Categories
e-ದಿನ

ಜೂನ್-13

 

ಪ್ರಮುಖ ಘಟನೆಗಳು:

1659: ಔರಂಗಜೇಬನನ್ನು ಮುಘಲರ ಆರನೇ ರಾಜನೆಂದು ಹಾಗೂ ಭಾರತದ ದೆಹೆಲಿಯ ರಾಜನೆಂದು ಘೋಷಿಸಲಾಯಿತು.

1774: ರೋಡ್ ಐಲಾಂಡ್ ಗುಲಾಮರ ಆಮದು ಮಾಡುವುದನ್ನು  ನಿಷೇಧಿಸಿತು.

1777: ಲಿಯೋನಾರ್ಡ್ ನಾರ್ಕ್ರಾಸ್ ಜಲಾಂತರ್ಗಾಮಿ ಮುಳುಗುಡುಪಿನ ಪೇಟೆಂಟ್ ಪಡೆದರು.

1789: ಶ್ರೀಮತಿ ಅಲೆಕ್ಸಾಂಡರ್ ಹ್ಯಾಮಿಲ್ಟನ್ ಸಿಹಿತಿಂಡಿಗೆಂದು “ಐಸ್ಕ್ರೀಮ್”ಅನ್ನು ವಾಷಿಂಗ್ಟನ್ ಅವರಿಗೆ ಉಣಬಡಿಸಿದರು.

1888: ಅಮೇರಿಕಾದ ಕಾಂಗ್ರೆಸ್ ಸರ್ಕಾರವು ಕಾರ್ಮಿಕ ಇಲಾಖೆಯನ್ನು ಸ್ಥಾಪಿಸಿತು.

1908: ಕಲ್ಕತ್ತಾ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್ ಅನ್ನು ಸ್ಥಾಪಿಸಲಾಯಿತು.

1920: ಪಾರ್ಸೆಲ್ ಪೋಸ್ಟಿನಿಂದ ಮಕ್ಕಳನ್ನು ಕಳುಹಿಸಲಾಗುವುದಿಲ್ಲ ಎಂದು ಅಂಚೆ ಕಛೇರಿ ಹೇಳಿತು.

1930: ಮೊದಲ ನಗ್ನಪಂಥಿ ವಸಾಹತು ತೆರೆಯಲಾಯಿತು.

1942: ಅಮೇರಿಕಾ ತನ್ನ ಯುದ್ಧದ ಮಾಹಿತಿ ಕಛೇರಿಯನ್ನು ತೆರೆಯಿತು.

1947: ಅಖಿಲ ಭಾರತ ಕಾಂಗ್ರೆಸ್ ನವ ದೆಹೆಲಿಯಲ್ಲಿ ಭಾರತ ವಿಭಜನೆಗಾಗಿ ಬ್ರಿಟಿಶ್ ಯೋಜನೆಯನ್ನು ಒಪ್ಪಿಕೊಂಡಿತು.

1953: ಆಂತರಿಕ ಏರ್ ರೂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಅನ್ನು ಸ್ಥಾಪಿಸಲಾಯಿತು.

1953: ಭಾರತ ಸರ್ಕಾರದ ಸ್ವಾಮ್ಯದ ದೇಶೀಯ ಏರ್ಲೈನ್ಸ್ ಆದ ಇಂಡಿಯನ್ ಏರ್ಲೈನ್ಸ್ ಅನ್ನು ಸ್ಥಾಪಿಸಲಾಯಿತು.

1954: ಆಲ್ಬರ್ಟ್ ಐನ್ಸ್ಟೀನ್ ವೈದ್ಯಕೀಯ ಕಾಲೇಜಿನ ಅಡಿಪಾಯವನ್ನು ಬ್ರಾಂಕ್ಸ್ ನಲ್ಲಿ ಹಾಕಲಾಯಿತು.

