Categories
e-ದಿನ

ಜೂನ್-12

ಪ್ರಮುಖ ಘಟನೆಗಳು:

1665: ನ್ಯೂ ಆಮ್ಸ್ಟರ್ ಡ್ಯಾಮ್ ಕಾನೂನು ಬದ್ದವಾಗಿ ಇಂಗ್ಲಿಷ್ ವಸಾಹತು ಆಯಿತು ಹಾಗೂ ಇಂಗ್ಲಿಷ್ ಡ್ಯೂಕ್ ಆಫ್ ಯಾರ್ಕ್ ಅವರ ಹೆಸರಿನಿಂದ ನ್ಯೂಯಾರ್ಕ್ ಎಂದು ಮರು ನಾಮಕರಣ ಮಾಡಲಾಯಿತು.

1665: ನ್ಯೂಯಾರ್ಕ್ ನಗರದಲ್ಲಿ ಪುರಸಭಾ ಸರ್ಕಾರವನ್ನು ಇಂಗ್ಲೆಂಡ್ ಸ್ಥಾಪಿಸಿತು.

1776: ವರ್ಜೀನಿಯ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿತು,

1787: ನ್ಯಾಯಾಧೀಶರ ನೇಮಕಾತಿಯ ಕನಿಷ್ಟ ವಯೋಮಿತಿ 30 ವರ್ಷ ಎಂದು ಅಮೇರಿಕ ಕಾನೂನು ಮಾಡಿತು.

1849: ಗ್ಯಾಸ್ ಮಾಸ್ಕ್ (ಮುಖವಾಡ) ದ ಪೇಟೆಂಟ್ ಅನ್ನು ಲ್ಯೂಇಸ್ ಹ್ಯಾಸ್ಲೆಟ್ ಪಡೆದರು.

1860: ಸ್ಟೇಟ್ ಬ್ಯಾಂಕ್ ಆಫ್ ದಿ ರಷ್ಯನ್ ಎಂಪೈರ್ ಅನ್ನು ಸ್ಥಾಪಿಸಲಾಯಿತು.

1892: ಹಣಕಾಸು ಮತ್ತು ನಾಣ್ಯಗಳ ಸಂಗ್ರಹಿಸುವ ರೂಪಗಳ ನೆಧರ್ಲ್ಯಾಂಡ್ ಸೊಸೈಟಿ ಸ್ಥಾಪಿತವಾಯಿತು.

1898: ಫಿಲಿಪೀನ್ಸ್ ಸ್ವತಂತ್ರ ರಾಷ್ಟ್ರವಾಯಿತು.

1903: “ದಿ ಸಿಗ್ಮಾ ಆಲ್ಫಾ ಲೋಟ” ಅಂತರ ರಾಷ್ಟ್ರೀಯ ಸಂಗೀತ ಸೋದರತ್ವ ಮಿಚಿಗನ್ ಸ್ಕೂಲ್ ಆಫ್ ಮ್ಯೂಸಿಕ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿತವಾಯಿತು.

1903: ಒಂಟಾರಿಯೋದ ನಯಗಾರ ಫಾಲ್ಸ್ ಅನ್ನು ಒಂದು ನಗರವಾಗಿ ಸಂಯೋಜಿಸಲಾಯಿತು.

1905: ಭಾರತೀಯ ಸೇವಕ ಸಮಾಜವನ್ನು ಗೋಪಾಲ ಕೃಷ್ಣ ಗೋಖಲೆ ಅವರು ಭಾರತದ ಪುಣೆಯಲ್ಲಿ ಸ್ಥಾಪಿಸಿದರು.

1920: ರೈತ ಕಾರ್ಮಿಕರ ಪಕ್ಷವನ್ನು ಶಿಕಾಗೋದಲ್ಲಿ ಆರಂಭಿಸಲಾಯಿತು.

1933: ಹಣಕಾಸು ಮತ್ತು ಆರ್ಥಿಕತೆ ವಿಶ್ವ ಸಮ್ಮೇಳನವು 66 ದೇಶಗಳ ಪಾಲ್ಗೊಳ್ಳುವಿಕೆಯಿಂದ ತೆರೆಯಿತು.

1935: ಲ್ಯುಸಿಯಾನದ ನ್ಯಾಯಾಧೀಶ ಹ್ಯುಏ ಲಾಂಗ್ ಸತತ 15.5 ಗಂಟೆಗಳ ಕಾಲ ಮಾತನಾಡಿ ಇದು ಅತ್ಯಂತ ದೊಡ್ಡ ಭಾಷಣ ಎಂದು ದಾಖಲಾಯಿತು.

