Categories
e-ದಿನ

ಅಕ್ಟೋಬರ್-9

 

ಪ್ರಮುಖ ಘಟನಾವಳಿಗಳು:

1446: ಹನುಗಲ್ ವರ್ಣಮಾಲೆಯನ್ನು ಕೊರಿಯಾ ಭಾಷೆಯಲ್ಲಿ ಪ್ರಕಟಿಸಲಾಯಿತು.

1855: ಐಸಾಕ್ ಸಿಂಗರ್, ಹೊಲಿಗೆ ಯಂತ್ರದ ಮೋಟಾರಿಗೆ ಪೇಟೆಂಟ್ ಪಡೆದರು.

1865: ಪೆನ್ಸಿಲ್ವೇನಿಯಾದಲ್ಲಿ ತೈಲ ಹೊತ್ತೊಯಲು ಮೊದಲ ಬಾರಿಗೆ ಭೂಮಿಯ ಒಳಗೆ ಪೈಪ್ ಲೈನನ್ನು ಅಳವಡಿಸಲಾಯಿತು.

1874: ಸ್ವಿಜರ್ಲ್ಯಾಂಡಿನ ಬರ್ನ್ ನಲ್ಲಿ ವಿಶ್ವ ಅಂಚೆ ಒಕ್ಕೂಟ ರೂಪಿಸಲಾಯಿತು.

1926: ಎನ್.ಬಿ.ಸಿ (ನ್ಯಾಷನಲ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್) ರೂಪುಗೊಂಡಿತು.

1958: ಇಸ್ರೇಲಿಯ ನೌಕಾಪಡೆಯು ಮೊದಲ ಜಲಾಂತರ್ಗಾಮಿಯನ್ನು ಉದ್ಘಾಟಿಸಿತು.

1980: ಕಂಪ್ಯೂಟರಿನಿಂದ ಮನೆ ಬ್ಯಾಂಕಿಂಗಿನ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ಗ್ರಾಹಕ ಬಳಸಿದರು.

1981: ಫ್ರಾನ್ಸಿನಲ್ಲಿ ಮರಣ ದಂಡನೆಯನ್ನು ನಿಷೇಧಿಸಲಾಯಿತು.

1991: ಜಪಾನಿನ ಹೊರಗಡೆ ನಡೆಯುವ ಮೊದಲ ಸುಮೋ ಕುಸ್ತಿ ಪಂದ್ಯಾವಳಿ ಲಂಡನ್ನಿನಲ್ಲಿ ಆರಂಭವಾಯಿತು.

2006: ಗೂಗಲ್ ಯೂಟ್ಯೂಬಿನ ಸ್ಟಾಕನ್ನು 1.65 ಶತಕೋಟಿಗೆ ಖರೀಧಿಸುವುದಾಗಿ ಘೋಷಿಸಿತು.

2009: ಜನರ ನಡುವಿನ ಅಂತರರಾಷ್ಟ್ರೀಯ ರಾಜತಾಂತ್ರಿಕತೆ ಮತ್ತು ಸಹಕಾರವನ್ನು ಬಲಪಡಿಸುವ ಅಸಾಧಾರಣ ಪ್ರಯತ್ನಗಳಿಗೆ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ 2009 ನೋಬಲ್ ಶಾಂತಿ ಪ್ರಶಸ್ತಿ ಲಭಿಸಿತು.

ಪ್ರಮುಖ ಜನನ/ಮರಣ:

1897: ಸ್ವಾತಂತ್ರ ಹೋರಾಟಗಾರ, ಮದ್ರಾಸಿನ ಮುಖ್ಯಮಂತ್ರಿಯಾಗಿದ್ದ ಎಂ.ಭಕ್ತವತ್ಸಲಂ ಜನಿಸಿದರು.

1919: ಪಟಿಯಾಲಾದ ಮಹಾರಾಜಕುಮಾರ ಮತ್ತು ಕ್ರಿಕೆಟ್ ಆಟಗಾರ ಬಲಿಂದ್ರ ಸಿಂಗ್ ಜನಿಸಿದರು.

1945: ಖ್ಯಾತ ಸಿತಾರ್ ವಾದಕ ಅಮ್ಜದ್ ಅಲಿ ಖಾನ್ ಜನಿಸಿದರು.

1968: ಭಾರತ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಅನ್ಬುಮಣಿ ರಾಮದಾಸ್ ಜನಿಸಿದರು.

1969: ಕರ್ನಾಟಕ ಮಾಜಿ ಸಚಿವ ದಿನೇಶ್ ಗುಂಡು ರಾವ್ ಅವರು ಜನಿಸಿದರು.

1983: ಭಾರತೀಯ ನಟಿ, ಮಾಡೆಲ್ ಪೂನಂ ಕೌರ್ ಜನಿಸಿದರು.

1983: ತಮಿಳು ಭಾಷೆಯ ಚಿತ್ರರಂಗದ ನಿರ್ದೇಶಕ ಮತ್ತು ಚಿತ್ರಕಥೆಗಾರ ಎ.ಎಲ್.ವಿಜಯ್ ಜನಿಸಿದರು.

1993: ಟೆಸ್ಟ್ ಕ್ರಿಕೆಟಿನಲ್ಲಿ ಭಾರತವನ್ನು ಪ್ರತಿನಿಧಿಸಿದ ವೇಗದ ಬೌಲರ್ ಸಿ.ಆರ್.ರಂಗಾಚಾರಿ ನಿಧನರಾದರು.

2006: ಬಹುಜನ ಸಮಾಜವಾದಿ ಪಕ್ಷದ ಸಂಸ್ಥಾಪಕ ಕಾಂಶಿರಾಮ್ ಅವರು ನಿಧನರಾದರು.

2010: ತಮಿಳು ನಾಡಿನ ರಾಜ್ಯ ಸಭೆಯ ಸದಸ್ಯ ಎಸ್,ಎಸ್.ಚಂದ್ರನ್ ನಿಧನರಾದರು.