ಸಾಮಾನ್ಯವಾಗಿ ಸಿಹಿ ಕಿತ್ತಳೆ, ಮ್ಯಾಂಡರೀನ್ (ಸಂಗ್ತ್ರ), ಹುಳಿನಿಂಬೆ (ಕಗ್ಜಿ ನಿಂಬು ಅಥವಾ ಲಿಂಬು), ಲೆಮನ್, ಚಕ್ಕೋತ ಜಾತಿ ಹಣ್ಣುಗಳು, ದ್ರಾಕ್ಷಿ, ಸೇಬು, ಮಾವು, ದಾಳಿಂಬೆ, ಫಾಲ್ಸ್, ನೇರಳೆ (ಜಾಮನ್), ಹಿಪ್ಪು ನೇರಳೆ, ಫ್ಯಾಷನ್ ಹಣ್ಣು ಮುಂತಾದವುಗಳಿಂದ ಪಾನೀಯಗಳನ್ನು ತಯಾರಿಸಬಹುದು. ಟೊಮೆಟೊ ರಸ ಹೆಚ್ಚು ಮುಂತಾದವುಗಳಿಂದ ಪಾನೀಯಗಳನ್ನು ತಯಾರಿಸಬಹುದು. ಟೊಮೆಟೊ ರಸ ಹೆಚ್ಚು ಜನಪ್ರಿಯವಾಗಿದೆ. ಸ್ಕ್ವಾಷ್ಗಳ ಪೈಕಿ ಸಿಹಿಯಾಗಿರುವಂತೆ ತಯಾರಿಸಿದ ಕಿತ್ತಳೆ ರಸ ‘ಕಿತ್ತಳೆಸ್ಕ್ವಾಷ್’ ಎಂಬ ಹೆಸರಿನಿಂದ ಜನಪ್ರಿಯವಾಗಿದೆ.
ಸ್ಕ್ವಾಷ್ ಮತ್ತು ಕಾರ್ಡಿಯಲ್ಗಳು
ಸ್ಕ್ವಾಷ್ ಮತ್ತು ಕಾರ್ಡಿಯಲ್ಗಳ ರೂಪದಲ್ಲಿ ಹಣ್ಣಿನ ರಸವನ್ನು ಸೀಸೆಗಳಲ್ಲಿ ತುಂಬಿ, ಮೊಹರು ಮಾಡುವುದು ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಆಚರಣೆಯಲ್ಲಿದೆ. ಈ ಪೈಕಿ ಕೆಲವು ಪ್ರಮುಖ ಪಾನೀಯಗಳನ್ನು ತಯಾರಿಸುವ ವಿಧಾನಗಳನ್ನು ಈ ಕೆಳಗೆ ಕೊಡಲಾಗಿದೆ.
ಕಿತ್ತಳೆ ಸ್ಕ್ವಾಷ್ : ರಸ ಹಿಂಡುವ ವಿಧಾನ : ಮಾಲ್ಟಾ ಮತ್ತು ಸಾತ್ಗುಡಿಯಂಥ ತೊಳೆಗಳಿಗೆ ನಿಕಟವಾಗಿ ಸಿಪ್ಪೆ ಅಂಟಿರುವ ಕಿತ್ತಳೆ ಹಣ್ಣುಗಳಿಂದ ಸ್ಕ್ವಾಷ್ ತಯಾರಿಸಬಹುದು. ಇದೇ ರೀತಿ ಸಡಿಲ ಸಿಪ್ಪೆಯ ನಾಗಪುರ ಮತ್ತು ಕೊಡಗು ಕಿತ್ತಳೆಗಳನ್ನು ಈ ಕಾರ್ಯಕ್ಕೆ ಉಪಯೋಗಿಸಬಹುದು. ತೊಳೆಗಳಿಗೆ ನಿಕಟವಾಗಿ ಸಿಪ್ಪೆ ಅಂಟಿರುವ ಕಿತ್ತಳೆಯನ್ನು ಕೈಯಿಂದ ಇಲ್ಲವೇ ಹಣ್ಣು ಭಾಗ ಮಾಡುವ ಯಂತ್ರದಿಂದ ಎರಡು ಭಾಗ ಮಾಡಬಹುದು. ಈ ರೀತಿ ಅರ್ಧ ಮಾಡಿದ ಹಣ್ಣಿನ ಒಂದು ಭಾಗವನ್ನು ಕೈಯಲ್ಲಿ ಹಿಡಿದು ತಿರುಗುತ್ತಿರುವ ಸಾಣೆ ಹಿಡಿಯ ಅಥವಾ ‘ರೋಸ್’ ಸಾಧನಕ್ಕೆ ಒತ್ತಿ ಹಿಡಿದಾಗ ಹೊರಬರುವ ರಸವನ್ನು ಕೆಳಗಿರುವ ಪಾತ್ರೆಯಲ್ಲಿ ಸಂಗ್ರಹಿಸಬಹುದು. ಇದರಲ್ಲಿ ವಿವಿಧ ಗಾತ್ರ ಮತ್ತು ಆಕಾರದ ಹಲವು ಬಗೆಯ ಯಂತ್ರಗಳಿವೆ. ರಸದಲ್ಲಿ ಒರಟಾದ ಹಣ್ಣಿನ ಊತಕಗಳು, ಬೀಜಗಳು ಇವೇ ಮುಂತಾದವು ಇರುತ್ತವೆ. ಸೂಕ್ಷ್ಮ ಬಲೆಗಳಿರುವ ಬಟ್ಟೆ ಅಥವಾ ಜರಡಿಯಲ್ಲಿ ಶೋಧಿಸಿ, ಇವುಗಳನ್ನು ಬೇರ್ಪಡಿಸಬಹುದು. ಇಂಥ ಜರಡಿಗೆ ‘ಪಲ್ಟರ್’ ಎನ್ನುತ್ತಾರೆ. ಹಣ್ಣಿನ ರಸ ಇಂಥ ಪಲ್ಟರ್ನ ಕೊಳೆವೆಯಾಕಾರದ ಜರಡಿಯ ಮೂಲಕ ಬರುವಾಗ ಸಂಪರ್ಕ ಪಡೆಯುತ್ತದೆ. ಈ ರೀತಿ ಸಂಪರ್ಕ ಬರಲು ತಿರುಗುತ್ತಿರುವ ಸ್ಟೇನ್ಲೆಸ್ ಸ್ಟೀಲಿನ, ಮರದ ಅಥವಾ ಕುಂಚದಂತಿರುವ ಮೋಟಾಗಿರುವ ಹುಟ್ಟು ರೀತಿಯ ಸಾಧನಗಳು ಸಹಾಯ ಮಾಡುತ್ತವೆ. ಜರಡಿಯ ಮೂಲಕ ಹಾದುಬಂದ ರಸವನ್ನು ಸ್ಕ್ವಾಷ್ ತಯಾರಿಸಲು ಬಳಸಬಹುದು.
