Categories
e-ದಿನ

ಜುಲೈ-21

 

ಪ್ರಮುಖ ಘಟನಾವಳಿಗಳು:

1595: ಅಲ್ವಾರಾ ಮೆಂಡನಾ “ಮಾರ್ಕ್ವಿಸಸ್ ದ್ವೀಪವನ್ನು” ಕಂಡು ಹಿಡಿದರು.

1730: ಹಾಲೆಂಡ್ ರಾಜ್ಯ, “ಸುಡೋಮಿ”ಯ ಮೇಲೆ ಮರಣದಂಡನೆ ವಿಧಿಸಿತು.

1749: ಪೀಟರ್ ಸ್ಟೀನ್ ಹಾಲೆಂಡಿನ “ಪಿಂಚಣಿ ಸಲಹೆಗಾರ”ರಾದರು.

1866: ಲಂಡನ್ನಿನಲ್ಲಿ ಕಾಲರಾ ಸಾಂಕ್ರಾಮಿಕ ರೋಗ ಹರಡಿದ ಪರಿಣಾಮವಾಗಿ ನೂರಾರು ಜನ ಮೃತಪಟ್ಟರು.

1883: ಕಲ್ಕತ್ತಾದಲ್ಲಿ ಸ್ಟಾರ್ ಚಿತ್ರಮಂದಿರ ತೆರೆಯಲಾಯಿತು.

1904: 13 ವರ್ಷಗಳ ನಂತರ 4607 ಮೈಲಿಯ ಟ್ರಾನ್ಸ್-ಸೈಬೀರಿಯನ್ ರೈಲ್ವೆ ಕಾಮಗಾರಿ ಪೂರ್ಣಗೊಂಡಿತು.

1913: ಈಜಿಪ್ಟ್ ಸರ್ಕಾರವು ನೂತನ ಸಂವಿಧಾನಿಕ ವ್ಯವಸ್ಥೆ ಮತ್ತು ಚುನಾವಣಾ ಕಾನೂನನ್ನು ಘೋಷಿಸಿತು.

1919: ಆಂಟೊನಿ ಫೋಕರ್ ಅವರು ಹ್ಯಾಂಬರ್ಗ್ ಮತ್ತು ಆಮ್ಸಟರ್ ಡ್ಯಾಮಿನಲ್ಲಿ ವಿಮಾನ ಕಾರ್ಖಾನೆಯನ್ನು ಸ್ಥಾಪಿಸಿದರು.

1933: ಪ್ಯಾಲಿಸ್ಟೈನಿನಲ್ಲಿ ಹೈಫ್ ಬಂದರು ತೆರೆಯಲಾಯಿತು.

1935: ಮುಂಬೈ ಮರಾಠಿ ಸಾಹಿತ್ಯ ಸಂಘದ ಸ್ಥಾಪನೆ ಮಾಡಲಾಯಿತು.

1947: ಭಾರತದ ರಾಷ್ಟ್ರೀಯ ಧ್ವಜವನ್ನು ಸಂವಿಧಾನ ಸಭೆ ಅಂಗೀಕರಿಸಿತು.

1951: ದಲೈಲಾಮ ಟಿಬೆಟಿಗೆ ಮತ್ತೆ ಮರಳಿದರು.

1960: ಶ್ರೀಲಂಕದ ಸಿರಿಮಾವೋ ಬಂಡಾನಾಯಿಕೆ ವಿಶ್ವದ ಮೊದಲ ಮಹಿಳಾ ಪ್ರಧಾನಿಯಾದರು.

1970: ನೈಲ್ ನದಿಯ ಪ್ರವಾಹವನ್ನು ನಿಯಂತ್ರಿಸಲು ನಿರ್ಮಾಣ ಮಾಡಿದ “ಅಸ್ವಾನ್ ಅಣೆಕಟ್ಟು” ತೆರೆಯಲಾಯಿತು.

1970: ಎಲ್ಲಾ ಯಹೂದಿಯರ ಆಸ್ತಿಗಳನ್ನು ಲಿಬಿಯಾ ವಶಪಡಿಸಿಕೊಂಡಿತು.

1978: ವಿಶ್ವದ ಪ್ರಬಲ ತಳಿಯ ನಾಯಿಯಾದ 80ಕಿಲೋ ತೂಕದ ಸೇಂಟ್ ಬರ್ನರ್ಡ್, 2909 ಕೆ.ಜಿ ಭಾರವನ್ನು 27 ಮೀಟರ್ ಎಳೆದು ದಾಖಲೆ ಮಾಡಿತು.

1980: ಜೀನ್ ಕ್ಲಾಡ್ ಡ್ರಾಯರ್ ಅವರು ಐಫೆಲ್ ಟವರನ್ನು 2 ಗಂಟೆ 18 ನಿಮಿಷಗಳಲ್ಲಿ ಏರಿದರು.

1994: SC/ST ಇತರ ರಾಜ್ಯಗಳಿಗೆ ವಲಸೆ ಹೋಗುವುದರಿಂದ ತಮ್ಮ ವಿಶೇಷ ಸ್ಥಾನಮಾನಗಳ ಸವಲತ್ತುಗಳನ್ನು ಕಳೆದುಕೊಳ್ಳುತ್ತಾರೆಂದು ಸುಪ್ರೀಮ್ ಕೋರ್ಟ್ ಘೋಷಿಸಿತು.

ಪ್ರಮುಖ ಜನನ/ಮರಣ:

1891: ಪ್ರಸಿದ್ಧ ನಾಯಕ, ಪತ್ರಕರ್ತ, ಸ್ವಾತಂತ್ರ ಹೋರಾಟಗಾರರಾಗಿದ್ದ ಜೈರಾಂದಾಸದ ದೌಲತ್ ರಾಮ್ ಜನಿಸಿದರು.

1906: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷರಾಗಿದ್ದ ಡಬ್ಲ್ಯು.ಸಿ.ಬಾನೆರ್ಜಿ ನಿಧನರಾದರು.

1907: ಜಮ್ಮು ಕಾಶ್ಮೀರದ ಮಾಜಿ ಪ್ರಧಾನಿ ಗುಲಾಂ ಮೊಹಮ್ಮದ್ ಬಕ್ಷಿ ಜನಿಸಿದರು.

1930: ಕವಿ ಮತ್ತು ಗೀತ ರಚನೆಕಾರರಾಗಿದ್ದ ಆನಂದ್ ಬಕ್ಷಿ ಜನಿಸಿದರು.

1934: ಭಾರತದ ಕ್ರಿಕೆಟ್ ಆಟಗಾರರಾದ ವಸಂತರಾವ್ ವಿಷ್ಣು ಲಿಮ್ಯೆ ಪುಣೆಯಲ್ಲಿ ಜನಿಸಿದರು.

1977: ಪ್ರಸಿದ್ದ ಪ್ರಾಣಿ ತಜ್ಞ ಭೂದೇವ್ ಚಂದ್ರ ಬಸು ನಿಧನರಾದರು.