Categories
e-ದಿನ

ಜೂನ್-14

 

ಪ್ರಮುಖ ಘಟನೆಗಳು:

1642: ಅಮೇರಿಕಾದಲ್ಲಿ ಮೊದಲನೇ ಕಡ್ಡಾಯ ಶಿಕ್ಷಣ ಕಾನೂನನ್ನು ಮ್ಯಾಸಚೂಸೆಟ್ಸ್ ನಲ್ಲಿ ಅಂಗೀಕರಿಸಲಾಯಿತು.

1777: ಸಂಯುಕ್ತ ಧ್ವಜದ ಬದಲಾಗಿ ನಕ್ಷತ್ರಗಳು ಮತ್ತು ಪಟ್ಟಿಗಳನ್ನು ತಮ್ಮ ಧ್ವಜದಲ್ಲಿ ಅಮೇರಿಕಾದ ಕಾಂಟಿನೆಂಟಲ್ ಕಾಂಗ್ರೆಸ್ ಅಳವಡಿಸಿತು.

1834: ಹಾರ್ಡ್ ಹ್ಯಾಟ್ ಡೈವಿಂಗ್ ಉಡುಪಿನ ಪೇಟೆಂಟ್ ಲಿಯೋನಾರ್ಡ್ ನೋರ್ಕ್ರಾಸ್ ಪಡೆದರು.

1834: ಉಪ್ಪುಕಾಗದವನ್ನು ಐಸಾಕ್ ಫಿಸ್ಚರ್ ಪೇಟೆಂಟ್ ಪಡೆದರು.

1841: ಕೆನೆಡಾದ ಮೊದಲ ಸಂಸತ್ತು ಒಂಟಾರಿಯೋದ ಕಿಂಗ್ಸ್ಟನ್ ನಲ್ಲಿ ತೆರೆಯಲಾಯಿತು.

1847: ರಾಬರ್ಟ್ ಬನ್ಸೆನ್ “ಬರ್ನರ್” ಕಂಡುಹಿಡಿದರು.

1872: ಕೆನೆಡಾದಲ್ಲಿ ಕಾರ್ಮಿಕ ಸಂಘಟನೆಗಳನ್ನು ಕಾನೂನುಬದ್ಧಗೊಳಿಸಲಾಯಿತು.

1881: ಪ್ಲೇಯರ್ ಪಿಯಾನೋವನ್ನು ಜಾನ್ ಮೆಕ್ಟಾಮ್ನಿ ಜುನಿಯರ್ ಪೇಟೆಂಟ್ ಪಡೆದರು.

1900: ಹಾವಾಯಿ ಪ್ರಾದೇಶಿಕ ಸರ್ಕಾರ ಪ್ರಾರಂಭವಾಯಿತು.

1901: ಮೊದಲ ಗಾಲ್ಫ್ ಪಂದ್ಯಾವಳಿಯನ್ನು ಆಡಲಾಯಿತು.

1907: ನಾರ್ವೇ ಮಧ್ಯಮ ವರ್ಗದ ಮಹಿಳೆಯರು ಮಾತ್ರ ಸಂಸತ್ತಿನ ಚುನಾವಣೆಯಲ್ಲಿ ಮತದಾನ ಮಾಡಬಹುದಾದ ಮಹಿಳೆಯ ಮತದಾನ ಹಕ್ಕನ್ನು ಅಳವಡಿಸಿಕೊಂಡರು.

1908: ನಾಲ್ಕನೇ ಜರ್ಮನ್ ನೌಕಾಪಡೆ ಮತ್ತೆ ಹೊಸ ನಾಲ್ಕು ಪ್ರಮುಖ ಯುದ್ಧನೌಕೆಗಳನ್ನು ನಿರ್ಮಿಸಲು ಹಣಕಾಸನ್ನು ನೀಡುವ ಬಿಲ್ಲು ಅನುಮೋದಿಸಿತು.

1913: ದಕ್ಷಿಣ ಆಫ್ರಿಕಾದ ಸರ್ಕಾರವು ಏಷ್ಯನ್ನರ ಪ್ರವೇಶ ಮತ್ತು ಮುಕ್ತ ಓಡಾಟದ ನಿರ್ಭಂದಿಸುವ ವಲಸೆ ಕಾಯಿದೆ ತರಲಾಯಿತು.