ಸಡಿಲ ಸಿಪ್ಪೆಯ ಕಿತ್ತಳೆ ಹಣ್ಣುಗಳ ಸಿಪ್ಪೆಯನ್ನು ಸುಲಿದು ತೊಳೆಗಳಿಗೆ ಅಂಡಿರುವ ಬಿಳಿಭಾಗವನ್ನು ಬೇರ್ಪಡಿಸಬೇಕು. ಇಲ್ಲವಾದರೆ ರಸ ಕಹಿಯಾಗುತ್ತದೆ. ಕ್ಷಾರದ್ರವದಲ್ಲಿ ತೊಳೆಗಳನ್ನು ಅದ್ದುವುದರಿಂದ ಕಹಿ ಅಂಶಗಳು ನಾಶವಾಗುತ್ತವೆ ಎಂದು ಸಿದ್ಧಪ್ಪನವರು ತಿಳಿಸುತ್ತಾರೆ. ಸ್ಕ್ರೂ ಬಗೆಯ ರಸ ಹಿಂಡುವ ಯಂತ್ರದಿಂದ ಈ ತೊಳೆಗಳ ರಸ ಹಿಂಡಬಹುದು. ಇದರ ಬದಲು ಟೊಮೆಟೊ ಹಣ್ಣು ಜಜ್ಜುವ ಸಾಧನದಲ್ಲಿ ಬರುವ ರಸವನ್ನು ಪಲ್ಟರ್ ಮೂಲಕ ಹಾಯಿಸಬಹುದು.
ಪಾಕ ಪರಿಕರ ಪಟ್ಟಿ
ಸೇರಿಸಬಹುದಾದ ವಸ್ತುಗಳು |
೨೫% ರಸ |
೩೩% ರಸ |
೨೫% ರಸ |
೩೩%ರಸ |
||||
ಪೌಂ. |
ಔ |
ಪೌಂ. |
ಔ |
ಪೌಂ. |
ಔ |
ಪೌಂ. |
ಔ |
|
ಕಿತ್ತಳೆ ರಸ (೦.೮ ಆಮ್ಲತೆ, ೧೦೦ಬ್ರಿಕ್ಸ್) | ೧೦೦ | ೦ | ೧೦೦ | ೦ | ೧೦೦ | ೦ | ೧೦೦ | ೦ |
ಸಕ್ಕರೆ | ೧೬೪ | ೯ | ೧೨೧ | ೨ | ೨೪೨ | ೯ | ೧೭೯ | ೦ |
ಸಿಟ್ರಿಕ್ ಆಮ್ಲ | ೫ | ೩ | ೩ | ೧೧ | ೭ | ೩ | ೫ | ೩ |
ಹಣ್ಣಿನ ಸುಗಂಧ ಸಾರ | ೨ | ೮ | ೧ | ೧೪ | ೩ | ೫ | ೨ | ೯ |
ನೀರು | ೧೨೭ | ೮ | ೧೩ | ೨ | ೪೬ | ೧೧ | ೧೨ | ೭ |
ಕಿತ್ತಳೆ ಬಣ್ಣ | ಅಗತ್ಯದಷ್ಟು | ಅಗತ್ಯದಷ್ಟು | ಅಗತ್ಯದಷ್ಟು | ಅಗತ್ಯದಷ್ಟು | ||||
ಸಂರಕ್ಷಕ (ಪೊಮೆಬೈ = ಪೊಟ್ಯಾಸಿಯಂ ಮೆಟಾಬೈಸಲ್ಫೈಟ್) |
ಸ್ಕ್ವಾಷ್ ತಯಾರಿಸುವುದು :
ಸಕ್ಕರೆ, ಸಿಟ್ರಿಕ್ ಆಮ್ಲ,ಸುವಾಸನೆ ನೀಡುವ ವಸ್ತುಗಳು, ಬಣ್ಣ ಮತ್ತು ರಾಸಾಯನಿಕ ಸಂರಕ್ಷಕವನ್ನು ರಸಕ್ಕೆ ಸೇರಿಸಬೇಕು. ಸಣ್ಣ ಪ್ರಮಾಣದಲ್ಲಿ ಸ್ಕ್ವಾಷ್ ತಯಾರಿಸುವ ಸರಳ ವಿಧಾನವನ್ನು ಲಾಲ್ಸಿಂಗ್, ಗಿರಿಧಾರಿಲಾಲ್ ಮತ್ತು ಇತರರು ನಿರ್ಧರಿಸಿದ್ದಾರೆ.
