Loading Events

« All Events

  • This event has passed.

ಎನ್‌. ಚೊಕ್ಕಮ್ಮ

September 18, 2023

೧೮೧೯೨೨ ವೀಣಾವಾದನದೊಂದಿಗೆ ಹಾಡುಗಾರಿಕೆಯನ್ನು ಬೆರೆಸಿ ಕಚೇರಿನಡೆಸುತ್ತಿದ್ದ ಅಪರೂಪದ ಸಂಗೀತಗಾರ್ತಿ ಚೊಕ್ಕಮ್ಮ ಹುಟ್ಟಿದ್ದು ಬೆಂಗಳೂರು. ತಂದೆ ನರಸಿಂಹ ಅಯ್ಯಂಗಾರ್‌, ತಾಯಿ ರುಕ್ಕಮ್ಮ. ಏಳನೆಯ ವಯಸ್ಸಿನಲ್ಲಿ ಹಾಡಿಕೊಂಡು ಆಟವಾಡುತ್ತಿದ್ದ ಹುಡುಗಿಯ ಕಂಠಶ್ರೀಗೆ ಮಾರುಹೋಗಿ ವಿರೂಪಾಕ್ಷ ಶಾಸ್ತ್ರಿಗಳು ಶಿಷ್ಯೆಯಾಗಿ ಸ್ವೀಕರಿಸಿ ಕಲಿಸಿದ ಸಂಗೀತಪಾಠ. ಹದಿನಾರನೆಯ ವಯಸ್ಸಿನಲ್ಲಿ ಹಾಡಿ, ವೀಣೆ ನುಡಿಸಿ ರಸಿಕರ ರಂಜಿಸಿದ ಖ್ಯಾತಿ. ೧೯೩೮ ರಲ್ಲಿ ಪ್ರಾರಂಭವಾದ ಗೋಪಾಲ ಸ್ವಾಮಿಯವರ ಆಕಾಶವಾಣಿಯಲ್ಲಿ ಕಾರ್ಯಕ್ರಮ ಬಿತ್ತರ. ಟೈಗರ್‌ ವರದಾಚಾರ್‌, ಆಲತ್ತೂರು ಸಹೋದರರು ಮುಂತಾದ ದಿಗ್ಗಜರೊಡನೆ ಸರಿಸಾಟಿಯಾಗಿ ನೀಡಿದ ಕಾರ್ಯಕ್ರಮ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತಂಜಾವೂರು ಮುಂತಾದೆಡೆಗಳಲ್ಲಿ ನೀಡಿದ ಸಂಗೀತ ಕಚೇರಿ. ಕನ್ಯಾಕುಮಾರಿಯಲ್ಲಿ ನಡೆದ ವೀಣಾವಾದನದ ಕಚೇರಿಯಲ್ಲಿ ವಿದೇಶಿ ದಂಪತಿಗಳಿಂದ ದೊರೆತ ಸನ್ಮಾನ. ವೀಣಾವಾದನದಿಂದ, ಹಾಡಿನ ವೈಖರಿಯಿಂದ ಬೆರಗಾದ ಸರ್‌.ಸಿ.ವಿ.ರಾಮನ್‌ರವರಿಂದ ದೊರೆತ ಪ್ರಶಂಸೆ. ಸಂಗೀತದ ಜೊತೆಗೆ ನಡೆಸುತ್ತಿದ್ದ ಸಮಾಜಸೇವೆ. ಗಿಣಿ, ಪಾರಿವಾಳ, ನಾಯಿ, ಹಸು, ಬೆಕ್ಕು ಮುಂತಾದ ಪ್ರಾಣಿ ಪಕ್ಷಿಗಳನ್ನು ಸಾಕುವ ಹವ್ಯಾಸ. ಮಲ್ಲಾಡಿಹಳ್ಳಿ ಸ್ವಾಮಿಗಳಿಂದ ಸ್ವರಕಿನ್ನರಿ, ಅಖಿಲ ಭಾರತ ಸಾಧು ಸಮಾಜದಿಂದ ವೀಣಾವಾದನ ಚತುರೆ, ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ಗಾಯನ ಸಮಾಜದ ವರ್ಷದ ಕಲಾವಿದೆ, ಸಂಗೀತನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾ ತಿಲಕ, ಕರ್ನಾಟಕ ಗಾಯನ ಕಲಾ ಪರಿಷತ್ತಿನ ಸಂಗೀತ ಸಮ್ಮೇಳನದ ಅಧ್ಯಕ್ಷ ಪದವಿ ಮುಂತಾದ ಗೌರವಗಳು. ಇದೇ ದಿನ ಹುಟ್ಟಿದ ಕಲಾವಿದರು ಟಿ,ಶಾರದಾ – ೧೯೩೯ ಅನಂತ ಪದ್ಮನಾಭರಾವ್‌ – ೧೯೪೩ ಪಿ. ತಿಪ್ಪೇಸ್ವಾಮಿ – ೧೯೪೬

* * *

Details

Date:
September 18, 2023
Event Category: