Categories
e-ದಿನ

ಅಕ್ಟೋಬರ್-25

 

ಪ್ರಮುಖ ಘಟನಾವಳಿಗಳು:

1671: ಜಿಯೋವನಿ ಕ್ಯಾಸಿನಿ ಶನಿ ಗ್ರಹದ ಉಪಗ್ರಹವಾದ ಲೇಪ್ಟಸ್ ಅನ್ನು ಪತ್ತೆ ಮಾಡಿದರು.

1870: ಅಮೇರಿಕಾದಲ್ಲಿ ಮೊದಲ ಟ್ರೇಡ್ ಮಾರ್ಕನ್ನು ಆವೆರಿಲ್ ಕೆಮಿಕಲ್ ಪೇಂಟ್ ಸಂಸ್ಥೆಗೆ ನೀಡಲಾಯಿತು.

1870: ಮೊದಲ ಬಾರಿಗೆ ಅಮೇರಿಕಾದಲ್ಲಿ ಅಂಚೆಪತ್ರಗಳನ್ನು ಬಳಸಲಾಯಿತು.

1954: ಅಮೇರಿಕಾದ ಕ್ಯಾಬಿನೆಟ್ ಸಭೆಯನ್ನು ಮೊದಲ ಬಾರಿಗೆ ಪ್ರಸಾರ ಮಾಡಲಾಯಿತು.

1955: ಮೈಕ್ರೋವೇವ್ ಓವನ್ ಅನ್ನು ಮನೆ ಬಳಕೆಗಾಗಿ ಮೊದಲ ಬಾರಿಗೆ ಟಪ್ಪನ್ ಕಂಪನಿ ಪರಿಚಯಿಸಿತು.

1984: ಎ-ಅಲ್ಲದ, ಬಿ-ಅಲ್ಲದ ಹೆಪ್ಯಾಟಿಟಿಸ್ ಎಂದು ಕರೆಯಲ್ಪಡುವ ವೈರಸ್ ಅನ್ನು ಸಂಶೋಧಕರು ಗುರುತಿಸಿದರು.

2001: ಮೈಕ್ರೋಸಾಫ್ಟ್ ನೂತನ ಆಪರೇಟಿಂಗ್ ಸಿಸ್ಟಂ ಆದ ವಿಂಡೋಸ್ ಎಕ್ಸ್ ಪಿ ಅನ್ನು ಬಿಡುಗಡೆ ಮಾಡಿತು.

2010: ಸೋನಿ ವಾಕ್ ಮ್ಯಾನ್ ಅನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಯಿತು.

2011: ಭಾರತದ ಸೆಂಟ್ರಲ್ ಬ್ಯಾಂಕ್ ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ನಿಯಂತ್ರಣಕ್ಕೊಳಪಡಿಸುವುದನ್ನು ಘೋಷಿಸಿತು. ಈ ತೀರ್ಮಾನ ಹಣಕಾಸು ಕ್ಷೇತ್ರದ ಸುಧಾರಣೆಯಲ್ಲಿ ಪ್ರಮುಖ ತೀರ್ಮಾನ.

2011: ಭಾರತದ ಸರ್ಕಾರದಲ್ಲಿ ಕ್ಲರ್ಕ್ ಆಗಿದ್ದ ಸುಶೀಲ್ ಕುಮಾರ್ “ಕೌನ್ ಬನೇಗ ಕರೋಡಪತಿ” ಆಟದಲ್ಲಿ ಒಂದು ಕೋಟಿ ಗೆದ್ದ ಮೊದಲ ಭಾರತೀಯ.

ಪ್ರಮುಖ ಜನನ/ಮರಣ:

1929: ಭಾರತದ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಜನಿಸಿದರು.

1945: ಬಂಗಾಲಿ ಚಿತ್ರರಂಗದ ಚಿತ್ರಕಥೆಗಾರ್ತಿ, ನಿರ್ದೇಶಕಿ, ನಟಿ ಅಪರ್ಣ ಸೆನ್ ಜನಿಸಿದರು.

1965: ಹಿಂದಿ ಚಿತ್ರರಂಗದ ನಟಿ ನವನೀತ್ ನಿಶನ್ ಜನಿಸಿದರು.

1980: ಕವಿ ಮತ್ತು ಗೀತ ರಚನೆಕಾರ ಸಾಹಿರ್ ಲುದಿಯಾನ್ವಿ ನಿಧನರಾದರು.

1989: ಭಾರತದ ಕ್ರಿಕೆಟ್ ಆಟಗಾರ ಅಭಿಮನ್ಯು ಮಿಥುನ್ ಜನಿಸಿದರು.

1999: ಗಾಯಕ, ನಟ, ಸಂಗೀತ ಸಂಯೋಜಕ ಎಸ್.ರಾಜೇಶ್ವರ ರಾವ್ ನಿಧನರಾದರು.

2003: ಭಾರತೀಯ ಆಧ್ಯಾತ್ಮಿಕ ನಾಯಕ ಮತ್ತು ತತ್ವಜ್ಞಾನಿ ಪಾಂಡುರಂಗ ಶಾಸ್ತ್ರಿ ಅಠಾವಳೆ ನಿಧನರಾದರು.

2009: ರಂಗಭೂಮಿ ಮತ್ತು ಚಲನಚಿತ್ರ ನಟ ಚಿತ್ತರಂಜನ್ ಕೋಲ್ಹಾಟ್ಕರ್ ನಿಧನರಾದರು.

2011: ಮಲಯಾಳಂ ಚಿತ್ರರಂಗದ ನಿರ್ದೇಶಕ, ಬರಹಗಾರ, ಚಿತ್ರಕಥೆಗಾರ ಮೋಹನ್ ರಾಘವನ್ ನಿಧನರಾದರು.

2012: ಭಾರತೀಯ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆ ರಚನೆಕಾರ ಜಸ್ಪಾಲ್ ಭಟ್ಟಿ ನಿಧನರಾದರು.