ಸಕ್ಕರೆ , ಸಿಟ್ರಿಕ್ ಆಮ್ಲ ಮತ್ತು ನೀರನ್ನು ಬೆರೆಸಿ, ಅಗತ್ಯವಿದ್ದರೆ ಕಾಯಿಸಬೇಕು. ಮಿಶ್ರಣವನ್ನು ತಣ್ಣಗೆ ಮಾಡಿ, ಬಳಿಕ ಬಟ್ಟೆಯಲ್ಲಿ ಶೋಧಿಸಬೇಖು. ಹೀಗೆ ಶೂದ್ಧವಾದ ಸಕ್ಕರೆಯ ಪಾಕವನ್ನು ರಸಕ್ಕೆ ಸೇರಿಸಬೇಕು. ಸ್ಕ್ವಾಷ್ನ ವಾಸನೆಯನ್ನು ಉತ್ತಮಪಡಿಸಲು ಪ್ರತಿ ನೂರು ಕಿತ್ತಳೆ ಹಣ್ನೀನ ರಸಕ್ಕೆ ೨-೪ ಕಿತ್ತಳೆ ಸಿಪ್ಪೆಯ ಜಜ್ಜಿದ ಸೂಕ್ಷ್ಮ ತಿರುಳಿನ ಎಮಲ್ಷನ್ ಸೇರಿಸಬೇಕು. ಇದರ ಬದಲು ಕಿತ್ತಳೆ ಸಿಪ್ಪೆಯ ಸುಗಂಧ ತೈಲ ಅಥವಾ ಕಿತ್ತಳೆ ಸುಗಂಧಸಾರ ಸಹ ಸೇರಿಸಬಹುದು. ಖಾದ್ಯ ಯೋಗ್ಯವಾದ ಸನ್ಸೆಟ್ ಹಳದಿ, ಎಡಿಕಾಲ್ ಕಿತ್ತಳೆ A.G. ಮುಂತಾದ ಬಣ್ಣಗಳನ್ನು ಉಪಯೋಗಿಸಿ ಸ್ಕ್ವಾಷ್ನ ಬಣ್ಣವನ್ನು ಉತ್ತಮಗೊಳಿಸಬಹುದು. ಆದರೆ ಉಪಯೋಗಿಸಿದ ಈ ಬಣ್ಣಗಳು ಗಂಧಕದ ಡೈ ಆಕ್ಸೈಡ್ನ ಜೊತೆ ಪರಿವರ್ತನೆಗೊಳ್ಳಬಾರದು. ಸೇರಿಸಬೇಕಾದ ಇತರ ಎಲ್ಲ ವಸ್ತುಗಳನ್ನು ಮಿಶ್ರ ಮಾಡಿದ ಬಳಿಕ ಪೊಟ್ಯಾಸಿಯಂ ಮೆಟಾ ಬೈ ಸಲ್ಫೈಟ್ನಂಥ ರಾಸಾಯನಿಕ ಸಂರಕ್ಷಕವನ್ನು ಸೇರಿಸಬೇಕು. ಸೇರಿಸುವ ಮೊದಲು ಸ್ವಲ್ಪ ನೀರಿನಲ್ಲಿ ಇದನ್ನು ಕರಗಿಸಿಕೊಳ್ಳಬೇಕು. ಅನಂತರ ರಸಕ್ಕೆ ಸೇರಿಸಿ ಚೆನ್ನಾಗಿ ಬೆರೆಸಬೇಕು. ಪ್ರತಿ ೧೦೦ ಪೌಂಡ್ಉ ರಸಕ್ಕೆ ೧ ಜೌನ್ಸ್ ಮೆಟಾ ಬೈ ಸಲ್ಫೈಟನ್ನು ಸೇರಿಸಬೇಕು. ಇದು ಸ್ಕ್ವಾಷ್ನ ಪ್ರತಿ ದಶಲಕ್ಷ ಭಾಗರಸದಲ್ಲಿ ೩೫೦ ಭಾಗದಷ್ಟು ಗಂಧಕದ ಡೈ ಆಕ್ಸೈಡ್ನ್ನು ಉತ್ಪತ್ತಿ ಮಾಡುತ್ತದೆ. ಕಾಯಿದೆ ಪ್ರಕಾರ ಈ ಪ್ರಮಾಣಕ್ಕೆ ಅನುಮತಿ ದೊರೆತಿದೆ. ಆರೋಗ್ಯದ ನಿಯಮಗಳನ್ನು ಎಚ್ಚರಿಕೆಯಿಂದ ಪಾಲಿಸಿದರೆ, ಈ ಪ್ರಮಾಣ ೨೫೦ ರಷ್ಟು ಇದ್ದರೂ ಸಾಕಾಗುತ್ತದೆ. ಈ ರೀತಿ ಗಂಧಕದ ಡೈ ಆಕ್ಸೈಡ್ ರುಚಿ ಪಾನೀಯದಲ್ಲಿ ಅತ್ಯಲ್ಪ ಮಟ್ಟದಲ್ಲಿರುತ್ತದೆ. ಸೂಕ್ಷ್ಮಜೀವಿ ರಹಿತವಾಗಿರುವಂತೆ, ಪೂರ್ವಭಾವಿಯಾಗಿ ಹದ ಮಾಡಿರುವ ಮತ್ತು ಚೊಕ್ಕವಾಗಿ ಆದರೆ ತೇವರಹಿತವಾಗಿರುವ ಸೀಸೆಗಳಿಗೆ ಸ್ಕ್ವಾಷ್ ತುಂಬಬೇಕು. ಸೀಸೆಗಳಿಗೆ ಮುಚ್ಚಳ ಜೋಡಿಸುವ ಮುನ್ನ ಮುಚ್ಚಳದಡಿ ಒಂದು ಅಂಗುಲ ಖಾಲಿ ಜಾಗ ಇರುವಂತೆ ನೋಡಿಕೊಳ್ಳಬೇಕು. ಸೀಸೆಗಳಿಗೆ ಉತ್ಪನ್ನಗಳ ಹೆಸರಿನ ಚೀಟಿ ಅಂಟಿಸಬೇಕು. (ಚಿತ್ರಗಳು ೨೬, ೨೮) ಅನಂತರ ತಂಪಾಗಿರುವ ಆದರೆ ತೇವರಹಿತ ಪ್ರದೇಶದಲ್ಲಿ ಸೀಸೆಗಳನ್ನು ಸಂಗ್ರಹಿಸಿಡಬಾರದು. ಬಣ್ಣ ಅಥವಾ ವಾಸನೆಯಲ್ಲಿ ಹೆಚ್ಚು ವ್ಯತ್ಯಾಸ ತೋರಿಸದೆ ಸುರಕ್ಷಿತವಾಗಿ ೧ ರಿಂದ ೧.೫ ವರ್ಷಕಾಲ ದಾಸ್ತಾನಿಡಬಹುದು.
