/೮ – ೧/೨ ಅಂಗುಲದ ತುರಿ ಸಿದ್ಧಗೊಳಿಸಬೇಕು. ಬಾಸ್ಕೆಟ್ ಒತ್ತು ಯಂತ್ರದಲ್ಲಿ ರಸವನ್ನು ಸಂಗ್ರಹಿಸಬೇಕು. ಸಣ್ಣ ಪ್ರಮಾಣದಲ್ಲಾದರೆ ಅಲ್ಯೂಮಿನಿಯಂ ಪಾತ್ರೆಯನ್ನು ಉಪಯೋಗಿಸಬಹುದು. ರಸವನ್ನು ಒರಟು ಬಟ್ಟೆಯಲ್ಲಿ ಶೋಧಿಸಿ ಅದರಲ್ಲಿರಬಹುದಾದ ಹಣ್ಣಿನ ಸೂಕ್ಷ್ಮ ಕಣಗಳು ಮತ್ತು ಇತರ ಏಲುವ ವಸ್ತುಗಳನ್ನು ಬೇರ್ಪಡಿಸಬೇಕು. ರಸವನ್ನು ೧೮೦-೧೮೫ ಡಿಗ್ರಿ ಫ್ಯಾ. ಉಷ್ಣತೆಗೆ  ಕಾಯಿಸಿ, ಚೊಕ್ಕ ಮಾಡಿದ ಸೀಸೆಗಳಲ್ಲಿ ತುಂಬಿ, ತುಂಬಿ ಹರಿಯುವ ವಿಧಾನದಿಂದ ಪಾಶ್ಚೀಕರಿಸಬೇಕು. (ಎಂಟನೇಯ ಅಧ್ಯಾಯ ನೋಡಿ) ಪಾಶ್ಚೀಕರಣವನ್ನು ೧೭೫ ಡಿಗ್ರಿ ಫ್ಯಾ. ನಲ್ಲಿ ೩೦ ನಿಮಿಷ ಕಾಲ ಮಾಡಬೇಕು.

ಗೇರು: ಗೇರು ನಮ್ಮ ದೇಶದ ಪಶ್ಚಿಮ ಕರಾವಳಿಯಲ್ಲಿ ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ. ಈ ಹಣ್ಣಿನಲ್ಲಿರುವ ಒಗಚು ಅಂಶ ಬೇರ್ಪಡಿಸಲು ಹಲವು ಪ್ರಯೋಗಗಳನ್ನು ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಸ್ವಲ್ಪ ಪ್ರಮಾಣದ ನಿಂಬೆ ರಸದೊಂದಿಗೆ ಮಿಶ್ರಿಸುವುದರ ಮೂಲಕ ಇದನ್ನು ಸಿದ್ದಪಡಿಸಿ ಸಂರಕ್ಷಿಸುವ ವಿಧಾನವನ್ನು ವಿವರಿಸಿದ್ದಾರೆ. ಜೈನ್, ಭಾಟಿಯ, ಆನಂದ್ ಮತ್ತು ಗಿರಿಧಾರಿಲಾಲ್ ೫ ಪೌಂಡು ಉಗಿಯ ಒತ್ತಡದಲ್ಲಿ ೫ ನಿಮಿಷಗಳ ಕಾಲ ಹಣ್ಣನ್ನು ಹದ ಮಾಡಿ ಅನಂತರ ರಸ ಹಿಂಡಬೇಕೆಂದು ಸಲಹೆ ಮಾಡಿದ್ದಾರೆ. ರಸಕ್ಕೆ ಶೇಕಡಾ ೦.೪೫ ಜಲಾಟಿನ್ ಸೇರಿಸಿ, ಚೆನ್ನಾಗಿ ಕಲಕಿ ೧೫ ನಿಮಿಷಗಳ ಕಾಲ ಬಿಡಬೇಕು; ಬಟ್ಟೆಯಲ್ಲಿ ರಸವನ್ನು ಶೋಧಿಸಬೇಕು. ಶೋಧಿಸಿದ ರಸಕ್ಕೆ ಶೇಕಡಾ ೫-೬ ಸಕ್ಕರೆ ಸೇರಿಸಿದಾಗ, ಮಧುರವಾದ ರುಚಿ ಮತ್ತು ಗೇರು ಹಣ್ಣಿವ ವಾಸನೆಯಿರುವ ರಸ ದೊರೆಯುತ್ತದೆ.

ನಿಂಬೆ : ತೊಳೆಗಳಿಗೆ ನಿಕಟವಾಗಿ ಅಂಟಿರುವ ಸಿಪ್ಪೆಯ ಮಾಲ್ಟ್ ಮತ್ತು ಸಾತ್ ಗುಡಿ ಹಣ್ಣುಗಳಿಂದ ಬಹುಪಾಲು ಉತ್ತಮ ಮತ್ತು ಕಹಿರಹಿತ ರಸ ಪಡೆಯಬಹುದು. ಈ ರಸವನ್ನು ಡಬ್ಬಿಗಳಲ್ಲಿ ಇಲ್ಲವೇ ಸೀಸೆಗಳಲ್ಲಿ ಸಂಸ್ಕರಿಸಬಹುದು. ಕೊಡಗು ಮತ್ತು ನಾಗಪುರಗಳ ಸಡಿಲ ಸಿಪ್ಪೆಯ ಹಣ್ಣಿನಿಂದ ತೆಗೆದ ರಸವನ್ನು ಡಬ್ಬಿಗಳಲ್ಲಿ ಅಥವಾ ಸೀಸೆಗಳಲ್ಲಿ ಸಂಸ್ಕರಿಸುವಾಗ  ರಸಕ್ಕೆ ತನ್ನದೇ ಆದ ವಿಶಿಷ್ಟ ಕಹಿರುಚಿ ಬರುತ್ತದೆ. ಹಣ್ಣಿನ ತೊಳೆಗಳನ್ನು ಕ್ಷಾರ ದ್ರವದಲ್ಲಿ ಅದ್ದಿದಾಗ ಅಥವಾ ಶೇಕಡಾ ೫-೬ರಷ್ಟು ಸಕ್ಕರೆ ಸೇರಿಸಿ ಈ ಕಹಿ ಅಂಶವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು ಎಂಬುದನ್ನು ಸಿದ್ದಪ್ಪನವರು ತಿಳಿಸಿದ್ದಾರೆ. ರಸದ ಗುಣಮಟ್ಟ ಸುಧಾರಿಸಲು ಅದರಲ್ಲಿರುವ ಗಾಳಿಯನ್ನು ಹೊರದುಡಿ ಫ್ಲಾಷ್ ಪಾಶ್ಚೀಕರಣ ಮಾಡಬೇಕು. ನೈಜವಾದ ಕಿತ್ತಳೆ ರಸದ ವಾಸನೆ ಉಳಿಯುವಂತೆ, ರಸವನ್ನು ಸಂರಕ್ಷಿಸುವುದು ಈಗಲೂ ಸಮಸ್ಯೆಯಾಗಿದೆ. ದಾಸ್ತಾನಿನ ಅವಧಿಯಲ್ಲಿ ರಸಕ್ಕೆ ತನ್ನದೇ ಆದ ವಿಶಿಷ್ಟ ಬಗೆಯ ಹಳಸಿದ ಅಥವಾ ಅಹಿತ ವಾಸನೆ ಬರುತ್ತದೆ.

