Categories
e-ದಿನ

ಅಕ್ಟೋಬರ್-13

 

ಪ್ರಮುಖ ಘಟನಾವಳಿಗಳು:

1713: ಚಾರ್ಲ್ಸ್ ಮೇಸನಿ “ವರ್ಲ್ ಪೂಲ್ ಗ್ಯಾಲಾಕ್ಸಿ” ಕಂಡುಹಿಡಿದರು.

1792: ವಾಷಿಂಗ್ಟನ್ನಿನ ಎಕ್ಸಿಕ್ಯುಟಿವ್ ಮ್ಯಾನ್ಷನ್ (ವೈಟ್ ಹೌಸ್) ಅಡಿಪಾಯ ಹಾಕಲಾಯಿತು.

1860: ಮೊದಲ ವೈಮಾನಿಕ ಫೋಟೋ ಅಮೇರಿಕಾದಲ್ಲಿ ಬಲೂನಿನ ಮೇಲಿಂದ ಸೆರೆಹಿಡಿಯಲಾಯಿತು.

1884: ಗ್ರೀನ್ ವಿಚ್ ಮೀನ್ ಟೈಮ್ ವಿಶ್ವದ ಗುಣಮಟ್ಟದ ಸಮಯ ಎಂದು ನಿರ್ಧರಿಸಲಾಯಿತು.

1896: ಮೊದಲ ಬಾರಿಗೆ ಸಾರ್ವಜನಿಕರಿಗೆ ಚಲನಚಿತ್ರ ಪ್ರದರ್ಶನ ನ್ಯೂಜಿಲ್ಯಾಂಡಿನಲ್ಲಿ ಮಾಡಲಾಯಿತು.

1914: ಗ್ಯಾರೆಟ್ ಮಾರ್ಗನ್ ಅನಿಲ ಮುಖವಾಡವನ್ನು ಕಂಡುಹಿಡಿದರು ಮತ್ತು ಅದಕ್ಕೆ ಪೇಟೆಂಟ್ ಪಡೆದರು.

1953: ಬರ್ಗ್ಲರ್ ಅಲಾರಾಂ-ರೇಡಿಯೋ ಅಲೆಗಳಿಗೆ ಸ್ಯಾಮ್ಯುಯೆಲ್ ಬಾಗ್ನೋ ಪೇಟೆಂಟ್ ಪಡೆದರು.

1978: ಬೊಲಿವಿಯಾದ ಬೋಯಿಂಗ್ 707 ವಿಮಾನ ಅಪಘಾತದಿಂದ 100 ಜನ ಮೃತಪಟ್ಟರು.

1983: ಅಮೇರಿಟೆಕ್ ಮೊಬೈಲ್ ಕಮ್ಯುನಿಕೇಷನ್ಸ್ ಅಮೇರಿಕಾದಲ್ಲೆ ಮೊದಲ ಬಾರಿ ಸಾರ್ವಜನಿಕರ ಬಳಕೆಗಾಗಿ ಮೊಬೈಲ್ ಫೋನ್ ಸೇವೆ ಆರಂಭವಾಯಿತು.

2013: ನವರಾತ್ರಿ ಉತ್ಸವದಲ್ಲಿ ಮಧ್ಯಪ್ರದೇಶದ ರತಂಗರ್ ಮಾತಾ ದೇವಸ್ಥಾನದಲ್ಲಿ ಜರುಗಿದ ಕಾಲ್ತುಳಿತದಿಂದ 115 ಮಂದಿ ಸಾವನ್ನಪ್ಪಿ 110ಕ್ಕು ಹೆಚ್ಚು ಮಂದಿ ಗಾಯಗೊಂಡರು.

ಪ್ರಮುಖ ಜನನ/ಮರಣ:

1900: ಉರ್ದು ಕವಿ, ಗೀತ ರಚನೆಕಾರ ಅಮೀರ್ ಮೀನೈ ನಿಧನರಾದರು.

1911: ಸ್ವಾಮಿ ವಿವೇಕಾನಂದ ಅವರ ಅನುಯಾಯಿ, ಬರಹಗಾರ್ತಿ, ಸಮಾಜ ಕಾರ್ಯಕರ್ತೆ ಸಿಸ್ಟರ್ ನಿವೇದಿತಾ ನಿಧನರಾದರು.

1911: ಖ್ಯಾತ ಬಂಗಾಲಿ ನಟ ಅಶೋಕ್ ಕುಮಾರ್ ಜನಿಸಿದರು.

1924: ಭಾರತೀಯ ಕಾರ್ಯಕರ್ತ ಮತ್ತು ರಾಜಕಾರಣಿ ಮೋತುರು ಉದಯಂ ಜನಿಸಿದರು.

1936: ವೀಣೆ ವಾದಕ ಮತ್ತು ಸಂಗೀತ ಸಂಯೋಜಕ ಚಿಟ್ಟಿ ಬಾಬು ಜನಿಸಿದರು.

1964: ಕಾದಂಬರಿಕಾರ, ಪತ್ರಕರ್ತ ಮತ್ತು ಚಿತ್ರ ನಿರ್ದೇಶಕ ಪ್ರೇಮಾಂಕುರ್ ಅಥೋರ್ತಿ ನಿಧನರಾದರು.

1979: ಭಾರತೀಯ ಫುಟ್ಬಾಲ್ ಆಟಗಾರ ದೀಪಕ್ ಕುಮಾರ್ ಮಂದಾಲ್ ಜನಿಸಿದರು.

1987: ಖ್ಯಾತ ಹಿನ್ನಲೆ ಗಾಯಕ, ಗೀತ ರಚನೆಕಾರ, ನಿರ್ಮಾಪಕ, ನಟ, ನಿರ್ದೇಶಕ ಕಿಶೋರ್ ಕುಮಾರ್ ನಿಧನರಾದರು.

2004: ಖ್ಯಾತ ಹಿರಿಯ ನಟಿ ನಿರೂಪ ರಾಯ್ ನಿಧನರಾದರು.

2007: ಬ್ರಿಟನ್ನಿನಲ್ಲಿ ಭಾರತಕ್ಕೆ ಅತಿ ಧೀರ್ಘಕಾಲದಿಂದ ಸೇವೆ ಸಲ್ಲಿಸಿದ ಹೈಕಮಿಷನರ್ ಮತ್ತು ಪದ್ಮಭೂಷಣ ಪುರಸ್ಕೃತ ಎಲ್.ಎಂ.ಸಿಂಗ್ವಿ ನಿಧನರಾದರು.