ಚಕ್ಕೋತ ಸ್ಕ್ವಾಷ್ : ಕಿತ್ತಳೆ ಹಣ್ಣಿನ ಸ್ಕ್ವಾಷ್ ತಯಾರಿಸುವ ವಿಧಾನವನ್ನನುಸರಿಸಿ ಚಕ್ಕೋತ ಜಾತಿ ಹಣ್ಣುಗಳಿಂದ ಸ್ಕ್ವಾಷ್ ತಯಾರಿಸಬಹುದು.
ಪಾಕ ಪರಿಕರ ಪಟ್ಟಿ
ಸೇರಿಸಬಹುದಾದ ವಸ್ತುಗಳು |
೨೫% ರಸ |
೩೩% ರಸ |
೨೫% ರಸ |
೩೩%ರಸ |
||||
೪೫೦ಬ್ರಿಕ್ಸ್ |
೪೫೦ಬ್ರಿಕ್ಸ್ |
೬೫೦ಬ್ರಿಕ್ಸ್ |
೬೫೦ಬ್ರಿಕ್ಸ್ |
|||||
೧.೫ % ಆಮ್ಲೀಯತೆ |
೧.೫ % ಆಮ್ಲೀಯತೆ |
೨.೦ % ಆಮ್ಲೀಯತೆ |
೨.೯ % ಆಮ್ಲೀಯತೆ |
|||||
ಪೌಂ. |
ಔ |
ಪೌಂ. |
ಔ |
ಪೌಂ. |
ಔ |
ಪೌಂ. |
ಔ |
|
ಹಣ್ಣಿನ ರಸ (೧.೨೫ ಆಮ್ಲತೆ, ೧೦೦ಬ್ರಿಕ್ಸ್) | ೧೦೦ | ೦ | ೧೦೦ | ೦ | ೧೦೦ | ೦ | ೧೦೦ | ೦ |
ಸಕ್ಕರೆ | ೧೬೫ | ೨ | ೧೨೧ | ೯ | ೨೪೩ | ೦ | ೧೮೦ | ೧ |
ಸಿಟ್ರಿಕ್ ಆಮ್ಲ | ೪ | ೧೨ | ೪ | ೪ | ೬ | ೧೨ | ೪ | ೧೨ |
ನೀರು | ೧೨೭ | ೮ | ೭೩ | ೨ | ೪೬ | ೧೧ | ೧೨ | ೭ |
ಸುಗಂಧ ಸಾರ | ೨ | ೮ | ೧ | ೧೪ | ೩ | ೫ | ೨ | ೯ |
ಸಂರಕ್ಷಕ (ಪೊಮೆಬೈ) | ೦ | ೪ | ೦ | ೩ | ೦ | ೪ | ೦ | ೩ |
ಲೆಮನ್ ಸ್ಕ್ವಾಷ್ :
ಸಾಮಾನ್ಯವಾಗಿ ಯುರೋಪ್ ದೇಶದ ಲೆಮನ್, ಯೂರೇಕ ಲೇಮನ್ ಮತ್ತು ಗಲ್ಗಲ್ಗಳನ್ನು ಸ್ಕ್ವಾಷ್ ತಯಾರಿಸಲು ಉಪಯೋಗಿಸಬಹುದು. ನಮ್ಮ ದೇಶದಲ್ಲಿ ನಿಜವಾದ ಲೆಮನ್ಗಳು ಅಧಿಕ ಪ್ರಮಾಣದಲ್ಲಿ ದೊರೆಯುವುದಿಲ್ಲ.
ಸುವಾಸನೆ ನೀಡುವ ವಸ್ತುಗಳನ್ನು ಸೇರಿಸಿ ಇದನ್ನು ಉತ್ತಮಗೊಳಿಸಬಹುದು. ಈ ಸ್ಕ್ವಾಷ್ಗೆ ರಸ ಸಿದ್ಧ ಮಾಡುವ ವಿಧಾನ ಬಹುಮಟ್ಟಿಗೆ ಕಿತ್ತಳೆ ಹಣ್ಣಿನ ರಸದ ಸ್ಕ್ವಾಷ್ಗೆ ಸಿದ್ಧ ಮಾಡುವಂತೆಯೇ ಇದೆ.