ರಸದಿಂದ ಗಾಳಿ ಹೊರದೂಡಿಸಿ, ಫ್ಲಾಷ್ ಪಾಶ್ಚೀಕರಣ ಮಾಡಿದಾಗ ಸರ್ವ ವಿಧದಲ್ಲೂ ಉತ್ತಮ ಫಲಿತಾಂಶ ನೀಡಿತೆಂದು ಪ್ರೂಥಿಯವರ ವ್ಯಾಪಕ ಪರಿಶೀಲನೆಗಳಿಂದ ತಿಳಿದುಬಂದಿದೆ. ಅವರು ನಿರ್ಣಯಿಸಲು ಈ ಕಾರ್ಯದಲ್ಲಿ ತೊಡಗುವ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ. ರಸ ತುಂಬಿದ ಮೇಲೆ ಧಾರಕಗಳಲ್ಲಿರುವ ಮುಚ್ಚಳದಡಿಯ ಖಾಲಿ ಜಾಗ, ಸೇರಿಸಿದ ಸಕ್ಕರೆ ಪ್ರಮಾಣ, ನಿರ್ವಾತಗೊಳಿಸುವಿಕೆ, ಬಳಸಿದ ಧಾರಕ ಮತ್ತು ಸಂರಕ್ಷಿಸುವ ವಿಧಾನ (ಗಂಧಕದ ಡೈ ಆಕ್ಸ್‌ಐಡ್ ಸೇರಿಸುವುದು, ಬೆಂಜೋಯೇಟ್ ಸೇರಿಸುವುದು, ಧಾರಕಗಳಲ್ಲಿ ಪಾಶ್ಚೀಕರಣ ಇಲ್ಲವೇ ತುಂಬಿ ಹರಿಯುವ ಅಥವಾ  ಫ್ಲಾಷ್ ಪಾಶ್ಚೀಕರಣ ಮುಂತಾದವು)- ಈ ಅಂಶಗಳು ಕಿತ್ತಳೆ ಹಣ್ಣಿನ ರಸದ ಆಸ್ಕೋರ್ಬಿಕ್ ಆಮ್ಲ, ಬಣ್ಣ, ವಾಸನೆ ಮತ್ತು ಸಂಗ್ರಹಣೆಯ ಅವಧಿಯಲ್ಲಿ  ಯಾವ ಪರಿಣಾಮವನ್ನುಂಟುಮಾಡುತ್ತವೆ ಎಂಬುದರ ಬಗ್ಗೆ ಅವರು ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ಅವು ಏಳು ಬಗೆಯ ನಿಂಬೆಜಾತಿಯ ಹಣ್ಣಿನರಸಗಳನ್ನು ಎಂದರೆ ನಿಂಬೆ, ಮೊಸಂಬಿ, ಕಿತ್ತಳೆ, ನಾಗಪುರಿ, ಮಾಂಡರೀನ್ ಗ್ರೇಪ್ ಫ್ರೂಟ್, ಸಿಹಿನಿಂಬೆ, ಖಟ್ಟಗಳನ್ನು ಪರಿಶೀಲನೆಗೆ ತೆಗೆದುಕೊಂಡಿದ್ದಾರೆ. ಆಮ್ಲ ಕಡಿಮೆಯಿರುವ ಕಿತ್ತಳೆರಸಗಳಲ್ಲಿ (ಎಂದರೆ ಮೊಸಂಬಿ, ನಾಗಪುರಿ ಮತ್ತು ಸಿಹಿನಿಂಬೆ) ಸಂಸ್ಕರಣೆಯ ಅವಧಿಯಲ್ಲಿ ಶೇಕಡಾ ೭ರಷ್ಟು ಅಸ್ಕೋರ್ಬಿಕ್ ಆಮ್ಲ ನಷ್ಟವಾಗುತ್ತದೆ. ಅಧಿಕ ಆಮ್ಲವಿರುವ ಹಣ್ಣು (ನಿಂಬೆ, ಖಟ್ಟ ಮತ್ತು ಗಲ್ ಗಲ್)ಗಳಲ್ಲಿ ಶೇಕಡಾ ೩ರಷ್ಟು ಅಸ್ಕೋರ್ಬಿಕ್ ಆಮ್ಲ ನಷ್ಟವಾಗುತ್ತದೆ. ಏಳು ತಿಂಗಳ ಕಾಲ ರಸವನ್ನು ಕೊಠಡಿಯ ಉಷ್ಣತೆಯಲ್ಲಿ ಸಂಗ್ರಹಿಸಿದಾಗ ಈ ಹಣ್ಣಿನ ರಸಗಳಲ್ಲಿ ಅಸ್ಕೋರ್ಬಿಕ್ ಆಮ್ಲ ಈ ರೀತಿ ನಷ್ಟವಾಗುತ್ತದೆ. ಗಲ್ ಗಲ್-೨-೭.೨೩೬.೨; ನಾಗಪುರಿ ಸಂಗ್ತ್ರ ೨೪.೫-೩೨.೩%, ಖಟ್ಟ ೧೬.೮-೨೩.೪%, ನಿಂಬೆ ೨೪.೩%-೨೮.೮%; ಗ್ರೇಪ್ ಫ್ರೂಟ್ ೧೭-೨೫.೯% ಮತ್ತು ಮೊಸಂಬಿ ೧೯.೮-೨೧.೫%, ನಿಂಬೆಜಾತಿ ಹಣ್ಣುಗಳ ರಸದ ವಾಸನೆ, ದಾಸ್ತಾನಿನ ಅವಧಿಯ ಗುಣಲಕ್ಷಣಗಳು ಮತ್ತು ರಸದಲ್ಲಿರುವ ಘನ ವಸ್ತುಗಳ ಕಣಗಳನ್ನು ತಳದಲ್ಲಿ ತಂಗಿಸಲು ಪೆಕ್ಟಿಕ್ ಕಿಣ್ವಗಳು ಹಾಗೂ ರಸದ ಬಣ್ಣ ಕೆಡಿಸುವುದರಲ್ಲಿ ಅಸ್ಕೋರ್ಬಿಕ್ ಆಮ್ಲದ ಪಾತ್ರ ಮುಂತಾದವುಗಳನ್ನು ಕುರಿತು ಅವರು ವ್ಯಾಪಕವಾಗಿ ಚರ್ಚಿಸಿದ್ದಾರೆ. ಸಂಸ್ಕರಿಸದ ನಾಗಪುರ ಕಿತ್ತಳೆ, ಗ್ರೇಪ್ ಫ್ರೂಟ್ ಮತ್ತು ಇತರ ನಿಂಬೆಜಾತಿಯ ಹಣ್ಣಿವರಸ ಕೆಡಲು ಯಾವ ರೀತಿಯ ವಿವಿಧ ಅಂಶಗಳು ಪಾತ್ರವಹಿಸುತ್ತವೆ ಎಂಬುದನ್ನು  ವರದಿ  ಮಾಡಿದ್ದಾರೆ.  ಶೇಕಡಾ  ೫ ರಷ್ಟು  ಕಬ್ಬಿನರಸವನ್ನು ಹಣ್ಣಿನ  ರಸಕ್ಕೆ ಸೇರಿಸಿದಾಗ  ಬಣ್ಣ ಕೆಡುವ ಕ್ರಿಯೆ ತೀವ್ರಾಗುತ್ತದೆಂದು ಅವರು ತಿಳಿಸಿದ್ದಾರೆ. ಸಂಖ್ಯಾಶಾಸ್ತ್ರ ದೃಷ್ಟಿಯಿಂದ ವಿಶ್ಲೇಷಿಸಿದಾಗ ಸಕ್ಕರೆ ರಸವಚನ್ನು  ಅರ್ಧದಿಂದ ೩ ತಿಂಗಳು ಕಾಲ ಕೊಠಡಿಯ ಉಷ್ಣತೆ(೨೪-೩ ಸೆ.) ಮತ್ತು ೩೭ ಸೆ. ನಲ್ಲಿ  ಸಂಗ್ರಹಿಸಿದಾಗ ಬಣ್ಣ ಕೆಡುವುದು ಕಂಢುಬರುತ್ತದೆ. ಕೆಳಮಟ್ಟದ ಉಷ್ಣತೆ ಅಂದರೆ ೦-೨ ಸೆ.ನ ರಸವನ್ನು ಶೆಖರಿಸಿಟ್ಟರೆ ಅಸಕೋರ್ಬಿಕ್ ಆಮ್ಲವನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ರಸ ಕಪ್ಪಾಗುವುದುನ್ನು ತಡೆಯಬಹುದು.ಸೀಸೆಗಳ ಬದಲು ಸಾಸಾ ಡಬ್ಬಿಗಳಲ್ಲಿ ರಸ ಸಂಸ್ಕರಿಸಿದಾಗ ಅಸಕೋಬಿಕ್ ಆಮ್ಲ ಮತ್ತು ಬಣ್ಣವನ್ನು ಉತ್ತಮ ರೀತಿಯಲ್ಲಿ ಕಾಪಾಡಲುಬಹುದು. ಗಂಧಕದ  ಡೈ ಆಕ್ಸ್ಡ ಡ್ ಸೇರಿಸಿರುವ ಅಥವಾ ಸೇರಿಸದ ನಿಂಬೆಜಾತಿಯ ಹಣ್ಣಿನ ರಸಗಳಲ್ಲಿನ ಅಸ್ಕೋರ್ಬಿಕ್ ಆಮ್ಲ ಗೊತ್ತುಮಾಡುವ ವಿಧಾನಗಳನ್ನು ನಿರ್ಧರಿಸಲಾಗಿದೆ. ಈ ರಸಗಳ ಫೋಟೋ ಎಲೆಕ್ಟ್ರಿಕ್ ಕೊಲೋರಿಮೀಟರ್ ವಿಶ್ಲೇಣೆಯ ಕ್ರಮವನ್ನು ನಿರ್ಧರಿಸಲಾಗಿದೆ.