1939: ದಿ ನ್ಯಾಷನಲ್ ಹಾಲ್ ಆಫ್ ಫೇಮ್ ಅಂಡ್ ಮ್ಯೂಸಿಯಂ ನ್ಯೂಯಾರ್ಕಿನ ಕೂಪರ್ಸ್ ಟೌನಿನಲ್ಲಿ ತೆರೆಯಲಾಯಿತು.

1952: ಭಾರತದ ಜಮ್ಮು ಮತ್ತು ಕಶ್ಮೀರವು ತಮ್ಮ ಅನುವಂಶಿಕ ರಾಜಪ್ರಭುತ್ವದ ಕೊನೆಗೊಳಿಸಲು ನಿರ್ಧರಿಸುತ್ತದೆ.

1964: ವರ್ಣ ಭೇದಿ ನೀತಿಯ ವಿರೋಧಿ ನಾಯಕ ನೆಲ್ಸನ್ ಮಂಡೇಲಾ ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ‘ವಿಧ್ವಂಸಕ ಆರೋಪ”ದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

1967: ಅಮೇರಿಕಾದ ಸರ್ವೋಚ್ಛ ನ್ಯಾಯಾಲಯವು ಅಂತರ್ಜನಾಂಗೀಯ ವಿವಾಹಗಳಿಗೆ ವಿರುದ್ಧವಾಗಿದ್ದ ಕಾನೂನ್ನು ಕೊನೆಗೊಳಿಸಿತು.

1975: ಲೋಕಸಭೆಗೆ ಇಂದಿರಾ ಗಾಂಧಿಯವರ ಚುನಾವಣೆಯನ್ನು ಅಲ್ಹಾಬಾದ್ ಹೈಕೋರ್ಟ್ ಚುನಾವಣಾ ಭ್ರಷ್ಟಾಚಾರ ಆರೋಪದಡಿ  ನಿರರ್ಥಕ ಎಂದು ಘೊಷಿಸಿತು.

1994: ವಿಶ್ವದ ಅತಿ ದೊಡ್ಡ ಅವಳಿ ಜೆಟ್ ಬೋಯಿಂಗ್ 777 ತನ್ನ ಮೊದಲ ಹಾರಾಟ ಮಾಡಿತು.

2012: ಡೀಸಲಿನ ನಿಷ್ಕಾಸದಿಂದ ಕ್ಯಾನ್ಸರ್ ರೋಗ ಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತೀರ್ಮಾನಿಸಿತು.

2013: ರಷ್ಯಾದ ಸಂಸತ್ತು ಸಲಿಂಗಕಾಮಿ ಪ್ರಚಾರವನ್ನು ನಿಷೇಧಿಸುವ ಕಾನೂನನ್ನು ಅನುಮೋದಿಸಿತು.

ಪ್ರಮುಖ ಜನನ/ಮರಣ:

1761: ನಾನಾಸಾಹೇಬ ಪೇಶ್ವೆ ಪಾಣಿಪಟ್ಟಿನ ಯುದ್ಧದಲ್ಲಿ ಅಸುನೀಗಿದರು.

1843: ಖಗೋಳೀಯ ದೂರವನ್ನು ಅಳಿಯಲು ಹೆಸರಾದ ಸ್ಕಾಟಿಶ್ ಖಗೋಳವಿಜ್ಞಾನಿಯಾದ ಸರ್ ಡೇವಿಡ್ ಗಿಲ್ ಜನಿಸಿದರು.

1924: ಅಮೇರಿಕಾದ 41ನೇ ಅಧ್ಯಕ್ಷರಾಗಿದ್ದ ಜಾರ್ಜ್ ಬುಶ್ ಜನಿಸಿದರು.

1957: ಪಾಕಿಸ್ತಾನದ ಮಾಜಿ ಕ್ರಿಕೆಟ್ ಬ್ಯಾಟ್ಸ್ ಮ್ಯಾನ್ ಆಗಿದ್ದ ಜಾವೇದ್ ಮಿಯಾನ್ದಾದ್ ಜನಿಸಿದರು.

1972: “ಮಹಾತ್ಮ-ಲೈಫ್ ಆಫ್ ಮೋಹನ್ ದಾಸ್ ಕರಂಚಂದ್ ಗಾಂಧಿ” ಮಹಾತ್ಮಾ ಗಾಂಧಿಯ ಎಂಟು ಸಂಪುಟಗಳ ಜೀವನಚರಿತ್ರೆಯ ಲೇಖಕ ದೀನನಾಥ ಗೋಪಾಲ್ ತೆಂಡುಲ್ಕರ್ ನಿಧನರಾದರು.

1976: ಭಾರತೀಯ ತತ್ವಜ್ಞಾನಿ ಮತ್ತು ಸಂಸ್ಕೃತ ವಿದ್ವಾಂಸ ಗೋಪಿನಾಥ್ ಕವಿರಾಜ್ ಜನಿಸಿದರು.