ಪಾಕ ಪರಿಕರ ಪಟ್ಟಿ
ಸೇರಿಸಬಹುದಾದ ವಸ್ತುಗಳು |
೨೫% ರಸ |
೩೩% ರಸ |
೨೫% ರಸ |
೩೩%ರಸ |
||||
೪೫೦ಬ್ರಿಕ್ಸ್ |
೪೫೦ಬ್ರಿಕ್ಸ್ |
೬೫೦ಬ್ರಿಕ್ಸ್ |
೬೫೦ಬ್ರಿಕ್ಸ್ |
|||||
೧.೬೬ % ಆಮ್ಲೀಯತೆ |
೧.೬೬ % ಆಮ್ಲೀಯತೆ |
೧.೬೬ % ಆಮ್ಲೀಯತೆ |
೧.೬೬ % ಆಮ್ಲೀಯತೆ |
|||||
ಪೌಂ. |
ಔ |
ಪೌಂ. |
ಔ |
ಪೌಂ. |
ಔ |
ಪೌಂ. |
ಔ |
|
ಲೆಮನ್ ರಸ (೫% ಆಮ್ಲತೆ, ೧೦೦ ಬ್ರಿಕ್ಸ್) | ೧೦೦ | ೦ | ೧೦೦ | ೦ | ೧೦೦ | ೦ | ೧೦೦ | ೦ |
ಸಕ್ಕರೆ | ೧೬೮ | ೧೨ | ೧೨೪ | ೧೩ | ೨೪೬ | ೧೨ | ೧೮೪ | ೧೩ |
ಸಿಟ್ರಿಕ್ ಆಮ್ಲ | ೧ | ೦ | – | – | ೩ | ೦ | – | – |
ನೀರು | ೧೨೭ | ೮ | ೭೩ | ೨ | ೪೭ | ೮ | ೧೩ | ೨ |
ಸುಗಂಧ ಸಾರ | ೨ | ೮ | ೧ | ೧೪ | ೧ | ೧೪ | ೧ | ೧೪ |
ಸಂರಕ್ಷಕ (ಪೊಮೆಬೈ) | ೦ | ೪ | ೦ | ೩ | ೦ | ೪ | ೦ | ೩ |
ನಿಂಬೆ ಸ್ಕ್ವಾಷ್ :
ನಿಂಬೆ ಹಣ್ಣಿನ ಸ್ಕ್ವಾಷ್ನ್ನು ವ್ಯಾಪಕವಾಗಿ ಕಗ್ಜಿ ನಿಂಬೆಯಿಂದ ತಯಾರಿಸುತ್ತಾರೆ. ಇದು ನಮ್ಮ ದೇಶದಲ್ಲಿ ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ.
ಪಾಕ ಪರಿಕರ ಪಟ್ಟಿ
ಸೇರಿಸಬಹುದಾದ ವಸ್ತುಗಳು |
೨೫% ರಸ |
೩೩% ರಸ |
೨೫% ರಸ |
೩೩%ರಸ |
||||
೪೫೦ಬ್ರಿಕ್ಸ್ |
೪೫೦ಬ್ರಿಕ್ಸ್ |
೬೫೦ಬ್ರಿಕ್ಸ್ |
೬೫೦ಬ್ರಿಕ್ಸ್ |
|||||
೧.೫ % ಆಮ್ಲೀಯತೆ |
೨.೦ % ಆಮ್ಲೀಯತೆ |
೧.೫ % ಆಮ್ಲೀಯತೆ |
೨.೦ % ಆಮ್ಲೀಯತೆ |
|||||
ಪೌಂ. | ಔ | ಪೌಂ. | ಔ | ಪೌಂ. | ಔ | ಪೌಂ. | ಔ | |
ಲೆಮನ್ ರಸ (೬% ಆಮ್ಲತೆ, ೧೦೦ ಬ್ರಿಕ್ಸ್) | ೧೦೦ | ೦ | ೧೦೦ | ೦ | ೧೦೦ | ೦ | ೧೦೦ | ೦ |
ಸಕ್ಕರೆ | ೧೬೯ | ೧೨ | ೧೨೪ | ೧೩ | ೨೪೯ | ೧೨ | ೧೮೪ | ೧೩ |
ನೀರು | ೧೩೦ | ೦ | ೭೫ | ೦ | ೫೦ | ೦ | ೧೫ | ೦ |
ಸಂರಕ್ಷಕ (ಪೊಮೆಬೈ) | ೦ | ೪ | ೦ | ೩ | ೦ | ೪ | ೦ | ೩ |
ಹಣ್ಣನ್ನು ಚಾಕುವಿನಿಂದ ಇಬ್ಭಾಗ ಮಾಡಿ, ಬಾಸ್ಕೆಟ್ ಒತ್ತುವ ಯಂತ್ರ ಅಥವಾ ಸಣ್ಣದಾಗಿರುವ ನಿಂಬೆ ರಸ ಹಿಂಡುವ ಸಾಧನ ಅಥವಾ ಕಲ್ಲಿನ ಉರುಳೆ ಒತ್ತು ಯಂತ್ರದಿಂದ ರಸ ಹಿಂಡಬಹುದು. ರಸವನ್ನು ಬಟ್ಟೆಯಲ್ಲಿ ಶೋಧಿಸಿ ಬೀಜವನ್ನು ಬೇರ್ಪಡಿಸಬೇಖು.
ಸಕ್ಕರೆ ಪಾಕ ತಯಾರಿಸಿ ರಸಕ್ಕೆ ಬೆರೆಸಿ, ರಸವನ್ನು ಸೀಸೆಗಳಿಗೆ ತುಂಬಬೇಕು.
