Categories
e-ದಿನ

ಅಕ್ಟೋಬರ್-15

 

ಪ್ರಮುಖ ಘಟನಾವಳಿಗಳು:

1582: ಜಾರ್ಜಿಯನ್ ಕ್ಯಾಲೆಂಡರ್ ಅನ್ನು ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಪೋರ್ಚುಗಲ್ಲಿನಲ್ಲಿ ಅಳವಡಿಸಲಾಯಿತು.

1783: ಫ್ರಾಂಕಾಯಿಸ್ ಪಿಲಾಟ್ರೆ ಡಿ ರೋಜಿಯರ್ ಮೊಟ್ಟ ಮೊದಲ ಮಾನವಸಹಿತ ಬಿಸಿಗಾಳಿಯ ಬಲೂನಿನಲ್ಲಿ ಪ್ರಯಾಣ ಮಾಡಿದರು.

1846: ಡಾ.ವಿಲಿಯಂ ಥಾಮಸ್ ಗ್ರೀನ್ ಮಾರ್ಟನ್ ಈಥರಿನ ಮೊದಲ ಬಾರಿಗೆ ಸಾರ್ವಜನಿಕ ಬಳಕೆ ಮಾಡಲಾಯಿತು.

1878: ಥಾಮಸ್ ಎಡಿಸನ್ “ಎಡಿಸನ್ ಎಲೆಕ್ಟ್ರಿಕ್ ಲೈಟ್ ಕೋ” ಸಂಸ್ಥೆಯನ್ನು ಸ್ಥಾಪಿಸಿದರು.

1924: ಅಮೇರಿಕಾದ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ “ಸ್ಟಾಚ್ಯು ಆಫ್ ಲಿಬರ್ಟಿ” ಅನ್ನು ರಾಷ್ಟ್ರೀಯ ಪ್ರತಿಮೆ ಎಂದು ಘೋಷಿಸಿದರು.

1932: ಟಾಟಾ ಏರ್ಲೈನ್ಸ್ (ನಂತರ ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾದ) ವಿಮಾನ ಸಂಸ್ಥೆಯ ಮೊದಲ ವಿಮಾನ ಹಾರಾಟ ಮಾಡಿತು.

1949: ಮಣಿಪುರದ ಆಡಳಿತವನ್ನು ಭಾರತ ಸರ್ಕಾರವು ವಹಿಸಿಕೊಂಡಿತು.

1951: ಮೆಕ್ಸಿಕನ್ ರಸಾಯನಶಾಸ್ತ್ರಜ್ಞ ಲೂಯಿಸ್.ಇ.ಮಿರಾಮಾಂಟೆಸ್ ಮೊದಲ ಮೌಖಿಕ ಗರ್ಭನಿರೋಧಕವನ್ನು ಸಂಶ್ಲೇಷಿಸಿದರು.

1984: ಕೇಂದ್ರ ಗುಪ್ತೆಚ್ಚರ ಏಜೆನ್ಸಿ ಮಾಹಿತಿ ಕಾಯಿದೆ ಅಂಗೀಕರಿಸಲಾಯಿತು.

2003: ಚೀನಾ ತನ್ನ ಮೊದಲ ಮಾನವಹಿತ ಬಾಹ್ಯಾಕಾಶ ಯಾತ್ರೆಯಾದ ಶೆನ್ಝೌ-I ಅನ್ನು ಪ್ರಾರಂಭಿಸಿದರು.

ಪ್ರಮುಖ ಜನನ/ಮರಣ:

1918: ಭಾರತೀಯ ಸಂತರಾದ ಶಿರಡಿ ಸಾಯಿಬಾಬ ದೇಹತ್ಯಾಗ ಮಾಡಿದರು.

1927: ಭಾರತೀಯ ವ್ಯಾಪಾರಿ ಬಿ.ಎಸ್.ಅಬ್ದುರ್ ರೆಹೆಮಾನ್ ಜನಿಸಿದರು.

1931: ಭಾರತದ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಜನಿಸಿದರು.

1934: ಖ್ಯಾತ ಫ್ಲೂಟ್ ವಾದಕರಾದ ಎನ್.ರಮಣಿ ಅವರು ಜನಿಸಿದರು.

1936: ದೆಹೆಲಿಯ ಮಾಜಿ ಮುಖ್ಯಮಂತ್ರಿ ಆಗಿದ್ದ ಮದನಲಾಲ್ ಖುರಾನಾ ಜನಿಸಿದರು.

1946: ಭಾರತೀಯ ನಟ, ನಿರ್ದೇಶಕ ವಿಕ್ಟರ್ ಬ್ಯಾನರ್ಜಿ ಜನಿಸಿದರು.

1949: ಎನ್.ಡಿ.ಟಿ.ವಿ ಚ್ಯಾನೆಲ್ ಸಂಸ್ಥಾಪಕ, ಪತ್ರಕರ್ತ ಪ್ರಣಯರಾಯ್ ಜನಿಸಿದರು.

1955: ಭಾರತದ ಹಾಕಿ ಆಟಗಾರ ಕುಲ್ಬೀರ್ ಬೌರಾ ಜನಿಸಿದರು.

1957: ಭಾರತೀಯ ಖ್ಯಾತ ನಿರ್ದೇಶಕ, ನಿರ್ಮಾಪಕ ಮೀರಾ ನಾಯರ್ ಜನಿಸಿದರು.

1961: ಭಾರತೀಯ ಕವಿ ಮತ್ತು ಲೇಖಕ ಸೂರ್ಯಕಾಂತ್ ತ್ರಿಪಾಟಿ ನಿರಾಲ ಅವರು ನಿಧನರಾದರು.