1916: ಎಂಟು ರಾಷ್ಟ್ರಗಳ ಪ್ರತಿನಿಧಿಗಳು ಸೇರಿ ಪ್ಯಾರಿಸ್ಸಿನಲ್ಲಿ ಆರ್ಥಿಕ ಸಮ್ಮೇಳನವನ್ನು ನಡೆಸಿದರು.

1938: ಕ್ಲೋರೋಫಿಲ್ ಅನ್ನು ಬೆನ್ಜಾಮಿನ್ ಗ್ರುಶ್ಕಿನ್ ಪೇಟೆಂಟ್ ಪಡೆದರು.

1942: ಮೊದಲ ಬಝೂಕಾ ರಾಕೆಟ್ ಬಂದೂಕನ್ನು ಬ್ರಿಡ್ಜ್ಪೋರ್ಟನಲ್ಲಿ ತಯಾರಿಸಲಾಯಿತು.

1946: ಕೆನೆಡಿಯನ್ ಗ್ರಂಥಾಲಯ ಸಂಘ ಸ್ಥಾಪನೆಯಾಯಿತು.

1951: ಮೊದಲ ವಾಣಿಜ್ಯ ಗಣಕಯಂತ್ರವಾದ “UNIVAC 1” ಅನ್ನು ಸೆನ್ಸಸ್ ಬ್ಯೂರೋ ನಲ್ಲಿ ಉಪಯೋಗಿಸಲಾಯಿತು.

1954: ಅಧ್ಯಕ್ಷ ಐಸೆನ್ಹೋವರ್ ಅವರು “ದೇವರ ಅಡಿಯಲ್ಲಿ” ಪದಗಳನ್ನು ಪ್ರತಿಜ್ಞೆಗೆ ಸೇರಿಸುವ ಆದೇಶ ನೀಡಿದ್ದರು.

1962: ಯೂರೋಪಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್ ಅನ್ನು ಪ್ಯಾರಿಸ್ಸಿನಲ್ಲಿ ಸ್ಥಾಪಿಸಲಾಯಿತು. ಇದನ್ನು ನಂತರ ಯೂರೋಪಿಯನ್ ಸ್ಪೇಸ್ ಏಜೆನ್ಸಿ ಎಂದು ಮರುನಾಮಕರಣ ಮಾಡಲಾಯಿತು.

1967: ರಷ್ಯಾ ದೇಶ “ಕಾಸ್ಮಾಸ್ 166” ಅನ್ನು ಸೂರ್ಯನ ವೀಕ್ಷಣೆಗಾಗಿ ಭೂಮಿಯ ಕಕ್ಷೆಯಿಂದ ಉಡಾಯಿಸಲಾಯಿತು.

2012: 10 ವರ್ಷ ವಯಸ್ಸಿನ ಹುಡುಗಿಯ ಮೇಲೆ ಪ್ರಪಂಚದ ಮೊದಲ ಕಾಂಡಕೋಶದ ನೆರವಿನ ಅಭಿಧಮನಿ ಕಸಿ ಶಸ್ತ್ರಚಿಕಿತ್ಸೆಯನ್ನು ಸ್ವೀಡಿಶ್ ವೈದ್ಯರು ಕೈಗೊಂಡರು.

ಪ್ರಮುಖ ಜನನ/ಮರಣ:

1825: ವಾಷಿಂಗ್ಟನ್ ಡಿಸಿ ನಿರ್ಮಿಸಿದ ಆರ್ಕಿಟೆಕ್ಟ್ ಪೈರ್ರಿ ಚಾರ್ಲ್ಸ್ ಎಲ್ ಎನ್ಫಾಂಟ್ ನಿಧನರಾದರು.

1920: ಭಾರತೀಯ ಖ್ಯಾತ ನಟ ಭಾರತಭೂಷಣ್ ಜನಿಸಿದರು.

1946: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಿಸಿದರು.

1946: ಟಿವಿಯನ್ನು ಕಂಡು ಹಿಡಿದ ಜಾನ್ ಲೋಗಿ ಬೈರ್ದ್ ನಿಧನರಾದರು.

1969: 22 ಗ್ರಾಂಡ್ ಸ್ಲಾಂ ಟೈಟಲ್ ಗೆದ್ದಿರುವ ಜರ್ಮನಿಯ ಟೆನ್ನಿಸ್ ಆಟಗಾತಿ ಸ್ಟೆಫ್ಫಿ ಗ್ರಾಫ್ ಜನಿಸಿದರು.