ನಿಂಬೆ ರಸದ ಕಾರ್ಡಿಯಲ್ : ನಿಂಬೆ ಹಣ್ಣಿನ ರಸವನ್ನು ಎತ್ತರವಾದ ಪಿಪಾಯಿಗಳಲ್ಲಿ ಅಥವಾ ಗಾಜಿನ ಭಾರಿ ಸೀಸೆಗಳಲ್ಲಿ ಸಂಗ್ರಹಿಸಬೇಕು. ಮರದ ಪಿಪಾಯಿಗಳಿಗೆ ತೆಳುವಾದ ಮೇಣದ ಒಳಪದರ ಲೇಪಿಸಿರುತ್ತದೆ. ರಸವನ್ನು ದಾಸ್ತಾನು ಮಾಡುವ ಪ್ರತಿ ನೂರು ಪೌಂಡು ರಸಕ್ಕೆ ೨ ಜೌನ್ಸ್ ಪೊಟ್ಯಾಸಿಯಂ ಮೆಟಾ ಬೈ ಸಲ್ಫೈಟ್ ಸೇರಿಸಬೇಕು. ಎರು ಅಥವಾ ಮೂರು ತಿಂಗಳ ಬಳಿಕ ರಸದ ಮೇಲಿನ ಪದರ ತಿಳಿಯಾಗುತ್ತದೆ. ತೇಲುವ ಕಣಗಳು ತಳದಲ್ಲಿ ನಿಲ್ಲುತ್ತವೆ. ರಸವನ್ನು ಇಳಿಗೊಳವೆಯ ಮೂಲಕ ಬೇರೊಂದು ಪಾತ್ರೆಗೆ ವರ್ಗಾಯಿಸಬೇಕು. ಇದು ನಿಧಾನವಾದ ವಿಧಾನ. ಜಿಲಾಟಿನ್ ಮತ್ತು ಟ್ಯಾನಿನ್ ಅನ್ನು ಪೂರ್ವಭಾವಿ ಪರೀಕ್ಷೆಗಳಿಂದ ನಿರ್ಧರಿಸಿದ ಪ್ರಮಾಣದಲ್ಲಿ ಸೇರಿಸಿದರೆ ರಸವನ್ನು ತ್ವರಿತವಾಗಿ ತಿಳಿಯಾಗಿಸಬಹುದು. ಸಕ್ಕರೆ, ನೀರು, ಬಣ್ಣ ಮತ್ತು ಅಗತ್ಯವಿದ್ದರೆ ಸಂರಕ್ಷಕವನ್ನು ರಸಕ್ಕೆ ಬೆರೆಸಬೇಕು. ಈ ಕಾರ್ಯ ಸುಗಮವಾಗಲು ಶೋಧಿಸುವ ಸಹಾಐಕ ಸೇರಿಸಬಹುದು. ತಿಳಿಯಾದ ಕಾರ್ಡಿಯಲ್ ಅನ್ನು ನಂತರ ಸೀಸೆಗಳಲ್ಲಿ ತುಂಬಬಹುದು.
ಸಕ್ಕರೆಯನ್ನು ಪಾಕ ಮಾಡಿ ರಸಕ್ಕೆ ಸೇರಿಸಬೇಕು. ಮೂಲ ರಸಕ್ಕೆ ಸೇರಿಸಬಹುದಾದ ಸಂರಕ್ಷಕ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಕಾರ್ಡಿಯಲ್ಗೆ ಇದನ್ನು ಸೇರಿಸಬೇಕು. ಅಲ್ಪ ಪ್ರಮಾಣದಲ್ಲಿ ಅನುಮತಿ ನೀಡಿರುವ ಬಣ್ಣವನ್ನು ಸೇರಿಸಬಹುದು.
ಸೇರಿಸಬಹುದಾದ ವಸ್ತುಗಳು
ಸೇರಿಸಬಹುದಾದ ವಸ್ತುಗಳು |
೨೫% ರಸ |
೩೩% ರಸ |
೨೫% ರಸ |
೩೩%ರಸ |
||||
೩೫೦ಬ್ರಿಕ್ಸ್ |
೩೫೦ಬ್ರಿಕ್ಸ್ |
೫೦೦ಬ್ರಿಕ್ಸ್ |
೫೦೦ಬ್ರಿಕ್ಸ್ |
|||||
೧.೫ % ಆಮ್ಲೀಯತೆ |
೨.೦ % ಆಮ್ಲೀಯತೆ |
೧.೫ % ಆಮ್ಲೀಯತೆ |
೨.೦ % ಆಮ್ಲೀಯತೆ |
|||||
ಪೌಂ . |
ಔ |
ಪೌಂ . |
ಔ |
ಪೌಂ . |
ಔ |
ಪೌಂ . |
ಔ |
|
ನಿಂಬೆ ರಸ (೬% ಆಮ್ಲತೆ, ೧೦೦ಬ್ರಿಕ್ಸ್) | ೧೦೦ | ೦ | ೧೦೦ | ೦ | ೧೦೦ | ೦ | ೧೦೦ | ೦ |
ಸಕ್ಕರೆ | ೧೨೯ | ೧೨ | ೯೪ | ೧೩ | ೧೮೯ | ೧೨ | ೧೩೯ | ೧೨ |
ನೀರು | ೧೭೦ | ೧೦ | ೧೦೫ | ೦ | ೧೧೦ | ೦ | ೬೦ | ೦ |
ಬಣ್ಣ | ಅಗತ್ಯದಷ್ಟು | ಅಗತ್ಯದಷ್ಟು | ಅಗತ್ಯದಷ್ಟು | ಅಗತ್ಯದಷ್ಟು | ||||
ಸಂರಕ್ಷಕ (ಪೊಮೈಬೈ) | ೦ | ೪ | ೦ | ೩ | ೦ | ೪ | ೦ | ೩ |
ನಿಂಬೆ ಜಾತಿಯ ಹಣ್ಣಿನ ಬಾರ್ಲಿಯ ನೀರು : ನಿಂಬೆ ಜಾತಿಯ ಹಣ್ಣಿನಿಂದ ರಸ ಹಿಂಡಿ ಶೋಧಿಸಬೇಖು. ಮುಂದೆ ಸೂಚಿಸಿದ ಮೇರೆಗೆ ಬಾರ್ಲಿ ಹಿಟ್ಟನ್ನು ತೆಗೆದುಕೊಂಡು, ಸ್ವಲ್ಪ ನೀರು ಸೇರಿಸಿ, ಮುದ್ದೆಯಂತೆ ಮಾಡಬೇಕು. ಅನಂತರ ಇದಕ್ಕೆ ನೀರು ಸೇರಿಸಿ ತೆಳು ಮಾಡಬೇಕು. ಇದರ ಹಿಟ್ಟನ್ನು ಅನಂತರ ಬಿಸಿ ಮಾಡಿ ಅಂಟಿನಂತೆ ಮಾಡಿ, ತಣ್ಣಗೆ ಆರಿಸಿ, ಶೋಧಿಸಿ ಅಗತ್ಯ ಪ್ರಮಾಣದ ನೀರನ್ನು ಸೇರಿಸಬೇಕು.