ರಸ ಹಿಂಡುವ ಮತ್ತು ಪೂರ್ವಭಾವಿಯಾಗಿ ರಸ ಹದ ಮಾಡುವ ವಿಧಾನಗಳನ್ನು ಸೂಕ್ತರೀತಿ ಅಳವಡಿಸಿದರೆ, ರಸದಲ್ಲಿ ಮುಂದೆ ಕಾಣಿಸಿಕೊಳ್ಳಬಹುದಾದ ಕಹಿ ರುಚಿ ಅತ್ಯಲ್ಪವಾಗಿರುವಂತೆ ಮಾಡಬಹುದು. ಹಣ್ಣಿನ ಕಾಲದಲ್ಲಿ ಕಿತ್ತಳೆ ರಸ ಹಿಂಡಿ, ಆಮ್ಲ ಬೆರೆಸಿ,  ಪೊಟ್ಯಾಶಿಯಂ ಮೆಟಾಸಲ್ಫೈಟ್ ಸಂರಕ್ಷಕ ಸೇರಿಸಿ ಪೀಪಾಯಿಗಳಲ್ಲಿ ತುಂಬಬೇಕು. ಅಗತ್ಯವಿದ್ದಾಗ ಈ ರಸದಿಂದ ಸ್ಕ್ವಾಷ್ ತಯಾರಿಸಬಹುದು. ಈ ರೀತಿ ಮಾರುಕಟ್ಟೆಯಲ್ಲಿನ ಬೇಡಿಕೆಗಳಿಗನುಗುಣವಾಗಿ, ರಸವನ್ನು ಸೂಕ್ತ ರೀತಿ ಸಂಸ್ಕರಿಸಿ ಸೀಸೆಗಳಲ್ಲಿ ತುಂಬಿ ಮಾರಲು ಅನುಕೂಲವಾಗುತ್ತದೆ.

ದ್ರಾಕ್ಷಿ : ಬಿಳಿ ದ್ರಾಕ್ಷಿ ಮತ್ತು ಬಣ್ಣದ ದ್ರಾಕ್ಷಿ ಇವೆರಡನ್ನೂ ರಸ ತಯಾರಿಸಲು ಉಪಯೋಗಿಸಬಹುದು. ಈ ಸಂದರ್ಭದಲ್ಲಿ ಬಣ್ಣದ ದ್ರಾಕ್ಷಿಯಿಂದ ಬಣ್ಣ ಬೇರ್ಪಡಿಸಬೇಕು. ಜಜ್ಜಿದ ಹಣ್ಣಿನ ತಿರುಳಿಗೆ ಸ್ವಲ್ಪ ನೀರು ಸೇರಿಸಿ, ೧೦-೧೫ ನಿಮಿಷಗಳ ಕಾಲ ೧೪೦-೧೪೫ ಫ್ಯಾ. ಉಷ್ಣತೆಯಲ್ಲಿ ಕಾಯಿಸಬೇಕು. ಆದರೆ ಬಿಳಿ ದ್ರಾಕ್ಷಿಯನ್ನು ಈ ರೀತಿ ಕಾಯಿಸಬೇಕಾಗಿಲ್ಲ. ಏನೇ ಇರಲಿ, ಜಜ್ಜಿದ ದ್ರಾಕ್ಷಿಯನ್ನು  ದ್ರಾಕ್ಷಿಯನ್ನು ಬಾಸ್ಕೆಟ್ ಒತ್ತು ಯಂತ್ರಕ್ಕೆ ಹಾಕಿ ರಸ  ಹಿಂಡಬಹುದು. ರಸವನ್ನು ಬಟ್ಟೆಗಳಲ್ಲಿ ಶೋಧಿಸಿ, ಸೀಸೆಗಳಲ್ಲಿ ತುಂಬಿ, ಪಾಶ್ಚೀಕರಿಸಲು ತುಂಬಿ ಹರಿಯುವ ವಿಧಾವನ್ನು ಉಪಯೋಗೆಸಬಹುದು. ದ್ರಾಕ್ಷಿರಸವನ್ನು ಸೀಸೆಗಳಲ್ಲಿ ತುಂಬಿದಾಗ ಕ್ರಮವಾಗಿ ಕ್ರೀಮ್ ಆಫ್ ಟಾರ್ಟರ್  ತಳದಲ್ಲಿ ಪ್ರಕ್ಷೇಪಗೊಂಡು ಸಂಗ್ರಹವಾಗುತ್ತದೆ. ಇದನ್ನು ೩-೪ ತಿಂಗಳುಗಳ ಕಾಲ ಸಂಗ್ರಹಿಸುವುದರಿಂದ ತಪ್ಪಿಸಬಹುದು. ಆದರೆ ಕೆಳಮಟ್ಟದ ಉಷ್ಣತೆಯಲ್ಲಿ ಮಾತ್ರ ಹೀಗೆ ಸಂಗ್ರಹಿಸಬಹುದು. ಆಗ ಸಂಪೂರ್ಣವಾಗಿ ಕ್ರೀಮ್ ಆಫ್ ಟಾರ್ಟರ್ ತಳದಲ್ಲಿ ನಿಲ್ಲುತ್ತದೆ. ತಿಳಿಯಾದ ರಸವನ್ನು ಅನಂತರ ಸೀಸೆಗಳಲ್ಲಿ ತುಂಬಬಹುದು. ಇಲ್ಲಿ ಸೋಡಿಯಂ ಬೆಂಜೋಯೇಟನ್ನು ಸಂರಕ್ಷಕವಾಗಿ ಉಪಯೋಗಿಸಬೇಕು. ಈ ಕಾರ್ಯಕ್ಕಾಗಿ ಗಂಧಕದ ಡೈ ಆಕ್ಸೈಡ್ ಬಳಸಬಾರದು. ಏಕೆಂದರೆ ಇದರಿಂದ ರಸ ಕಹಿಯಾಗುತ್ತದೆ.