1960: ಪಶ್ಚಿಮ ಬಂಗಾಳದಲ್ಲಿ ಬರದ್ವಾನ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1963: ಮಹಿಳಾ ಗಗನಯಾತ್ರಿಯನ್ನು ಹೊತ್ತ ಮೊದಲ ಮಾನವ ಬಾಹ್ಯಾಕಾಶ ನೌಕೆ ವೊಟಾಕ್-6 ನ್ನು ಉಡಾಯಿಸಲಾಯಿತು.

1967: ಥುರುಗೋಡ್ ಮಾರ್ಶಲ್ ಅವರನ್ನು ಮೊದಲ ಸರ್ವೋಚ್ಛ ನ್ಯಾಯಾಲಯದ ಮೊದಲ ಕಪ್ಪು ನ್ಯಾಯಮೂರ್ತಿಯಾಗಿ ನಾಮ ಸೂಚಿಸಲಾಯಿತು.

1980: ಯು ಎನ್. ಭದ್ರತಾ ಮಂಡಳಿಯು ನೆಲ್ಸನ್ ಮಂಡೇಲ ಅವರನ್ನು ಮುಕ್ತಗೊಳಿಸಲು ದಕ್ಷಿಣ ಆಫ್ರಿಕಾಗೆ ಕರೆನೀಡಿತು.

1982: ಪೌರತ್ವ ಹಕ್ಕಿನ ಹೊರತಾಗಿ ಎಲ್ಲಾ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣದ ಅರ್ಹತೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

1983: ಪಯೊನೀರ್ 10 ನೆಪ್ಟ್ಯೂನ್ ಅನ್ನು ದಾಟಿದ ನಂತರ ಕೇಂದ್ರ ಸೌರವ್ಯೂಹವನ್ನು ದಾಟಿದ ಮೊಟ್ಟ ಮೊದಲ ಮಾನವ ನಿರ್ಮಿತ ವಸ್ತು.

1990: 1984 ರ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಸ್ವರ್ಣ ಮಂದಿರದಿಂದ ವಶಪಡಿಸಿಕೊಳ್ಳಲಾದ ಅಮೂಲ್ಯ ವಸ್ತುಗಳನ್ನು ಪಂಜಾಬ್ ಸರ್ಕಾರವು ಸ್ವರ್ಣ ಮಂದಿರ ಆಡಳಿತಕ್ಕೆ ಹಿಂದಿರುಗಿಸಿತು.

1991: ಮೊದಲ ಕ್ರೀಡಾ ದಿನಪತ್ರಿಕೆಯಾದ “ದಿ ನಾಷನಲ್” ಪ್ರಕಟಣೆಯನ್ನು ನಿಲ್ಲಿಸಲಾಯಿತು.

1997: ದೆಹಲಿಯ ಉಪಹಾರ್ ಚಿತ್ರಮಂದಿರದಲ್ಲಿ ಉಂಟಾದ ಬೆಂಕಿ ಅನಾಹುತದಿಂದ 59 ಜನರು ಸಾವನಪ್ಪಿದರು.

ಪ್ರಮುಖ ಜನನ/ಮರಣ:

1928: ಅಮೇರಿಕಾದ ಗಣಿತತಜ್ಞ ಮತ್ತು ಅರ್ಥಶಾಸ್ತ್ರಜ್ಞ ಜಾನ್ ನ್ಯಾಶ್ ಜನಿಸಿದರು.

1937:‍ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಭ್ರಷ್ಟಾಚಾರವಿರೋಧಿ ಹೋರಾಟಗಾರ ಅಣ್ಣ ಹಜಾರೆ ಜನಿಸಿದರು.

1944: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್ ಜನಿಸಿದರು.

1948: ಅಣ್ಣಮಲೈ ವಿಶ್ವವಿದ್ಯಾಲಯವನ್ನು ಆರಂಭಿಸಿದ ಅಣ್ಣಾಮಲೈ ಚೆಟ್ಟಿಯಾರ್ ನಿಧನರಾದರು.