ಸೇರಿಸಬೇಕಾದ ವಸ್ತುಗಳು : ೧. ಚಕ್ಕೋತ ಜಾತಿ ಹಣ್ಣಿನ ಬಾರ್ಲಿ ನೀರು :
ಸೇರಿಸಬಹುದಾದ ವಸ್ತುಗಳು |
೨೫% ರಸ |
೩೩ ೧/೩ % ರಸ |
||
೩೫೦ಬ್ರಿಕ್ಸ್ |
೪೫೦ಬ್ರಿಕ್ಸ್ |
|||
೧.೫ % ಆಮ್ಲೀಯತೆ |
೧.೫ % ಆಮ್ಲೀಯತೆ |
|||
ಪೌಂ . |
ಔ |
ಪೌಂ . |
ಔ |
|
ಚಕ್ಕೋತ ರಸ (೧.೨೫ % ಆಮ್ಲತೆ, ೧೦೦ಬ್ರಿಕ್ಸ್) | ೧೦೦ | ೦ | ೧೦೦ | ೦ |
ಸಕ್ಕರೆ | ೧೬೫ | ೦ | ೧೨೧ | ೦ |
ಸಿಟ್ರಿಕ್ ಆಮ್ಲ | ೪ | ೧೨ | ೩ | ೪ |
ಹಣ್ಣಿನ ಸುಗಂಧ ಸಾರ | ೨ | ೮ | ೭೩ | ೧ |
ಬಾರ್ಲಿ ನೀರು | ೧೨೭ | ೮ | ೭೩ | ೧ |
ಬಾರ್ಲಿ ಹಿಟ್ಟು | ೨೧ ಜೌನ್ಸ್ | ೪೬ ಜೌನ್ಸ್ | ||
ಸಂರಕ್ಷಕ (ಪೊಮೈಬೈ) | ೦ | ೪ | ೦ | ೩ |
ಸೇರಿಸಬೇಕಾದ ವಸ್ತುಗಳು : ೨. ಲೆಮನ್ ಬಾರ್ಲಿ ನೀರು :
ಸೇರಿಸಬಹುದಾದ ವಸ್ತುಗಳು |
೨೫% ರಸ |
೩೩ ೧/೩ % ರಸ |
||
೪೫೦ಬ್ರಿಕ್ಸ್ |
೪೫೦ಬ್ರಿಕ್ಸ್ |
|||
೧.೫ % ಆಮ್ಲೀಯತೆ |
೧.೫ % ಆಮ್ಲೀಯತೆ |
|||
ಪೌಂ . |
ಔ |
ಪೌಂ . |
ಔ |
|
ಲೆಮನ್ ರಸ (೫ % ಆಮ್ಲತೆ, ೧೦೦ಬ್ರಿಕ್ಸ್) | ೧೦೦ | ೦ | ೧೦೦ | ೦ |
ಸಕ್ಕರೆ | ೧೬೨ | ೧೨ | ೧೨೪ | ೧೩ |
ಸಿಟ್ರಿಕ್ ಆಮ್ಲ | ೧ | ೦ | – | – |
ಬಾರ್ಲಿ ನೀರು | ೧೨೭ | ೮ | ೭೩ | ೨ |
ಬಾರ್ಲಿ ಹಿಟ್ಟು | ೨೧ ಜೌನ್ಸ್ | ೪೬ ಜೌನ್ಸ್ | ||
ಸಂರಕ್ಷಕ (ಪೊಮೈಬೈ) | ೦ | ೪ | ೦ | ೩ |
ಸೇರಿಸಬೇಕಾದ ವಸ್ತುಗಳು : ೩. ನಿಂಬೆ ಬಾರ್ಲಿ ನೀರು :
ಸೇರಿಸಬಹುದಾದ ವಸ್ತುಗಳು |
೨೫% ರಸ |
೩೩ ೧/೩ % ರಸ |
||
೪೫೦ಬ್ರಿಕ್ಸ್ |
೪೫೦ಬ್ರಿಕ್ಸ್ |
|||
೧.೫ % ಆಮ್ಲೀಯತೆ |
೧.೫ % ಆಮ್ಲೀಯತೆ |
|||
ಪೌಂ . | ಔ | ಪೌಂ . | ಔ | |
ಲೆಮನ್ ರಸ (೬ % ಆಮ್ಲತೆ, ೧೦೦ಬ್ರಿಕ್ಸ್) | ೧೦೦ | ೦ | ೧೦೦ | ೦ |
ಸಕ್ಕರೆ | ೧೬೯ | ೧೨ | ೧೨೪ | ೧೩ |
ಬಾರ್ಲಿ ನೀರು | ೧೩೦ | ೦ | ೭೫ | ೦ |
ಬಾರ್ಲಿ ಹಿಟ್ಟು | ೨೧ ಜೌನ್ಸ್ | ೧೬ ಜೌನ್ಸ್ | ||
ಸಂರಕ್ಷಕ (ಪೊಮೈಬೈ) | ೦ | ೪ | ೦ | ೩ |
ಹಲಸಿನ ಮಧು : ಪಕ್ವವಾದ ಹಲಸಿನ ಹಣ್ಣಿನ ತೊಳೆಗಳನ್ನು ಬೇರ್ಪಡಿಸಬೇಖು. ತೊಳೆಗಳನ್ನು ಅತಿ ಸೂಕ್ಷ್ಮವಾಗಿ ಚೂರು ಮಾಡುವ ಯಂತ್ರಕ್ಕೆ ಹಾಕಿ, ಹಣ್ಣಿನ ಮುದ್ದೆ ತಯಾರಿಸಬಹುದು. ಹಣ್ಣಿನ ಶೇಕಡಾ ೧೦ ರಷ್ಟು ನೀರು ಸೇರಿಸಿ, ಮಿಶ್ರಣವನ್ನು ಒಂದು ಮಿಲಿಮೀಟರ್ ರಂಧ್ರವಿರುವ ಜರಡಿಯಲ್ಲಿ ಹೊಂದಿಸಿರುವ ಪಲ್ಪರ್ ಮೂಲಕ ಹಾಯಿಸಬೇಕು. ಈ ತಿರುಳಿನಿಂದ ಹಲಸಿನ ಹಣ್ಣಿನ ಮಧು ತಯಾರಿಸಬಹುದು.