ಅನಾನಸ್ : ಅಸ್ಸಾಂ, ಪಶ್ಚಮ ಬಂಗಾಳ, ಕೇರಳ ಮತ್ತು ತಮಿಳುನಾಡಿನಲ್ಲಿ ಅಧಿಕ ಪ್ರಮಾಣದಲ್ಲಿ ಅನಾನಸ್ ಬೆಳೆಯನ್ನು ಕಾಣಬಹುದು. ದೇಶದ ಹಣ್ಣಿನ ಉತ್ಪಾದನೆಯ ಸುಮಾರು ಶೇಕಡಾ ೯೫ರಷ್ಟು ಭಾಗ ಉತ್ಪಾದನೆ ಈ ನಾಲ್ಕು ರಾಜ್ಯಗಳಲ್ಲಿದೆ. ಅನಾನಸ್ ಹಣ್ಣಿನಲ್ಲಿ ಹಲವು ಬಗೆಯವುಗಳಿವೆ. ಕ್ಯೂ, ಜೈಂಟ್ ಕ್ಯೂ, ಮಾರಿಷಿಯಸ್, ಜಲ್ ಧೂಪ್, ಸಿಂಗಾಪೂರ ಮುಂತಾದವು. ಈ ಪೈಕಿ ಕ್ಯೂ ಮತ್ತು ಜೈಂಟ್ ಕ್ಯೂ ಡಬ್ಬಿಗಳಲ್ಲಿ ಸಂಸ್ಕರಿಸಲಾಗುತ್ತದೆ. ಮಿಕ್ಕ ಬಗೆಗಳಿಂದ ಸಾಮಾನ್ಯವಾಗಿ ರಸ ತಯಾರಿಸಬಹುದು. ಡಬ್ಬಿಗಳಲ್ಲಿ ಹಣ್ಣನ್ನು ತುಂಬಿ ಸಂಸ್ಕರಿಸುವಾಗ, ಕತ್ತರಿಸಿದ ಹಣ್ಣಿನ ಉಳಿದ ಚೂರುಗಳಿಂದ ಮತ್ತು ದಿಂಡಿನಿಂದ ರಸ ಹಿಂಡಬಹುದು. ಈ ಕಾರ್ಯಕ್ಕೆ ಅನಪೇಕ್ಷಿತವೆನಿಸಿದ, ನಿರ್ದಿಷ್ಟ ರೀತಿ ಪಕ್ವವಾಗದ ಅಥವಾ ಮೆದು ಹಣ್ಣಿನಿಂದ ರಸ ಪಡೆಯಬಹುದು.

ಹಣ್ಣಿನ ಸಿಪ್ಪೆ ತೆಗೆದು ಚೂರುಗಳಾಗಿ ಮಾಡಬೇಕು. ಬಳಿಕ ಇವುಗಳನ್ನು ಅತಿ ಸೂಕ್ಷ್ಮವಾದ ಚೂರುಗಳಾಗುವಂತೆ ತುರಿಯಬೇಕು. ಕತ್ತರಿಸಿದ ಹಣ್ಣನ ಇತರ ಭಾಗಗಳು ಮತ್ತು ದಿಂಡನ್ನು ಸಹ ಇದೇ ರೀತಿ ಮಾಡಬಹುದು. ಅನಂತರ ಸ್ಕ್ರೂ ಬಗೆಯ ರಸ ಹಿಂಡುವ ಒತ್ತು ಯಂತ್ರದಿಂದ ರಸ ಹಿಂಡಬಹುದುದ. ಪಲ್ಟರ್ ಅಥವಾ ಹೈಡ್ರಾಲಿಕ್ ಒತ್ತುಯಂತ್ರವನ್ನು ಸಹ ಈ ಕಾರ್ಯಕ್ಕೆ ಉಪಯೋಗಿಸಬಹುದು. ಮಲ್ ಬಟ್ಟೆಯಲ್ಲಿ ರಸವನ್ನು ಶೋಧಿಸಿ, ಅದನ್ನು ೧೮೦-೧೮೫ ಫ್ಯಾ. ಉಷ್ಣತೆಗೆ ಕಾಯಿಸಬೇಕು. ಬಿಸಿ ರಸವನ್ನು ಸಾದಾ ಡಬ್ಬಿಗಳಿಗೆ ತುಂಬಿ, ಮುಚ್ಚಳವನ್ನು ದ್ವಿಅಂಚು ಸೇರಿಸಿ ಮೊಹರು ಮಾಡಬೇಕು. ಈ ಡಬ್ಬಿಗಳನ್ನು ೨೫ ನಿಮಿಷಗಳ ಕಾಲ ೧೭೫-೧೮೦ ಉಷ್ಣತೆಯಲ್ಲಿ ಸಂಸ್ಕರಿಸಬೇಕು. ಇದಕ್ಕೆ ಒಂದು ಪೌಂಡು ಹಾಲು ಹಿಡಿಸುವ ಗಾತ್ರದ ಡಬ್ಬಿಗಳನ್ನು ಉಪಯೋಗಿಸಬಹುದು.  ಡಬ್ಬಿಗಳನ್ನು ಹರಿಯುವ ತಣ್ಣೀರಿನಿಂದ ತಣ್ಣಗೆ ಮಾಡಬೇಕು. ಅತಿ ಹೆಚ್ಚಿನ ಉಷ್ಣತೆಯಲ್ಲಿ ಅಲ್ಪಕಾಲಿಕ ಪಾಸ್ಚೀಕರಣ ವಿಧಾನವನ್ನ ಅನುಸರಿಸಿ ವಿದೇಶಗಳಲ್ಲಿ ರಸಚನ್ನ ಸಂಸ್ಕರಿಸುತ್ತಾರೆ. ಇದಕ್ಕೆ ೧೯೦ ಫ್ಯಾ.  ಉಷ್ಣತೆಯಲ್ಲಿ ಕೇವಲ ೨-೩ ನಿಮಿಷಗಳ ಕಾಲ ಪಾಶ್ಚೀಕರಿಸಬೇಕಾಗುತ್ತದೆ. ತಕ್ಷಣ ಈ ರಸವನ್ನು ಡಬ್ಬಿಗಳಲ್ಲಿ ತುಂಬಿ ಮೊಹರು ಮಾಡಬಹುದು,

ಸೀಸೆ ಮತ್ತು ಡಬ್ಬಿಗಳಲ್ಲಿ ತುಂಬಿದ ರಸ ಮತ್ತು ಸ್ಕ್ವಾಷ್ ನ್ನು ಪಾಶ್ಚೀಕರಿಸಿ ಗಂಧಕದ ಡೈ ಆಕ್ಸೈಡ್ ಸೇರಿಸಿ ಕೊಠಡಿಯ ಉಷ್ಣತೆ (೨೪-೩೦೦ಸೆ] ಮತ್ತು ೩೭ಡಿಗ್ರಿ. ಸೆ. ನಲ್ಲಿ ಎಷ್ಟು ಕಾಲದವರೆಗೆ ದಾಸ್ತಾನಿಸಬಹುದು ಎಂದೂ ಮತ್ತು ಈ ದಾಸ್ತಾನಿನ ಅವಧಿಯಲ್ಲಿ ಬಣ್ಣ ಮತ್ತು ಆಸ್ಕೋರ್ಬಿಕ್ ಆಮ್ಲ ಉಳಿಯುವ ಬಗ್ಗೆ ಪ್ರೂತಿಯವರು ಅಧ್ಯಯನ ನಡೆಸಿದ್ದಾರೆ. ಕೊಠಡಿಯ ಉಷ್ಣತೆ (೨೪-೩೦ ಡಿಗ್ರಿ.ಸೆ) ನಲ್ಲಿ ಶೇಕಡಾ ೮೦-೮೫ ಮತ್ತು ೩೭ ಡಿಗ್ರಿ ಸೆ. ನಲ್ಲಿ ಶೇಕಡಾ ೩೮-೪೭ ರಷ್ಟು ಆಸ್ಕೋರ್ಬಿಕ್ ಆಮ್ಲ ರಸದಲ್ಲಿ ಉಳಿಯುವುದೆಂದು ಅವರು ತಿಳಿಸಿದ್ದಾರೆ. ಫೋಟೋ-ಎಲೆಕ್ಟ್ರೀಕ್ ಕ್ಯಾಲೋರಿ ಮೀಟರಿನಿಂದ ದಾಸ್ತಾನಿನ ಅವಧಿಯು ಮುಗಿದ ನಂತರ ರಸದಲ್ಲಿ ಕೆಟ್ಟಿರುವ ಬಣ್ಣವನ್ನು ಪರೀಕ್ಷಿಸಬಹುದೆನ್ನುತ್ತಾರೆ. ಬೆಳಕಿನ ಸಾಂದ್ರತೆಯಲ್ಲಿ ಈ ರೀತಿ ಅಳೆದಾಗ ೩೭ ಡಿಗ್ರಿ ಸೆ. ನಲ್ಲಿ ಸಂಗ್ರಹಿಸಿದ ರಸವು ಕೊಠಡಿಯ ಉಷ್ಣತೆಯಲ್ಲಿ ಸಂಗ್ರಹಿಸಿದ ರಸಕ್ಕಿಂತ  ಭಿನ್ನವಾಗಿ ಕಂಡುಬಂದಿತು. ಅದೆಂದೆ ೪೨೦-೬೪೦ µ ಅಂತರದಲ್ಲಿ ಕಂಡು ಬಂದ ಆರು ವಿವಿಧ ತರಂಗಾಂತರಗಳು ೩೭ ಡಿಗ್ರಿ ಸೆ. ನಲ್ಲಿ ಸಂಗ್ರಹಿಸಿದ  ರಸದಲ್ಲಿ ಮೂರು ಪಟ್ಟು ಹೆಚ್ಚು ಕಂಡು ಬಂದಿತು.  ಅನಾನಸ್ ರಸವನ್ನು ಡಬ್ಬಿಗಳಲ್ಲಿ ಸಂಸ್ಕರಿಸಿ, ೧೨-೧೫ ತಿಂಗಳುಗಳ ಕಾಲ ಸಂಗ್ರಹಿಸಿದಾಗ ಗಮನಾರ್ಹ ಪ್ರಮಾಣದಲ್ಲಿ ನಷ್ಟವಾಗುವುದಿಲ್ಲವೆಂದು ಅವರು ವರದಿ ಮಾಡಿದ್ದಾರೆ.

