Categories
e-ದಿನ

ಜುಲೈ-5

 

ಪ್ರಮುಖ ಘಟನಾವಳಿಗಳು:

1687: ಐಸಾಕ್ ನ್ಯೂಟನ್ ಅವರ “ಫಿಲಾಸಿಫಿಯಾ ನೈಸರ್ಗಿಕ ಪ್ರನ್ಸಿಪಿಯಾ ಗಣಿತಶಾಸ್ತ್ರ” (ನೈತಿಕ ತತ್ವಶಾಸ್ತ್ರದ ಗಣಿತ ತತ್ವಗಳು) ಮೊದಲ ಸಂಪುಟವನ್ನು ಲ್ಯಾಟಿನ್ ಭಾಷೆಯಲ್ಲಿ ಎಡ್ಮಂಡ್ ಹ್ಯಾಲಿ ಪ್ರಕಟಿಸಿದರು.

1776; ಸ್ವಾತಂತ್ರದ ಘೋಷಣೆಯನ್ನು ಮೊದಲ ಬಾರಿಗೆ ಫಿಲಾಡೆಲ್ಫಿಯಾದಲ್ಲಿ ಜಾನ್ ಡನ್ಲಾಪ್ ಮುದ್ರಿಸಿದರು. ಇದರ 200 ಪ್ರತಿಗಳನ್ನು ತಯಾರಿಸಿ ಎಲ್ಲಾ ರಾಜ್ಯಗಳಿಗೆ ವಿತರಿಸಲಾಯಿತು.

1811: ಸ್ಪೇನಿನಿಂದ ಸ್ವಾತಂತ್ರ ಘೋಷಿಸಿಕೊಂಡ ವೆನೆಜುವೆಲಾ ಮೊದಲ ದಕ್ಷಿಣ ಅಮೇರಿಕಾದ ರಾಷ್ಟ್ರವಾಯಿತು.

1841: ಮೊದಲ ಪ್ರಯಾಣ ಸೌಕರ‍್ಯ ಕಲ್ಪಿಸುವ ಏಜೆನ್ಸಿಯನ್ನು ಥಾಮಸ್ ಕುಕ್ ಆರಂಭಿಸಿದರು.

1865: ಗ್ರೇಟ್ ಬ್ರಿಟನ್ ಪ್ರಪಂಚದ ಮೊದಲ ಗರಿಷ್ಢ ವೇಗದ ಕಾನೂನನ್ನು ವಿಧಿಸಿತು.

1892: ರೋಟರಿ ಇಂಜಿನ್ನಿಗೆ ಆಂಡ್ರೂ ಬಿಯರ್ಡ್ ಪೇಟೆಂಟ್ ಪಡೆದರು.

1937: ಸ್ಪ್ಯಾಮ್-ಲಂಚಾನ್ ಮಾಂಸವನ್ನು ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಹಾರ್ಮೆಲ್ ಫುಡ್ಸ್ ಕಾರ್ಪರೇಷನ್ ಪರಿಚಯಿಸಿತು

1943: ಇತಿಹಾಸದಲ್ಲಿ ಅತಿದೊಡ್ಡ ಟ್ಯಾಂಕ್ ಯುದ್ಧವಾದ ಕರ್ಸ್ಕ್ ಯುದ್ದವು ಆರಂಭವಾಯಿತು.

1946: ಮಾಜಿ ಸಿವಿಲ್ ಎಂಜಿನಿಯರ್ ಲೂಯಿಸ್ ರೀಯರ್ಡ್ ರಚಿಸಿದ ಬಿಕಿನಿ (ಈಜುವಾಗ ಧರಿಸುವ ಉಡುಪು)ಯನ್ನು ಪ್ಯಾರಿಸ್ಸಿನ ಫ್ಯಾಷನ್ ಪ್ರದರ್ಶನದಲ್ಲಿ ಮೊದಲ ಬಾರಿಗೆ ಪ್ರದರ್ಶನವಾಯಿತು.

1954: ಬಿಬಿಸಿ ತನ್ನ ಮೊದಲ ದೂರದರ್ಶನದ ಸುದ್ಧಿಯನ್ನು ಪ್ರಕಟಿಸಿತು.

1983: ಮಿದುಳು ಸತ್ತ ಮಹಿಳೆ 84 ದಿನಗಳ ನಂತರ ಮಗುವಿಗೆ ಜನ್ಮ ನೀಡಿದರು.