ಸೇರಿಸಬೇಕಾದ ವಸ್ತುಗಳು : ೪. ಕಿತ್ತಳೆ ಬಾರ್ಲಿ ನೀರು :
ಸೇರಿಸಬಹುದಾದ ವಸ್ತುಗಳು |
೨೫% ರಸ |
೩೩ ೧/೩ % ರಸ |
||
೪೫೦ಬ್ರಿಕ್ಸ್ |
೪೫೦ಬ್ರಿಕ್ಸ್ |
|||
೧.೫ % ಆಮ್ಲೀಯತೆ |
೧.೫ % ಆಮ್ಲೀಯತೆ |
|||
ಪೌಂ . |
ಔ |
ಪೌಂ . |
ಔ |
|
ಕಿತ್ತಳೆ ರಸ (೦.೮ % ಆಮ್ಲತೆ, ೧೦೦ಬ್ರಿಕ್ಸ್) | ೧೦೦ | ೦ | ೧೦೦ | ೦ |
ಸಕ್ಕರೆ | ೧೬೪ | ೯ | ೧೨೧ | ೨ |
ಸಿಟ್ರಿಕ್ ಆಮ್ಲ | ೫ | ೩ | ೩ | ೧೧ |
ಹಣ್ಣಿನ ಸುಗಂಧ ಸಾರ | ೨ | ೮ | ೧ | ೧೪ |
ಬಾರ್ಲಿ ನೀರು | ೧೨೭ | ೮ | ೭೩ | ೨ |
ಬಾರ್ಲಿ ಹಿಟ್ಟು | ೨೧ ಜೌನ್ಸ್ | ೧೬ ಜೌನ್ಸ್ | ||
ಸಂರಕ್ಷಕ (ಪೊಮೈಬೈ) | ೦ | ೪ | ೦ | ೩ |
ಶೇಕಡಾ ೨೦ ಕ್ಕಿಂತ ಹೆಚ್ಚು ತಿರುಳನ್ನು ಮಧು ತಯಾರಿಸಲು ಉಪಯೋಗಿಸಬಾರದು. ಇದರಿಂದ ಮಧು ಬಹಳ ಮಂದವಾಗುತ್ತದೆ.
ನೇರಳೆ ಸ್ಕ್ವಾಷ್ ಅಥವಾ ಕ್ಷೀರ (ಸಿರಪ್) : ಹಣ್ಣುಗಳನ್ನು ಜಜ್ಜಿ ೫-೧೦ ನಿಮಿಷಗಳ ಕಾಲ ೧೪೦೦ ಫ್ಯಾ ಉಷ್ಣತೆಗೆ ಕಾಯಿಸಬೇಕು. ಆಗ ಹಣ್ಣಿನ ಬಣ್ಣ ಬೇರೆಯಾಗುತ್ತದೆ. ಜಜ್ಜಿದ ಬಾಸ್ಕೆಟ್ ಒತ್ತು ಯಂತ್ರದಲ್ಲಿ ಹಿಂಡಿ ರಸ ಪಡೆದು ಸ್ಕ್ವಾಷ್ ತಯಾರಿಸಬಹುದು.
ಪಾಕ ಪರಿಕರ ಪಟ್ಟಿ
ಸೇರಿಸಬಹುದಾದ ವಸ್ತುಗಳು |
೧೭% ರಸ |
೨೦ % ರಸ |
||
೫೦೦ಬ್ರಿಕ್ಸ್ |
೫೦೦ಬ್ರಿಕ್ಸ್ |
|||
೧.೨ % ಆಮ್ಲೀಯತೆ |
೧.೨ % ಆಮ್ಲೀಯತೆ |
|||
ಪೌಂ . | ಔ | ಪೌಂ . | ಔ | |
ತೊಳೆಗಳ ತಿರುಳು (೦.೩ % ಆಮ್ಲತೆ, ೨೦೦ಬ್ರಿಕ್ಸ್) | ೧೦೨ | ೦ | ೧೦೦ | ೦ |
ಸಕ್ಕರೆ | ೨೭೨ | ೫ | ೨೨೪ | ೦ |
ಸಿಟ್ರಿಕ್ ಆಮ್ಲ | ೬ | ೧೪ | ೫ | ೧೧ |
ಸಂರಕ್ಷಕ (ಪೊಮೈಬೈ) | ೦ | ೬ | ೦ | ೫ |
ಪಕ ಪರಿಕರ
ಸೇರಿಸಬಹುದಾದ ವಸ್ತುಗಳು |
೫೦% ರಸ |
|
೪೫೦ಬ್ರಿಕ್ಸ್ |
||
೧.೫ % ಆಮ್ಲೀಯತೆ |
||
ಪೌಂ . | ಔ | |
ನೇರಳೆ ರಸ (೦.೭೫ % ಆಮ್ಲತೆ, ೧೪೦ಬ್ರಿಕ್ಸ್) | ೧೦೦ | ೦ |
ಸಕ್ಕರೆ | ೭೩ | ೯ |
ಸಿಟ್ರಿಕ್ ಆಮ್ಲ | ೨ | ೪ |
ನೀರು | ೨೪ | ೦ |
ಸಂರಕ್ಷಕ (ಸೋ..ಬೆ) | ೦ | ೩ |
Leave A Comment