ದಾಳಿಂಬೆ ರಸ :

ಕಂಧಾರಿ ಬಗೆಯ ದಾಳಿಂಬೆಯಲ್ಲಿ ಪ್ರಕಾಶಮಾನವಾದ ಕೆಂಪು ವರ್ಣದ ರಸಕೋಶಗಳಿರುತ್ತದೆ. ಇಂಥ ಹಣ್ಣಿನಿಂದ ಮಧುರವಾದ ರಸವನ್ನು ಕಡೆಯಬಹುದು. ಹಣ್ಣನ್ನು ನಾಲ್ಕು ಭಾಗಗಳಾಗಿ ಮಾಡಿ ರಸಕೋಶಗಳನ್ನು ಹೊರಕ್ಕೆ ತೆಗೆಯಬೇಕು. ಬಾಸ್ಕೇಟ್ ಒತ್ತಯಂತ್ರದಲ್ಲಿ ಹಾಕ ಇಂದ ರಸಕೋಶಗಳಿಂದ ರಸ ತೆಗೆಯಬಹುದು. ಇಂಥ ಪ್ರತಿಯೊಂದು ಹಣ್ಣಿನ ನಾಲ್ಕು ಭಾಗಗಳನ್ನು ಮೃದುವಾದ ಒತ್ತಡಕ್ಕೆ ಒಳಪಡಿಸಿ ರಸ ಹಿಂಡಬಹುದಾಗಿದೆ. ರಸವನ್ನು ದಪ್ಪ ಬಟ್ಟೆಯಲ್ಲಿ ಶೋಧಿಸಿ, ಸೀಸೆಗಳಲ್ಲಿ ತುಂಬಬಹುದು. ರಸ ಸಂರಕ್ಷಿಸಿಡಲು ಪಾಶ್ಚೀಕರಣ ಮಾಡಬಹುದು ಅಥವಾ ರಸಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಸೋಡಿಯಂ ಬೆಂಜೋಯೇಟ್ ಸೇರಿಸಬಹುದು. ದೀರ್ಘಕಾಲ ರಸವನ್ನು ಸಂಗ್ರಹಿಸಿದಾಗ ಅದರ ಸೂಕ್ಷ್ಮ ವಾಸನೆ ದುರ್ಬಲವಾಗುತ್ತದೆ. ಇದರಿಂದ ಸಕ್ಕರೆ ಸೇರಿಸಿ, ೫೫-೬೦ ಡಿಗ್ರಿ ಬ್ರಿಕ್ಸ್ ಇರುವ ಸಿರಪ್‌ನ್ನು ತಯಾರಿಸಬಹುದು.

ಸಿರಪ್‌ಗಳು

ನಮ್ಮ ದೇಶದಲ್ಲಿ ಗುಲಾಬಿ, ಶ್ರೀಗಂಧ, ಬಾದಾಮಿ, ಸರಸಪರಿಲ್ಲಾ ಕೇದಗೆ ಹೂವಿನ ಸುಗಂಧಸಾರ, ಸ್ಟ್ರಾಬೆರ‍್ರಿ, ಅನಾನಸ್, ರಾಸ್ಟಬೆರ್, ಕಿತ್ತಳೆ, ಹಿಪ್ಪೆನೇರಳೆ ಮುಂತಾದ ಹಣ್ಣುಗಳಿಂದ ಜನಪ್ರಿಯವಾದ ಬೇಸಿಗೆ ಕಾಲದ ಪಾನೀಯಗಣನ್ನು ತಯಾರಿಸುತ್ತಾರೆ. ನೈಜವಾದ ವಸ್ತುಗಳ ಸುಗಂಧಸಾರ ಅಥವಾ ಸುವಾಸನೆ ನೀಡುವ ಕೃತಕಸಾರಗಳು ಮತ್ತು ಬಣ್ಣಗಳನ್ನು ಈ ಕೆಲಸಕ್ಕೆ ಉಪಯೋಗೆಸಬಹುದು. ಇವುಗಳನ್ನು ೭೦-೭೫ ಬ್ರಿಕ್ಸ್ ಇರುವ ಸಕ್ಕರೆ ಪಾಕಕ್ಕೆ ಸೇರಿಸಬೇಕು. ನೀರಿನಲ್ಲಿ ಸಕ್ಕರೆ ಕರಗಿಸಿ, ಅದಕ್ಕೆ ಸ್ವಲ್ಪ ಆಮ್ಲ ಸೇರಿಸಿ ಅಲ್ಪಕಾಲ ಬೇಯಿಸಬೇಕು. ಇದರಿಂದ ಅವು ಗ್ಲೂಕೋಸ್ ಬಗೆಯ ಇನವರ್ಟ ಸಕ್ಕರೆಯಾಗಿ ರೂಪಾಂತರಗೊಂಡು ನೀರಿನಲ್ಲಿ ಕರಗುತ್ತವೆ. ಕೃತಕ ಸಿರಪಗಳನ್ನು ಅಧಿಕ ಪ್ರಮಾಣದಲ್ಲಿ ತಯಾರಿಸುವುದರ ಬದಲು ನೈಜವಾದ ಹಣ್ಣಿನ ಸಿರಪಗಳನ್ನು ತಯಾರಿಸುವುದು ಪೌಷ್ಟಿಕಾಂಶದ ದೃಷ್ಟಿಯಿಂದ ಉತ್ತಮವೆನಿಸಿದೆ.