1994: ಕಿರಣ ಬೇಡಿಯವರಿಗೆ ರೇಮನ್ ಮೆಗಾಸೆಸೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

1994: ಜೆಫ್ ಬೆಜಾಸ್ ವಾಷಿಂಗ್ಟನ್ನಿನಲ್ಲಿ “ಅಮೇಜಾನ್.ಕಾಮ್” ಸಂಸ್ಥೆಯನ್ನು ಸ್ಥಾಪಿಸಿದರು.

1996: ಎಡಿನ್ಬರ್ಗ್ ಸ್ಕಾಟ್ಲಾಂಡಿನಲ್ಲಿ ಪ್ರನಾಶಶಿಶು -ಅಬೀಜ ಕುರಿಮರಿ ಡಾಲಿ ಜನಿಸಿತು.

2003: 29 ರಾಷ್ಟ್ರಗಳಲ್ಲಿ 775 ಜನರನ್ನು ಕೊಂದಿದ್ದ ಪ್ರಾಣಾಂತಿಕ SARS (ತೀವ್ರ ತೀವ್ರವಾದ ಉಸಿರಾಟದ ಸಿಂಡ್ರೋಮ್) ಅನ್ನು ವಿಶ್ವ ಆರೋಗ್ಯ ಸಂಸ್ಥೆ ಅಸ್ತಿತ್ವದಲ್ಲಿದೆ ಎಂದು ಘೋಷಿಸಿತು.

2012: ಯೂರೋಪಿನ ಅತ್ಯಂತ ಎತ್ತರದ ಕಟ್ಟಡವಾದ (1016 ಅಡಿ) “ದಿ ಶಾರ್ಡ್” ಲಂಡನ್ನಿನಲ್ಲಿ ತೆರೆಯಿತು.

2012:ಟೋಕಿಯೋದ ಯುಯೆನೋ ಮೃಗಾಲಯದ ಆರು ವರ್ಷದ ದೈತ್ಯ ಪಾಂಡ ಶಿನ್ ಶಿನ್ ಮರಿ ಪಾಂಡಾಗೆ ಜನ್ಮ ನೀಡಿತು.

2013: ಭಾರತದ ರಾಷ್ಟ್ರಪತಿ ಪ್ರಣಾಬ್ ಮುಖರ್ಜಿ ದೇಶದ ಜನಸಂಖ್ಯೆಯ ಮೂರನೇ ಎರಡಷ್ಟು ಭಾಗವನ್ನು ಆಹಾರ ದಹಕ್ಕು ನೀಡುವಆಹಾರ ಭದ್ರತೆ ಕಾಯಿದೆಗೆ ಸಹಿ ಹಾಕಿದರು.

ಪ್ರಮುಖ ಜನನ/ಮರಣ:

1522: ಸ್ಪಾನಿಷ್ ವಿದ್ವಾಂಸರಾದ ಆಂಟೋನಿಯೋ ಡೆ ನೆಬ್ರಿಜಾ ನಿಧನರಾದರು. ಅವರ ಕೃತಿ ಲ್ಯಾಟಿನ್ ಭಾಷೆಯಲ್ಲಿ ಬರೆದ ಸ್ಪಾನಿಷ್ ವ್ಯಾಕರಣವನ್ನು ಒಳಗೊಂಡಿದೆ.

1781: ಸಿಂಗಾಪೂರ್ ದೇಶದ ಸಂಸ್ಥಾಪಕರಾದ ಸ್ಟಾಂಫೋರ್ಡ್ ರಾಫಲ್ಸ್ ಜನಿಸಿದರು.

1794: ಸಸ್ಯಾಹಾರಕ್ಕೆ ಒತ್ತು ನೀಡಿದ ಅಮೇರಿಕಾದ ಪೌಷ್ಟಿಕಾಂಶದ ಸುಧಾರಕರಾಗಿದ್ದ ಸಿಲ್ವೆಸ್ಟರ್ ಗ್ರಹಮ್ ಜನಿಸಿದರು.

1833: ಛಾಯಾಗ್ರಹಣದ ಸಂಶೋಧಕ ಫ್ರೆಂಚ್ ದೇಶದ ಜೋಸೆಫ್ ನೈಸ್ಫೋರ್ ನಿಧನರಾದರು.

1904: ಆಧುನಿಕ ವಿಕಾಸಾತ್ಮಕ ಸಂಶ್ಲೇಷಣೆಯನ್ನು ಪ್ರತಿಪಾದಿಸಿದ ಅರ್ನಸ್ಟ್ ಮೇಯರ್ ಜನಿಸಿದರು.