Categories
e-ದಿನ

ಅಕ್ಟೋಬರ್-22

 

ಪ್ರಮುಖ ಘಟನಾವಳಿಗಳು:

1746: ಪ್ರಿನ್ಸ್ಟನ್ ವಿಶ್ವವಿದ್ಯಾಲವನ್ನು ಸ್ಥಾಪಿಸಲಾಯಿತು.

1861: ಪೂರ್ವ ಮತ್ತು ಪಶ್ಚಿಮ ಕರಾವಳಿಯನ್ನು ಸಂಪರ್ಕಿಸುವ ಮೊದಲ ಟೆಲಿಗ್ರಾಫ್ ಲೈನಿನ ಕಾಮಗಾರಿ ಪೂರ್ಣಗೊಂಡಿತು.

1897: ವಿಶ್ವದ ಮೊದಲ ಕಾರಿನ ಡೀಲರ್ ಲಂಡನ್ನಿನಲ್ಲಿ ತೆರೆಯಲಾಯಿತು.

1924: ಟೋಸ್ಟ್ ಮಾಸ್ಟರ್ಸ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1938: ಚೆಸ್ಟರ್ ಕಾರ್ಲ್ಸನ್ ಮೊದಲ ಜೆರಾಕ್ಸ್ ಯಂತ್ರವನ್ನು ಪ್ರದರ್ಶಿಸಿದರು.

1947: ಕಾಶ್ಮೀರ ಸಂಘರ್ಷ ಆರಂಭವಾಯಿತು. ಇದು ಭಾರತದ ವಿಭಜನೆಯ ನಂತರ ಆರಂಭವಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲ ಯುದ್ಧವಾಯಿತು.

2008: ಭಾರತದ ಮೊದಲ ಮಾನವರಹಿತ ಚಂದ್ರನ ಕಾರ್ಯಾಚರಣೆಯಾದ ಚಂದ್ರಯಾನ-1 ಅನ್ನು ಹಾರಿಸಲಾಯಿತು.

2016: ಎಟಿ &ಟಿ ಸಂಸ್ಥೆಯು ಟೈಮ್ ವಾರ್ನರ್ ಸಂಸ್ಥೆಯನ್ನು 85.4 ಬಿಲಿಯನ್ ಡಾಲರಿಗೆ ಖರೀದಿಸಿತು.

ಪ್ರಮುಖ ಜನನ/ಮರಣ:

1873: ಭಾರತದ ತತ್ವಜ್ಞಾನಿ ರಾಮತೀರ್ಥರು ಜನಿಸಿದರು.

1900: ಭಾರತದ ಕಾರ್ಯಕರ್ತ ಅಶ್ಫಕ್ ಉಲ್ಲಾ ಖಾನ್ ಜನಿಸಿದರು.

1917: ಭಾರತೀಯ ವೈದ್ಯಕೀಯ ಸೇವೆಯ ನಿರ್ದೇಶಕ ಚಾರ್ಲ್ಸ್ ಪಾರ್ಡೆ ಲೂಕಿಸ್ ನಿಧನರಾದರು.

1947: ಭಾರತ ಮೂಲದ ಅಮೇರಿಕ ವೈದ್ಯ ಮತ್ತು ಲೇಖಕ ದೀಪಕ್ ಚೋಪ್ರ ಜನಿಸಿದರು.

1952: ಬಹುಭಾಷಾ ಚಿತ್ರ ನಿರ್ದೇಶಕ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಜನಿಸಿದರು.

1954: ಭಾರತೀಯ ಮೂಲದ ಬಂಗ್ಲಾದೇಶಿ ಲೇಖಕ ಮತ್ತು ಕವಿ ಜಿಬಾನನಂದ ದಾಸ್ ನಿಧನರಾದರು.

1997: ಪಾಕಿಸ್ತಾನದ ಸರ್ವೇಯರ್ ಜೆನೆರಲ್ ಆಗಿದ್ದ ಮಿಯಾನ್ ಮೊಹಮ್ಮದ್ ಶರೀಫ್ ನಿಧನರಾದರು.

2008: ಭಾರತೀಯ ನಟ ಪಾರಿತೋಷ್ ಸೆನ್ ನಿಧನರಾದರು.

2014: ಭಾರತೀಯ ಚಿತ್ರರಂಗದ ನಿರ್ದೇಶಕ ಛಾಯಾಗ್ರಾಹಕ ಅಶೋಕ್ ಕುಮಾರ್ ನಿಧನರಾದರು.