ಪಾಕ ಪರಿಕರ ಪಟ್ಟಿ

ಸೇರಿಸಬೇಕಾದ ವಸ್ತುಗಳು

ಕಿತ್ತಳೆ

ಲೆಮನ್

ಅನಾನಸ್

ರಾಸ್ಟ್ ಬೆರ್ರಿ‍

ಸ್ಟ್ರಾಬೆರಿ

ಸಿರಪ್ ೭೦ ಬ್ರಿಕ್ಸ್

(ಗ್ಯಾಲನ್ ಗಳಲ್ಲಿ)

ಸಿಟ್ರಿಕ್ ಆಮ್ಲ ೨.೯ ಔ ೪.೩೫ ಔ ೨.೯ ಔ ೧.೪೫ ಔ ೦.೮ ಔ
ಬಣ್ಣ ಹಳದಿ ಬೇಕಿದ್ದಷ್ಟು ಹಳದಿ ಬೇಕಿದ್ದಷ್ಟು ಹಳದಿ ಬೇಕಿದ್ದಷ್ಟು ಕೆಂಪು ಬೇಕಿದ್ದಷ್ಟು ಸ್ಟ್ರಾಬೆರಿ ಬೇಕಿದ್ದಷ್ಟು
ಸುಗಂಧದ್ರವ್ಯ ಸಿಹಿ ಕಿತ್ತೆ ಕರಗುವ ಸಾರ ೨.೯ ಸೌ ಮಸುಕಾಗಿರುವ ಲೆಮನ್ ಸಾರ ೩.೬ ಔ ಅನಾನಸ್ ನೀರಿನಲ್ಲಿಕಗುವುದ ಸಾರ ೧.೫ ಔ ರಾಸ್ಟ್‌ ಬೆರ್ರಿ‍ ಸಾರ

೨.೯ ಕೆ.ಜಿ

ಸ್ಟ್ರಾಬೆರಿ ಸಾರ ೨.೯ ಔ.

ಇಂಗಾಲೀಕರಿಸಿದ ಪಾನೀಯಗಳು

ನೈಜವಾದ ಹಣ್ಣಿನ ರಸಗಳಿಗೆ ಇಂಗಾಲೀಕರಣಗೊಳಿಸಿ ಪಾನೀಯಗಳನ್ನು ತಯಾರಿಸುವುದು ನಮ್ಮ ದೇಶದಲ್ಲಿ ಹೆಚ್ಚು ಪ್ರಚಾರದಲ್ಲಿ ಇಲ್ಲವೆಂದೇ ಹೇಳಬಹುದು. ಆದರೆ ಇಂಗಾಲೀಕರಣಗೊಳಿಸಿರುವ ಸೋಡಾ ಬಗೆಯ ಪಾನೀಯಗಳು, ಮಂಜುಗಡ್ಡೆಯಿರುವ ಷರಬತ್ತುಗಳು ಮತ್ತು ಸ್ಯಾಕರಿನ್ ಸೇರಿಸಿದ ಕೃತಕ ಪಾನೀಯಗಳನ್ನು ದೇಶದ ಎಲ್ಲೆಡೆಯಲ್ಲಿಯೂ ಸೇವಿಸುತ್ತಾರೆ. ಇವುಗಳಲ್ಲಿ ಯಾವ ಪೌಷ್ಟಿಕಾಂಶಗಳು ಇರುವುದಿಲ್ಲ. ಬದಲಿಗೆ ನೈಜವಾದ ಹಣ್ಣಿವ ರಸಗಳನ್ನು ಬಳಸಿದಲ್ಲಿ ಈ ಪಾನೀಯಗಳಲ್ಲಿ ಪೌಷ್ಟಿಕಾಂಶಗಳು ಬಹುಮಟ್ಟಿಗೆ ಹೆಚ್ಚುತ್ತವೆ.

ರಸಗಳನ್ನು ನೇರವಾಗಿ ಇಂಗಾಲೀಕರಣ ಕ್ರಿಯೆಗೊಳಪಡಿಸಬಹುದು. ಅಗತ್ಯವಿದ್ದರೆ ರಸಗಳನ್ನು ಹಾಗೆಯೇ ಅಥವಾ ಸಾಂದ್ರೀಕರಿಸಿದ ರೂಪದಲ್ಲಿ ಸಂಗ್ರಹಿಸಿ, ಅನಂತರ ಇಂಗಾಲೀಕರಣಗೊಳಿಸಬಹುದು. ಸಂರಕ್ಷಕವನ್ನು ಸೇರಿಸಿದೆ ಸುಮಾರು ಒಂದು ವಾರ ಕಾಲ ಇಂಥ ಪಾನೀಯವನ್ನು ಸುರಕ್ಷಿತವಾಗಿ ಇಡಬಹುದು. ಆದರೆ ಹೆಚ್ಚು ಕಾಲ ದಾಸ್ತಾನಿನಲ್ಲಿಡಬೇಕಾದರೆ ಶೇಕಡಾ ೦.೦೫ ಸೋಡಿಯಂ ಬೆಂಜೋಯೇಟನ್ನು ಸಿದ್ಧಗೊಳಿಸಿದ ಪಾನೀಯಕ್ಕೆ ಸೇರಿಸಬೇಕು.

ಇಂಗಾಲೀಕರಣಗೊಳಿಸಿದ ಕಿತ್ತಳೆ ಸಿರಪ್ ತಯಾರಿಸಬಹುದು. ಇದಕ್ಕೆ ಸಕ್ಕರೆ ಪಾಕ ಬಳಸಬೇಕಾಗುತ್ತದೆ. ೧೦ ಪೌಂಡು ಕಿತ್ತಳೆರಸಕ್ಕೆ ೧೫.೫ ಪೌಂಡು ಸಕ್ಕರೆ ಮತ್ತು ೭ ಔನ್ಸು ಸಿಟ್ರಿಕ್ ಆಮ್ಲ ಸೇರಿಸಬೇಕು. ೧೦-೧೨ ಔನ್ಸು ಗಾತ್ರದ ಸೀಸೆಗಳಲ್ಲಿ ೧.೫-೨ ಔನ್ಸು ರಸ ತುಂಬಬೇಕು. ಅನಂತರ ಇದನ್ನು ಇಂಗಾಲೀಕರಣಗೊಳಿಸಬೇಕು. ಅನಾನಸ್, ಲೆಮನ್, ನಿಂಬೆ ಮುಂತಾದ ಇತರ ಸಿರಪಗಳನ್ನು ಇದೇ ವಿಧಾನದಿಂದ ತಯಾರಿಸಬಹುದು.

ಸಾಂದ್ರೀಕರಿಸಿದ ರಸಗಳು

ಕೇವಲ ಸಕ್ಕರೆಯೊಂದನ್ನೇ ಸೇರಿಸಿ, ಹಣ್ಣಿನ ರಸಗಳಿಂದ ಹಲವು ಬಗೆಯ ಸ್ಕ್ವಾಷ್ ಮತ್ತು ಸಿರಪ್ ಗಳನ್ನು ನಮ್ಮ ದೇಶದಲ್ಲಿ ತಯಾರಿಸುತ್ತಾರೆ. ಇತರ ದೇಶಗಳಲ್ಲಿ ಸಾಂದ್ರೀಕರಿಸಿದ ಶುದ್ಧ ರಸಗಳು ಹೆಚ್ಚು ಜನಪ್ರಿಯವಾಗಿವೆ. ಇವುಗಳನ್ನು ಕೆಲವು ವೇಳೆ ಶೀತಘನೀಕರಿಸುವುದೂ ಉಂಟು. ಯುರೋಪ್ ಖಂಡದ ವಿವಿಧ ಭಾಗಗಳಲ್ಲಿ, ಇಂಗ್ಲೆಂಡ್ ಮತ್ತು ಅಮೇರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಸಾಂದ್ರೀಕರಿಸಿದ ಹಣ್ಣಿನ ರಸಗಳಿಗೆ ಭಾರಿ ಬೇಡಿಕೆಯಿದೆ. ಮಕ್ಕಳ ಆಹಾರವಾಗಿ (ವಿಟಮಿನ್-’ಸಿ’ ಮೂಲವಾಗಿ), ಐಸ್ ಕ್ರೀಮ್ ಮತ್ತು ಇಂಗಾಲೀಕರಣಗೊಳಿಸಿದ ಪಾನೀಯಗಳನ್ನು ತಯಾರಿಸಲು ಈ ರಸವನ್ನು ಅಲ್ಲಿ ಉಪಯೋಗಿಸುತ್ತಾರೆ. ೬೮.೭೨ ಬ್ರಿಕ್ಸ್ ಇರುವ ಸೇಬು ಮತ್ತು ದ್ರಾಕ್ಷಿ ರಸಗಳನ್ನು ತಯಾರಿಸಿ, ಅನಂತರ ಇಂಥ ಪಾನೀಯಗಳನ್ನು ಸಿದ್ಧಗೊಳಿಸುತ್ತಾರೆ.

ರಸಗಳನ್ನು ಶೀತಘನೀಕರಿಸಿದಾಗ ಅಥವಾ ಕಡಿಮೆ ಒತ್ತಡದಲ್ಲಿ ಇಂಗಿಸಿದಾಗ ನೈಜವಾಗಿರುವ ವಾಸನೆ ಸಂಪೂರ್ಣ ನಾಶವಾಗಿವುದಿಲ್ಲ. ಈ ರೀತಿ ನಿಂಬೆಜಾತಿಯ ಹಣ್ಣುಗಳ ರಸ ತಯಾರಿಸಲು ವಿಶೇಷ ರೀತಿಯಲ್ಲಿ ನಿಯೋಜಿಸಿರುವ ಯಂತ್ರೋಪಕರಣಗಳು ಬೇಕು. ಕಡಿಮೆ ಉಷ್ಣತೆಯಲ್ಲಿ ಅಂದರೆ ೩೫-೪೦ ಸೆ. ನಲ್ಲಿ ಸಾಂದ್ರೀಕರಿಸುವ ಕಾರ್ಯ ನಡೆಯುತ್ತದೆ. ಈ ಕಾರ್ಯಕ್ಕೆ ಹಲವು ಬಗೆಯಲ್ಲಿ ವರ್ತಿಸುವ ಪದ್ಧತಿಗಳನ್ನು ಮತ್ತು ಆವಿಯಾಗಿ ಸಾಂದ್ರೀಕರಿಸುವ ಸಾಧನಕ್ಕೆ ಶೀತಲೀಕರಣವನ್ನು ಉಪಯೋಗೆಸಬೇಕು. ಇಂಗಿಸುವಾಗ  ನಷ್ಟವಾಗುವ ವಾಸನೆಯ ರಾಸಾಯನಿಕ ಘಟಕಗಳನ್ನು ಬೇರ್ಪಡಿಸಿ, ಸಾಂದ್ರೀಕರಿಸಿದ ರಸಕ್ಕೆ ಪುನ: ಸೇರಿಸಿಬೇಕು. ಶೀತಘನೀಕರಿಸಲು ಗೋರೆಯವರ ವಿಧಾನವೊಂದಿದೆ. ಈ ವಿಧಾನದಿಂದ ರಸವನ್ನು ಮಂಜುಗಡ್ಡೆಯ ಹರಳುಗಳು ಮತ್ತು ಮೃದುವಾದ ಹಿಟ್ಟಿನಂಥ ಮಿಶ್ರಣವಾಗಿ ಘನೀಕರಿಸಬಹುದು ಇಲ್ಲವೇ ಘನಾಕೃತಿಯ ಬಿಲ್ಲೆ ರೂಪದಲ್ಲಿ ಪಡೆಯಬಹುದು. ಸಾಂದ್ರೀಕರಿಸಿದ ರಸವನ್ನು ಒಡೆದು ಪುಡಿ ಮಾಡಿ ಕೇಂದ್ರಾಪಗಾಮಿ ಯಂತ್ರದಲ್ಲಿ  ತಿರುಗಿಸಿದಾಗ ಮಂಜು ಹರಳುಗಳು ಬುಟ್ಟಿಯಲ್ಲಿ  ಉಳಿದು ಸಾಂದ್ರೀಕೃತ ರಸ ಹೊರಹರಿಯುತ್ತದೆ. ಹೀಗೆ ಕೇಂದ್ರಾಪಗಾಮಿಯಲ್ಲಿ ತಿರುಗಿಸಿ ಭಾಗಶಃ ಸಾಂದ್ರೀಕರಿಸಿದ ರಸದ ಬ್ರಿಕ್ಸ್ ೫೦ಕ್ಕೆ ಏರುತ್ತದೆ. ಸಾಂದ್ರೀಕರಿಸಿದ ರಸವನ್ನು ಶೀತಾಗಾರದಲ್ಲಿ ಸಂಗ್ರಹಿಸಬೇಕು ಇಲ್ಲವೇ ಪಾಶ್ಚೀಕರಿಸಿ ಕೆಡದಂತೆ ಮಾಡಬೇಕು. ಅಲ್ಲದೆ ಬೇರೆ ವಿಧಾನಗಳಿಂದ ತಯಾರಿಸಿದ ಸಾಂದ್ರೀಕರಿಸಿದ ರಸಕ್ಕಿಂತ ಇದರ ವಾಸನೆ ಉತ್ತಮವಾಗಿರುತ್ತದೆ. ಆದರೆ ಈ ವಿಧಾನ ಸಾಮಾನ್ಯವಾಗಿ ಪ್ರಪಂಚದ ಯಾವ ಭಾಗದಲ್ಲಿಯೂ ಬಳಕೆಯಲ್ಲಿಲ್ಲ.

ಲಿಂಡೆಕ್ರೇಸ್ ವಿಧಾನ : ಈ ವಿಧಾನದಲ್ಲಿ ನಿಧಾನವಾಗಿ ತಿರುಗುತ್ತಿರುವ ಮತ್ತು ಶೀತಲೀಕರಣಕ್ಕೊಳಗಾದ ಪೀಪಾಯಿಗಳ ಹೊರಮೈಮೇಲೆ ರಸವನ್ನು ಘನೀಕರಿಸಬೇಕು. ಪೀಪಾಯಿಯ ಮೇಲಿರುವ ಮಂಜುಗಡ್ಡೆಯನ್ನು ಅನಂತರ ಹೆರೆದು ಹೊರತೆಗೆಯಬಹುದು. ಎಡೆಬಿಡದೆ ಈ ರೀತಿ ಪೀಪಾಯಿಗಳ ಮೇಲಿನ ಮಂಜುಗಡ್ಡೆಯನ್ನು ತೆಗೆದುಹಾಕುವುದರಿಂದ ತೊಟ್ಟಿಯಲ್ಲಿರುವ ರಸ ಸಾಂದ್ರವಾಗುತ್ತದೆ.

ಇತ್ತೀಚೆಗೆ ಕ್ರುಯೆಸ್ ರವರು ಸೇಬು ಹಣ್ಣಿನ ವಾಸನೆಯ ಅಂಶಗಳನ್ನು ರಸ ಸಾಂದ್ರೀಕರಿಸುವಾಗಲೇ ಪಡೆಯುವ ವಿಧಾನವನ್ನು ಕಂಡು ಹಿಡಿದಿದ್ದಾರೆ. ಎಡೆಬಿಡದೆ ಪ್ರವಹಿಸುತ್ತಿರುವ ರಸವನ್ನು ಒತ್ತಡದಲ್ಲಿ ೩೨೦ ಫ್ಯಾ. ನಲ್ಲಿ ಕಾಯಿಸಬೇಕು. ಬಿಸಿಯಾದ ರಸ ಯಂತ್ರದ ಬೇರೊಂದು ಭಾಗಕ್ಕೆ ಫ್ಲಾಷ್ ಆವಿಯಾಗಿರುವ ವಿಧಾನದಿಂದ ಹೊರಟುಹೋಗುತ್ತದೆ. ಈ ರೀತಿ ರಸದ ಗಾತ್ರದ ಶೇಕಡಾ ೧೦ರಷ್ಟು ಆವಿಯಾಗುತ್ತದೆ. ಈ ಆವಿಯನ್ನು ೭೦ ಫ್ಯಾ.ನಲ್ಲಿ ಸಾಂದ್ರೀಕರಿಸಬೇಕು. ಈ ರೀತಿ ಭಟ್ಟಿ ಇಳಿಸಿದ ಸಾಂದ್ರ ವಸ್ತುವಿನಲ್ಲಿ ಸೇಬಿನಲ್ಲಿರುವ ವಾಸನೆ ನೀಡುವ ಬಹುಪಾಲು ಎಸ್ಟರಗಳಿರುತ್ತವೆ. ಈ ಅಂಶವನ್ನು ಸಾಂದ್ರೀಕರಿಸಿದ ರಸಕ್ಕೆ ಸೇರಿಸಿದಾಗ ಅದು ನೈಜವಾದ ಸೇಬಿನ ವಾಸನೆಯನ್ನು ಪಡೆಯುತ್ತದೆ. ಪ್ರಾಯಶಃ ಸಾಂದ್ರೀಕರಿಸಿದ ಇತರ ರಸಗಳನ್ನು ತಯಾರಿಸಲು ಸಹ ಈ ವಿಧಾನ ಬಳಸಲು ಸಾಧ್ಯವಿದೆ.

ಇತ್ತೀಚೆಗೆ ಸಾಂದ್ರೀಕರಿಸಿದ ಹಣ್ಣಿನ ರಸಗಳನ್ನು ಕುರಿತು ಕ್ರಮವಾದ ಅಧ್ಯಯನವೊಂದನ್ನು ನಡೆಸುವಾಗ, ಕಿತ್ತಳೆ ಹಣ್ಣಿನ ಸಾಂದ್ರೀಕರಿಸಿದ ರಸದಲ್ಲಿರುವ ಕಹಿಯಾಗಿಸುವ ಮತ್ತು ರಸವನ್ನು ಸ್ವಲ್ಪ ಮಟ್ಟಿಗೆ ಮಂದ ಮತ್ತು ಸುಕ್ಕು ಮಾಡುವ ವಿಧಾನವನ್ನು ಸಿದ್ಧಪ್ಪ ಮತ್ತು ಭಾಟಿಯರವರು ಗಮನಿಸಿದ್ದಾರೆ. ಕಹಿರಹಿತವಾಗಿ ಮತ್ತು ಸ್ವಲ್ಪ ಮಸಕಾಗದಂಥ ಸಾಂದ್ರೀಕರಿಸಿದ ರಸ ತಯಾರಿಸುವ ವಿಧಾನವೊಂದನ್ನು ಇವರು ಕ್ರಮಪಡಿಸಿದ್ದಾರೆ. ಅದರಲ್ಲೂ ಸಡಿಲ ಸಿಪ್ಪೆಯ ನಾಗಪುರ ಮತ್ತು ಕೊಡಗು ಕಿತ್ತಳೆ ಹಣ್ಣುಗಳ ಸಾಂದ್ರೀಕರಿಸಿದ ರಸ ತಯಾರಿಸಲು ಈ ವಿಧಾನವು ವಿಶೇಷವಾಗಿ ಅನುಕೂಲವಾಗಿದೆ. ಆದರೆ ಇಂಥ ಹಣ್ಣುಗಳಿಂದ, ರಸ ಹಿಂಡುವ ವಿಧಾನಗಳಲ್ಲಿ ಸೂಕ್ತ ಬದಲಾವಣೆ ಮಾಡಿ ಫ್ಲಾಷ್ ಪಾಶ್ಚೀಕರಣವಾದ ರಸವನ್ನು ಕೇಂದ್ರಾಪಗಾಮಿ ಯಂತ್ರಕ್ಕೆ ಹಾಕಿದಾಗ ಸಂಗ್ರಹಣೆಯ ಕಾಲದಲ್ಲಿ ಕಹಿ ರಹಿತವಾಗಿರುವ ಮತ್ತು ಸ್ವಲ್ಪ ಮಟ್ಟಿಗೆ ಮಂದವಾಗಿ ಮಸುಕಾಗದೇ ಇರುವ ಸಾಂದ್ರೀಕರಿಸಿದ ರಸ ಸಿದ್ಧಗೊಳಿಸಬಹುದು. ರಸದಲ್ಲಿ ನೈಜವಾಗಿರುವ ಮತ್ತು ಅದಕ್ಕೆ ಸೇರಿಸಿದ ಅಸ್ಕೋರ್ಬಿಕ್ ಆಮ್ಲವು ಸಾಂದ್ರೀಕರಿಸಿ ರಸದ ಸಂಗ್ರಹಣೆಯ ಕಾಲದಲ್ಲಿ ಹೇಗೆ ಬದಲಾಯಿಸುತ್ತದೆ ಎಂಬುದನ್ನು ಸಿದ್ದಪ್ಪ ಮತ್ತು ಭಾಟಿಯ ಪರಿಶೀಸಿದ್ದಾರೆ. ಸಾಮಾನ್ಯ ಉಷ್ಣತೆಗಳಲ್ಲಿ ಇಂಥ ರಸ ಸಂಗ್ರಹಿಸಿದಾಗ ಅಸ್ಕೋರ್ಬಿಕ್ ಆಮ್ಲವು ಗಮನಾರ್ಹ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಆದರೆ ೨-೫ ಸೆ.ನಲ್ಲಿ ಸಂಗ್ರಹಿಸುವಾಗ ಅತ್ಯಲ್ಪ ಪ್ರಮಾಣದಲ್ಲಿ ಈ ಅಂಶ ಸ್ಪಷ್ಟವಾಗುತ್ತದೆ.

ಹಣ್ಣಿನ ರಸದ ಪುಡಿ

ತುಂತುರು ವಿಧಾನದಿಂದ ಒಣಗಿಸಿದ ಹಣ್ಣಿನ ರಸದ ಪುಡಿಗಳಿಗೆ ಅಧಿಕ ಪ್ರಮಾಣದಲ್ಲಿ ಜಲಾಕರ್ಷಕ ಗುಣವಿರುತ್ತದೆ. ಆದುದರಿಂದ ಅವು ಒಣಗಿಸುವ ಕಾಲದಲ್ಲಿ ತಮ್ಮ ನೈಜವಾದ ಮೂಲ ವಾಸನೆಯನ್ನು ಕಳೆದುಕೊಳ್ಳುತ್ತವೆ. ಅಮೇರಕದ ಸಂಯುಕ್ತ ಸಂಸ್ಥಾನಗಳಲ್ಲಿ ನಿಂಬೆ ಜಾತಿ ಹಣ್ಣಿನ ರಸದ ಪುಡಿಯು ಸಿಹಿಯಾಗಿರುವಂತೆ ತಯಾರಿಸಿದ್ದಾರೆ. ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ಕೊಡಗು ಕಿತ್ತಳೆ, ಮಾವಿನ ಹಣ್ಣು, ಹಲಸು, ಸೀಬೆ, ಟೊಮೆಟೊ ಮುಂತಾದ ಹಣ್ಣುಗಳ ರಸಗಳಿಂದ ಪುಡಿ ತಯಾರಿಸುವ ವಿಧಾನವನ್ನು ಮೂರು ವರ್ಷಗಳ ಪರಿಶೋಧನೆಯ ಫಲವಾಗಿ ಕಂಡುಹಿಡಿಯಲಾಗಿದೆ. ಇದು ಸ್ವಾಮ್ಯ ಪಡೆದ ವಿಧಾನ. ಹಣ್ಣಿನ ರಸದ ಪುಡಿಗಳನ್ನು ಸೂಕ್ಷ್ಮ ರೀತಿಯ ಧಾರಕಗಳಲ್ಲಿ ತುಂಬಿ, ವಿವಿಧ ಪ್ರದೇಶಗಳಿಗೆ ಕಳುಹಿಸಿ ಅಗ್ಗದ ಬೆಲೆಗೆ ಆರೋಗ್ಯದ ಉತ್ತಮ ನಿಯಮಗಳಿಗನುಗುಣವಾಗಿ ಮಾರಬಹುದು. ಇಂಥ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸಲು ಹೆಚ್ಚಿನ ಅವಕಾಶವಿದೆ. ಈ ವಿಷಯದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ.